Published : Apr 06, 2025, 07:18 AM ISTUpdated : Apr 06, 2025, 11:53 PM IST

Karnataka News Live: ಚೀನಾದ ಡೀಪ್‌ಸೀಕ್‌ಗೆ ಮೆಟಾ ಕೌಂಟರ್, ಅತ್ಯಾಧುನಿಕ ಲಾಮ 4 AI ಬಿಡುಗಡೆ

ಸಾರಾಂಶ

ಬೆಂಗಳೂರು:  ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಕ್ರಮ ಗಣಿಗಾರಿಕೆ ಮಾಡಿರುವ ಬಗ್ಗೆ ನನ್ನ ಬಳಿ ಟನ್‌ಗಟ್ಟಲೆ ದಾಖಲೆಗಳಿದ್ದು, ಅನಗತ್ಯವಾಗಿ ನನ್ನನ್ನು ಕೆಣಕುವುದು ಒಳ್ಳೆಯದಲ್ಲ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ನನ್ನ ವ್ಯವಹಾರದ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಈ ಕುಮಾರಸ್ವಾಮಿ ಅಂಥವರಿಗೆಲ್ಲ ಹೆದರುವ ಮಗ ನಾನಲ್ಲ ಎಂದು ಸವಾಲು ಹಾಕಿದ್ದಾರೆ. ಇತ್ತ ಬೆಸ್ಕಾಂ ಮತ್ತೊಂದು ಶಾಕ್ ನೀಡಿದೆ. ಕೆಇಆರ್‌ಸಿ ಆದೇಶದ ಬೆನ್ನಲ್ಲೇ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಸ್ವಾಧೀನಾನುಭವ ಪತ್ರ (ಒಸಿ) ಹೊಂದಿಲ್ಲದ ಯಾವುದೇ ವಾಣಿಜ್ಯ, ವಸತಿ ಕಟ್ಟಡಗಳಿಗೂ ವಿದ್ಯುತ್‌ ಸಂಪರ್ಕ ನೀಡಬಾರದು. ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯದ ನಿವೇಶನದಾರರಿಗೆ ತಾತ್ಕಾಲಿಕ ವಿದ್ಯುತ್‌ ಸಂಪರ್ಕವನ್ನೂ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ ಶುಕ್ರವಾರ ಬೆಸ್ಕಾಂ ಆದೇಶ ಹೊರಡಿಸಿದೆ.

Karnataka News Live: ಚೀನಾದ ಡೀಪ್‌ಸೀಕ್‌ಗೆ ಮೆಟಾ ಕೌಂಟರ್, ಅತ್ಯಾಧುನಿಕ ಲಾಮ 4 AI ಬಿಡುಗಡೆ

11:53 PM (IST) Apr 06

ಚೀನಾದ ಡೀಪ್‌ಸೀಕ್‌ಗೆ ಮೆಟಾ ಕೌಂಟರ್, ಅತ್ಯಾಧುನಿಕ ಲಾಮ 4 AI ಬಿಡುಗಡೆ

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಭಾರಿ ಸದ್ದು ಮಾಡುತ್ತಿದೆ. ಒಪನ್ಎಐ, ಗೂಗಲ್ ಜೆಮಿನಿ, ಚೀನಾದ ಡೀಪ್‌ಸೀಕ್‌ಗೆ ಪ್ರತಿಸ್ಪರ್ಧಿಯಾಗಿ ಇದೀಗ ಮಾರ್ಕ್ ಜುಕರ್‌ಬರ್ಗ್ ಮೆಟಾ ಸಂಸ್ಥೆ ಹೊಸ ಮೆಟಾ ಲಾಮಾ 4 ಎಐ ಮಾದರಿ ಬಿಡುಗಡೆ ಮಾಡಿದೆ. ಮೂರು ಮಾಡೆಲ್‌ ಲಭ್ಯವಿದ್ದು, ಎಐಗೆ ಹೊಸ ಭಾಷ್ಯ ಬರೆದಿದೆ.

ಪೂರ್ತಿ ಓದಿ

11:35 PM (IST) Apr 06

ಅಂದು ಮೆಜೆಸ್ಟಿಕ್‌ನಲ್ಲಿ ಮಲಗಿದ್ದ ʼರಾಕಿಂಗ್‌ ಸ್ಟಾರ್ʼ ಯಶ್‌; ಇಂದು ಮನೆ ಮುಂದೆ ಸಾಲಾಗಿ ನಿಂತ ದುಬಾರಿ ಕಾರ್‌!

ʼರಾಕಿಂಗ್‌ ಸ್ಟಾರ್ʼ‌ ಯಶ್‌ ಅವರು ʼಟಾಕ್ಸಿಕ್ʼ‌ ಸಿನಿಮಾ ಕೆಲಸದಲ್ಲಿ ಬ್ಯುಸಿಯಿದ್ದರೆ, ಈಗ ಇವರ ಕಾರ್‌ ಕಲೆಕ್ಷನ್‌ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 
 

ಪೂರ್ತಿ ಓದಿ

11:29 PM (IST) Apr 06

ಬೆಂಗಳೂರಲ್ಲಿ ಚಿನ್ನದ ಮುಖವಾಡ ಧರಿಸಿ ಬಿಟ್‌ಕಾಯಿನ್ ಕ್ರಿಯೇಟರ್ ಸತೋಶಿ ಬರ್ತ್‌ಡೇ ಸಂಭ್ರಮ

 ಬಿಟ್‌ಕಾಯಿನ್ ಕ್ರಿಯೇಟರ್ ಸತೋಶಿ ನಕಾಮೊಟೊ ಬೆಂಗಳೂರಲ್ಲಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಚಿನ್ನದ ಮುಖವಾಡ, ಬ್ಲಾಕ್ ಹೂಡಿ ಡ್ರೆಸ್ ಧರಿಸಿ ಬರ್ತ್‌ಡೇ ಆಚರಿಸಲಾಗಿದೆ.  

ಪೂರ್ತಿ ಓದಿ

11:05 PM (IST) Apr 06

ಭಾರತೀಯ ಉದ್ಯಮಿಗಳಿಗೆ ಆಫರ್ ಕೊಟ್ಟ ನ್ಯೂಜಿಲೆಂಡ್ ಪ್ರಧಾನಿ, ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದೇನು?

ಯುವ ಉದ್ಯಮಿ ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಮುಕ್ತವಾಗಿ ಮಾತನಾಡಿದ್ದಾರೆ. ಇದೇ ವೇಳೆ ಭಾರತೀಯ ಉದ್ಯಮಿಗಳಿಗೆ ಭರ್ಜರಿ ಆಫರ್ ಒಂದನ್ನು ನೀಡಿದ್ದಾರೆ. ನ್ಯೂಜಿಲೆಂಡ್ ಪ್ರಧಾನಿ ನೀಡಿದ ಆಫರ್ ಏನು?

ಪೂರ್ತಿ ಓದಿ

10:46 PM (IST) Apr 06

ಅನೈತಿಕ ಸಂಬಂಧ ಶಂಕೆ: ನಡು ರಸ್ತೆಯಲ್ಲಿ ಪತ್ನಿಯ ಕುತ್ತಿಗೆ ಕುಯ್ದು ಕೊಂದಿದ್ದವನ ಬಂಧನ!

ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ತನ್ನ ಪತ್ನಿ ಕುತ್ತಿಗೆಯನ್ನು ಕುಯ್ದು ಹತ್ಯೆಗೈದಿದ್ದ ಕೂಲಿ ಕಾರ್ಮಿಕನೊಬ್ಬನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೂರ್ತಿ ಓದಿ

10:23 PM (IST) Apr 06

ಮಂಗಳೂರಿನ ಬಾವುಟಗುಡ್ಡೆಯಲ್ಲಿ ಅತೀ ದೊಡ್ಡ ಧ್ವಜಸ್ತಂಭ ನಿರ್ಮಾಣ: ಸಚಿವ ದಿನೇಶ್‌ ಗುಂಡೂರಾವ್‌

ಬಾವುಟಗುಡ್ಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಧ್ವಜಸ್ತಂಭವನ್ನು ನಿರ್ಮಾಣ ಮಾಡಲಾಗುವುದು. ಸುಮಾರು 100 ಅಡಿಗೂ ಹೆಚ್ಚಿನ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡುವ ಮೂಲಕ ದೇಶಪ್ರೇಮ ಪ್ರೇರೇಪಿಸುವ ಕೆಲಸ ಮಾಡುತ್ತೇವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. 

ಪೂರ್ತಿ ಓದಿ

10:19 PM (IST) Apr 06

ಹಸಿರು ಕ್ರಾಂತಿ 2.0: ಡ್ರ್ಯಾಗನ್ ಫ್ರೂಟ್, ಥಾಯ್ ಗೇವಾ, ಸೇಬು ಬೇಸಾಯದಿಂದ ಕೋಟ್ಯಾಧಿಪತಿಗಳಾದ ರೈತರು!

ಸಾಂಪ್ರದಾಯಿಕ ಬೆಳೆಗಳನ್ನ ಬಿಟ್ಟು ರೈತರು ಹೊಸ ಬೆಳೆಗಳತ್ತ ಮುಖ ಮಾಡಿದ್ದಾರೆ. ಬಿಹಾರ, ರಾಜಸ್ಥಾನ, ಮಧ್ಯಪ್ರದೇಶದ ರೈತರು ಡ್ರ್ಯಾಗನ್ ಫ್ರೂಟ್, ಸೇಬು, ಗೇವಾ, ಕೇಸರಿ ಬೆಳೆದು ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಇದು ಗ್ರೀನ್ ರೆವಲ್ಯೂಷನ್ 2.0ಗೆ ನಾಂದಿ ಹಾಡುತ್ತಿದೆ.

ಪೂರ್ತಿ ಓದಿ

10:18 PM (IST) Apr 06

10ಗ್ರಾಂ ಚಿನ್ನಕ್ಕೆ 56,000 ರೂಪಾಯಿ; ಕುಸಿತಕ್ಕೆ ಕಾರಣ ಕೊಟ್ಟು ಭವಿಷ್ಯ ನುಡಿದ ಅಮೆರಿಕ ವಿಶ್ಲೇಷಕ!

ಅಯ್ಯೋ… ಏನ್ರೀ.. ಬಂಗಾರದ ಬೆಲೆ ಇಷ್ಟೆಲ್ಲ ಹೆಚ್ಚಾಗೋಯ್ತು, ಬಂಗಾರ ತಗೋಳೋದು ಗಗನಕುಸುಮ ಆಗೋಯ್ತಲ್ರೀ ಎಂದು ಮಧ್ಯಮ ವರ್ಗದವರು ಗೋಳಿಡುತ್ತಿದ್ದರೆ, ಅತ್ತ ಹೂಡಿಕೆದಾರರು ಮಾತ್ರ ಚಿನ್ನದ ಮೇಲೆ ಹೂಡಿಕೆ ಮಾಡಿ ದುಪ್ಪಟ್ಟು ಹಣ ಮಾಡಬಹುದು ಅಂತ ಕನಸು ಕಾಣುತ್ತಿದ್ದಾರೆ. ಈ ಮಧ್ಯೆ ಭವಿಷ್ಯವಾಣಿಯೊಂದು ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಆಗಲಿದೆ ಎಂದು ಹೇಳಿರೋದು ಸಂಚಲನ ಮೂಡಿಸಿದೆ. 

ಪೂರ್ತಿ ಓದಿ

10:16 PM (IST) Apr 06

ಕೆಪಿಸಿಸಿ ಅಧ್ಯಕ್ಷರಾಯ್ಕೆ ಹೈಕಮಾಂಡ್‌ಗೆ ಬಿಟ್ಟಿದ್ದು: ಸಚಿವ ಎಂ.ಬಿ.ಪಾಟೀಲ್

ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಹೈಕಮಾಂಡ್ ಯಾರನ್ನು ನಿರ್ಧಾರ ಮಾಡ್ತಾರೋ ಅವರು ಅಧ್ಯಕ್ಷರಾಗ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು. 

ಪೂರ್ತಿ ಓದಿ

10:07 PM (IST) Apr 06

ಹಾವೆಮುಲ್ ಎರಡು ತಲೆ‌ ಹಾವಿನಂತೆ ಆಡ್ಬೇಡಿ! ನವರಂಗಿ ಆಟ ಬಿಟ್ಟು.. ರೈತರಿಗೆ ಅರ್ಹವಾಗಿ ₹4 ಹಣ ಕೊಡಿ.!

ಹಾವೇರಿ ಹಾಲು ಒಕ್ಕೂಟದಿಂದ ರೈತರಿಗೆ ಕೊಡಬೇಕಾದ ಖರೀದಿ ಹಣದಲ್ಲಿ ಭಾರೀ ತಾರತಮ್ಯ ಮಾಡುತ್ತಿದೆ. ಹಾವೆಮುಲ್ ನಷ್ಟದಲ್ಲಿದೆ ಎಂದು 3.50 ರೂ. ಕಡಿತ ಮಾಡಿತ್ತು. ಇದೀಗ ಸರ್ಕಾರ 4 ರೂ. ಹೆಚ್ಚಳ ಮಾಡಿದರೂ ಕೇವಲ 2.50 ರೂ. ರೈತರಿಗೆ ಕೊಡಲಾಗುತ್ತಿದೆ.

ಪೂರ್ತಿ ಓದಿ

09:41 PM (IST) Apr 06

ರಾಮನ ಅನುಗ್ರಹದಿಂದ ತ್ರವಳಿ ತಲಾಖ್, ವಕ್ಫ್ ಬಿಲ್ ಪಾಸ್, ಮುಸ್ಲಿಮರಿಂದ ರಾಮನವಮಿ ಪೂಜೆ

ದೇಶಾದ್ಯಂತ ರಾಮನವಮಿ ಆಚರಿಸಲಾಗಿದೆ. ವಿಶೇಷ ಪೂಜೆ ಸೇರಿದಂತೆ ಭಜನೆಗಳು ನಡೆದಿದೆ. ಇದರ ನಡುವೆ ವಾರಣಾಸಿಯ ಮುಸ್ಲಿಮ್ ಮಹಿಳೆಯರು ಶ್ರೀರಾಮನಿಗೆ ರಾವಮನವಮಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಕಾರಣವನ್ನು ಹೇಳಿದ್ದಾರೆ.
 

ಪೂರ್ತಿ ಓದಿ

09:08 PM (IST) Apr 06

ಕೂಡಲ ಸಂಗಮದಲ್ಲಿ ಬಸವ ಜಯಂತಿ ವಿಶೇಷ ಆಚರಣೆಗೆ ನಿರ್ಧಾರ: ಕಾರ್ಯಕ್ರಮಕ್ಕೆ ಸಿಎಂ ಚಾಲನೆ!

ಬಸವಣ್ಣನವರ ಐಕ್ಯ ಸ್ಥಳವಾದ ಕೂಡಲ ಸಂಗಮದಲ್ಲಿ ಬಸವ ಜಯಂತಿ ನಿಮಿತ್ಯ ಅನುಭವ ಮಂಟಪ, ಬಸವಾದಿ ಶರಣರ ವೈಭವ ಹೆಸರಿನಲ್ಲಿ ಏ.29 ಮತ್ತು 30 ರಂದು ಎರಡು ದಿನಗಳ ಕಾಲ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು. 

ಪೂರ್ತಿ ಓದಿ

09:02 PM (IST) Apr 06

'ಇನ್ಸ್ಟಾ ಕ್ವೀನ್ ಪೋಲೀಸಮ್ಮ' ಹಿಂದಿದೆ ಮಾದಕ ಕಥೆ; 17 ಗ್ರಾಂ ಹೆರಾಯಿನ್ ಸಮೇತ ಸಿಕ್ಕಿಬಿದ್ದ ಮಹಾನ್ 'ಕಿ'ಲೇಡಿ!

ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಿದ್ದ ಮಹಿಳಾ ಪೊಲೀಸ್ ಕಾನ್ಸ್‌ಸ್ಟೇಬಲ್ 17 ಗ್ರಾಂ ಹೆರಾಯಿನ್ ಜೊತೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪೂರ್ತಿ ಓದಿ

09:00 PM (IST) Apr 06

ನೌಕರರ ನಾಯಿಯಂತೆ ನಡೆಸಿದ ವಿಡಿಯೋಗೆ ಟ್ವಿಸ್ಟ್, ಸಚಿವಾಲಯ ತನಿಖೆಯಲ್ಲಿ ಸತ್ಯ ಬಯಲು

ಮಾರ್ಕೆಟಿಂಗ್ ಕಂಪನಿ ಟಾರ್ಗೆಟ್ ರೀಚ್ ಆದ ಉದ್ಯೋಗಿಗಳನ್ನು ನಾಯಿಯಂತ ನಡೆಸಿಕೊಂಡಿದ್ದಾರೆ ಅನ್ನೋ ವಿಡಿಯೋ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದೀಗ ಈ ವಿಡಿಯೋಗೆ ಟ್ವಿಸ್ಟ್ ಎದುರಾಗಿದೆ. ಅಷ್ಟಕ್ಕೂ ಏನಿದು ಪ್ರಕರಣ, ತನಿಖೆಯಲ್ಲಿ ಬಯಲು.  

ಪೂರ್ತಿ ಓದಿ

08:53 PM (IST) Apr 06

ಸಾವಿಗೆ ಶರಣಾಗುವ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್ ಸೋಮಯ್ಯ: ಹೃದಯ ಹಿಂಡಿದ ಭಾವನಾತ್ಮಕ ಪತ್ರ!

ಆತ್ಮಹತ್ಯೆ ಮಾಡಿಕೊಂಡ ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಪಂಚಭೂತಗಳಲ್ಲಿ ಲೀನವಾಗಿ ಹೋಗಿದ್ದಾರೆ. ಅವರ ಸಾವಿನ ವಿಚಾರ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿದ್ದರೆ ಸಾವಿಗೂ ಮುನ್ನ ಅವರು ತಮ್ಮ ಪತ್ನಿಗೆ ಬರೆದಿರುವ ಪತ್ರ ಮಾತ್ರ ಎಂತಹ ಕಲ್ಲು ಹೃದಯವನ್ನು ಕರಗುವಂತೆ ಮಾಡಿದೆ. 

ಪೂರ್ತಿ ಓದಿ

08:52 PM (IST) Apr 06

ತೆಳುವಾದ ಐಬ್ರೋ ನಿಮ್ಮದಾಗಿದೆಯೇ? ದಪ್ಪ ಹುಬ್ಬುಗಳಿಗೆ ಇಲ್ಲಿದೆ ಮನೆಮದ್ದುಗಳು!

ದಪ್ಪ ಮತ್ತು ಸುಂದರವಾದ ಹುಬ್ಬುಗಳನ್ನು ಪಡೆಯಲು ಅಲೋವೆರಾ ಜೆಲ್, ಈರುಳ್ಳಿ ರಸ, ನೆಲ್ಲಿಕಾಯಿ ಮತ್ತು ತೆಂಗಿನ ಎಣ್ಣೆ, ಮತ್ತು ಹಸಿ ಹಾಲನ್ನು ಬಳಸಿ. ಈ ಮನೆಮದ್ದುಗಳು ಹುಬ್ಬುಗಳನ್ನು ನೈಸರ್ಗಿಕವಾಗಿ ದಪ್ಪವಾಗಿಸಲು ಸಹಾಯ ಮಾಡುತ್ತವೆ.

ಪೂರ್ತಿ ಓದಿ

08:38 PM (IST) Apr 06

ನನ್ನ ಕಚೇರಿಯಲ್ಲಿ ಇಶಾ ಅಂಬಾನಿ ಬಾಸ್, ನಾನು ಡಿ ದರ್ಜೆಯವನು ಮುಕೇಶ್ ಅಂಬಾನಿ ಹೇಳಿಕೆ ವೈರಲ್!

ಮುಖೇಶ್ ಅಂಬಾನಿ ಅವರು ಇಶಾ ಅಂಬಾನಿ ತಮ್ಮ ಕಚೇರಿಯಲ್ಲಿ ಬಾಸ್ ಎಂದು ಹೇಳಿದ್ದಾರೆ. ಸಭೆಗಳಲ್ಲಿ ಇಶಾ ತಮ್ಮ ಕಾರ್ಯಕ್ಷಮತೆಗೆ ಫೀಡ್‌ಬ್ಯಾಕ್ ನೀಡುತ್ತಾರೆ ಮತ್ತು ಶ್ರೇಯಾಂಕಗಳನ್ನು ನೀಡುತ್ತಾರೆ ಎಂದು ಅವರು ಹೇಳಿದ್ದಾರೆ. ವ್ಯವಹಾರದಲ್ಲಿ ಮಹಿಳೆಯರ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಮುಖೇಶ್ ಅಂಬಾನಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪೂರ್ತಿ ಓದಿ

08:35 PM (IST) Apr 06

ಬಿಜೆಪಿ ವಿರುದ್ಧ ತಿರುಗಿಬಿದ್ದ ಕೊಡಗು ಕಾಂಗ್ರೆಸ್: ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕೃತಿ ದಹಿಸಿ ಆಕ್ರೋಶ

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಕೊಡಗು ಜಿಲ್ಲೆಯಲ್ಲಿ ರಾಜಕೀಯ ಕೆಸರೆರೆಚಾಟಕ್ಕೆ, ಪರಸ್ಪರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ. ಶುಕ್ರವಾರ, ಶನಿವಾರ ಎರಡು ದಿನಗಳ ಕಾಲ ಬಿಜೆಪಿ ಪ್ರತಿಭಟನೆಗೆ ವೇದಿಕೆಯಾಗಿದ್ದ ಕೊಡಗು, ಭಾನುವಾರ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. 

ಪೂರ್ತಿ ಓದಿ

08:29 PM (IST) Apr 06

ಬಂಡೀಪುರ ಉಳಿಸಿ ಅಭಿಯಾನ: 'ನಮ್ಮ ನಡಿಗೆ ಬಂಡಿಪುರದ ಕಡೆಗೆ' ಬೃಹತ್ ಪಾದಯಾತ್ರೆಗೆ ಚಾಲನೆ

ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ  ತೆರವುಗೊಳಿಸುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಂಡೀಪುರ ಉಳಿಸಿ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದ್ದು ಇಂದು ನಡೆದ ನಮ್ಮ ನಡಿಗೆ ಬಂಡೀಪುರದ ಕಡೆಗೆ ಪಾದಯಾತ್ರೆ ಸಾಕ್ಷಿಯಾಯ್ತು. 

ಪೂರ್ತಿ ಓದಿ

08:24 PM (IST) Apr 06

ಮೈಸೂರು ಶೈಲಿಯ ಟೊಮೆಟೊ ರಸಂ: ನಾಲಿಗೆಗೂ ಟೇಸ್ಟ್, ಆರೋಗ್ಯಕ್ಕೂ ಬೆಸ್ಟ್

ಮನೆಯಲ್ಲಿಯೇ ಮೈಸೂರು ಶೈಲಿಯ ಟೊಮೆಟೊ ರಸಂ ತಯಾರಿಸಿ. ಇದು ರುಚಿಕರ ಮಾತ್ರವಲ್ಲದೆ, ತಯಾರಿಸಲು ಕೆಲವೇ ನಿಮಿಷಗಳು ಬೇಕಾಗುತ್ತದೆ. ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿದೆ.

ಪೂರ್ತಿ ಓದಿ

07:30 PM (IST) Apr 06

ಹೊರಗೆ ಮಲಗುತ್ತಿರುವ ಬಿಜೆಪಿ ನಾಯಕರು: ಶಾಸಕ ಎಚ್.ಸಿ.ಬಾಲಕೃಷ್ಣ ಲೇವಡಿ

ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ. ಹೀಗಾಗಿ ಬೆಲೆ ಏರಿಕೆ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗರಿಗೆ ಇಲ್ಲ. ಅವರು ಪ್ರತಿಭಟನೆ ಮಾಡುವುದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಮಾಡಲಿ. 

ಪೂರ್ತಿ ಓದಿ

07:06 PM (IST) Apr 06

ಕೇರಳದಲ್ಲಿ ಶತ್ರು ಸಂಹಾರ ಪೂಜೆ ಆಯ್ತು, ಇಲ್ಲಿ ಸಿದ್ದರಾಮಯ್ಯ ಕಾಲು ನೋವಾಯ್ತು; ಯತ್ನಾಳ್ ಹೊಸ ಬಾಂಬ್

ರಾಜ್ಯದ ಮಹಾನಾಯಕ ಕೇರಳಕ್ಕೆ ಹೋಗಿ ಶತ್ರು ಸಂಹಾರ ಪೂಜೆ ಮಾಡಿಸಿದ ಕೆಲವೇ ದಿನಗಳಲ್ಲಿ ಸಿಎಂಗೆ ಕಾಲು ನೋವು ಕಾಣಿಸಿಕೊಂಡಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 

ಪೂರ್ತಿ ಓದಿ

07:05 PM (IST) Apr 06

2025ರಲ್ಲಿ ಅತಿ ಹೆಚ್ಚು ಶತಕೋಟ್ಯಧಿಪತಿಗಳು ವಾಸಿಸುತ್ತಿರೋ ಟಾಪ್ 10 ನಗರಗಳು! ಇಳಿಕೆಯತ್ತ ಮುಂಬೈ!

ಫೋರ್ಬ್ಸ್ 2025 ರ ವರದಿಯ ಪ್ರಕಾರ, ಜಗತ್ತಿನಲ್ಲಿ ಅತಿ ಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿರುವ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನ್ಯೂಯಾರ್ಕ್ ನಗರವು 123 ಶತಕೋಟ್ಯಾಧಿಪತಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ಪೂರ್ತಿ ಓದಿ

06:50 PM (IST) Apr 06

ವಕ್ಫ್ ಮಸೂದೆ ಮುಸ್ಲಿಂ ವಿರೋಧಿ: ಸಚಿವ ಬೈರತಿ ಸುರೇಶ್

ಸಂಸತ್‌ನಲ್ಲಿ ಅಡ್ಡ ಮತ ಪಡೆದು ವಕ್ಫ್ ಮಸೂದೆಗೆ ಅಂಗೀಕಾರ ಪಡೆದುಕೊಂಡಿದ್ದಾರೆ. ಇದು ಮುಸ್ಲಿಮರ ವಿರೋಧಿ ಕಾಯ್ದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು. 

ಪೂರ್ತಿ ಓದಿ

06:28 PM (IST) Apr 06

ರೈಲು ಪ್ರಯಾಣಕ್ಕೆ ಗುಡ್‌ಬೈ ಹೇಳಿದ 93 ಕೋಟಿ ಪ್ರಯಾಣಿಕರು; ಆದ್ರೂ ಲಾಭ ಮಾಡಿಕೊಂಡ ರೈಲ್ವೆ ಇಲಾಖೆ!

ಭಾರತೀಯ ರೈಲ್ವೆ ಇಲಾಖೆಗೆ ಪ್ರಯಾಣಿಕರು ಶಾಕ್ ನೀಡಿದ್ದಾರೆ. ಬರೋಬ್ಬರಿ 93 ಕೋಟಿ ಜನರು ರೈಲ್ವೆ ಪ್ರಯಾಣದಿಂದ ಹಿಂದೆ ಸರಿದಿದ್ದಾರೆ. ಆದರೂ, ರೈಲ್ವೆ ಇಲಾಖೆ ಮಾತ್ರ ಲಾಭದಲ್ಲಿದೆ.

ಪೂರ್ತಿ ಓದಿ

06:24 PM (IST) Apr 06

ಸಿಎಸ್‌ಕೆ ಕಳಪೆ ಆಟ, ಟೀಕೆ ಬೆನ್ನಲ್ಲೇ ಐಪಿಎಲ್ ನಿವೃತ್ತಿ ಸುದ್ದಿ ಕುರಿತು ಮೌನ ಮುರಿದ ಧೋನಿ

ಸಿಎಸ್‌ಕೆ ಪ್ರದರ್ಶನ, ಧೋನಿ ಆಟಕ್ಕೆ ಭಾರಿ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಹಬ್ಬಿರುವ ನಿವೃತ್ತಿ ಕುರತು ಕೊನೆಗೂ ಧೋನಿ ಮೌನ ಮುರಿದಿದ್ದಾರೆ. ನಿವೃತ್ತಿಯಾಗುತ್ತಿದ್ದಾರಾ ಧೋನಿ? ಹೇಳಿದ್ದೇನು?

ಪೂರ್ತಿ ಓದಿ

06:01 PM (IST) Apr 06

ಸಮಸ್ಯೆ ಆಗಿ 2ನೇ ಮದುವೆಯಾದ ತುಂಬ ಜನ ಚೆನ್ನಾಗಿದ್ದಾರೆ: ಶ್ರೀರಸ್ತು ಶುಭಮಸ್ತು ನಟಿ ಸಪ್ನಾ ದೀಕ್ಷಿತ್ Interview

ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿ ನಟಿ ಸಪ್ನಾ ದೀಕ್ಷಿತ್‌ ಅವರು ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಮದುವೆ, ಡಿವೋರ್ಸ್‌ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇನ್ನು ಎರಡನೇ ಮದುವೆ ಆದವರ ಬಗ್ಗೆ ಮಾತನಾಡಿದ್ದಾರೆ. 

ಪೂರ್ತಿ ಓದಿ

05:55 PM (IST) Apr 06

ಪಿಎಂ ಮೋದಿ ಹೊಸ ಪ್ರೈವೇಟ್ ಸೆಕ್ರಟಿರಿ ನಿಧಿ ತಿವಾರಿಯ; ಐಎಫ್ಎಸ್ ರ‍್ಯಾಂಕಿಂಗ್ ಎಷ್ಟು?

ಐಎಫ್‌ಎಸ್ ಅಧಿಕಾರಿ ನಿಧಿ ತಿವಾರಿಯವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಆದರೆ, ಈ ನಿಧಿ ಅವರ ಐಎಫ್‌ಎಸ್ ರ್ಯಾಂಕಿಂಗ್ ಎಷ್ಟಿದೆ ನೋಡಿ..

ಪೂರ್ತಿ ಓದಿ

05:40 PM (IST) Apr 06

ವಿನಯ್‌ ಸಾವಿನಲ್ಲೂ ರಾಜಕೀಯ ಮಾಡೋದು ಸರಿಯಲ್ಲ: ಸಚಿವ ಕೆ.ಜೆ.ಜಾರ್ಜ್‌

ಕೊಡಗು ಜಿಲ್ಲೆಯ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ದುರ್ಘಟನೆ. ಯಾರೇ ಆಗಲಿ ಸಾಯಬಾರದಿತ್ತು. ಈ ಬಗ್ಗೆ ತನಿಖೆಯಾಗಲಿ, ಇದರಲ್ಲಿ ಯಾರದೇ ತಪ್ಪಿದ್ದರು ಅವರಿಗೆ ತಕ್ಕ ಶಿಕ್ಷೆ ಆಗಬೇಕು. ಅವರ ಸಾವಿನಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ರಾಜ್ಯ ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ. 
 

ಪೂರ್ತಿ ಓದಿ

05:34 PM (IST) Apr 06

ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ ಮಂದಣ್ಣ, ಮಹಿಳಾ ಪ್ರಧಾನ ಸಿನಿಮಾ ಟೀಸರ್ ಔಟ್

ಸಿಕಂದರ್ ಸಿನಿಮಾ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಇದೀಗ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ವಾರಿಯರ್ ಅವತರಾದಲ್ಲಿ ಕಾಣಿಸಿಕೊಂಡಿರುವ ಮಹಿಳಾ ಪ್ರಧಾನ ಸಿನಿಮಾ ಗರ್ಲ್‌ಫ್ರೆಂಡ್ ಟೀಸರ್ ಸಾಂಗ್ ಬಿಡುಗಡೆಯಾಗಿದೆ. ರಶ್ಮಿಕಾ ಅವತಾರ ತೀವ್ರ ಕುತೂಹಲ ಕೆರಳಿಸಿದೆ.

ಪೂರ್ತಿ ಓದಿ

05:30 PM (IST) Apr 06

ಎರಡೂವರೆ ವರ್ಷಗಳಿಂದ ಟಾಪ್‌ 3 ಸ್ಥಾನದಲ್ಲಿದ್ದ Lakshmi Baramma Serial ಅಂತ್ಯ ಆಗ್ತಿರೋದು ಯಾಕೆ?

ʼಲಕ್ಷೀ ಬಾರಮ್ಮʼ ಧಾರಾವಾಹಿಯ ಟಿಆರ್‌ಪಿ ಚೆನ್ನಾಗಿದ್ರೂ ಯಾಕೆ ಅಂತ್ಯ ಆಗ್ತಿದೆ ಎಂಬ ಕುತೂಹಲ ಅನೇಕರಿಗೆ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ. 
 

ಪೂರ್ತಿ ಓದಿ

05:06 PM (IST) Apr 06

ಬಾಸ್​ ರಜೆ ಕೊಡ್ತಿಲ್ವಾ? ಹೀಗೆ ಮಾಡಿ ನೋಡಿ ಎಂದು ಟಿಪ್ಸ್​ ಕೊಟ್ಟು ಪೇಚಿಗೆ ಸಿಲುಕಿದ ಯುವತಿ!

ಸಿಕ್​ ಲೀವ್​ ಹಾಕುವ ಎಲ್ಲಾ ಅರ್ಹತೆ ಇದ್ದರೂ ಬಾಸ್​ ರಜೆ ನೀಡದಿದ್ದರೆ ಅಥವಾ ಗಾಯವಾಗಿದೆ ಎಂದು ಸುಮ್ಮನೇ ರಜೆ ಪಡೆದುಕೊಂಡಿದ್ದರೆ ಅದನ್ನು ಮ್ಯಾನೇಜ್​ ಮಾಡುವುದು ಹೇಗೆ ಎಂದು ಹೇಳಿಕೊಟ್ಟು ಪೇಚಿಗೆ ಸಿಲುಕಿದ್ದಾರೆ ಯುವತಿ!
 

ಪೂರ್ತಿ ಓದಿ

04:49 PM (IST) Apr 06

ಕೆಲಸದ ಟಾರ್ಗೆಟ್ ರೀಚ್ ಆಗದ ಉದ್ಯೋಗಿ ಕುತ್ತಿಗೆಗೆ ಬೆಲ್ಟ್ ಕಟ್ಟಿ ನಾಯಿಯಂತೆ ನಡೆಸಿಕೊಂಡ ಮ್ಯಾನೇಜರ್!

ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಯುವಕನಿಗೆ ನಾಯಿಯಂತೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಇದೀಗ ವೈರಲ್ ದೃಶ್ಯವು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪೂರ್ತಿ ಓದಿ

04:40 PM (IST) Apr 06

ಟೀಕೆಗಳಿಗೆ ಹೆದರುವ ಅಗತ್ಯವಿಲ್ಲ: ಸಚಿವ ಎನ್.ಚಲುವರಾಯಸ್ವಾಮಿ

ಟೀಕೆಗಳಿಗೆಲ್ಲಾ ಹೆದರುವ ಅಗತ್ಯವಿಲ್ಲ. ತಪ್ಪು ಮಾಡಿದ್ದರೆ ಹೆದರಬೇಕಿತ್ತು. ಪಾರದರ್ಶಕವಾಗಿ ಲೆಕ್ಕ-ಪತ್ರ ಮಂಡಿಸಲಾಗಿದೆ. ಸರ್ಕಾರದ ನಿಯಮಾನುಸಾರವಾಗಿಯೇ ಪ್ರಕ್ರಿಯೆಗಳನ್ನು ನಡೆಸಬೇಕು. ಸಾರ್ವಜನಿಕರ ಹಣ ಖರ್ಚು ಮಾಡುವಾಗ ಜವಾಬ್ದಾರಿಯುತವಾಗಿರಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. 

ಪೂರ್ತಿ ಓದಿ

04:37 PM (IST) Apr 06

ಕಿವೀಸ್ ಎದುರು ಹೀನಾಯ ಸೋಲುತ್ತಿದ್ದಂತೆ ಅಭಿಮಾನಿಗೆ ಹೊಡೆಯಲು ಹೋದ ಪಾಕ್ ಕ್ರಿಕೆಟಿಗ! ವಿಡಿಯೋ ವೈರಲ್

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಸೋತಿದ್ದಕ್ಕೆ ಪಾಕಿಸ್ತಾನ ಆಟಗಾರ ಖುಷ್‌ದಿಲ್ ಶಾ ಅಭಿಮಾನಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಅಫ್ಘಾನಿಸ್ತಾನ ಅಭಿಮಾನಿಗಳು ಅಸಭ್ಯ ಪದಗಳನ್ನು ಬಳಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಹೇಳಿದೆ.

ಪೂರ್ತಿ ಓದಿ

04:31 PM (IST) Apr 06

ಗ್ಯಾರಂಟಿ ಯೋಜನೆ, ಅಭಿವೃದ್ಧಿ ಕಾರ್ಯ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಸಚಿವ ಡಾ.ಎಂ.ಸಿ.ಸುಧಾಕರ್

ವಿವಿಧ ಅಗತ್ಯ ಕಾರ್ಯಕ್ರಮಗಳಿಗೆ ಹಣ ಕೊಡುವುದರ ಜೊತೆಗೆ ಹೆಚ್ಚುವರಿ ಗ್ಯಾರಂಟಿಗಳಿಗೆ ಅನುದಾನವನ್ನು ಒದಗಿಸುವಂತಹ ಪ್ರಮಾಣಿಕ ಪ್ರಯತ್ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. 

ಪೂರ್ತಿ ಓದಿ

04:25 PM (IST) Apr 06

ರಾಜ್ಯ ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಕೇಂದ್ರ ಭರವಸೆ: ಡಿ.ಕೆ.ಶಿವಕುಮಾರ್‌

ರಾಜ್ಯದ ನೀರಾವಾರಿ ಯೋಜನೆಗಳಿಗೆ ಸಂಬಂಧಿಸಿ ಇತರ ರಾಜ್ಯಗಳೊಂದಿಗೆ ಒಬ್ಬೊಬ್ಬರನ್ನಾಗಿ ಕರೆಸಿ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಿಕೊಡುವುದಾಗಿ ಕೇಂದ್ರ ಜಲಶಕ್ತಿ ಸಚಿವರು ಭರವಸೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. 

ಪೂರ್ತಿ ಓದಿ

04:24 PM (IST) Apr 06

ಬೆಂಗಳೂರಿನಲ್ಲಿ ನಾಯಿ ಜೊತೆ ವಾಕ್ ಮಾಡ್ತೀರಾ ಹುಷಾರ್: ನಿಮ್ಮ ನಾಯಿನೂ ಬಿಡಲ್ಲ ಕಳ್ಳರು: ವೀಡಿಯೋ

ಬೆಂಗಳೂರಿನ ಜಯನಗರದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಇಬ್ಬರು, ತನ್ನ ನೆಚ್ಚಿನ ನಾಯಿಯೊಂದಿಗೆ ವಾಕ್‌ ಬರುತ್ತಿದ್ದ ಯುವತಿಗೆ ಶಾಕ್ ನೀಡಿದ್ದಾರೆ. ಬೈಕ್‌ನಲ್ಲಿ ಬಂದು ಚಿನ್ನದ ಸರ ಕಳ್ಳತನ ಮಾದರಿಯಲ್ಲೇ ಇಲ್ಲಿ ಶ್ವಾನದ ಕಳ್ಳತನವಾಗಿದೆ.

ಪೂರ್ತಿ ಓದಿ

04:23 PM (IST) Apr 06

ಕೋಟ್ಯಾಧೀಶೆ ಆಗಿದ್ದರೂ ಐಷಾರಾಮಿ ಜೀವನಕ್ಕೆ ಗುಡ್‌ಬೈ; ಸನ್ಯಾಸತ್ವ ಸ್ವೀಕರಿಸಿದ ಕನ್ನಡತಿ!

ಕೋಟ್ಯಾಧೀಶ್ವರರ ಮನೆಯಲ್ಲಿ ಬೆಳೆದ 26 ವರ್ಷದ ಯುವತಿ ನಿಖಿತಾ, ಐಷಾರಾಮಿ ಜೀವನವನ್ನು ತ್ಯಜಿಸಿ ಸನ್ಯಾಸತ್ವ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದಾರೆ. ವ್ಯಾಮೋಹದ ಜೀವನವನ್ನು ತೊರೆದು ಆಧ್ಯಾತ್ಮದ ಕಡೆಗೆ ಪಯಣ ಬೆಳೆಸಲು ಮುಂದಾಗಿದ್ದಾರೆ.

ಪೂರ್ತಿ ಓದಿ

04:01 PM (IST) Apr 06

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಭರ್ಜರಿ ಅವಕಾಶ, ಸೆಂಟ್ರಲ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗೆ ನೇಮಕಾತಿ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2025 ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಏಪ್ರಿಲ್ ತಿಂಗಳವರೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ centralbankofindia.co.in ಗೆ ಭೇಟಿ ನೀಡಿ.

ಪೂರ್ತಿ ಓದಿ

More Trending News