
ಕಲಬುರಗಿ (ನ.11): ಕೆಇಎ ಎಫ್‌ಡಿಎ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ ಮಾಧ್ಯಮಗಳ ವಿರುದ್ಧ ನಾಲಗೆ ಹರಿಬಿಟ್ಟಿದ್ದಾನೆ.
ಇಂದು ಆರೋಪಿ ಆರ್‌ಡಿ ಪಾಟೀಲ್‌ನನ್ನ ಸ್ಪಾಟ್ ಮಹಜರ್‌ಗೆ ಪೊಲೀಸರು ಕರೆದೊಯ್ಯುತ್ತಿದ್ದ ವೇಳೆ ಎದುರಾದ ಮಾಧ್ಯಮಗಳು. ಪ್ರಕರಣ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲಾಗದೆ ಮಾಧ್ಯಮಗಳ ವಿರುದ್ಧ ಮತ್ತೆ ದರ್ಪ ತೋರಿಸಿದ್ದಾನೆ.'ಸುಮ್ಮನೆ ಬೊಗಳಬೇಡ್ರೋ, ಸುಮ್ಮನೆ ಸುದ್ದಿ ಮಾಡೋದಲ್ಲ ದಾಖಲೆ ಇಟ್ಟು ಸುಟ್ಟು ಸುದ್ದಿ ಮಾಡ್ರೋ ಇಟ್ಸ್ ಯೂಸ್‌ಲೆಸ್' ಎಂದು ನಾಲಗೆ ಹರಿಬಿಟ್ಟಿರೋ ಆರೋಪಿ. ಘನಂದಾರಿ ಕೆಲಸ ಮಾಡಿ ಪೊಲೀಸರ ಕೈಗೆ ಲಾಕ್ ಆದ್ರೂ ಕಮ್ಮಿಯಾಗದ ಆರ್‌ಡಿ ಪಾಟೀಲನ ಪೊಗರು.
ಕೆಇಎ ಪರೀಕ್ಷೆ ಹಗರಣ, ಕಿಂಗ್ ಪಿನ್ ಆರ್ ಡಿ ಪಾಟೀಲ್ ಮಹಾರಾಷ್ಟ್ರದಲ್ಲಿ ಬಂಧನ
ಈ ಹಿಂದೆ ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಸಿಐಡಿ ತನಿಖೆ ವೇಳೆಯೂ ಮಾಧ್ಯಮಗಳ ವಿರುದ್ದ ದರ್ಪ ತೋರಿದ್ದ ಆರ್ ಡಿ ಪಾಟೀಲ್. ಇದೀಗ ಮತ್ತೆ ಮಾಧ್ಯಮಗಳ ಪ್ರಶ್ನೆಗೆ ಉರಿದುಕೊಂಡ ಆರ್‌ಡಿ ಪಾಟೀಲ್. ಕಂಬಿ ಎಣಿಸಿದ್ರೂ ಕಮ್ಮಿ ಆಗದ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಆರ್ ಡಿ ಪಾಟೀಲ್ ದರ್ಪ, ಧಿಮಾಕು. ಇವನು ಸಾಚಾ ಆಗಿದ್ರೆ ಕಳೆದ ಹನ್ನೆರಡು ದಿನಗಳಿಂದ ಪೊಲೀಸರ ಕೈಗೆ ಸಿಗದೇ ತಲೆತಪ್ಪಿಸಿಕೊಂಡು ತಿರುಗಾಡಿದ್ದು ಏಕೆ? ಕಾರುಗಳನ್ನು ಬದಲಾಯಿಸಿ ರಾತ್ರೋರಾತ್ರಿ ಮಹಾರಾಷ್ಟ್ರಕ್ಕೆ ಎಸ್ಕೇಪ್ ಆಗಿದ್ದು ಯಾಕೆ? ಕೋಟ್ಯಧೀಶನಾದ್ರೂ ಮಹಾರಾಷ್ಟ್ರದ ಚಿಕ್ಕ ಕೋಣೆಯಲ್ಲಿ ಅಡಗಿ ಕುಳಿತಿದ್ದೇಕೆ? ಸಾಕ್ಷ್ಯ ಇಟ್ಟು ಮಾತಾಡ್ರೋ ಎನ್ನುವ ಇವನ ಘನಂದಾರಿ ಕೆಲಸಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?
ಕೆಇಎ ಪರೀಕ್ಷೆ ಅಕ್ರಮ: ಪೊಲೀಸ್ ಠಾಣೆಯಲ್ಲಿ ಆರ್‌ಡಿ ಪಾಟೀಲ್ ಸ್ಥಿತಿ ಕಂಡು ಪತ್ನಿ ಕಣ್ಣೀರು!
ಅ.28 ರಂದು ಕೆಇಎ ನಡೆಸಿದ್ದ ಎಫ್‌ಡಿಎ ಪರೀಕ್ಷೆಯಲ್ಲಿ ಆರ್‌ಡಿ ಪಾಟೀಲನ ಅಕ್ರಮ ಬಯಲಿಗೆ ಬಂದಿತ್ತು. ಈ ಬಗ್ಗೆ ಮಾಧ್ಯಮಗಳು ಇಂಚಿಂಚು ಮಾಹಿತಿ ಬಯಲಿಗೆಳೆದಿದ್ದವು. ಈ ಹಿಂದೆ ಪಿಎಸ್‌ಐ ನೇಮಕಾರಿ ಪರೀಕ್ಷೆ ಅಕ್ರಮದಲ್ಲೂ ಆರ್‌ಡಿ ಪಾಟೀಲ್ ಅಕ್ರಮ ನಡೆಸಿದ್ದ. ಆ ಪ್ರಕರಣದಲ್ಲೇ ಕಠಿಣ ಶಿಕ್ಷೆಗೆ ಒಳಪಡಿಸಿದ್ದರೆ ಇಂದು ಮತ್ತೊಂದು ಅಕ್ರಮ ನಡೆಯುತ್ತಿರಲಿಲ್ಲವೇನೋ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ