ರಾಜ್ಯಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ

Published : May 31, 2022, 03:30 PM ISTUpdated : May 31, 2022, 03:32 PM IST
ರಾಜ್ಯಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ

ಸಾರಾಂಶ

ರೈತ ಸಂಘದ  ರಾಜ್ಯಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಉಚ್ಚಾಟನೆ ಮಾಡಲಾಗಿದೆ.

ಶಿವಮೊಗ್ಗ (ಮೇ.31): ರೈತ ಸಂಘದ (Karnataka Rajya Raitha Sangha - KRRS) ರಾಜ್ಯಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾ ಮಾಡಲಾಗಿದೆ. ಶಿವಮೊಗ್ಗದ (Shivamogga) ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತುರ್ತು ರಾಜ್ಯ ಸಮಿತಿ ಸಭೆಯಲ್ಲಿ ಈ ನಿರ್ಧಾರ  ತೆಗೆದುಕೊಳ್ಳಲಾಗಿದ್ದು,  ರಾಜ್ಯದ 20 ಕ್ಕೂ ಹೆಚ್ಚು ಜಿಲ್ಲೆಗಳಿಂದ ಆಗಮಿಸಿದ ರೈತ (Farmers) ಸಂಘಟನೆಯ ಪ್ರತಿನಿಧಿಗಳು ಸಭೆಯಲ್ಲಿ ಒಕ್ಕೊರಲಿನಿಂದ ಕೈ ಎತ್ತುವ ಮೂಲಕ ಕೋಡಿಹಳ್ಳಿ ಚಂದ್ರಶೇಖರ ಉಚ್ಚಾಟನೆಗೆ ಒಪ್ಪಿಗೆ ಸೂಚಿಸಿದರು. ನೂತನ ರಾಜ್ಯಾಧ್ಯಕ್ಷರನ್ನಾಗಿ ಹೆಚ್ ಆರ್ ಬಸವರಾಜಪ್ಪ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ.

ಇತ್ತೀಚೆಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ (kodihalli chandrashekar ) ವಿರುದ್ಧ ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಅವರು ''ದಿಲ್ಲಿಯ ಐತಿಹಾಸಿಕ ರೈತ ಹೋರಾಟ''ವನ್ನು ಮೊಟಕುಗೊಳಿಸಲು ಡೀಲು ಕುದುರಿಸುವ ಮಾತುಗಳನ್ನಾಡಿರುವ ವಿಡಿಯೋ ಬಂದ ನಂತರ ರಾಜ್ಯ ರಾಷ್ಟ್ರದಾದ್ಯಂತ ರೈತ ಮುಖಂಡರನ್ನು ಕಂಗೆಡಿಸಿದೆ. 

ಪರೀಕ್ಷಾ ತಯಾರಿ ಬಗ್ಗೆ UPSC ಟಾಪರ್ SHRUTI SHARMA ಮಾತು

ಪದಚ್ಯುತಿಗೆ ಕಾರಣವಾದ ಅಂಶಗಳು:  ಕರ್ನಾಟಕ ರಾಜ್ಯ ರೈತ ಸಂಘ ತ್ಯಾಗ , ಬಲಿದಾನಗಳಿಂದ ರಚನೆಯಾಗಿದೆ.  153 ಜನ ರೈತರು ಚಳುವಳಿಯ ಸಂದರ್ಭದಲ್ಲಿ ಸರ್ಕಾರದ ಗುಂಡಿಗೆ ಆಹುತಿಯಾಗಿದ್ದಾರೆ. ಲಕ್ಷಾಂತರ ಜನ ಪೋಲೀಸ್‌ನವರ ಲಾಠಿ ಏಟು , ಬೂಟು ಕಾಲಿನ ಒದೆ ತಿಂದರು. ಜೈಲುವಾಸವನ್ನ ಅನುಭವಿಸಿ , ರಕ್ತ ಹರಿಸಿ ಸಂಘಟನೆಯನ್ನ ಕಟ್ಟಿದ್ದಾರೆ. ಸಂಘದ ಪಾವಿತ್ರತೆಯನ್ನು ಮತ್ತು ರೈತ ಚಳುವಳಿಯನ್ನು ರೈತರಿಗೆ , ಶೋಷಿತ ವರ್ಗದವರಿಗಾಗಿ ಮುಂದುವರಿಸಬೇಕಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ರವರ ಮೇಲೆ ಅಪಾದನೆ ಬಂದಿದೆ. 

ಖಾಸಗಿ ಟಿವಿಯಲ್ಲಿ ಪ್ರಸಾರವಾದ ಸುದ್ದಿಯನ್ನು ಚಂದ್ರಶೇಖರ್‌ರವರು ಅಲ್ಲಗಳೆಯಲಿಲ್ಲ.  ಅವರು 7-8 ತಿಂಗಳುಗಳ ಕಾಲ ನನ್ನನ್ನ ಭೇಟಿ ಮಾಡಿದ್ದಾರೆ , ನಮ್ಮ ಮನೆಯಲ್ಲಿ ಊಟ ಮಾಡಿದ್ದಾರೆ , ನಿನ್ನನ್ನು ನಂಬಿ ಮಾತನಾಡಿದ್ದೀನಿ ಹೀಗೆ ಹೇಳಿದ್ದಾರೆ ವಿನಃ ತಮ್ಮ ಮೇಲೆ ಬಂದಿರುವ ಆರೋಪಗಳನ್ನ ನಿರಾಕರಣೆ ಮಾಡಲಿಲ್ಲ. ಈ ವಿಚಾರವಾಗಿ ನಾವೆಲ್ಲರೂ ತಲೆ ತಗ್ಗಿಸುವಂತಾಗಿದೆ. ಇದು ರೈತ ಚಳುವಳಿಯಲ್ಲಿ ಒಂದು ಕಪ್ಪು ಚುಕ್ಕಿ ಆಗಿದೆ.  ಈಗಿನ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್‌ರವರು ತನಿಖೆ ಆಗುವವರೆಗಾದರೂ ರಾಜಿನಾಮೆ ಕೊಟ್ಟು ಸಂಘದ ಗೌರವವನ್ನು ಉಳಿಸಬೇಕಾಗಿತ್ತು . ಈ ದಿನ ಸಭೆ ಸೇರಿದ ಎಲ್ಲರೂ ಸ್ಥಾನ ತ್ಯಜಿಸಿ ಬೇರೆಯವನ್ನ ಆಯ್ಕೆ ಮಾಡಿ ಎಂದು ಸಲಹೆ ನೀಡಿದರೂ ಒಪ್ಪಲಿಲ್ಲ. ಈ ಕಾರಣದಿಂದ  ಸಭೆ ಸೇರಿ ಕೋಡಿಹಳ್ಳಿ ಚಂದ್ರಶೇಖರ್‌ರವರನ್ನ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಶಿವಮೊಗ್ಗದಲ್ಲಿ ನೂತನ ರಾಜ್ಯಾದ್ಯಕ್ಷ ಹೆಚ್ ಆರ್ ಬಸವರಾಜಪ್ಪ ಹೇಳಿದ್ದಾರೆ.

ಬ್ರಿಟನ್‌ನ 20 ವಿವಿ ಕುಲಪತಿಗಳ ನಿಯೋಗದಿಂದ ಜೂನ್ 9ರಂದು ಕರ್ನಾಟಕ ಭೇಟಿ

ಸರ್ಕಾರ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ  ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮೊಕದ್ದಮೆ ದಾಖಲು ಮಾಡಿಕೊಂಡು ತನಿಖೆ ನಡೆಸಬೇಕು. ಈ ಘಟನೆಯ ಬಗ್ಗೆ ರೈತ ಸಂಘಟನೆಯ 5 ಸದಸ್ಯರನ್ನೊಳಗೊಂಡ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸತ್ಯ ಶೋಧನಾ ಸಮಿತಿಯ ವರದಿಯ ನಂತರ ಪ್ರಾಥಮಿಕವಾಗಿ ಕೋಡಿಹಳ್ಳಿ ಚಂದ್ರಶೇಖರ ರನ್ನು ರಾಜ್ಯಾದ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ.  ಸತ್ಯ ಶೋಧನಾ ಸಮಿತಿಯು ಎರಡು ತಿಂಗಳ ಕಾಲಾವಧಿಯಲ್ಲಿ ಸಂಪೂರ್ಣ ವರದಿ ನೀಡಲಿದೆ. 

ರೈತ ಸಂಘದ ಬ್ಯಾನರ್ ಗಳಲ್ಲಿ  ಸಂಸ್ಥಾಪಕರಾದ ಎಂ ಡಿ ಸುಂದರೇಶ್, ಹೆಚ್ ಎಸ್ ರುದ್ರಪ್ಪ , ಪ್ರೊ ನಂಜುಂಡಸ್ವಾಮಿ ಭಾವಚಿತ್ರ ಮಾತ್ರ ಇರಬೇಕು. ಸಂಘದ ಅಧ್ಯಕ್ಷರ ಪರ ಘೋಷಣೆ ಹಾಕುವಂತಿಲ್ಲ. ರೈತ ಸಂಘದ ಒಡೆದ ಬಣಗಳು ಒಗ್ಗೂಡಿಸಲು ಪ್ರಯತ್ನ ನಡೆಸಲಾಗುವುದು. ರೈತ ಸಂಘದ ಒಡೆದ ಬಣಗಳು ಒಂದಾಗುವುದಾದರೇ ರಾಜ್ಯಾದ್ಯಕ್ಷ ಸ್ಥಾನ ತ್ಯಜಿಸಲು ಸಿದ್ದ. ರೈತ ಸಂಘಟನೆಯ ಗತ ವೈಭವ ಮರಳಿ ತರಲು ಸರ್ವ  ಪ್ರಯತ್ನ  ನಡೆಸುತ್ತೇನೆ. ರೈತ ನಾಯಕ ಟಿಕಾಯತ್ ಮೇಲಿನ ದಾಳಿ ಹೀನಾಯ ಕೃತ್ಯ.  ಟಿಕಾಯತ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ಒದಗಿಸ ಬೇಕು ಎಂದು ರಾಜ್ಯಾದ್ಯಕ್ಷ ಹೆಚ್ ಆರ್ ಬಸವರಾಜಪ್ಪ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ