ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರಿಗೆ ಮಾರಕವಾಗಿರುವ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ರಾಜ್ಯ ರೈತ ಸಂಘ ಕೋಡಿಹಳ್ಳಿ ಬಣದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.
ಶಿವಮೊಗ್ಗ (ಜು.02): ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರಿಗೆ ಮಾರಕವಾಗಿರುವ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ರಾಜ್ಯ ರೈತ ಸಂಘ ಕೋಡಿಹಳ್ಳಿ ಬಣದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತಂದ ನಂತರ ಕಾಂಗ್ರೆಸ್‌ನವರು ನಮ್ಮ ಜೊತೆ ಒಡನಾಟ ಇಟ್ಟುಕೊಂಡು ಬಿಜೆಪಿ ಸರ್ಕಾರ ತಪ್ಪು ಮಾಡಿದೆ. ಸರ್ಕಾರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ರದ್ದು ಮಾಡುತ್ತೇವೆ ಎಂದು ಹೇಳಿದ್ದರು. ಹೀಗಾಗಿ ಈ ಅಧಿವೇಶದಲ್ಲಿ ಕಾಂಗ್ರೆಸ್ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದು ಮಾಡಬಹುದು ಎಂಬ ಆಶಾವಾದ ಇಟ್ಟುಕೊಂಡಿದ್ದೇವೆ. ಆದರೆ, ಸಿದ್ದರಾಮಯ್ಯ ಅವರು ಕೃಷಿ ಕಾಯ್ದೆಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇದು ಆತಂಕ ಮೂಡಿಸಿದೆ ಎಂದರು.
ತಿದ್ದುಪಡಿ ಕಾಯ್ದೆಗಳ ವಿತ್‌ಡ್ರಾ ಮಾಡಿ: ಕಾರ್ಪೊರೇಟ್ ಕಂಪನಿಗಳು, ಎಂಎನ್‌ಸಿ ಕಂಪನಿಗಳನ್ನು ಕೃಷಿ ವಯಲಕ್ಕೆ ಕರೆದುಕೊಂಡು ಬರಬೇಕು ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಕೃಷಿ ಕಾಯ್ದೆಯಲ್ಲಿ ಭೂ ಸುಧಾರಣೆ ಕಾಯ್ದೆ ಅತ್ಯಂತ ಅಪಾಯಕಾರಿಯಾಗಿದೆ. ಕೃಷಿ ಮಾರುಕಟ್ಟೆಕಾಯ್ದೆ ಹಾಗೆಯೇ ಇದೆ ಎಂದು ಹೇಳುತ್ತಿದ್ದಾರೆ. ಆದರೆ, ರಾಜ್ಯದ ಕೃಷಿ ಮಾರುಕಟ್ಟೆಗಳು 90 ಭಾಗ ನಿರ್ಜೀವ ಆಗಿವೆ. ಎಂಎಸ್‌ಪಿ ಗ್ಯಾರಂಟಿ ಬಿಲ್‌ನಿಂದ ಸಾಕಷ್ಟುರೈತರಿಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆ ನರೇಂದ್ರ ಮೋದಿ ಅವರು ಹೇಗೆ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿತ್ ಡ್ರಾ ಮಾಡಿದರೋ, ಅದೇ ರೀತಿ ಸಿದ್ದರಾಮಯ್ಯ ಅವರು ವಿತ್‌ಡ್ರಾ ಮಾಡಬೇಕು ಎಂದು ಒತ್ತಾಯಿಸಿದರು.
ಯಾವುದೇ ಜವಾಬ್ದಾರಿಯಾದರೂ ಒಕ್ಕಲಿಗರು ಸಮರ್ಥವಾಗಿ ನಿಬಾಯಿಸುವರು: ಶಾಸಕ ಟಿ.ಡಿ.ರಾಜೇಗೌಡ
ಹೈನುಗಾರಿಕೆಯನ್ನು ಎಮೋಶನಲ್ ರೀತಿಯಲ್ಲಿ ಬಿಜೆಪಿಯವರು ಹಾಗೂ ಇತ್ತೀಚೆಗೆ ಮಠಾಧೀಶರು ಮಾತನಾಡುತ್ತಿದ್ದಾರೆ. ಗೋ ಹತ್ಯೆ ನಿಷೇಧ ಜಾರಿಗೆ ತರಬಾರದು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ಹೈನುಗಾರಿಕೆ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಇಲ್ಲ. ರಾಜ್ಯದಲ್ಲಿ ಹೈನುಗಾರಿಕೆ ರೈತರ ಕೈ ತಪ್ಪಿ ನಶಿಸಿ ಹೋಗುತ್ತಿದೆ. ಹೈನುಗಾರಿಕೆ, ತೋಟಗಾರಿಕೆ, ಕೃಷಿ, ಕೃಷಿ ಮಾರುಕಟ್ಟೆಸಂಪೂರ್ಣವಾಗಿ ಕಾರ್ಪೊರೇಟ್ ಹಾಗೂ ಎಂಎನ್‌ಸಿ ಕಂಪನಿಗಳು ಆಕ್ರಮಣ ಮಾಡಿಕೊಳ್ಳುವ ಉದ್ದೇಶಕ್ಕೆ ಈ ಕಾಯ್ದೆಗಳು ತಿದ್ದುಪಡಿಯಾಗಿವೆ. ಹೀಗಾಗಿ ಕೂಡಲೇ ಈ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಹೇಳಿದರು.
ಮಳೆ ಕೊರತೆಯಿಂದಾಗಿ ಮುಂಗಾರು ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ. ಏಪ್ರಿಲ್, ಮೇನಲ್ಲೇ ಮಳೆಯಾಗಿ ಜೂನ್‌ನಲ್ಲಿ ಮುಂಗಾರು ಆರಂಭವಾಗಿದ್ದರೆ ಕೃಷಿಗೆ ಅನುಕೂಲ ಆಗುತ್ತಿತ್ತು. ಆದರೆ, ಈ ಬಾರಿ ಜುಲೈಗೆ ಕಾಲಿಟ್ಟರೂ ಇನ್ನೂ ಹಲವೆಡೆ ಮಳೆಯಾಗಿಲ್ಲ. ಮಲೆನಾಡು ಪ್ರದೇಶದಲ್ಲೇ ಮಳೆ ಕೊರತೆಯಾಗಿದೆ. ಇಡೀ ರಾಜ್ಯದಲ್ಲೇ ಬರಗಾಲದ ಛಾಯೆ ಆವರಿಸಿದೆ. ಇದನ್ನು ಎದುರಿಸಲು ಸಿದ್ದರಾಮಯ್ಯ ಸರ್ಕಾರ ಸಕಲ ಸಿದ್ಧತೆಗಳೊಂದಿಗೆ ಸನ್ನದ್ಧವಾಗಬೇಕು ಎಂದು ಸಲಹೆ ನೀಡಿದರು.
ಸಮಾಜ ಶೋಷಿತ ವರ್ಗದ ಬಗ್ಗೆ ವೈದ್ಯರಿಗೆ ಅಂತಃಕರಣ ಹೆಚ್ಚಾಗಬೇಕು: ವೈದ್ಯರ ದಿನಾಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ
ನವಲಗುಂದಿದಲ್ಲಿ ರೈತರ ಮೇಲೆ ಗುಂಡಿನ ದಾಳಿ ವೇಳೆ ರೈತರ ನೆರವಿಗೆ ಬಂದಿದ್ದು ಎನ್.ಡಿ.ಸುಂದರೇಶ್ ಹಾಗೂ ಎಚ್.ಎಸ್.ರುದ್ರಪ್ಪ ಅವರು. ಅವರು ಕರೆಯ ಮೇರೆಗೆ ಬೀದಿಗಿಳಿದು ಹೋರಾಟ ಮಾಡಿ, ನಾಡನ್ನು ಸುತ್ತಿ ಸಂಘಟನೆ ಕಟ್ಟಲು ಛಲದಿಂದ ಕೆಲಸ ಮಾಡಿದ್ದೇವು. ಅಂತಹ ಮಹಾನ್ ನಾಯಕರನ್ನು ನಮಸ್ಕರಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ. ಹೀಗಾಗಿ ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದಲ್ಲಿ ಜು.19ರಂದು ರೈತ ಸಂಘದ ಸಂಸ್ಥಾಪಕ ಎಚ್.ಎಸ್.ರುದ್ರಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗಿದೆ
- ಕೋಡಿಹಳ್ಳಿ ಚಂದ್ರಶೇಖರ್