
ನಂಜನಗೂಡು (ಡಿ.26): ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಆಚರಣೆ ವೇಳೆ ದಸರಾಗೆ ಪರ್ಯಾಯವಾಗಿ ಮಹಿಷಾ ದಸರಾ ಆಚರಿಸುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದ ಪ್ರಗತಿಪರ, ದಲಿತ ಸಂಘಟನೆಗಳು. ಇದೀಗ ಸಂಘರ್ಷದ ಕಿಡಿ ತಣ್ಣಗಾಯಿತು ಎನ್ನುವಾಗಲೇ ಇದೀಗ ನಂಜನಗೂಡಿನಲ್ಲಿ ಮತ್ತೊಮ್ಮೆ ಮಹಿಷಾಸುರನ ವಿಚಾರವಾಗಿ ಮತ್ತೆ ವಿವಾದ ಭುಗಿಲೆದ್ದಿದೆ.
ಪ್ರತಿವರ್ಷ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಬಳಿ ಈ ದಿನ ಮಹಿಷಾಸುರನ ರಂಗೋಲಿ ಬರೆದು ಅದನ್ನು ಕಾಲಿನಲ್ಲಿ ತುಳಿದು ಅಳಿಹಾಕಲಾಗುತ್ತದೆ. ನಂಜುಂಡೇಶ್ವರ ಹಾಗೂ ಪಾರ್ವತಿ ದೇವರ ಉತ್ಸವ ಮೂರ್ತಿ ಹೊತ್ತವರು ಮಹಿಷಾಸುರ ರಂಗೋಲಿ ತುಳಿದು ಅಳಿಸಿ ಹಾಕುತ್ತಾರೆ. ನಂತರ ತೇರಿನ ಬೀದಿಯಲ್ಲಿ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಗುತ್ತೆ. ಈ ದಿನವನ್ನ ಅಂದಕಾಸುರ ಸಂಹಾರ ದಿನ ಎಂದು ಆಚರಣೆ ಮಾಡಲಾಗುತ್ತಿದೆಯಂತೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಇಂಥ ಆಚರಣೆಯನ್ನು ದಲಿತ ಸಂಘಟನೆಗಳು ವಿರೋಧಿಸಿವೆ. ಈ ವಿಚಾರವಾಗಿ ನಂಜುಂಡೇಶ್ವರನ ಭಕ್ತರು ಮತ್ತು ದಲಿತ ಸಂಘಟನೆಗಳ ನಡುವೆ ಭಾರೀ ಸಂಘರ್ಷಕ್ಕೆ ಕಾರಣವಾಗಿದೆ.
ಮೋದಿ ಮತ್ತೆ ಪ್ರಧಾನಿ ಆಗುವುದನ್ನ ಯಾರಿಂದಲೂ ತಪ್ಪಿಸಲಾಗಲ್ಲ: ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್ ಭವಿಷ್ಯ
ನಾವು ಮಹಿಷಾನನ್ನ ರಾಜ ಎಂದು ಪೂಜಿಸುತ್ತೇವೆ. ರಂಗೋಲಿಯಲ್ಲಿ ಮಹಿಷಾ ರಾಜನ ಚಿತ್ರ ಬರೆದು ತುಳಿದು ಅಳಿಸುವುದು ಇದು ನಮ್ಮ ಭಾವನೆಗೆ ದಕ್ಕೆಯಾಗುತ್ತೆ. ಯಾವುದೇ ಕಾರಣಕ್ಕೂ ಇದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಮುಖಂಡರು. ಆದರೆ ನಾವು ತಲಾತಲಾಂತರದಿಂದ ಈ ಪದ್ದತಿಯನ್ನ ಮಾಡಿಕೊಂಡು ಬರುತ್ತಿದ್ದೇವೆ ಎನ್ನುತ್ತಿರುವ ಭಕ್ತರು.
ಸದ್ಯ ಈ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ನಾವು ಆಚರಿಸಿಯೇ ಸಿದ್ಧ ಎನ್ನುತ್ತಿರುವ ಭಕ್ತರು. ಆದರೆ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎನ್ನುತ್ತಿರುವ ದಲಿತ ಸಂಘಟನೆಗಳು.
ದತ್ತ ಜಯಂತಿ: ದತ್ತಮಾಲಾಧಾರಿ ಸಿ ಟಿ ರವಿಯಿಂದ ಮನೆ ಮನೆಗೆ ತೆರಳಿ ಭಿಕ್ಷಾಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ