ವೈದ್ಯೊ ನಾರಾಯಣೊ ಹರಿ ಎಂದು ದೇವರ ರೀತಿಯಲ್ಲಿ ಜನ ಕಾಣ್ತಾರೆ. ರಾಷ್ಟ್ರದಲ್ಲಿ ಒಂದು ದೊಡ್ಡ ಸಂಕಷ್ಟ ಕೋವಿಡ್ ಎದುರಾದಾಗ ತಮ್ಮ ಜೀವ ಪಣ ಇಟ್ಟು ಕೋವಿಡ್ ಸೋಂಕಿತರ ಚಿಕಿತ್ಸೆ ನೀಡಿ ಗುಣಪಡಿಸಿದ್ರು. ಅವರ ಸೇವೆ ದೊಡ್ಡದು, ಒಬ್ಬ ರೋಗಿ ಸಾವಿನ ದವಡೆಯಿಂದ ಪಾರಾದ್ರೆ ಆತ ಜೀವ ಇರುವವರೆಗೂ ನೆನೆಯುತ್ತಾನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು (ಜು.01): ವೈದ್ಯೊ ನಾರಾಯಣೊ ಹರಿ ಎಂದು ದೇವರ ರೀತಿಯಲ್ಲಿ ಜನ ಕಾಣ್ತಾರೆ. ರಾಷ್ಟ್ರದಲ್ಲಿ ಒಂದು ದೊಡ್ಡ ಸಂಕಷ್ಟ ಕೋವಿಡ್ ಎದುರಾದಾಗ ತಮ್ಮ ಜೀವ ಪಣ ಇಟ್ಟು ಕೋವಿಡ್ ಸೋಂಕಿತರ ಚಿಕಿತ್ಸೆ ನೀಡಿ ಗುಣಪಡಿಸಿದ್ರು. ಅವರ ಸೇವೆ ದೊಡ್ಡದು, ಒಬ್ಬ ರೋಗಿ ಸಾವಿನ ದವಡೆಯಿಂದ ಪಾರಾದ್ರೆ ಆತ ಜೀವ ಇರುವವರೆಗೂ ನೆನೆಯುತ್ತಾನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಜೊತೆಗೆ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಶಸ್ತಿ ಪಡೆದವರಿಗೆ ಅಭಿನಂದಿಸಿ ಅವರಿಗೆ ಈ ಪ್ರಶಸ್ತಿ ಮತ್ತಷ್ಟು ಜವಾಬ್ದಾರಿಯನ್ನ ನೀಡಲಿದೆ. ಇದು ಬೇರೆಯವರಿಗೂ ಪ್ರೇರಣೆ ಆಗಲಿದೆ. ವೈದ್ಯರು ಉತ್ತಮ ಸೇವೆ ಮಾಡಬೇಕು ಎಂದರು.
ವೈದ್ಯರು ಎಲ್ಲರು ಉತ್ತಮ ಸೇವೆ ನೀಡ್ತಾರೆ. ನಮ್ಮ ಸಮಾಜದಲ್ಲಿ ತಾರತಮ್ಯ ಇದೆ. ಶ್ರೀಮಂತರು ದುಡ್ಡು ಇರುತ್ತೆ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುತ್ತಾರೆ. ಆದರೆ ಬಡವರಿಗೆ ಅದು ಕಷ್ಟ. ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿದ್ರೆ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಆದರೆ ಖಾಸಗಿ ಆಸ್ಪತ್ರೆಗೆ ಹೋಗಬೇಕೆಂಬ ಮನೋಭಾವ ಮೂಡಿದೆ. ಇದು ಬದಲಾವಣೆ ಆಗಬೇಕಾದ್ರೆ, ತಾರತಮ್ಯ ಹೋಗಬೇಕಾದ್ರೆ, ಶಿಕ್ಷಣ, ಆರೋಗ್ಯ, ವಸತಿ , ಅನ್ನ ಎಲ್ಲರಿಗೂ ಸಿಗಬೇಕು. ಆಗ ಸಮಾಜದ ಸರ್ವತೋಮುಖ ಅಭಿವೃದ್ಧಿ ಆಗುತ್ತೆ ಎಂದು ತಿಳಿಸಿದರು.
ಸಂಸದ ಮುನಿಸ್ವಾಮಿ ಹೇಳಿಕೆಗೆ ಕಿಮ್ಮತ್ತಿನ ಬೆಲೆ ಇಲ್ಲ: ಶಾಸಕ ನಂಜೇಗೌಡ
ನನ್ನ ಊರು ಸಿದ್ದರಾಮಯ್ಯನಹುಂಡಿ. ಅಲ್ಲಿ ಸರ್ಕಾರಿ ಆಸ್ಪತ್ರೆ ಇದೆ, ಅಲ್ಲಿ ವೈದ್ಯರಿಲ್ಲ. ನೀನು ಮುಖ್ಯಮಂತ್ರಿ ಆಗಿದ್ದೀಯಾ ಡಾಕ್ಟರ್ ಇಲ್ಲ ಅಂತಾರೆ. ನೋಡಿ ಎಂತಹ ಪರಿಸ್ಥಿತಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಹಾಸ್ಯ ಚಟಾಕಿಯನ್ನು ಹಾರಿಸಿದರು. ಸಮಾಜ ಶೋಷಿತ ವರ್ಗದ ಬಗ್ಗೆ ಅಂತಕರಣ ಇರಬೇಕು. ವೈದ್ಯರಿಗೆ ಅಂತಕರಣ ಇರಬೇಕು, ವೈದ್ಯರಿಗೆ ಇರೊಲ್ಲ ಎಂದು ಹೇಳ್ತಿಲ್ಲ. ಪ್ರತಿಯೊಬ್ಬ ವೈದ್ಯರಿಗೆ ಅಂತಃಕರಣ ಇರಬೇಕು. ಬಹಳಷ್ಟು ವೈದ್ಯರು ಹಳ್ಳಿ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕ್ತಾರೆ. ಇದಕ್ಕಾಗಿ ಕಾಯ್ದೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಯ್ತು. ವೈದ್ಯರು ಸುಪ್ರೀಂಕೋರ್ಟ್‌ಗೆ ಹೋದ್ರು,
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ಅನುದಾನ ಹೆಚ್ಚಿಸಲು ಸಿಎಂ ಬಳಿಗೆ ನಿಯೋಗ: ಸಚಿವ ಡಿ.ಸುಧಾಕರ್
ಆದರೆ ಅವರ ವಾದಕ್ಕೆ ಮನ್ನಣೆ ಸಿಗಲಿಲ್ಲ. ವೈದ್ಯರು ಸ್ವಯಂ ಪ್ರೇರಿತವಾಗಿ ಹಳ್ಳಿಗಳಿಗೆ ಹೋಗಬೇಕು. ಪಿಎಚ್‌ಸಿ ಗಳಲ್ಲಿ ಕೆಲಸ ಮಾಡಬೇಕು. ಸಾಕಷ್ಟು ಮಂದಿ ವೈದ್ಯರು ಪಿಎಚ್‌ಸಿ ವಸತಿಗೃಹದಲ್ಲಿ ಇರೊದೆ ಇಲ್ಲ. ಪಕ್ಕದ ನಗರಕ್ಕೆ ಹೋಗಿ ಬಿಡ್ತಾರೆ. ನಮ್ಮೂರಿನಲ್ಲಿ ಒಂದು ಪಿಎಚ್‌ಸಿ ಇದೆ. ಸಿದ್ದರಾಮನಹುಂಡಿಯಲ್ಲಿ ಆದರೆ ಅಲ್ಲಿ ವೈದ್ಯರು ಉಳಿದುಕೊಳ್ಳುವುದೇ ಇಲ್ಲ. ಎಲ್ಲರೂ ಕೇಳ್ತಾರೆ ಸಿದ್ದರಾಮಣ್ಣ ನೀನು ಸಿಎಂ ಆಯ್ತ್ಯಾ ಆದರೆ ನಮ್ಮೂರಲ್ಲಿ ವೈದ್ಯರೆ ಇರೊಲ್ಲ ಅಂತಾರೆ. ನೋಡಿ ಎಂತಹ ಪರಿಸ್ಥಿತಿ ಎಂದು ಸರ್ಕಾರಿ ವೈದ್ಯರ ಕಾರ್ಯ ನಿರ್ವಹಣೆ ಬಗ್ಗೆ ವಾಸ್ತವ ಸ್ಥಿತಿಯನ್ನು ಸಿಎಂ ಸಿದ್ದರಾಮಯ್ಯ ತಿಳಿಸಿದರು.