ಆಂಜನೇಯ ಜನ್ಮಸ್ಥಳ ವಿವಾದ, ಆಂಧ್ರ ಆಯ್ತು ಈಗ ಮಹಾರಾಷ್ಟ್ರ ಕಿರಿಕ್

By Suvarna News  |  First Published May 31, 2022, 4:57 PM IST

* ಆಂಜನೇಯನ ಜನ್ಮಸ್ಥಳದ ಕುರಿತು ಭುಗಿಲೆದ್ದ ವಿವಾದ
 * ಕಿರಿಕ್ ಮಾಡುತ್ತಿರುವ ಮಹಾರಾಷ್ಟ್ರ
 * ತಿರುಪತಿಯ ಅಂಜನಾದ್ರಿಯಲ್ಲಿ ಆಂಜನೇಯನ ಜನ್ಮವಾಗಿದೆ ಎಂದಿದ್ದ ಟಿಟಿಡಿ


ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ, (ಮೇ.31):
ಆಂಜನೇಯನ ಜನ್ಮಸ್ಥಳದ ಕುರಿತ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇತ್ತೀಚಿಗಷ್ಟೇ ತಿರುಪತಿಯ ಅಂಜನಾದ್ರಿಯಲ್ಲಿ ಆಂಜನೇಯನ ಜನ್ಮವಾಗಿದೆ ಎಂದು ಟಿಟಿಡಿ ಕ್ಯಾತೆ ತಗೆದಿತ್ತು.ಇದೀಗ ಮಹಾರಾಷ್ಟ್ರ ಕಿರಿಕ್ ತೆಗೆದಿದ್ದು, ಅಂಜನೇರಿ ಆಂಜನೇಯನ ಜನ್ಮಸ್ಥಳ ಎಂದು ವಾದಿಸುತ್ತಿದೆ. ಆದರೆ ನಮ್ಮ‌ವರು ಮಾತ್ರ ಅಂಜನಾದ್ರಿಯೇ ಆಂಜನೇಯನ‌ ಜನ್ಮಸ್ಥಳ ಎಂದು ಪ್ರತಿಪಾದಿಸುತ್ತಿದ್ದಾರೆ. ಅಷ್ಟಕ್ಕೂ ಏನಿದು ಅಂಜನಾದ್ರಿ ಜನ್ಮಸ್ಥಳ ವಿವಾದ ಎನ್ನುವ ಒಂದು ರಿಪೋರ್ಟ್ ಇಲ್ಲಿದೆ.

ಆಂಜನೇಯನ ಜನ್ಮಸ್ಥಳದ ವಿವಾದವೇನು?
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪ್ರದೇಶ ಅಂದರೆ ತಟ್ಟನೆ ನೆನಪಾಗುವುದು ಆಂಜನೇಯನ ಜನ್ಮಸ್ಥಳ ಎಂದು. ಪುರಾಣ ಕಾಲದಿಂದಲೂ ಅಂಜನಾದ್ರಿಯಲ್ಲಿಯೇ ಆಂಜನೇಯನ ಜನ್ಮವಾಗಿದೆ ಎನ್ನುವ ಐತಿಹ್ಯ ಇದೆ. ಅಷ್ಟೇ ಅಲ್ಲ ಜನರ ನಂಬಿಕೆಯೂ ಸಹ ಇದ್ದು, ಇತಿಹಾಸ ತಜ್ಞರ ಪ್ರಕಾರವೂ ಸಜ ಕಿಷ್ಕಿಂದಾ ಪ್ರದೇಶವಾದ ಅಂಜನಾದ್ರಿಯೇ ಆಂಜನೇಯಮ ಜನ್ಮಸ್ಥಳ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆಂಜನೇಯನ ಜನ್ಮಸ್ಥಳದ ಕುರಿತು ಪಕ್ಕದ ರಾಜ್ಯಗಳು ಕ್ಯಾತೆ ತೆಗೆಯುತ್ತಿವೆ. 

Tap to resize

Latest Videos

ಅಂಜನಾದ್ರಿ ಅಲ್ಲ, ನಾಸಿಕ್‌ನ ಅಂಜನೇರಿ: ಹನುಮ ಜನ್ಮಸ್ಥಳ ಬಗ್ಗೆ ಈಗ ಮಹಾರಾಷ್ಟ್ರದಿಂದ ತಗಾದೆ!

ಮೊದಲನೆಯದಾಗಿ ಆಂಧ್ರಪ್ರದೇಶದ ತಿರುಪತಿ ಬಳಿ ಇರುವ ಅಂಜನಾದ್ರಿ ಆಂಜನೇಯನ ಜನ್ಮಸ್ಥಳ ಎಂದು ಟಿಟಿಡಿ ವಾದಿಸಿತ್ತು. ಅಷ್ಟೇ ಅಲ್ಲ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹ ಮಾಡಲು ಟಿಟಿಡಿ ಮುಂದಾಗಿದೆ. ಇದು ಮುಗಿಯುವ ಹೊತ್ತಿಗೆ ಇದೀಗ ಮಹಾರಾಷ್ಟ್ರ ರಾಜ್ಯವೂ ಸಹ ಆಂಜನೇಯನ ಜನ್ಮಸ್ಥಳ ಅಂಜನೇರಿ ಎಂದು ಕ್ಯಾತೆ ತೆಗೆದಿದೆ.‌ಆದರೆ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ರಾಜ್ಯಗಳ ಈ ವಾದಕ್ಕೆ ರಾಜ್ಯದ ಇತಿಹಾಸಕಾರರು ವಿರೋಧ ವ್ಯಕ್ತಪಡಿಸಿದ್ದು, ಆಂಜನೇಯನ ಜನ್ಮಸ್ಥಳ ನಮ್ಮ‌ ಅಂಜನಾದ್ರಿಯೇ ಎಂದು ಪ್ರತಿಪಾದಿಸಿದ್ದಾರೆ

ಜನ್ಮಸ್ಥಳದ ಕುರಿತು ಇರುವ ಐತಿಹ್ಯಗಳು
ಇನ್ನು ಪೌರಾಣಿಕ, ಐತಿಹಾಸಿಕ, ಪ್ರಾಕೃತಿಕ ಕುರುಹುಗಳು ಕರ್ನಾಟಕವೇ ಆಂಜನೇಯ ಜನ್ಮ ಸ್ಥಳ ಎಂದು ದಾಖಲಾಗಿದೆ
ದೇಶ ಇತರ ಕಡೆ ಆಂಜ‌ನೇಯನ ಜನ್ಮ ಸ್ಥಳ ಎಂದು ಹೇಳುತ್ತಾರೆ. ಆದರೆ ಕಿಷ್ಕಿಂದಾ ಇರುವ ಸ್ಥಳ ‌ಹಂಪಿ ಪರಿಸರವಾಗಿದ್ದು,ನಮ್ಮ ಆಂಜನೇಯನನ್ನು ಅಲ್ಲಿ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಕೇಂದ್ರ ಸರಕಾರವೇ ರಾಮಾಸರ್ಕ್ಯೂಟ್ ನಲ್ಲಿ ನಮ್ಮ ಅಂಜನಾದ್ರಿ ಸೇರಿದೆ ಮುಖ್ಯಮಂತ್ರಿಗಳು ಅಂಜನಾದ್ರಿ ಅಭಿವೃದ್ಧಿ ಯೋಜ‌ನೆ ಘೋಷಿಸಿದ್ದಾರೆ. ಏನೇ ಹೇಳಿದರೂ ಆಂಜನೇಯ ಹುಟ್ಟಿದ್ದು ನಮ್ಮ ಜಿಲ್ಲೆಯಲ್ಲಿ ಎಂಬು ಸಾಬೀತಾಗಿದೆ

ಅಂಜನಾದ್ರಿಗೆ ಭೇಟಿ ನೀಡಿರುವ ಗಣ್ಯರು
ಇನ್ನು ಕರ್ನಾಟಕದ ಆಂಜನಾದ್ರಿ ಪ್ರದೇಶವೇ ಆಂಜನೇಯನ ಜನ್ಮಸ್ಥಳ ಎನ್ನುವುದಕ್ಕೆ ಅನೇಕ ಐತಿಹ್ಯಗಳು ಇವೆ. ಈ ಕಾರಣಕ್ಕಾಗಿಯೇ ಪ್ರಧಾನಿ ಮೋದಿ ಪತ್ನಿ ಜಶೋಧಾ ಬೆನ್, ವಿ ಎವ್ ಪಿ ಮುಖಂಡ ಪ್ರವೀಣ ತೋಗಾಡಿಯಾ ಸೇರಿದಂತೆ ಹಲವಾರು ಧಾರ್ಮಿಕ ಗುರುಗಳು, ನಾಯಕರು ಅಂಜನಾದ್ರಿಗೆ ಬಂದು ಹೋಗಿದ್ದಾರೆ.

ಅಂಜನೇರಿಯಲ್ಲಿ ಜರುಗಲಿದೆ ಸಮಾವೇಶ
ಇನ್ನು ಇಂದು(ಮಂಗಳವಾರ) ಮಹಾರಾಷ್ಟ್ರದ ಅಂಜನೇರಿಯಲ್ಲಿ ಸಾಧು ಸಂತರ ಸಮಾವೇಶ ಜರುಗಲಿದೆ. ಈ ಸಮಾವೇಶದಲ್ಲಿ  ಆಂಜನೇಯನ ಜನ್ಮಸ್ಥಳದ ಕುರಿತು ಸಾಧು ಸಂತರು ನಿರ್ಧರಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಆದರೆ ವಾಸ್ತವದಲ್ಲಿ ಈ ಸಭೆಗೆ ಎಷ್ಟರ ಮಟ್ಟಿಗೆ  ಮಾನ್ಯತೆ ಇದೆ ಎನ್ನುವುದು ತಿಳಿಯದಾಗಿದೆ.

ಸಂಸದ ಸಂಗಣ್ಣ ಖಂಡನೆ
ಇನ್ನು ಈ ವಿವಾದಕ್ಕೆ ಸಂಬಂಧಿಸಿದಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಪ್ರಕ್ರಿಯಿಸಿದ್ದು,  ಆಂಜನೇಯನ ಹೆಸರಿನಲ್ಲಿ  ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳು ಬಿಜಿನೆಸ್ ಮಾಡಲು ಹೊರಟಿದ್ದು, ಇದು ಖಂಡನೀಯ. ಶೀಘ್ರವೇ ಸಂಸದರೆಲ್ಲ ಸೇರಿ  ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಘೋಷಿಸಲು ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ ಎಂದು  ಭರವಸೆ ನೀಡಿದ್ದಾರೆ.

ಇನ್ನು ರಾಜ್ಯ ಸರಕಾರ ಅಂಜನಾದ್ರಿಯ ಅಭಿವೃದ್ಧಿಗೆ  ಬಜೆಟ್ ನಲ್ಲಿ 100 ಕೋಟಿ ಅನುದಾನ ಘೋಷಿಸಿದೆ. ಜೊತೆಗೆ ಪ್ರಧಾನಿ ಮೋದಿ ಅವರನ್ನು ಅಂಜನಾದ್ರಿಗೆ ಕರೆಸುವುದಾಗಿ ಸಿಎಂ ಬೋಮ್ಮಾಯಿ ಹೇಳಿದ್ದಾರೆ. ಇದೆಲ್ಲದರ ಮದ್ಯೆ ಇದೀಗ ಆಂಜನೇಯನ ಜನ್ಮಸ್ಥಳದ ಕುರಿತು ವಿವಾದ ಏಳುತ್ತಿರುವುದು ನಿಜಕ್ಕೂ ದುರಂತವೇ ಸರಿ.ಒಟ್ಟಿ‌ನಲ್ಲಿ ಆಂಜನೇಯನ ಜನ್ಮಸ್ಥಳದ ಕುರಿತು ಅಂಜನೇರಿಯಲ್ಲಿ ಸಾಧು ಸಂತರ ಸಮಾವೇಶದಲ್ಲಿ ಯಾವ ನಿರ್ಧಾರ ಆಗುತ್ತದೆಯೋ ಕಾದುನೋಡಬೇಕಿದೆ.

click me!