ಪುಲ್ವಾಮಾ ದಾಳಿ ಬಿಜೆಪಿ ಮಾಡಿಸಿದ ಕೃತ್ಯ, ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಗುಬ್ಬಿ ಶಾಸಕನ ವಿವಾದ!

By Ravi Janekal  |  First Published Apr 4, 2024, 9:01 PM IST

ಪುಲ್ವಾಮಾ ದಾಳಿಯನ್ನು ಬಿಜೆಪಿಯವರೇ ನಡೆಸಿದ್ದು, ಬಳಿಕ ಸರ್ಜಿಕಲ್ ಸ್ಟ್ರೈಕ್ ಮಾಡಿ ನಾಟಕ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಇದೇ ವಿಚಾರ ಇಟ್ಟುಕೊಂಡು ಗೆದ್ದಿದ್ದಾರೆ ಎಂದು ತುಮಕೂರಿನಲ್ಲಿ ಗುಬ್ಬಿ ಶಾಸಕ ಎಸ್‌ಆರ್‌ಕ ಶ್ರೀನಿವಾಸ್ ನೀಡಿರುವ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.


ತುಮಕೂರು (ಏ.4): ಪುಲ್ವಾಮಾ ದಾಳಿಯನ್ನು ಬಿಜೆಪಿಯವರೇ ನಡೆಸಿದ್ದು, ಬಳಿಕ ಸರ್ಜಿಕಲ್ ಸ್ಟ್ರೈಕ್ ಮಾಡಿ ನಾಟಕ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಇದೇ ವಿಚಾರ ಇಟ್ಟುಕೊಂಡು ಗೆದ್ದಿದ್ದಾರೆ ಎಂದು ತುಮಕೂರಿನಲ್ಲಿ ಗುಬ್ಬಿ ಶಾಸಕ ಎಸ್‌ಆರ್‌ಕ ಶ್ರೀನಿವಾಸ್ ನೀಡಿರುವ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ತುಮಕೂರಿನಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಮಾವೇಶದ ವೇಳೆ ಬಿಜೆಪಿ ಪಕ್ಷವನ್ನು ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಎಸ್‌ಆರ್‌ ಶ್ರೀನಿವಾಸ್.  ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos

undefined

ಪಕ್ಷದ ಕಾರ್ಯಕರ್ತರಂತೆ ನಟಿಸಿ ಮುಖಂಡರ ಜೇಬು ಕತ್ತರಿಸುತ್ತಿದ್ದ ಗ್ಯಾಂಗ್ ಅಂದರ್!

ಮತ್ತೊಮ್ಮೆ ಸಮರ್ಥಿಸಿಕೊಂಡ ಶಾಸಕ!

ಪುಲ್ವಾಮಾ ದಾಳಿ ವಿಚಾರ ತೀವ್ರ ವಿವಾದ ಸ್ವರೂಪ ಪಡೆದರೂ ಮತ್ತೊಮ್ಮೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ಶಾಸಕ ಎಸ್‌ಆರ್‌ ಶ್ರೀನಿವಾಸ್, ಅತ್ಯಂತ ಬಲಿಷ್ಠ ಸೆಕ್ಯೂರಿಟಿ ಇರುವ ಜಾಗ ಅದು. ಮಿಲಿಟರಿ ಓಡಾಡುವಂತಹ ಜಾಗ ಅದು. ಅಲ್ಲೆ ದಾಳಿಯಾಗಿದೆ. ದೇಶದಲ್ಲಿ ರಾಜೀವ್ ಗಾಂಧಿ ಹೊಡೆದವರನ್ನ ಹಿಡಿದ್ರು. ಆದರೆ ಇದುವರೆಗೂ ಪುಲ್ವಾಮ‌ ದಾಳಿ ಮಾಡಿದ ಒಬ್ಬರನ್ನ ಆದರೂ ಹಿಡಿದಿರೋದು ಶಿಕ್ಷೆ  ಕೊಟ್ಟಿರೋದು ಇದೆಯಾ? ಪ್ರಶ್ನಿಸಿದರು. ಘಟನೆ ‌ನಡೆದು ಐದು ವರ್ಷ ಆಗಿದೆ. ಇದುವರೆಗೂ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದಾಳಿಕೋರರನ್ನು ಬಂಧಿಸುವುದಾಗಲಿ, ಇತರೆ ಕ್ರಮ ಕೈಗೊಂಡ ಬಗ್ಗೆಯಾಗಲಿ ಯಾವುದಾದರೊಂದನ್ನು ದೇಶದ ಜನರಿಗೆ ಹೇಳಬೇಕಲ್ಲ? ಘಟನೆ ಬಗ್ಗೆ ಮುಚ್ಚಿಟ್ಟರೆ ಇದರಿಂದ ಜನರಿಗೆ ಯಾವ ಭಾವನೆ ಬರುತ್ತೆ? ತನಿಖೆ ಆಗಿಲ್ಲ ಎಂದರೆ ಉದ್ದೇಶ ಏನು? ಈ‌ ಬಗ್ಗೆ ಜನರಿಗೆ ಅನುಮಾನ ಬರುತ್ತಿದೆ ಎಂದರು.

ರಾಮಮಂದಿರ ಇನ್ನೂ ಪೂರ್ತಿಯಾಗಿಲ್ಲ. ಪೂರ್ತಿಯಾಗದೇ ಓಪನ್ ಮಾಡ್ತಾರೆ ಅಂದರೆ ಇದು ಚುನಾವಣೆ ಗಿಮಿಕ್ ಅಲ್ಲದೇ ಮತ್ತೇನು? ಒಂದೊಂದು ಚುನಾವಣೆಗೆ ಒಂದೊಂದು ಉದ್ದೇಶ ಇಟ್ಟುಕೊಂಡು ಜನರನ್ನ ಮರಳು ಮಾಡ್ತಾ ಇದ್ದಾರೆ. ಜನರ ಧಾರ್ಮಿಕ‌ ಭಾವನೆಗಳನ್ನ ಕೆರಳಿಸುವ ಕೆಲಸ ಮಾಡ್ತಾ ಇದ್ದಾರೆ. ಇದುವರೆಗೂ ಏನ್ ಕೆಲಸ ಮಾಡಿದ್ದಾರೆ. ಯಾವುದಾದರೂ ಒಂದು ಡ್ಯಾಮ್ ಕಟ್ಟಿದ್ದಾರಾ, ಆಸ್ಪತ್ರೆಗಳನ್  ಕಟ್ಟಿದರಾ. ಕೊರೊನಾ ಸಮಯದಲ್ಲಿ ಸಾವಿರಾರು ಜನರು ಸತ್ತರು. ಚುನಾವಣಾ ಬಾಂಡ್ ಬಗ್ಗೆ ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದೆ. ಯಾರು ಹಣ ಇರುತ್ತೋ ಅವರ ಮೇಲೆ ರೇಡ್ ಮಾಡೋದು ಅವರಿಂದ ಬಾಂಡ್ ರೂಪದಲ್ಲಿ ಇರುವ ಹಣ ಗಳಿಸೋದು ಇದೊಂದು ರೀತಿ ದರೋಡೆ ಅಲ್ವಾ? ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈಗ ಕ್ರೇಜಿವಾಲ್ ನ ಒಳಗೆ ಹಾಕಿದ್ದಾರೆ. ಡಿಕೆಶಿಯವರನ್ನೂ ಒಳಗೆ ಹಾಕಿದ್ರು. ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು. ಇವರು ಮಾಡಿರೋದು ಒಂದು ಶಿಕ್ಷೆ ಆಗಿರುವ ಪ್ರಕರಣ ತೋರಿಸಿ. ಇವರು ಮಾಡ್ತಾ ಇರೋದು ಏನು. ಹೊಸ ಟೆಕ್ನಿಕಲ್ ಆಗಿ ಲಂಚ ತೆಗೆದುಕೊಳ್ಳುವ ಕೆಲಸ ಬಿಜೆಪಿ ಮಾಡ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಬಂದಿಲ್ಲ ಎಂದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ‌ ರಾಜ್ಯದಲ್ಲಿ ಅತ್ಯಂತ ಬಲಿಷ್ಠ ಹಿಂದುಳಿದ ವರ್ಗದ ನಾಯಕರು ದೀನದಲಿತರು ನಾಯಕರು ಅಲ್ಪಸಂಖ್ಯಾತ ನಾಯಕರು ಇದಾರೆ ಅಂದ್ರೆ ಅದು ಸಿದ್ದರಾಮಯ್ಯ. ಅವರ ಕೈ ಬಲಪಡಿಸುವ ಕೆಲಸ ನಾವು ಮಾಡಬೇಕು. ನಾವು ಮಾಡಿಲ್ಲ ಅಂದರೆ ವಿಪಕ್ಷದವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಅಂತಾರೆ ಆ ಒಂದು‌ ಕಾರಣಕ್ಕೆ  ಎಲ್ಲರೂ ಕೂಡ ಕೈ ಬಲಪಡಿಸಬೇಕು. ಸಿದ್ದರಾಮಯ್ಯರಿಗೆ ಕೈ ಬಲಪಡಿಸಬೇಕು ಅಂತಾ ಹೇಳಿದ್ದೇನೆ ಎಂದರು.

ಕುಮಾರಸ್ವಾಮಿ ವಿರುದ್ಧ ಕಿಡಿ

ಕುಮಾರಸ್ವಾಮಿ ಒಕ್ಕಲಿಗ ನಾಯಕರನ್ನ ತುಳಿದಿದ್ದಾರೆ. ಈ ಎನ್‌ಡಿಎ ಮೈತ್ರಿಕೂಡ 28 ಕ್ಕೆ 28 ಸ್ಥಾನ ಗೆಲ್ಲುತ್ತೆ ಅಂತಾ ಹೇಳಿದ್ದಾರೆ. ಕುಮಾರಸ್ವಾಮಿಯವರು ಸಿದ್ದರಾಮಯ್ಯ ಗೆ ಕೇಳಿದ್ದಾರೆ. ಶಾಸ್ತ್ರ ಹೇಳೊದು ಇತ್ತಿಚೆಗೆ ಕಲಿತಿದ್ದಾರೆ ಅಂತಾ ಆದರೆ ಶಾಸ್ತ್ರ ಮಾಟ ಮಂತ್ರ ಎಲ್ಲಾ ಇವರ ಕುಟುಂಬಕ್ಕೆ ಇರುವಂತಹದ್ದು. 28 ಕ್ಕೆ 28 ಸ್ಥಾನ ಗೆಲ್ತೀವಿ ಅಂತಾರಲ್ಲ, ಹಾಗಾದ್ರೆ ಇವರು ಶಾಸ್ತ್ರ ಹೇಳ್ತಿದ್ದಾರಾ? ವ್ಯಂಗ್ಯ ಮಾಡಿದರು.

ತುಮಕೂರಿಗೆ ಕುಮಾರಸ್ವಾಮಿ ಏನ್ ಮಾಡಿದ್ದಾರೆ. ಕುಮಾರಸ್ವಾಮಿ ಜನಪರ ಕೆಲಸ ಯಾವುದು ಮಾಡಿಲ್ಲ. ಇವರ ಟ್ರೇಂಡ್ ಒಂದೇ ಒಂದು ನಾನು ಒಕ್ಕಲಿಗ ನನಗೆ ವೋಟ್ ಹಾಕಿ, ನಾನು ಒಕ್ಕಲಿಗೆ ನನಗೆ ವೋಟ್ ಹಾಕಿ ಅನ್ನೋದು. ಆದರೆ ಒಕ್ಕಲಿಗರಿಗೆ ಕುಮಾರಸ್ವಾಮಿ ಕೊಡುಗೆ ಏನು? ಕೊಡುಗೆ ಇಲ್ಲ ಬದಲಾಗಿ ಸಮುದಾಯವನ್ನು ತುಳಿದಿದ್ದಾರೆ. ಎಲ್ಲಾ ಒಕ್ಕಲಿಗ ನಾಯಕರನ್ನ ತುಳಿಯುವಂತದ್ದು ಬಿಟ್ಟರೇ ಬೇರೆ ಏನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮಗ್ಗಿ 2 ರಿಂದ 20 ಅಷ್ಟೇ. ಅದಕ್ಕಿಂತ ಡಬಲ್ ಒಕ್ಕಲಿಗ ನಾಯಕರನ್ನ ತುಳಿದಿದ್ದೀರಿ. ಎಲ್ಲರೂ ಪಕ್ಷ ಬಿಟ್ಟು ಬಂದಿದ್ದಾರೆ. ಗೋವಿಂದರಾಜು ನಾಳೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗ್ತಾರೆ. ಮಂಡ್ಯದಲ್ಲಿ ಕೂಡ ನಾನು ಪ್ರಚಾರ ಮಾಡಿದ್ದೇನೆ. ಸುಮಾರು 20 ಹಳ್ಳಿಗೆ ಹೋಗಿದ್ದೇನೆ.  ನಾನು‌ ಕುಮಾರಸ್ವಾಮಿ ತರ ಶಾಸ್ತ್ರ ಹೇಳಲ್ಲ. ಕುಮಾರಸ್ವಾಮಿ ಯಿಂದ ಆಗಿರುವ ಅನುಕೂಲತೆಗಳೇನು, ಅನಾನುಕೂಲತೆಗಳು ಏನು ಅಂತಾ ಒಂದು ಗಂಟೆ ಭಾಷಣ ಮಾಡಿದ್ದೇನೆ. ನೀವ್ಯಾಕೆ ಕುಮಾರಸ್ವಾಮಿ ಕುಮಾರಸ್ವಾಮಿ ಅಂತಾ ಸಾಯ್ತಿರಾ? ಕುಮಾರಸ್ವಾಮಿಯಿಂದ ಸಹಾಯವೇನು, ಕೊಡುಗೆ ಏನು? ಒಂದೆಡೆ ಅಳಿಯ, ಮಗ, ಮೊಮ್ಮಗ. ಕೋಲಾರದಲ್ಲಿ ರಿಸರ್ವೆಷನ್ ಇಲ್ಲಾಂದ್ರೆ ಸೊಸೆ. ಯಾರಿಗೋಸ್ಕರ ಹೋರಾಟ ಮಾಡಬೇಕು? ಇವರು ಕುಟುಂಬಕ್ಕೊಸ್ಕರ ಹೋರಾಟ ಮಾಡ್ತಿರೋದು. ಹೋದಲ್ಲಿ ಬಂದಲ್ಲಿ ಟವೆಲ್ ಹಾಕಿ ಕಣ್ಣೀರು ಸುರಿಸ್ತಾರೆ ಏನಕ್ಕೆ ಸುರಿಸಬೇಕು? ರಾಜ್ಯದ ಒಳಿತುಗೋಸ್ಕರ ಸುರಿಸುತ್ತೀರ? ರಾಜ್ಯದಲ್ಲಿ ಬರ ಬಂದಿದೆ ಕೇಂದ್ರ ಹಣ ಕೊಟ್ಟಿಲ್ಲ ಅಂತಾ ಸುರಿಸ್ತೀರಾ? ಯಾವ ಉದ್ದೇಶಕ್ಕೆ ಕಣ್ಣೀರು ಸುರಿಸ್ತೀರಿ? ನಾಟಕ ಮಾಡಿದ್ರೆ ಎಷ್ಟು ಮಾಡಬಹುದು ಎಂದು ತೀವ್ರ ವಾಗ್ದಾಳಿ ನಡೆಸಿದರು.

ಆ ಪುಣ್ಯಾತ್ಮನಿಗೆ ನಾಚಿಕೆ ಮಾನ ಮರ್ಯಾದೇ ಏನೂ ಇಲ್ಲ: ಅಮಿತ್ ಶಾ ವಿರುದ್ಧ ಸಿಎಂ ಕಿಡಿ 

ಜೆಡಿಎಸ್ ಎಲ್ಲಿದೆ? ಜೆಡಿಎಸ್ ಇದ್ದಿದ್ರೆ ಬಿಜೆಪಿ ಜೊತೆ ಹೋಗ್ತಾ ಇರಲಿಲ್ಲ. ಹಾಲಿ ಸಂಸದ ಬಿಎಸ್ ಬಸವರಾಜ್ ಏನು‌ ಮಾಡಿದ್ದಾರೆ? ರಸ್ತೆ ಚರಂಡಿ ಕೆರೆ ಏನು‌ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಬರಗಾಲ ಇದೆ. ಲೋಕಸಭೆಯಲ್ಲಿ ಎಂಪಿ ಯಾಕೆ ಮಾತಾಡಿಲ್ಲ. ಇವರನ್ನ ಏನು ಅನ್ನಬೇಕು. ಸೋಮಣ್ಣ ಹತ್ತಿರ ಹಣ ಇದೆ ಹೊಡೆದುಕೊಳ್ಳೊಣ ಅಂತಾ ಇದಾರೆ ಅಷ್ಟೇ. ಹಣಕ್ಕಾಗಿ ಕರೆದುಕೊಂಡು ಬಂದಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.

click me!