CCTV ವಿರೂಪಗೊಳಿಸಿರುವ ಆರೋಪ, ನಿಗಮದ ಅಧ್ಯಕ್ಷ ವಿರುದ್ಧ IPS ಡಿ. ರೂಪ ದೂರು

Published : May 31, 2022, 04:35 PM ISTUpdated : May 31, 2022, 05:09 PM IST
CCTV ವಿರೂಪಗೊಳಿಸಿರುವ ಆರೋಪ, ನಿಗಮದ ಅಧ್ಯಕ್ಷ ವಿರುದ್ಧ IPS ಡಿ. ರೂಪ ದೂರು

ಸಾರಾಂಶ

* ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ v/s IPS ಡಿ. ರೂಪಾ ಮೌದ್ಗಿಲ್  * ನಿಗಮದ ಕಛೇರಿಯ ಸಿಸಿಟಿವಿ/ಡಿವಿಆರ್‌ ವಿರೂಪಗೊಳಿಸಿರುವ ಆರೋಪ * ಅಧ್ಯಕ್ಷರ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಎಂಡಿ ಡಿ. ರೂಪ

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು, (ಮೇ31):
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಇದೇ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ IPS ಅಧಿಕಾರಿ ಡಿ. ರೂಪ ಮೌದ್ಗಿಲ್ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ಬೇಳೂರು ರಾಘವೇಂದ್ರ ಶೆಟ್ಟಿ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದು. ಡಿ‌. ರೂಪಾ ಮೌದ್ಗಿಲ್, ಕರಕುಶಲ ಅಭಿವೃದ್ಧಿ ನಿಗಮದ ಎಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಘವೇಂದ್ರ ಶೆಟ್ಟಿ ಎಂಜಿ ರಸ್ತೆಯಲ್ಲಿರುವ ನಿಗಮದ ಕಛೇರಿಯ ಸಿಸಿಟಿವಿ/ಡಿವಿಆರ್‌ ವಿರೂಪಗೊಳಿಸಿದ್ದಾರೆಂದು ಆರೋಪಿಸಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಉದ್ದೇಶಪೂರ್ವಕವಾಗಿಯೇ ಸಿಸಿಟಿವಿ ಹಾಗೂ ಡಿವಿಆರ್ ವಿರೂಪಗೊಳಿಸಿದ್ದಾರೆ. ಮೇ 27, 2022 ರಂದು ಬೆಳಗ್ಗೆ 8:30 ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರಕುಶಲ ನಿಗಮದಲ್ಲಿ IPS ವರ್ಸಸ್ ಅಧ್ಯಕ್ಷರ ವಾರ್...!

ಮೇ ,27 ರಂದು ಎಂ.ಜಿ.ರಸ್ತೆಯಲ್ಲಿರುವ ನಿಗಮದ ಕೇಂದ್ರ ಕಚೇರಿ ಗೆ ರಾಘವೇಂದ್ರ ಶೆಟ್ಟಿ ಅಪರಿಚಿತ ವ್ಯಕ್ತಿ ಜೊತೆ ಆಗಮಿಸಿದ್ದರು. ಕಚೇರಿ ಬಾಗಿಲ ಕೀಗಳ ಜವಾಬ್ದಾರಿ ಹೊಂದಿರುವ ಅಟೆಂಡರ್ ಮೂರ್ತಿ ಅವರನ್ನ ಕರೆಸಿ ಬಾಗಿಲು ತೆಗೆಸಿದ್ದಾರೆ. ರಾಘವೇಂದ್ರ ಶೆಟ್ಟಿ ಜೊತೆ ಬಂದ ವ್ಯಕ್ತಿ ಡಿವಿಆರ್ ಎಲ್ಲಿದೆ ಎಂದು ಕೇಳಿದ್ದಾನೆ. ಅಟೆಂಡರ್ ಮೂರ್ತಿ ಅವರು ಡಿವಿಆರ್ ಯಾಕೆ ಬೇಕು ಎಂದು ಮರು ಪ್ರಶ್ನೆ ಕೇಳಿರುತ್ತಾರೆ. ಡಿವಿಆರ್, ಸಿಸಿಟಿವಿ ಯಾವುದನ್ನೂ ಕಛೇರಿಯ ಅಧಿಕಾರಿಗಳ ಪರವಾನಗಿ ಇಲ್ಲದೇ ಮುಟ್ಟಿಕೂಡದೆಂದು ಅಟೆಂಡರ್ ತಿಳಿಸಿದ್ದಾರೆ. ಆದಾಗ್ಯೂ
ಅಧ್ಯಕ್ಷರ ಸಮ್ಮುಖದಲ್ಲೇ ಅಧ್ಯಕ್ಷರು ಕರೆದುಕೊಂಡು ಬಂದ ಆ ಅಪರಿಚಿತ ವ್ಯಕ್ತಿ, ಡಿವಿಆರ್ ಉಪಕರಣವನ್ನು ಮುಟ್ಟಿ ಏನೋ ಮಾಡಿರುತ್ತಾನೆ.

ತದನಂತರ ಸಿಸಿಟಿವಿ ಡಿಸ್‌ಪ್ಲೇ ಆಗಲೀ ಡಿವಿಆರ್ ಆಗಲಿ ಕೆಲಸ ಮಾಡುತ್ತಿರಲಿಲ್ಲ. ಎಷ್ಟರ ಮಟ್ಟಿಗೆ ಡಿ.ವಿ.ಆರ್‌. ವಿರೂಪಗೊಳಿಸಲಾಗಿದೆ ಎಂದು ತಿಳಿದು ಬರಬೇಕಾಗಿರುತ್ತದೆ ಎಂದು ಪತ್ರದಲ್ಲಿ ಘಟನೆಯ ವಿವರ ಸಲ್ಲಿಸಿದ್ದಾರೆ. ಅಲ್ಲದೇ ಅಪರಿಚಿತ ವ್ಯಕ್ತಿಯು, ಸರ್ಕಾರದ ಕಛೇರಿಗೆ ಸೇರಿದ ಡಿವಿಆರ್‌ ವಿರೂಪಗೊಳಿಸಿರುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧವಾಗುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಯಾವ ಕಾರಣಕ್ಕೆ ಡಿವಿಆರ್  ವಿರೂಪಗೊಳಿಸಿದ್ದಾರೆಂಬುದನ್ನ ಎಂಡಿ ರೂಪ ವಿವರಿಸಿಲ್ಲ. ಬಹುಶಃ ಕಾರಣ ಗೊತ್ತಿಲ್ಲದೆಯೂ ಇರಬಹುದು. PSI ಹಗರಣದಲ್ಲಿ ರಾಘವೇಂದ್ರ ಶೆಟ್ಟಿ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ್ ಚೌರಿ ಪೊಲೀಸರ ವಶದಲ್ಲಿದ್ದಾನೆ. ಬಂಧನದ ಬಳಿಕ ಸ್ಪಷ್ಟನೆ ನೀಡಿದ್ದ ರಾಘವೇಂದ್ರ ಶೆಟ್ಟಿ ಆತ ಕೇವಲ ಎರಡು ತಿಂಗಳು ಮಾತ್ರ ನನ್ನ ಬಳಿ‌ ಕೆಲಸ ಮಾಡಿದ್ದ ಎಂದು ಸುಳ್ಳು ಹೇಳಿದ್ದು ಜಗಜ್ಜಾಹೀರಾಗಿದೆ. ಅಲ್ಲದೆ ಚೆಕ್ ಬೌನ್ಸ್ ಕೇಸ್ ನಲ್ಲಿ ಸಿಕ್ಕಿಕೊಂಡಿರುವ ರಾಘವೇಂದ್ರ ಶೆಟ್ಟಿ ಅವರ ನಿಗಮದ ಕಚೇರಿಗೆ ನಾಲ್ಕು ಬಾರಿ ಸಮನ್ಸ್ ಜಾರಿಯಾಗಿದೆ. ಸಮನ್ಸ್ ನ್ನ ಪೊಲೀಸರು ಕರಕುಶಲ ನಿಗಮದ ಕಚೇರಿಗೆ ಅಂಟಿಸಿ ಹೋಗಿದ್ದಾರೆ‌. ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿವಿಆರ್ ವಿರೂಪಗೊಳಿಸಿರುವ ಆರೋಪ ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಡಿ. ರೂಪಾ‌ ಮೌದ್ಗಿಲ್ ಬರೆದ ಪತ್ರದಲ್ಲೇನಿದೆ..?
ವಿಷಯ: ನಿಗಮದ ಅಧ್ಯಕ್ಷರಾದ ಶ್ರೀ ಬೇಳೂರು ರಾಘವೇಂದ್ರ ಶೆಟ್ಟಿ ಇವರು ನಿಗಮದ ಪ್ರಧಾನ ಕಛೇರಿಯ ಸಿಸಿಟಿ/ಡಿವಿಆರ್‌ ಅನ್ನು ಉದ್ದೇಶಪೂರ್ವಕವಾಗಿ ತಿದ್ದಿ ವಿರೂಪಗೊಳಿಸಿರುವ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯರಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ ದಿನಾಂಕ: 27.05.2022 ರಂದು ಬೆಳಿಗ್ಗೆ ಎಂ.ಜಿ.ರಸ್ತೆಯಲ್ಲಿರುವ ನಿಗಮದ ಕೇಂದ್ರ ಕಛೇರಿಯ ಬಾಗಿಲ ಕೀಗಳ ಜವಾಬ್ದಾರಿ ಇರುವ ಶ್ರೀ ಎನ್.ಹೆಚ್. ಮೂರ್ತಿ, ಅಟೆಂಡರ್, ಇವರು ಕೊಟ್ಟಿರುವ ಲಿಖಿತ ಹೇಳಿಕೆ ಪ್ರಕಾರ ತಿಳಿದುಬಂದಿರುವುದೇನೆಂದರೆ, ನಿಗಮದ ಅಧ್ಯಕ್ಷರಾದ ಶ್ರೀ ಬೇಳೂರು ರಾಘವೇಂದ್ರ ಶೆಟ್ಟಿ ಇವರು ಫೋನ್ ಕರೆ ಮಾಡಿ ದಿನಾಂಕ: 27.05.2022 ರಂದು ಬೆಳಿಗ್ಗೆ 8.30 ಕ್ಕೆ ಕರೆಸಿಕೊಂಡು ನಿಗಮದ ಪ್ರಧಾನ ಕಛೇರಿಯ ಬಾಗಿಲು ತೆರೆಸಿಕೊಂಡಿರುತ್ತಾರೆ. ಹಾಗೂ ಕಛೇರಿಯ ಬಾಗಿಲು ತೆರೆದ ತಕ್ಷಣ ಅಧ್ಯಕ್ಷರ ಜೊತೆಯಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿ ಒಳಗೆ ಬಂದಿದ್ದು ಡಿವಿಆರ್ ಎಲ್ಲಿದೆ ಎಂದು ಕೇಳಿರುತ್ತಾನೆ.

ಶ್ರೀ ಎನ್.ಹೆಚ್.ಮೂರ್ತಿ, ಅಟೆಂಡರ್, ಇವರು ಡಿವಿಆರ್ ಯಾಕೆ ಬೇಕು ಎಂದು ಕೇಳಿರುತ್ತಾರೆ. ಮುಂದುವರೆದು, ಡಿವಿಆರ್, ಸಿಸಿಟಿವಿ ಯಾವುದನ್ನೂ ಕಛೇರಿಯ ಅಧಿಕಾರಿಗಳ ಪರವಾನಗಿ ಇಲ್ಲದೇ ಮುಟ್ಟಿಕೂಡದೆಂದು ತಿಳಿಸಿದಾಗ್ಯೂ ಕೂಡ ಅಧ್ಯಕ್ಷರ ಸಮ್ಮುಖದಲ್ಲೇ ಅಧ್ಯಕ್ಷರು ಕರೆದುಕೊಂಡು ಬಂದ ಆ ಅಪರಿಚಿತ ವ್ಯಕ್ತಿಯು ಡಿವಿಆರ್ ಉಪಕರಣವನ್ನು ಮುಟ್ಟಿ ಏನೋ ಮಾಡಿರುತ್ತಾನೆ ಎಂದು ಶ್ರೀ ಎನ್.ಹೆಚ್.ಮೂರ್ತಿ, ಅಟೆಂಡರ್, ಇವರು ಲಿಖಿತ ಹೇಳಿಕೆ ನೀಡಿರುತ್ತಾರೆ. (ಪ್ರತಿಯನ್ನು ಲಗತ್ತಿಸಲಾಗಿದೆ)

ತದನಂತರ ಸಿಸಿಟಿವಿ ಡಿಸ್‌ಪ್ಲೇ ಆಗಲೀ ಡಿವಿಆರ್ ಆಗಲಿ ಕೆಲಸ ಮಾಡುತ್ತಿರಲಿಲ್ಲ. ಎಷ್ಟರ ಮಟ್ಟಿಗೆ ಡಿ.ವಿ.ಆರ್‌. ವಿರೂಪಗೊಳಿಸಲಾಗಿದೆ ಎಂದು ತಿಳಿದು ಬರಬೇಕಾಗಿರುತ್ತದೆ. ಅಪರಿಚಿತ ವ್ಯಕ್ತಿಯು, ಸರ್ಕಾರದ ಕಛೇರಿಗೆ ಸೇರಿದ ಡಿವಿಆರ್‌ ಉಪಕರಣವನ್ನು ವಿರೂಪಗೊಳಿಸಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧವಾಗುತ್ತದೆ. ಕಛೇರಿಯ ಸ್ವತ್ತಾದ ಸಿಸಿಟಿವಿ/ಡಿವಿಆರ್ ಅನ್ನು ತಮ್ಮ ಸ್ವಂತ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಅಧ್ಯಕ್ಷರು ಅಪರಿಚಿತ ವ್ಯಕ್ತಿಯಿಂದ ಸಿದ್ದಿ ವಿರೂಪಗೊಳಿಸಿರುವ ಈ ವಿಷಯವನ್ನು ತಮ್ಮ ಅವಗಾಹನೆಗಾಗಿ ಸಲ್ಲಿಸುತ್ತಿದ್ದೇನೆ ಎಂದು ಪತ್ರ ಬರೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ