ಕುರುಡುಮಲೆ ವಿನಾಯಕ ದೇವಸ್ಥಾನಕ್ಕೆ ಭವಾನಿ ರೇವಣ್ಣ, ಸೂರಜ್‌ ಭೇಟಿ: ಫೋಟೋ ತೆಗೆಯದಂತೆ ಎಚ್ಚರಿಕೆ

By Kannadaprabha News  |  First Published Jul 25, 2024, 6:08 AM IST

ಮಾಜಿ ಸಚಿವ ಎಚ್.ಡಿ.ರೇವಣ್ಣರ ಪತ್ನಿ ಭವಾನಿ ರೇವಣ್ಣ ಹಾಗೂ ಪುತ್ರ ಸೂರಜ್ ರೇವಣ್ಣ ತಾಲೂಕಿನ ಕುರುಡುಮಲೆ ವಿನಾಯಕ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.


ಮುಳಬಾಗಿಲು (ಜು.25): ಮಾಜಿ ಸಚಿವ ಎಚ್.ಡಿ.ರೇವಣ್ಣರ ಪತ್ನಿ ಭವಾನಿ ರೇವಣ್ಣ ಹಾಗೂ ಪುತ್ರ ಸೂರಜ್ ರೇವಣ್ಣ ತಾಲೂಕಿನ ಕುರುಡುಮಲೆ ವಿನಾಯಕ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ ತಿಂಗಳಿಗೊಮ್ಮೆ ನಡೆಯುವ ಸಂಕಷ್ಟ ಚತುರ್ಥಿಯಂದು ಸೂರಜ್ ರೇವಣ್ಣ ಈ ದೇವಸ್ಥಾನಕ್ಕೆ ಬಂದು ಹೋಮ ಹವನ, ಮಹಾ ಮಂಗಳಾರತಿ, ಅಭಿಷೇಕ, ವಿಶೇಷ ಪೂಜೆಸಲ್ಲಿಸುವ ಸಂಪ್ರದಾಯ ಮುಂದುವರೆಸಿಕೊಂಡು ಬರುತ್ತಿದ್ದಾರೆ. 

ಜೂನ್ ತಿಂಗಳಲ್ಲಿ ಸೂರಜ್ ರೇವಣ್ಣ ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಇದ್ದಿದ್ದರಿಂದ ಕುರುಡುಮಲೆಗೆ ಬರಲು ಸಾದ್ಯವಾಗಲಿಲ್ಲ. ನ್ಯಾಯಾಲಯದಿಂದ ಬೇಲ್ ಸಿಕ್ಕಿದ ಮೇಲೆ ತಾಯಿಯೊಂದಿಗೆ ದೇವಸ್ಥಾನಕ್ಕೆ ಬಂದು ಎಂದಿನಂತೆ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಬಳಿ ಸಾರ್ವಜನಿಕರು ತಾಯಿ ಮಗನ ಪೋಟೋಗಳನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿಯಲು ಮುಂದಾದಾಗ ಭವಾನಿ ರೇವಣ್ಣ ರೇಗಾಡಿ ನಮ್ಮ ಪೋಟೋಗಳನ್ನು ತೆಗೆಯಬಾರದೆಂದು ಎಚ್ಚರಿಸಿದರು.

Latest Videos

undefined

ಸೂರಜ್‌ ರೇವಣ್ಣಗೆ ಜಾಮೀನು: ಸೂರಜ್‌ ವಿರುದ್ಧ ದಾಖಲಾದ 2 ಎಫ್‌ಐಆರ್‌ ಪೈಕಿ ಚೇತನ್ ಎಂಬುವರು ನೀಡಿದ ದೂರಿನಲ್ಲಿ ಷರತ್ತು ಬದ್ಧ ಜಾಮೀನು ಸಿಕ್ಕರೆ, ಎಂ.ಎಲ್‌. ಶಿವಕುಮಾರ್‌ ನೀಡಿದ ದೂರಿನಲ್ಲಿ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಸೋಮವಾರ ಮೊದಲು ಸಂತ್ರಸ್ತ ಚೇತನ್ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು, 2 ಲಕ್ಷ ರು. ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಸಾಕ್ಷಿಗಳಿಗೆ, ದೂರುದಾರರಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷಿ ನಾಶಕ್ಕೆ ಪ್ರಯತ್ನಿಸಬಾರದು ಎಂದು ಸೂಚನೆ ನೀಡಿದೆ.

ನೀತಿ ಆಯೋಗ ಸಭೆ ಬಹಿಷ್ಕರಿಸಲು ಸಿಎಂ ಸಿದ್ದರಾಮಯ್ಯ ನಿರ್ಧಾರ: ಕಾರಣವೇನು?

ತನಿಖೆಗೆ ಸಹಕರಿಸಬೇಕು, ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ಅಲ್ಲದೇ, ಸಂಬಂಧಿತ ನ್ಯಾಯಾಲಯದ ಅನುಮತಿ ಇಲ್ಲದೇ, ದೇಶ ತೊರೆಯುವಂತಿಲ್ಲ. ತಿಂಗಳ ಎರಡನೇ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 5ರೊಳಗೆ ತನಿಖಾಧಿಕಾರಿ ಮುಂದೆ ಆರು ತಿಂಗಳು ಅಥವಾ ಆರೋಪ ಪಟ್ಟಿ ಸಲ್ಲಿಸುವವರೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಜಾಮೀನು ನೀಡಿದೆ. ಬಳಿಕ ಎಂ.ಎಲ್‌. ಶಿವಕುಮಾರ್‌ ದೂರಿನ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಜಾಮೀನು ನೀಡಿರುವ ಪ್ರಕರಣಕ್ಕೆ ವಿಧಿಸಿದ ಷರತ್ತುಗಳೇ ನಿರೀಕ್ಷಣಾ ಜಾಮೀನಿಗೂ ಅನ್ವಯಿಸಲಿದೆ ಎಂದು ನ್ಯಾಯಾಲಯ ತಿಳಿಸಿದೆ.

click me!