ಬೆಂಗಳೂರಲ್ಲಿ ನಿರ್ಮಾಣವಾಗಲಿದೆ ಏಷ್ಯಾದ ಅತಿ ಎತ್ತರದ ಸ್ಕೈಡೆಕ್, ಏನೆಲ್ಲಾ ಸೌಲಭ್ಯಗಳಿರಲಿದೆ?

By Gowthami K  |  First Published Aug 23, 2024, 3:08 PM IST

500 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಶಾಪಿಂಗ್ ಪ್ರದೇಶ, ಸ್ಕೈ ಲಾಬಿ, ನಗರದ ವಿಹಂಗಮ ನೋಟ, ರಂಗಮಂದಿರ,ವಿಐಪಿ ಪ್ರದೇಶ ಮತ್ತು ಇತರವುಗಳೊಂದಿಗೆ ಪ್ರವಾಸಿ ಆಕರ್ಷಣೆಯಾಗುವ ಗುರಿಯನ್ನು ಹೊಂದಿದೆ.  


ಬೆಂಗಳೂರು (ಆ.23): ಬೆಂಗಳೂರು ನಗರದ ಹೆಮ್ಮಿಗೆಪುರದ ನೈಸ್‌ ರಸ್ತೆ ಬಳಿ 500 ಕೋಟಿ ರು. ವೆಚ್ಚದಲ್ಲಿ 250 ಮೀಟರ್‌ ಎತ್ತರದ ಆಕಾಶ ಗೋಪುರ (ಸ್ಕೈಡೆಕ್) ನಿರ್ಮಿಸಲು‌ ಸಚಿವ ಸಂಪುಟ ತಾಂತ್ರಿಕ ಅನುಮೋದನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಬ್ರ್ಯಾಂಡ್‌ ಬೆಂಗಳೂರಿಗೆ ಉತ್ತೇಜನ ನೀಡಲು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಸ್ಕೈಡೆಕ್‌ ನಿರ್ಮಿಸಲು ಒಪ್ಪಿಗೆ ನೀಡಲಾಯಿತು.

ಕರ್ನಾಟಕ ಸಚಿವ ಸಂಪುಟವು ಗುರುವಾರ ಬೆಂಗಳೂರು ಸ್ಕೈಡೆಕ್‌ನ ಮಹತ್ವಾಕಾಂಕ್ಷೆಯ ಯೋಜನೆಗೆ ಅನುಮೋದನೆ ನೀಡಿದೆ.  ಇದು ದಕ್ಷಿಣ ಏಷ್ಯಾದ ಅತಿ ಎತ್ತರದ ರಚನೆಯಾಗಿದ್ದು, 500 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಯೋಜನೆಯಿಂದ ನಗರದ ಮೂಲಸೌಕರ್ಯವು ಹೆಚ್ಚು ವೃದ್ಧಿಯಾಗಲಿದ್ದು, ಭಾರತೀಯ ಐಟಿ ಕೇಂದ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಹೊಂದಿದೆ. ಗೋಪುರವು ಸುಮಾರು 250 ಮೀಟರ್ ಎತ್ತರ ಇರಲಿದ್ದು. 250 ಮೀಟರ್ ಎತ್ತರದ್ದು ದೆಹಲಿಯಲ್ಲಿರುವ 73 ಮೀಟರ್ ಎತ್ತರದ ಕುತುಬ್ ಮಿನಾರ್ ಹೆಗ್ಗುರುತಿನ ಮೂರು ಪಟ್ಟು ಹೆಚ್ಚು ಎತ್ತರವಾಗಿರುತ್ತದೆ.

Latest Videos

undefined

ಮಹಿಳೆಯರಿಗೆ ತಾಲಿಬಾನ್‌ನಿಂದ ಹೊಸ ನಿರ್ಬಂಧ, ಮಾತನಾಡುವಂತಿಲ್ಲ, ಮುಖ ತೋರಿಸುವಂತಿಲ್ಲ!

ಬೆಂಗಳೂರಿನ ಅತಿ ಎತ್ತರದ ಕಟ್ಟಡ ಎಂದು ನಂಬಲಾದ CNTC ಪ್ರೆಸಿಡೆನ್ಷಿಯಲ್ ಟವರ್ 160 ಮೀಟರ್‌ಗಳಿಗಿಂತ ಹೆಚ್ಚು ಎತ್ತರವನ್ನು ಹೊಂದಿದೆ. ರಾಜ್ಯ ಸರ್ಕಾರವು ದಕ್ಷಿಣ ಏಷ್ಯಾದ ಅತಿ ಎತ್ತರದ ಸ್ಕೈಡೆಕ್‌ಗೆ ನಿರ್ಮಾಣಕ್ಕೆ ನೀಡಿದೆ. 500 ಕೋಟಿ ರೂಪಾಯಿ ವೆಚ್ಚದಲ್ಲಿ, ಸ್ಕೈಡೆಕ್ ಅನ್ನು ನಗರದಲ್ಲಿ ನಿರ್ಮಿಸಲಾಗುವುದು ಮತ್ತು ಭಾರತದ ತಾಂತ್ರಿಕ ಕೇಂದ್ರದ 360 ಡಿಗ್ರಿ ನೋಟವನ್ನು ಒದಗಿಸುತ್ತದೆ ಎಂದು   ಸಚಿವ ಹೆಚ್‌ಕೆ ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನ ಹೊರವಲಯದ ನೈಸ್ ರಸ್ತೆ ಸಮೀಪ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಸ್ಕೈಡೆಕ್, ಉನ್ನತ ದರ್ಜೆಯ ಪ್ರವಾಸಿ ಸೌಲಭ್ಯಗಳನ್ನು ಒದಗಿಸುತ್ತದೆ ಮತ್ತು ಜೊತೆಗೆ ಇಲ್ಲಿಗೆ ಪ್ರಯಾಣಿಸುವ ಸಂದರ್ಶಕರಿಗೆ ಯಾವುದೇ ತೊಂದರೆ ಆಗದಂತೆ ಮೆಟ್ರೋ ರೈಲಿಗೆ ಸಂಪರ್ಕ ಕೂಡ ಹೊಂದಿರುತ್ತದೆ. ಐಷಾರಾಮಿ ಶಾಪಿಂಗ್ ಸಂಕೀರ್ಣದ ಹೊರತಾಗಿ, ಸ್ಕೈ ಡೆಕ್‌ನಲ್ಲಿ  ಸೇರಿಸಿರುವ ಇತರ ಸೌಲಭ್ಯಗಳ  ಬಗ್ಗೆ ಇನ್ನೂ ದೃಢೀಕರಿಸಲಾಗಿಲ್ಲ.

ಜಿಂದಾಲ್, ಅಂಬಾನಿ ಸೋಲಿಸಿ ಅದಾನಿ ಗೆಲುವು, 4100 ಕೋಟಿಗೆ ಈ ಕಂಪನಿ ಖರೀದಿ

2 ಅಡೆತಡೆಗಳಿತ್ತು: ಬೆಂಗಳೂರಿನ ಮಧ್ಯಭಾಗದಲ್ಲಿ ಸ್ಕೈಡೆಕ್ ನಿರ್ಮಿಸುವ ಸರ್ಕಾರದ ಮೂಲ ಯೋಜನೆಗೆ ಎರಡು ಪ್ರಮುಖ ಅಡೆತಡೆಗಳು ಎದುರಾಗಿದ್ದವು. ಮೊದಲನೆಯದಾಗಿ, ನಗರದ ಮಧ್ಯಭಾಗದಲ್ಲಿ 25 ಎಕರೆ ಜಮೀನನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿತ್ತು ಮತ್ತು ಎರಡನೆಯದಾಗಿ, ರಕ್ಷಣಾ ಸಚಿವಾಲಯವು ಬೆಂಗಳೂರಿನ ಸುತ್ತಲೂ ಹರಡಿರುವ ಕಾರಣ, ಅದಕ್ಕಾಗಿಯೇ ಅವರು ಗೋಪುರದ ಎತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನಗರದ ಮಧ್ಯಭಾಗದಲ್ಲಿರುವ ಅತ್ಯಂತ ಎತ್ತರದ ಗೋಪುರವು ಮಿಲಿಟರಿ ಮತ್ತು ನಾಗರಿಕ ವಿಮಾನ ನಿಲ್ದಾಣಗಳಿಗೆ ಅಪಾಯಕಾರಿಯಾಗಬಹುದು ಎಂಬ ಕಾರಣಕ್ಕೆ ಐಎಎಫ್‌ ಏರ್‌ಫೋರ್ಸ್‌, ಎಚ್‌ಎಎಲ್‌ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಬೆಂಗಳೂರಿನ ಹೊರಗಡೆ ಸ್ಕೈಡೆಕ್ ಯೋಜನೆಗೆ ಅನುಮೋದನೆ ನೀಡಲಾಗಿದೆ.

click me!