ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು! ರೈತನ ವಿರುದ್ಧ ಎಫ್‌ಐಆರ್!

By Ravi Janekal  |  First Published Jul 25, 2024, 12:54 PM IST

ಕಾಡುಹಂದಿ ಬೇಟೆಯಾಡಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ವೃತ್ತದ ಮೇಲಿನ ಕಿರುಗುಣಸೆ ಗ್ರಾಮದಲ್ಲಿ ನಡೆದಿದೆ.


ಶಿವಮೊಗ್ಗ (ಜು.25): ಕಾಡುಹಂದಿ ಬೇಟೆಯಾಡಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ವೃತ್ತದ ಮೇಲಿನ ಕಿರುಗುಣಸೆ ಗ್ರಾಮದಲ್ಲಿ ನಡೆದಿದೆ.

ಕಾಡುಹಂದಿ ಕಾಟಕ್ಕೆ ರೈತರೊಬ್ಬರು ಜಮೀನಿನೊಂದರ ತಂತಿ ಬೇಲಿಗೆ ಉರುಳು ಹಾಕಿದ್ದರು. ಆದರೆ ಕಾಡುಹಂದಿಯ ಬದಲು ಚಿರತೆ ಉರುಳಿಗೆ ಬಿದ್ದಿದೆ. ಸುಮಾರು ನಾಲ್ಕು ವರ್ಷದ ಪ್ರಾಯದ ಗಂಡು ಚಿರತೆ ಉರುಳಿಗೆ ಸಿಲುಕಿ ಮೃತಪಟ್ಟಿದೆ.

Tap to resize

Latest Videos

undefined

6 ತಿಂಗಳಲ್ಲಿ ಕರ್ನಾಟಕದಲ್ಲಿ 11 ಹುಲಿಗಳು ಸಾವು: ದೇಶದಲ್ಲೇ ಮೂರನೇ ಸ್ಥಾನ

ಇದಕ್ಕೂ ಮುನ್ನ ಉರುಳಿಗೆ ಸಿಲುಕಿದಾಗ ಚಿರತೆ ಕಿರುಚಾಡಿದೆ. ಚಿರತೆ ಕೂಗಾಡುವ ಸದ್ದು ಕೇಳಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಶಿವಮೊಗ್ಗದಿಂದ ಅರೆವಳಿಕೆ ತಜ್ಞರು ಆಗಮಿಸಿ ಉರುಳುಗೆ ಸಿಲುಕಿದ್ದ ಚಿರತೆಯನ್ನ ಹೊರತೆಗೆದಿದ್ದಾರೆ. ಗಾಯಗೊಂಡಿದ್ದ ಚಿರತೆಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ತೀವ್ರ ಗಾಯಗೊಂಡಿದ್ದ ಚಿರತೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

ಬೆಂಗಳೂರು: ಬನ್ನೇರುಘಟ್ಟ ಬಳಿ ಕಾಡಾನೆ ದಾಳಿಗೆ ಅರಣ್ಯ ರಕ್ಷಕ ಬಲಿ..!

ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಎಲ್. ಪರಶುರಾಮ್, ಉಪವಲಯ ಅರಣಯಾಧಿಕಾರಿಗಳಾದ ಜಿ. ಪರಶುರಾಮ್, ರಾಮಪ್ಪ, ಗಸ್ತು ಅರಣ್ಯಪಾಲಕರಾದ ಹರೀಶ್, ಆನಂದ ಮತ್ತು ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ‌ ನಡೆಸಿದ್ದಾರೆ. ಈ ಸಂಬಂಧ ಜಮೀನಿನ ಮಾಲೀಕ ರಾಜು ಸಿ. ಕಳತ್ತೂರು ವಿರುದ್ಧ ಪ್ರಕರಣ ದಾಖಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅರಣ್ಯ ಇಲಾಖೆ ಚಿರತೆಯ ಅಂತ್ಯಕ್ರಿಯೆ ನಡೆಸಿದ್ದಾರೆ.

click me!