ಸೂರ್ಯ-ಚಂದ್ರ ಇರೋದು ಎಷ್ಟು ಸತ್ಯವೋ ಮೋದಿ ಪ್ರಧಾನಿ ಆಗೋದು ಸತ್ಯ: ಅರುಣಾ ಲಕ್ಷ್ಮೀ

By Ravi Janekal  |  First Published Apr 5, 2024, 12:10 AM IST

ಬಿಜೆಪಿ ಮರಳಿದಾಗ ಮನೆ ಮಗಳಂತೆ ಸ್ವಾಗತ ಮಾಡಿರೋದು ಖುಷಿಯಾಗಿದೆ. ಕೆಆರ್‌ಪಿಪಿ ಪಕ್ಷ ಬಿಜೆಪಿ ಯಲ್ಲಿ ವಿಲೀನ ಮಾಡಿದ್ದೇವೆ ನಾವೆಲ್ಲ ಈಗ ಒಂದೇ ಎಂದು ಶಾಸಕ ಜನಾರ್ದನ ರೆಡ್ಡಿ ಪತ್ನಿ  ಅರುಣಾ ಲಕ್ಷ್ಮೀ ಸಂತಸ ವ್ಯಕ್ತಪಡಿಸಿದರು.


ಬಳ್ಳಾರಿ (ಏ.4): ಬಿಜೆಪಿ ಮರಳಿದಾಗ ಮನೆ ಮಗಳಂತೆ ಸ್ವಾಗತ ಮಾಡಿರೋದು ಖುಷಿಯಾಗಿದೆ. ಕೆಆರ್‌ಪಿಪಿ ಪಕ್ಷ ಬಿಜೆಪಿ ಯಲ್ಲಿ ವಿಲೀನ ಮಾಡಿದ್ದೇವೆ ನಾವೆಲ್ಲ ಈಗ ಒಂದೇ ಎಂದು ಶಾಸಕ ಜನಾರ್ದನ ರೆಡ್ಡಿ ಪತ್ನಿ  ಅರುಣಾ ಲಕ್ಷ್ಮೀ ಸಂತಸ ವ್ಯಕ್ತಪಡಿಸಿದರು.

ಇಂದು ಬಳ್ಳಾರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು,  ಸಚಿವ ನಾಗೇಂದ್ರ ತಮ್ಮ ಸಹೋದರ ಅಭ್ಯರ್ಥಿ ಎಂದು ಮೊದಲು ಪ್ರಚಾರ  ಮಾಡಿದ್ರು. ಆದರೆ ಜನಾರ್ದನ ರೆಡ್ಡಿ ಬಿಜೆಪಿ ಸೇರಿದ ಬಳಿಕ ಸೋಲಿನ ಭಯಕ್ಕೆ ಹಿಂದೆ ಸೇರಿದ್ರು. ಸೋತ್ರೆ ಮಂತ್ರಿ. ಗೆದ್ರೇ ಎಂಪಿ ಎಂದು ಸಂಡೂರು ಶಾಸಕ ತುಕಾರಾಂ ಅವರನ್ನು ಕ್ಯಾಂಡಿಡೇಟ್ ಮಾಡಿದ್ದಾರೆ. ಕಂಡಿಷನ್ ಹಾಕಿದ ಬಳಿಕವೇ ತುಕಾರಾಂ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ತುಕಾರಾಂ ಗೆದ್ರೆ ಜಿಲ್ಲೆಗೆ ಯಾವುದೇ ಲಾಭ ಇಲ್ಲ ಕಾರಣ ಅವರ ಪಕ್ಷ ಅಧಿಕಾರಕ್ಕೆ ಬರೋದಿಲ್ಲ. ತುಕಾರಾಂಗೆ ಮತ ಹಾಕಿದ್ರೇ ಮತ ವೆಸ್ಟ್ ಆಗ್ತದೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಮೋದಿ ಪ್ರಧಾನಿ ಆಗೋದು ಸತ್ಯ ಎಂದರು.

Tap to resize

Latest Videos

ಬಳ್ಳಾರಿ ಬಿಜೆಪಿ ಸಮಾವೇಶದಲ್ಲಿ ಜನಾರ್ದನ ರೆಡ್ಡಿಯನ್ನ ಹಾಡಿ ಹೊಗಳಿದ ಶ್ರೀರಾಮುಲು

ನೂರು ಜನಾರ್ದನ ರೆಡ್ಡಿ ಬಂದ್ರು ಎನು ಮಾಡೋಕೆ ಅಗಲ್ಲ ಎಂದ ಸಚಿವ ನಾಗೇಂದ್ರಗೆ ತಿರುಗೇಟು ನೀಡಿದ ಅರುಣಾ ಲಕ್ಷ್ಮೀ, ಜನಾರ್ದನ ರೆಡ್ಡಿ ಅಲ್ಲ, ಜನಾರ್ದನ ರೆಡ್ಡಿ ಅಭಿಮಾನಿಯೊಬ್ವರೇ ನೂರು ಕಾಂಗ್ರೆಸ್ ನಾಯಕರಿಗೆ ಸಮವಾಗಿದ್ದಾರೆ. ರಾಜಕೀಯ ಕಲಿಸಿ ಕೊಟ್ಟಿರೋ ಜನಾರ್ದನ ರೆಡ್ಡಿ ಬಗ್ಗೆ ಹಗುರ ಮಾತು ಸರಿಯಲ್ಲ. ನಾಲಿಗೆ ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಬೇಕು ಎಂದು ಎಚ್ಚರಿಸಿದರು.

'ಈ ಮೋಕ ನಂದು ಗೆದ್ದುಕೋ ನೋಡೋಣ..' ಶ್ರೀರಾಮುಲು ವಿರುದ್ಧ ಸಿನಿಮಾ ಶೈಲಿಯಲ್ಲಿ ಸೆಡ್ಡು ಹೊಡೆದ ಸಚಿವ ನಾಗೇಂದ್ರ!

ಕೇಸ್ ಗಳಿಗೆ ಹೆದರಿದ್ರೆ ಅಂದೇ ಜನಾರ್ದನ ರೆಡ್ಡಿ ಯುಪಿಎ ಜೊತೆಗೆ ಅಡ್ಜಸ್ಟ್ ಮಾಡಿಕೊಳ್ಳುತ್ತಿದ್ರು. ನಾಗೇಂದ್ರ ಅವರೇ ಕೇಸ್ ಗೆ ಹೆದರಿಕೊಂಡು ಬಿಜೆಪಿಗೆ ದ್ರೋಹ ಮಾಡಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ರು ಬಳಿಕ ಕಾಂಗ್ರೆಸ್ ಸೇರ್ಪಡೆ ಯಾಗಿದ್ದಾರೆ. ಸಣ್ಣತನದ ಮಾತುಗಳಾಡಿದ್ರೇ ಜನರು ನಿಮಗೆ ಬುದ್ಧಿ ಕಲಿಸ್ತಾರೆ. ಇದೇ ಚುನಾವಣೆಯಲ್ಲಿ ಬುದ್ಧಿ‌ ಕಲಿಸ್ತಾರೆ ಖಡಕ್ ಎಚ್ಚರಿಕೆ ನೀಡಿದರು.

click me!