Asianet Suvarna News Asianet Suvarna News

ಗೋಹತ್ಯೆ ಹೇಳಿಕೆ: ಸಚಿವ ವೆಂಕಟೇಶ್‌ಗೆ ಕಾಂಗ್ರೆಸ್‌ ಹೈಕಮಾಂಡ್‌ ಛೀಮಾರಿ

ಗೋ ಹತ್ಯೆ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿ ವಿವಾ​ದ​ಕ್ಕೀ​ಡಾ​ಗಿದ್ದ ಕರ್ನಾ​ಟಕ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್‌ಗೆ ಕಾಂಗ್ರೆಸ್‌ ಹೈಕಮಾಂಡ್‌ ಗುರುವಾರ ಛೀಮಾರಿ ಹಾಕಿದ್ದು, ಮಿತಿಯಲ್ಲಿರುವಂತೆ ಎಚ್ಚರಿಕೆ ನೀಡಿದೆ. 

Congress High Command Slams On Minister K Venkatesh gvd
Author
First Published Jun 9, 2023, 6:24 AM IST

ನವದೆಹಲಿ (ಜೂ.09): ಗೋ ಹತ್ಯೆ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿ ವಿವಾ​ದ​ಕ್ಕೀ​ಡಾ​ಗಿದ್ದ ಕರ್ನಾ​ಟಕ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್‌ಗೆ ಕಾಂಗ್ರೆಸ್‌ ಹೈಕಮಾಂಡ್‌ ಗುರುವಾರ ಛೀಮಾರಿ ಹಾಕಿದ್ದು, ಮಿತಿಯಲ್ಲಿರುವಂತೆ ಎಚ್ಚರಿಕೆ ನೀಡಿದೆ. ‘ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್‌ ಸರ್ಕಾರ ಪುನರ್‌ ಪರಿಶೀಲನೆ ನಡೆಸಲಿದೆ. ಎಮ್ಮೆ, ಕೋಣಗಳನ್ನೇ ಹತ್ಯೆ ಮಾಡು​ತ್ತೇ​ವೆ. ಹಾಗಿ​ದ್ದಾ​ಗ ಹಸುಗಳನ್ನು ಏಕೆ ಕಡಿಯಬಾರದು?’ ಎಂದು ಸಚಿವ ವೆಂಕಟೇಶ್‌ ಕಳೆದ ಶನಿವಾರ ಪ್ರಶ್ನೆ ಮಾಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. 

ಬಿಜೆಪಿ ಇದ​ನ್ನು ರಾಷ್ಟ್ರಮ​ಟ್ಟ​ದಲ್ಲಿ ಪ್ರಸ್ತಾಪ ಮಾಡಿ ಕಾಂಗ್ರೆಸ್‌ ಅನ್ನು ಪ್ರಶ್ನಿ​ಸಿ​ತ್ತು. ಗುರು​ವಾರ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತ​ನಾ​ಡಿ​ದ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾ​ಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ, ‘ನಿಮ್ಮದೇ ಸಚಿವಾಲಯದ ಅಡಿಯಲ್ಲಿ ಬರುವ ಅಂಶಗಳ ಬಗ್ಗೆ ಗಮನ ಕೊಡಿ. ಕಾಯ್ದೆ ರೂಪಿ​ಸು​ವುದು ಹಾಗೂ ರದ್ದು ಮಾಡು​ವುದು ನಿಮ್ಮ ವ್ಯಾಪ್ತಿಗೆ ಬರಲ್ಲ. ಹೀಗಾ​ಗಿ ನಿಮ್ಮ ವ್ಯಾಪ್ತಿಗೆ ಬರದ ನೀತಿ​ಗಳ ಬಗ್ಗೆ ನಿರ್ಧಾರ ಪ್ರಕ​ಟಿ​ಸ​ಬೇಡಿ ಎಂದು ಹಾಗೂ ಮಿತಿಯಲ್ಲಿರಿ. ನಾವು (ಸ​ರ್ಕಾ​ರದ ಪ್ರಮುಖ​ರು​) ಈ ಬಗ್ಗೆ ನಿರ್ಧಾರ ಕೈಗೊ​ಳ್ಳ​ಲಿ​ದ್ದೇವೆ ಎಂದು ಸಚಿವರಿಗೆ ಸೂಚಿಸಲಾಗಿದೆ’ ಎಂದು ಸುರ್ಜೇವಾಲಾ ಹೇಳಿದ್ದಾರೆ.

ರಾಜ್ಯದ ಡ್ಯಾಂಗಳು ಖಾಲಿ: 10 ಜಲಾಶಯಗಳಲ್ಲಿ ನೀರು ಬರಿದು!

ಅಲ್ಲದೆ, ‘ಡೈರಿ ರೈತರ ಹಿತರಕ್ಷಣೆ ಮತ್ತು ರೈತರು ನೀಡುವ ಹಾಲಿಗೆ ಉತ್ತಮ ಬೆಲೆ ನೀಡುವ ಬಗ್ಗೆ ಸಚಿ​ವರು ಗಮನ ಹರಿ​ಸ​ಬೇ​ಕು ಎಂದೂ ಸೂಚಿಸ​ಲಾ​ಗಿ​ದೆ’ ಎಂದಿ​ದ್ದಾ​ರೆ. ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌ ಕುರಿತಾಗಿ ಮಾತನಾಡಿದ್ದ ವೆಂಕಟೇಶ್‌, ‘ನಾವು ಇನ್ನೂ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇ​ಧ ಕಾಯ್ದೆಯನ್ನು ಜಾರಿ ಮಾಡಿತ್ತು. ಕೋಣಗಳು ಮತ್ತು ಎಮ್ಮೆಗಳನ್ನು ವಧೆ ಮಾಡಲು ಅನುಮತಿ ನೀಡಿರುವಾಗ, ಗೋ ಹತ್ಯೆಗೆ ಮಾತ್ರ ಮಾಡಬಾರದು ಎಂದೇಕೆ ಜನ ಹೇಳುತ್ತಿದ್ದಾರೆ. ನಾವು ಈ ಕುರಿತಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ಹೇಳಿದ್ದರು.

ಹಸು ಕಡಿಯುವ ಸಚಿವರ ಹೇಳಿಕೆಗೆ ಮಾಜಿ ಸಿಎಂ ಬೊಮ್ಮಾಯಿ ಕಿಡಿ

ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರು ಕಾಂಗ್ರೆಸ್‌ ಇದಕ್ಕೆ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದರು. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ ಸಚಿವ ಪರಷೋತ್ತಮ್‌ ರೂಪಾಲಾ ಪ್ರತಿಕ್ರಿಯಿಸಿ, ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕಿ ಸೋನಿಯಾ ಗಾಂಧಿ ಈ ಬಗ್ಗೆ ಮಾತನಾಡಬೇಕು. ಕಾಂಗ್ರೆಸ್‌ ಸರ್ಕಾರ ಗೋ ಹತ್ಯೆ ಮಾಡುವ ಮೂಲಕ ಕರ್ನಾ​ಟ​ಕ​ದಲ್ಲಿ ಆಡ​ಳಿತ ಶುರು ಮಾಡಲು ಇಚ್ಛಿ​ಸಿ​ದೆ​ಯೆ?​’ ಎಂದು ಹೇಳಿದ್ದರು.

ಕಾಯ್ದೆ ರೂಪಿ​ಸು​ವುದು ಹಾಗೂ ರದ್ದು ಮಾಡು​ವುದು ನಿಮ್ಮ (ವೆಂಕಟೇಶ್‌) ವ್ಯಾಪ್ತಿಗೆ ಬರಲ್ಲ. ಹೀಗಾ​ಗಿ ಅಂತಹ ನೀತಿ​ಗಳ ಬಗ್ಗೆ ನಿರ್ಧಾರ ಪ್ರಕ​ಟಿ​ಸ​ಬೇಡಿ. ಮಿತಿಯಲ್ಲಿರಿ. ಸ​ರ್ಕಾ​ರದ ಪ್ರಮು​ಖ​ರು​ ಈ ಬಗ್ಗೆ ನಿರ್ಧರಿಸುತ್ತಾರೆ.
- ರಣದೀಪ್‌ ಸುರ್ಜೇವಾಲಾ

Follow Us:
Download App:
  • android
  • ios