ಅಣ್ಣ-ತಮ್ಮಂದಿರ ಜಗಳದಲ್ಲಿ ಬೆಳಕಿಗೆ ಬಂತು ನಾಡ ಬಂದೂಕು ತಯಾರಿಸುವ ಭಯಾನಕ ಕೃತ್ಯ!

By Ravi JanekalFirst Published Aug 13, 2023, 11:45 AM IST
Highlights

ಮನೆ ಸಾಲದ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳದಲ್ಲಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುವ ಕೃತ್ಯ ಬೆಳಕಿಗೆ ಬಂದು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ತಾಲೂಕಿನ ರಾಮಸಮುದ್ರದ ಗ್ರಾಮದಲ್ಲಿ ನಡೆದಿದೆ.

ಯಾದಗಿರಿ (ಆ.13) : ಮನೆ ಸಾಲದ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳದಲ್ಲಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುವ ಕೃತ್ಯ ಬೆಳಕಿಗೆ ಬಂದು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ತಾಲೂಕಿನ ರಾಮಸಮುದ್ರದ ಗ್ರಾಮದಲ್ಲಿ ನಡೆದಿದೆ.

ನಾಡ ಬಂದೂಕು ತಯಾರಿಸುತ್ತಿದ್ದ ಭೀಮಾ, ಬಂದೂಕು ಖರೀದಿಸಿದ್ದ ಮಲ್ಲಿಕಾರ್ಜುನ ಬಂಧಿತ ಆರೋಪಿಗಳು. ಅಗಸ್ಟ್ 2 ರಂದು ನಡೆದಿದ್ದ ಘಟನೆ. ಆರೋಪಿಗಳನ್ನು ನಿನ್ನೆ ಬಂಧಿಸಿರುವ ಯಾದಗಿರಿ ಪೊಲೀಸರು.

ಯಾದಗಿರಿ: ಬಸವಸಾಗರ ಜಲಾಶಯ ಭರ್ತಿ, ಸಚಿವ ದರ್ಶನಾಪುರ್‌ ಬಾಗಿನ ಅರ್ಪಣೆ

ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ಮೌನೇಶ ಹಾಗೂ ಭೀಮಾ ಇಬ್ಬರು ಸಹೋದರರು. ಹೊಟ್ಟೆ ಪಾಡಿಗೆ ಬೆಂಗಳೂರಿಗೆ ಬಂದಿದ್ದ ಕುಟುಂಬ. ನಗರದಲ್ಲೇ ಕಟ್ಟಡ ಕಾರ್ಮಿಕರಾಗಿ ಜೀವನ ನಡೆಸಿದ್ದರು. ಕಳೆದ ಮೂರು ತಿಂಗಳ ಹಿಂದೆ ಭೀಮನ ಮದುವೆ ಇದ್ದ ಕಾರಣ ಬೆಂಗಳೂರಿನಿಂದ ರಾಮುಸಮುದ್ರಕ್ಕೆ ಬಂದಿದ್ದ ಕುಟುಂಬ. ಭೀಮನಿಗೆ ಮದುವೆ ಮಾಡಿಸಿದ್ದಾರೆ. ಮದುವೆಗೆ 3 ಲಕ್ಷರೂ ಸಾಲವೂ ಆಗಿದೆ. ಹೀಗಾಗಿ ತಮ್ಮ ಮೌನೇಶ ಸೇರಿ ತಂದೆ ನಾಗಪ್ಪ, ತಾಯಿ ಶಂಕ್ರಮ್ಮ ಅವರು ಸಾಲದ ವಿಚಾರವಾಗಿ ಭೀಮಾನ ಜತೆ ಮಾತುಕತೆ ಆಡಿದ್ದಾರೆ. ಬೆಂಗಳೂರಿಗೆ ಹೋಗಿ ದುಡಿದು ಮದುವೆಗೆ ಆಗಿರುವ ಸಾಲ ತೀರಿಸುವಂತೆ ಹೇಳಿದ್ದಾರೆ. ಇದರಿಮದ ಸಿಟ್ಟಿಗೆದ್ದ ಅಣ್ಣ ಭೀಮಾ ನಾನು ಬೆಂಗಳೂರಿಗೆ ಹೋಗಲ್ಲ, ಸಾಲನೂ ತೀರಿಸೊಲ್ಲ ಎಂದಿದ್ದಾನೆ. ಇದೇ ವಿಚಾರವಾಗಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಭೀಮಾ ನಾಡ ಬಂದೂಕು ತಂದು ಕೊಲೆ ಮಾಡುವುದಾಗಿ ಕುಟುಂಬಸ್ಥರಿಗೆ ಬೆದರಿಕೆಯೊಡ್ಡಿದ್ದಾನೆ.

ಈ ವೇಳೆ ಗಲಾಟೆ ಸುದ್ದಿಗೆ ಸ್ಥಳಕ್ಕೆ ಬಂದ ಗ್ರಾಮಸ್ಥರು. ನಾಡ ಬಂದೂಕು ಹಿಡಿದಿದ್ದು ನೋಡಿದ್ದಾರೆ. ಗ್ರಾಮಸ್ಥರು ಸೇರುತ್ತಿದ್ದಂತೆ ಭೀಮಾ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ನಂತರ ತಮ್ಮ ಮೌನೇಶ್ ಘಟನೆ ಬಗ್ಗೆ ಯಾದಗಿರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾನೆ. ಗ್ರಾಮಕ್ಕೆ ಪೊಲೀಸರು ಬರುವ ವೇಳೆ ಊರು ತೊರೆದಿದ್ದ ಭೀಮಾ ಗುಡ್ಡದಲ್ಲಿ ಅಡಗಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅದರಂತೆಯೇ ಗುಡ್ಡದಲ್ಲಿ ಹುಡುಕಾಡಿ ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ ಪೊಲೀಸರು. ವಿಚಾರಣೆ ನಡೆಸಿದಾಗ ಬಂದೂಕು ತಯಾರಿಸುವ ಕೃತ್ಯ ಬೆಳಕಿಗೆ ಬಂದಿದೆ.

 

ಯಾದಗಿರಿ: ಪ್ರಚೋದನಕಾರಿ ರೀಲ್ಸ್‌, ಯುವಕರಿಬ್ಬರ ಬಂಧನ

ಸ್ಥಳೀಯ ಕಚ್ಚಾ ವಸ್ತುಗಳಿಂದ್ಲೇ ಬಂದೂಕು ತಯಾರಿ!

ಗ್ರಾಮದ ಹೊರಹೊಲಯದ ಗುಡ್ಡದಲ್ಲಿ ರಹಸ್ಯ ಸ್ಥಳ ಮಾಡಿಕೊಂಡು ಬಂದೂಕು ತಯಾರಿ ಮಾಡುತ್ತಿದ್ದ ಭೀಮಾ. ಸ್ಥಳೀಯವಾಗಿ ಸಿಕ್ಕುವ ಗಂಧ, ಇದ್ದಿಲುಗಳನ್ನು ಕುದಿಸಿ  ಬಂದೂಕು ತಯಾರಿಸುತ್ತಿದ್ದ ಖತರ್ನಾಕ್. ಸಿಂಗಲ್ ಬ್ಯಾರಲ್ ನಾಡ ಬಂದೂಕು ತಯಾರಿಸಿ ತಲಾ ಒಂದಕ್ಕೆ 30 ಸಾವಿರ ರೂ.ನಂತೆ ಮಾರಾಟ ಮಾಡುತ್ತಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇವನಿಂದ ಬಂದೂಕು ಖರೀದಿಸಿದ್ದ ಕುರಿಗಾಹಿ ಮಲ್ಲಿಕಾರ್ಜುನನ್ನು ಬಂಧಿಸಿದ್ದಾರೆ. ನಾಡ ಬಂದೂಕು ತಯಾರಿಸುವ ಹಿಂದೆ ಯಾರಿದ್ದಾರೆ. ತರಬೇತಿ ಕೊಟ್ಟವರು ಯಾರು, ಕಚ್ಚಾ ಸಾಮಗ್ರಿ ಪೂರೈಸುತ್ತಿದ್ದವರು ಯಾರು ಎಂಬ ಬಗ್ಗೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

click me!