ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ನಿಲ್ಲಿಸಿ, ಚಾಲಕ ಅಡುಗೆ ಮಾಡಿಕೊಳ್ಳುವಾಗ ಸ್ಟೌವ್ ಸಿಡಿದು ಇಡೀ ಲಾರಿಯೇ ಸುಟ್ಟು ಕರಕಲಾದ ಘಟನೆ ವಿಜಯಪುರದ ಬಳಿ ನಡೆದಿದೆ.
ವಿಜಯಪುರ (ಡಿ.26): ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ನಿಲ್ಲಿಸಿ, ಚಾಲಕ ಅಡುಗೆ ಮಾಡಿಕೊಳ್ಳುವಾಗ ಸ್ಟೌವ್ ಸಿಡಿದು ಇಡೀ ಲಾರಿಯೇ ಸುಟ್ಟು ಕರಕಲಾದ ಘಟನೆ ವಿಜಯಪುರದ ಬಳಿ ನಡೆದಿದೆ.
ಲಾರಿ, ಕಾರು ಹಾಗೂ ಇತರೆ ವಾಹನಗಳ ಚಾಲಕರ ಪೈಕಿ ಕೆಲವರು ತಮ್ಮ ವಾಹನಗಳಲ್ಲಿ ಅಡುಗೆಗೆ ಸಣ್ಣ ಸ್ಟೌವ್, ಪಾತ್ರೆ ಹಾಗೂ ಇತರೆ ಸಾಮಗ್ರಿಗಳನ್ನು ಇಟ್ಟುಕೊಂಡಿರುತ್ತಾರೆ. ಹೊಟ್ಟೆ ಹಸಿವಾದಾಗ ರಾಷ್ಟ್ರೀಯ ಹೆದ್ದಾರಿ ಬಳಿಯೇ ತಮ್ಮ ವಾಹನಗಳನ್ನು ನಿಲ್ಲಿಸಿ ಅಡುಗೆ ತಯಾರಿಸಿಕೊಂಡು ಊಟ ಮಾಡುವುದು ಸಾಮಾನ್ಯವಾಗಿರುತ್ತದೆ. ಅದೇ ರೀತಿ ಸೊಲ್ಲಾಪುರಕ್ಕೆ ಪ್ಲೈವುಡ್ ತುಂಬಿಕೊಂಡು ಹೊರಟಿದ್ದ ಲಾರಿ ಚಾಲಕ, ರಸ್ತೆ ಬದಿ ವಾಹನ ನಿಲ್ಲಿಸಿ ಅಡುಗೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಅಡುಗೆ ಮಾಡುವ ಸ್ಟೌವ್ ಸಿಡಿದು ಬೆಂಕಿಯ ಜ್ವಾಲೆ ಪಕ್ಕದಲ್ಲಿ ನಿಲ್ಲಿಸಿದ್ದ ಪ್ಲೈವುಡ್ ಲಾರಿಗೆ ತಗುಲಿದೆ. ನೋಡ ನೋಡುತ್ತಿದ್ದಂತೆ ಹೆದ್ದಾರಿ ಬಳಿಯ ಲಾರಿ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ.
ರಾಮನಗರದಲ್ಲಿ ಜೀತಪದ್ದತಿ ಜೀವಂತ: ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸುತ್ತಿದ್ದ ಮಾಲೀಕ!
ಹೌದು, ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಫ್ಲೈವುಡ್ ತುಂಬಿದ್ದ ಲಾರಿ ಸುಟ್ಟು ಭಸ್ಮವಾಗಿದೆ. ರಸ್ತೆಬದಿ ಲಾರಿ ನಿಲ್ಲಿಸಿ ಚಾಲಕ ಅಡುಗೆ ಮಾಡುವಾಗ ಸ್ಟೋವ್ ಸ್ಪೋಟಗೊಂಡು ಪಕ್ಕದಲ್ಲೇ ನಿಂತಿದ್ದ ಲಾರಿಗೆ ಬೆಂಕಿ ತಗುಲಿದೆ. ಬೆಂಕಿ ಕೆನ್ನಾಲಿಗೆಗೆ ಲಾರಿಯಲ್ಲಿದ್ದ ಫ್ಲೈವುಡ್ ಸೇರಿ ಇಡೀ ಲಾರಿಯೇ ಸುಟ್ಟು ಭಸ್ಮವಾಗಿದೆ. ನಿಡಗುಂದಿ ತಾಲೂಕಿನ ಉಣ್ಣಿಬಾವಿ ಬಳಿ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಘಟನೆ ನಡೆದಿದೆ. ಹೆದ್ದಾರಿ ಪಕ್ಕದಲ್ಲಿಯೇ ಇದ್ದ ಡಾಬಾದ ಬಳು ತಮಿಳುನಾಡು ಮೂಲದ ಲಾರಿ ಚಾಲಕ ತನ್ನ ಲಾರಿಯನ್ನು ನಿಲ್ಲಿಸಿ ಅಡುಗೆ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
Breaking Teacher death: ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಲೇ ಹೃದಯಾಘಾತಕ್ಕೆ ಬಲಿಯಾದ ಮುಖ್ಯ ಶಿಕ್ಷಕ
ತಮಿಳುನಾಡು ಮೂಲದ ಮಾಲೀಕನ ಲಾರಿಯು ಕೇರಳದಿಂದ ಸೊಲ್ಲಾಪುರಕ್ಕೆ ಪ್ಲೈವುಡ್ ಅನ್ನು ತುಂಬಿ ಹೊರಟಿತ್ತು. ಅಡುಗೆ ಮಾಡುವಾಗ ಸ್ಟೋವ್ ಸ್ಫೋಟಗೊಂಡ ಪರಿಣಾಮ ಚಾಲಕನಿಗೆ ಕೈ, ಕಾಲು ಮತ್ತಿತರ ಭಾಗಕ್ಕೆ ತೀವ್ರ ಗಾಯವಾಗಿದೆ. ಘಟನಾ ನಂತರ ಬಸವನ ಬಾಗೇವಾಡಿಯಿಂದ 2 ಗಂಟೆ ತಡವಾಗಿ ಬಂದ ಅಗ್ನಿಶಾಮಕ ದಳದ ವಾಹನ ಸುಟ್ಟು ಶಿಥಿಲಾವಸ್ಥೆಯಲ್ಲಿ ನಿಂತಿದ್ದ ವಾಹನಕ್ಕೆ ನೀರು ಸಿಂಪಡಣೆ ಮಾಡಿದ್ದಾರೆ. ಈ ಘಟನೆ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.