ಜಿಲ್ಲೆಯಲ್ಲಿ ಮತ್ತೆ ಲವ್ ಜಿಹಾದ್ ಸದ್ದಿಲದೇ ಆರಂಭವಾಗಿದೆಯಾ ಎಂಬ ಅನುಮಾನ ಮೂಡಿದ್ದು, ಹಿಂದೂ ಯುವತಿಯರನ್ನ ಮದುವೆಯಾಗಲು ಮುಸ್ಲಿಂ ಯುವಕರು ಸಜ್ಜಾಗಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಧಾರವಾಡ (ಜೂ.09): ಜಿಲ್ಲೆಯಲ್ಲಿ ಮತ್ತೆ ಲವ್ ಜಿಹಾದ್ ಸದ್ದಿಲದೇ ಆರಂಭವಾಗಿದೆಯಾ ಎಂಬ ಅನುಮಾನ ಮೂಡಿದ್ದು, ಹಿಂದೂ ಯುವತಿಯರನ್ನ ಮದುವೆಯಾಗಲು ಮುಸ್ಲಿಂ ಯುವಕರು ಸಜ್ಜಾಗಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ಬಗ್ಗೆ ಧಾರವಾಡ ಸಬ್ ರಿಜಿಸ್ಟರ್ ಕಚೇರಿಯ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟವಾಗಿತ್ತು. ಈ ಮಾಹಿತಿಯನ್ನು ತಿಳಿದು ಸ್ಥಳಕ್ಕೆ ಬಂದ ಬಜರಂಗದಳ ಕಾರ್ಯಕರ್ತರು ಮದುವೆಯನ್ನ ತಡೆ ಹಿಡಿದ್ದಾರೆ. ಜೊತೆಗೆ ಹುಡುಗಿಯ ಪೋಷಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇಬ್ಬರು ಯುವತಿಯರನ್ನ ಸಬ್ ರಿಜಿಸ್ಟರ್ ಕೌನ್ಸಲಿಂಗ್ ಮಾಡುತ್ತಿದ್ದು, ಯವಕ, ಯುವತಿಯರು ಧಾರವಾಡ ಮೂಲದವರಾಗಿದ್ದಾರೆ. ಸದ್ಯ ಲವ್ ಜಿಹಾದಿಗಳಿಗೆ ಬಜರಂಗದಳ ಕಾರ್ಯಕರ್ತರು ತಕ್ಕ ಪಾಠ ಕಲಿಸಿದ್ದಾರೆ.
ಪ್ರಿಯತಮೆಯ ಪ್ರಜ್ಞೆ ತಪ್ಪಿಸಿ ಪ್ರೇಮಿ, ಗೆಳೆಯನಿಂದ ಅತ್ಯಾಚಾರ: ತಂಪು ಪಾನೀಯದಲ್ಲಿ ಮತ್ತು ಭರಿಸುವ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ತನ್ನ ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಸಂತ್ರಸ್ತೆ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಿರಿನಗರ ಸಮೀಪದ ನಿವಾಸಿಗಳಾದ ಪುರುಷೋತ್ತಮ್ ಹಾಗೂ ಚೇತನ್ ಬಂಧಿತರಾಗಿದ್ದು, ತನ್ನ ಗೆಳೆಯ ಚೇತನ್ ಮನೆಗೆ ಗುರುವಾರ ರಾತ್ರಿ ಪ್ರಿಯತಮೆಯನ್ನು ಕರೆದೊಯ್ದು ಪುರುಷೋತ್ತಮ್ ಈ ಕೃತ್ಯ ಎಸಗಿದ್ದ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೃಷಿ ಸಂಶೋಧನೆ ಫಲ ರೈತರಿಗೆ ಸಿಗಲಿ: ಸಚಿವ ಚಲುವರಾಯಸ್ವಾಮಿ
ಸಂತ್ರಸ್ತೆ ಹಾಗೂ ಆರೋಪಿಗಳು ತುಮಕೂರು ಜಿಲ್ಲೆಯವರು. ನಗರದ ಖಾಸಗಿ ಬ್ಯಾಂಕಿನಲ್ಲಿ ಚೇತನ್ ಉದ್ಯೋಗದಲ್ಲಿದ್ದರೆ, ಪುರುಷೋತ್ತಮ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ತನ್ನ ಕುಟುಂಬದ ಜತೆ ಗಿರಿನಗರದಲ್ಲಿ ಚೇತನ್ ನೆಲೆಸಿದ್ದ. ಆತನ ಪತ್ನಿ ಊರಿಗೆ ಹೋಗಿದ್ದರಿಂದ ಮನೆಗೆ ಸ್ನೇಹಿತರ ಜತೆ ಪಾರ್ಟಿಗೆ ಗುರುವಾರ ರಾತ್ರಿ ಚೇತನ್ ಆಹ್ವಾನಿಸಿದ್ದ ಎನ್ನಲಾಗಿದೆ. ಕೊರಟಗೆರೆ ತಾಲೂಕಿನ ಪುರುಷೋತ್ತಮ್ ಹಾಗೂ ಸಂತ್ರಸ್ತೆ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಪ್ರಿಯತಮೆಯ ಮೊಬೈಲನ್ನು ಪುರುಷೋತ್ತಮ್ ತೆಗೆದುಕೊಂಡಿದ್ದ. ತನ್ನ ಮೊಬೈಲನ್ನು ಪಡೆಯುವ ಸಲುವಾಗಿ ಗುರುವಾರ ಸಂಜೆ ತುಮಕೂರಿನಿಂದ ಪ್ರಿಯಕರನ ಭೇಟಿಗೆ ಸಂತ್ರಸ್ತೆ ಬಂದಿದ್ದಳು ಎಂದು ದೂರಿನಲ್ಲಿ ಹೇಳಲಾಗಿದೆ.
ಗೋಹತ್ಯೆ ಹೇಳಿಕೆ: ಸಚಿವ ವೆಂಕಟೇಶ್‌ಗೆ ಕಾಂಗ್ರೆಸ್ ಹೈಕಮಾಂಡ್ ಛೀಮಾರಿ
ಆಗ ಮೆಜೆಸ್ಟಿಕ್‌ನಿಂದ ಸ್ಕೂಟರ್‌ನಲ್ಲಿ ಪ್ರಿಯತಮೆಯನ್ನು ಕರೆದುಕೊಂಡು ಗೆಳೆಯ ಚೇತನ್ ಮನೆಗೆ ಪುರುಷೋತ್ತಮ್ ಕರೆದೊಯ್ದಿದ್ದ. ಆ ಮನೆಯಲ್ಲಿ ಮೂವರು ಪಾರ್ಟಿ ಮಾಡಿದ್ದಾರೆ. ಈ ವೇಳೆ ಸಂತ್ರಸ್ತೆಗೆ ಕುಡಿಯಲು ಮತ್ತು ಬೇರಿಸಿದ್ದ ತಂಪು ಪಾನೀಯವನ್ನು ಪುರುಷೋತ್ತಮ್ ನೀಡಿದ್ದಾನೆ. ಪಾನೀಯ ಸೇವಿಸಿ ಪ್ರಜ್ಞೆ ತಪ್ಪಿದ ಸಂತ್ರಸ್ತೆಯನ್ನು ಕೊಠಡಿ ಕರೆದೊಯ್ದು ಪುರುಷೋತ್ತಮ್ ಅತ್ಯಾಚಾರ ಎಸಗಿದ್ದಾನೆ. ಆನಂತರ ಆಕೆ ಮೇಲೆ ಚೇತನ್ ಕೂಡಾ ಅತ್ಯಾಚಾರಕ್ಕೆ ಮುಂದಾದಾಗ ಎಚ್ಚರವಾಗಿದೆ. ಕೂಡಲೇ ಆತನ್ನು ದೂಡಿ ಮನೆಯಿಂದ ಹೊರಗೆ ಬಂದು ರಕ್ಷಣೆಗೆ ಸಂತ್ರಸ್ತೆ ಕೂಗಿಕೊಂಡಿದ್ದಾಳೆ. ಆಗ ಸ್ಥಳೀಯರು ಜಮಾಯಿಸಿ ಸಂತ್ರಸ್ತೆಗೆ ನೆರವಾಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.