ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಗೌತಮ್.ಕೆ.ವಿ ರವರ ಆಸ್ತಿ ವಿವರ ಘೋಷಣೆ; ಆಸ್ತಿ ಎಷ್ಟು? ಇಲ್ಲಿದೆ ವಿವರ

By Ravi Janekal  |  First Published Apr 4, 2024, 11:20 PM IST

ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಚುನಾವಣಾಧಿಕಾರಿ ಮುಂದೆ ಪ್ರಮಾಣ ಪತ್ರದ ಮೂಲಕ ತಮ್ಮ ಆಸ್ತಿ ಹಾಗೂ ಇತರ ವಿಷಯಗಳನ್ನು ಘೋಷಿಸಿಕೊಂಡಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಪದವಿಧರರಾದ ಗೌತಮ್ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ ಆಗಿದ್ದಾರೆ.


ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ  (ಏ.5): ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಚುನಾವಣಾಧಿಕಾರಿ ಮುಂದೆ ಪ್ರಮಾಣ ಪತ್ರದ ಮೂಲಕ ತಮ್ಮ ಆಸ್ತಿ ಹಾಗೂ ಇತರ ವಿಷಯಗಳನ್ನು ಘೋಷಿಸಿಕೊಂಡಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಪದವಿಧರರಾದ ಗೌತಮ್ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ ಆಗಿದ್ದಾರೆ.

Tap to resize

Latest Videos

 ಗೌತಮ್ ರೂ. ೪೬,೧೪೬, ಅವರ ಪತ್ನಿ ಪದ್ಮಶ್ರೀ ರೂ.೪೩೧೯೩ ನಗದು ಹೊಂದಿದ್ದಾರೆ. ಗೌತಮ್ ಬ್ಯಾಂಕ್ ಖಾತೆಯಲ್ಲಿ ರೂ೨೧,೫೧,೬೮೫ ಠೇವಣಿ ಇದೆ. ಅವರ ಪತ್ನಿ ರೂ.೩೧,೦೭೧ ಠೇವಣಿ ಹೊಂದಿದ್ದಾರೆ. ಗೌತಮ್ ೧೦ ಲಕ್ಷ ರೂ ಜೀವ ವಿಮಾ ಪಾಲಸಿಯಲ್ಲಿ ಹೂಡಿಕೆ ಮಾಡಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಎಂ. ಮಲ್ಲೇಶ್ ಬಾಬು ಆಸ್ತಿ ವಿವರ ಘೋಷಣೆ; ವಿವರ ಮಾಹಿತಿ ಇಲ್ಲಿದೆ
 
ಗೌತಮ್ ಮತ್ತು ಅವರ ಪತ್ನಿ ಪದ್ಮಶ್ರೀ ತಲಾ ಎರಡು ಕಾರುಗಳ ಒಡೆಯರಾಗಿದ್ದಾರೆ. ಗೌತಮ್ ೧೫೦ ಗ್ರಾಂ ಚಿನ್ನ, ಅವರ ಪತ್ನಿ ೬೦೦ ಗ್ರಾಮ ಚಿನ್ನ ಹೊಂದಿದ್ದಾರೆ.  ಚಿನ್ನ ಹಾಗೂ ಇತರ ಎಲ್ಲಾ ಹೂಡಿಕೆಗಳು ಸೇರಿದಂತೆ ಗೌತಮ್ ೧,೨೨,೬೪,೦೦೦ ರೂ ಹೂಡಿಕೆ ಮಾಡಿದ್ದರೆ. ಅವರ ಪತ್ನಿ ಪದ್ಮಶ್ರೀ ೨,೦೦,೦೦,೦೦೦ ರೂ ಹೂಡಿಕೆ ಮಾಡಿದ್ದಾರೆ. ಗೌತಮ್ ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕಿನ ಬುಕ್ಕಪಟ್ಟಣ ಹಳ್ಳಿಯಲ್ಲಿ ೬ ಎಕರೆ ೭ ಗುಂಟೆ ಜಮೀನಿ ಖರೀದಿಸಿದ್ದು, ಅದರ ಮೌಲ್ಯ ೧೨,೧೪,೦೦೦ ರೂ ಆಗಿದೆ.     

ಬೆಂಗಳೂರಿನ ಸೂರ್ಯ ನಗರ ಮೊದಲನೇ ಹಂತದಲ್ಲಿ ೪೦೦೦ ಚದರ ಅಡಿಗಳ ವಾಣಿಜ್ಯ ಕಟ್ಟಡ ಹೊಂದಿದ್ದು, ಅದರ ಮಾರುಕಟ್ಟಯ ಮೌಲ್ಯ ೬,೮೨,೦೦,೦೦೦/- ರೂಪಾಯಿಗಳಾಗಿದೆ. ಬೆಂಗಳೂರಿನ ಉತ್ತರಹಳ್ಳಿ ಹೋಬಳಿ, ಕೊತ್ತನೂರು ಗ್ರಾಮದಲ್ಲಿ ೫೦೦೦ ಚದರ ಅಡಿಗಳ ಅಪಾರ್ಟ್ಮೆಂಟ್ ಹೊಂದಿದ್ದು, ಅದರ ಮಾರುಕಟ್ಟೆ ಮೌಲ್ಯ ೧೧,೮೨,೦೦,೦೦೦/- ಆಗಿದೆ. ಗೌತಮ್ ವಿರುದ್ಧ ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಬೆಂಗಳೂರಿನ ಎರಡನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಷ್ಟೆçಟ್ ಮುಂದೆ ವಿಚಾರಣೆಯ ಹಂತದಲ್ಲಿದೆ. 

ಪುಲ್ವಾಮಾ ದಾಳಿ ಬಿಜೆಪಿ ಮಾಡಿಸಿದ ಕೃತ್ಯ, ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಗುಬ್ಬಿ ಶಾಸಕನ ವಿವಾದ!

ಪೊಲೀಸರು ಅವರ ವಿರುದ್ಧ ಐಪಿಸಿ ಸೆಕ್ಷನ್ ೪೦೬, ೪೬೮, ೪೨೦, ೪೧೫, ೪೦೫ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.  ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿಯ ವಿರುದ್ಧ ಹೈ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

click me!