ಬೆಂಗಳೂರು: ಭಾರತ-ಪಾಕ್ ಯುದ್ಧದ ಹಿನ್ನೆಲೆಯಲ್ಲಿ ಸೇನೆಯಿಂದ ತುರ್ತು ಕರೆ ಬಂದಿರುವ ಕಾರಣ ರಜೆ ಮೇಲೆ ಊರಿಗೆ ಬಂದಿದ್ದ ರಾಜ್ಯದ ಮತ್ತಷ್ಟು ಸೈನಿಕರು ಮರಳಿ ಕರ್ತವ್ಯಕ್ಕೆ ತೆರಳಿದ್ದಾರೆ. ಮಂಡ್ಯ, ಚಿಕ್ಕಮಗಳೂರು, ಬೀದರ್, ಕಲಬುರಗಿ, ಹಾವೇರಿ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ರಜೆಗೆಂದು ಬಂದಿದ್ದ ಸೈನಿಕರು ಮರಳಿ ಸಮರಕ್ಕೆ ವಾಪಸ್ ಹೋಗಿದ್ದಾರೆ. ಕಲಬುರಗಿ ಜಿಲ್ಲೆ ಕಾಳೂರ ತಾಂಡಾದ ಯೋಧ ಉಮೇಶ್ ಹೇಮು ರಾಥೋಡ್ ಏ.25ರಂದು ತಮ್ಮ ಮದುವೆಗೆಂದು ರಜೆ ಪಡೆದು ಬಂದಿದ್ದರು. ಈಗ ಕರ್ತವ್ಯ ಕರೆಯ ಮೇರೆಗೆ ರಣರಂಗಕ್ಕೆ ಮರಳಿದ್ದಾರೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸಿಗದಾಳು ಅದ್ದಡದ ಆದರ್ಶ್ ಎಸ್.ಎಸ್ ಸಿಗದಾಳು 1 ತಿಂಗಳ ರಜೆ ಮೇಲೆ ಊರಿಗೆ ಬಂದಿದ್ದರು. ಈಗ ತಮ್ಮ ರಜೆಯನ್ನು 12 ದಿನಕ್ಕೆ ಮೊಟಕುಗೊಳಿಸಿದ್ದಾರೆ. ಮಂಡ್ಯ ತಾಲೂಕಿನ ರಾಘವೇಂದ್ರ ಅವರು ಗೃಹ ಪ್ರವೇಶದ ಹಿನ್ನೆಲೆಯಲ್ಲಿ ರಜೆ ಮೇಲೆ ಬಂದಿದ್ದರು. ರಕ್ಷಣಾ ಇಲಾಖೆ ಸೈನ್ಯಾಧಿಕಾರಿಗಳ ತುರ್ತು ಕರೆ ಮೇರೆಗೆ ಮತ್ತೆ ಕರ್ತವ್ಯಕ್ಕೆ ತೆರಳಿದರು. ಅವರನ್ನು ನಿವಾಸಿಗಳು ಅಭಿನಂದಿಸಿ, ಶುಭಹಾರೈಸಿ ಕಳುಹಿಸಿಕೊಟ್ಟರು. ಹಾವೇರಿ ಜಿಲ್ಲೆಯ ಆನಂದ ಷಣ್ಮುಖಪ್ಪ ಬಿಳಚಿ ಅವರು ಮದುವೆಗಾಗಿ ರೆಜೆ ಪಡೆದು ಊರಿಗೆ ಆಗಮಿಸಿದ್ದರು. ತುರ್ತು ಕರೆ ಬಂದಿ ದ್ದರಿಂದ ವಿವಾಹವಾಗಿ 10ನೇ ದಿನಕ್ಕೇ ಕರ್ತ ವ್ಯಕ್ಕೆ ಹಾಜರಾಗಲು ಲಖನೌಗೆ ಪ್ರಯಾಣ ಬೆಳೆಸಿದ್ದಾರೆ. ಕುಟುಂಬದವರು ಬಂಧುಗಳು ಸ್ನೇಹಿತರು ಅವರನ್ನು ಗೆದ್ದು ಬನ್ನಿ ಎಂದು ಹೇಳಿ ಬೀಳ್ಕೊಟ್ಟಿದ್ದಾರೆ.

05:01 PM (IST) May 12
ಕಬ್ಬನ್ ಪಾರ್ಕ್‌ನಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಊಟ, ಫೋಟೋಶೂಟ್, ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಹಿರಿಯ ನಾಗರಿಕರು ಈ ನಿಯಮಗಳನ್ನು ವಿರೋಧಿಸಿದ್ದು, ಪರ್ಯಾಯ ಪರಿಹಾರಗಳನ್ನು ಸೂಚಿಸಿದ್ದಾರೆ.
ಪೂರ್ತಿ ಓದಿ04:06 PM (IST) May 12
ಬೆಂಗಳೂರಿನ ಈಜಿಪುರ ಫ್ಲೈಓವರ್ ಕಾಮಗಾರಿ ವಿಳಂಬದಿಂದ ಬೇಸತ್ತ ನಿವಾಸಿಯೊಬ್ಬರು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಧ್ಯಸ್ಥಿಕೆ ವಹಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಈ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಫ್ಲೈಓವರ್‌ಗೆ 'ಮೆಗಾ ಟ್ರಂಪ್ ಫ್ಲೈಓವರ್' ಎಂದು ಹೆಸರಿಡುವುದಾಗಿ ತಿಳಿಸಿದ್ದಾರೆ.
ಪೂರ್ತಿ ಓದಿ03:10 PM (IST) May 12
ಒಂದು ವರ್ಷದ ಅಭಿಯಾನದ ನಂತರ, ಈ ನಗರವನ್ನು ಭಾರತದ ಮೊದಲ ಭಿಕ್ಷುಕ-ಮುಕ್ತ ನಗರವೆಂದು ಘೋಷಿಸಲ್ಪಟ್ಟಿದೆ. ಇಲ್ಲಿ ವಯಸ್ಕ ಭಿಕ್ಷುಕರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ಮತ್ತು ಮಕ್ಕಳನ್ನು ಶಾಲೆಗಳಿಗೆ ದಾಖಲಿಸುವ ಮೂಲಕ ಭಿಕ್ಷುಕರ ಮುಕ್ತ ನಗರ ನಿರ್ಮಾಣ ಮಾಡಲಾಗಿದೆ.
ಪೂರ್ತಿ ಓದಿ11:36 AM (IST) May 12
ಭಾರತ-ಪಾಕಿಸ್ತಾನ ನಡುವೆ ಗಡಿ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲಿ, ಕರ್ನಾಟಕ ಕಾಂಗ್ರೆಸ್ (ಕೆಪಿಸಿಸಿ) ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಒಂದು ಪೋಸ್ಟ್ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಪೂರ್ತಿ ಓದಿ11:29 AM (IST) May 12
ಈಗ, ಕಾರ್ಖಾನೆಯಲ್ಲಿ ಬಾಲಕಾರ್ಮಿಕರನ್ನಷ್ಟೇ ಅಲ್ಲ, ಅನ್ಯರಾಜ್ಯಗಳ, ಅದರಲ್ಲೂ ಅಕ್ರಮ ಬಾಂಗ್ಲಾ ವಲಸಿಗರನ್ನು ಕರೆಯಿಸಿಕೊಂಡಿರುವ ಸಾಧ್ಯತೆಯಿದೆ. ಹತ್ತಾರು ಕಾರ್ಮಿಕರು ಇಲ್ಲಿ ಇರಬಹುದಾದ ಶಂಕೆ ವ್ಯಕ್ತವಾಗಿದೆ.
ಪೂರ್ತಿ ಓದಿ11:05 AM (IST) May 12
ಈ ನಡುವೆ ಮನುಷ್ಯನನ್ನು ಮತ್ತೆ ಮನುಷ್ಯನನ್ನಾಗಿ ರೂಪಿಸಿಕೊಳ್ಳಲು ಇರುವ ಮಾರ್ಗಶೋಧದಲ್ಲಿ ‘ಧರ್ಮವೇ’ ದೀಪವಾಗಿ ತೋರಿತು. ಈ ಹಣತೆಗೆ ಹನಿ ಎಣ್ಣೆ ಸುರಿದು ಅದೇ ಬೆಳಕಿನಲ್ಲಿ ಬದುಕುವ ಪ್ರಯತ್ನವನ್ನು ನಿರಂತರವಾಗಿ ಜಾರಿಯಲ್ಲಿಟ್ಟ ಮನುಷ್ಯನಿಗೆ, ಅದೇ ಮತಧರ್ಮಗಳು ಸಂಕೋಲೆಗಳಾಗಿ ಪರಿಣಮಿಸಿದ್ದು ಮಾತ್ರ ವಿಪರ್ಯಾಸವೇ ಸರಿ!
10:34 AM (IST) May 12
ಸುಮಾರು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಆ ಆಜ್ಜನಿಗೆ ಆ ರಾತ್ರಿ ಒಂದು ಕನಸು ಬಿದ್ದಿದೆ. ಆ ಕನಸಿನಲ್ಲಿ ಪುತ್ರನೇ ಅಜ್ಜನ ಪತ್ನಿಯನ್ನು ಕೊಲೆ ಮಾಡಿ ಬಿಟ್ಟಿದ್ದಾನೆ.
ಪೂರ್ತಿ ಓದಿ10:09 AM (IST) May 12
ರಾಜ್ಯದಲ್ಲಿ 52 ಲಕ್ಷ ಜಮೀನುಗಳ ಖಾತೆಗಳು ಇನ್ನೂ ನಿಧನ ಹೊಂದಿದವರ ಹೆಸರಿನಲ್ಲೇ ಇವೆ. ಈ ಹಿಂದೆ ಪೌತಿ ಖಾತೆ ಅಭಿಯಾನ ರಾಜ್ಯದಲ್ಲಿ ನಡೆದಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ ಜಾರಿಗೆ ಬಂದಿಲ್ಲ.
ಪೂರ್ತಿ ಓದಿ09:51 AM (IST) May 12
ಯಾವುದೇ ತಾಯಿ ದೂರು ದಾಖಲಿಸುವ ಮೂಲಕ ತನ್ನ ಮಗಳ ಜೀವನ ಹಾಳುಮಾಡುವುದಿಲ್ಲ ಎಂಬ ಏಕೈಕ ಅಂಶ ಆಧರಿಸಿ ಆರೋಪಿಯನ್ನು ದೋಷಿಯೆಂದು ನಿರ್ಧರಿಸಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.
ಪೂರ್ತಿ ಓದಿ09:43 AM (IST) May 12
ಮಹಾತ್ಮ ಗಾಂಧಿರವರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ 100 ವರ್ಷಗಳ ಸ್ಮರಣಾರ್ಥ ರಾಜ್ಯದಲ್ಲಿ 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಪೂರ್ತಿ ಓದಿ09:01 AM (IST) May 12
ಅನೈತಿಕ ಸಂಬಂಧಕ್ಕೆ ಜನಿಸಿದ್ದ ಸುಮಾರು 15 ದಿನಗಳ ಹೆಣ್ಣು ಹಸುಗೂಸನ್ನು ರಸ್ತೆ ಬದಿಯ ಆಟೋದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ.
ಪೂರ್ತಿ ಓದಿ08:44 AM (IST) May 12
ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ರಾಜಧಾನಿ ಬೆಂಗಳೂರಿನ ಕೆರೆಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯ 66 ಕೆರೆಗಳು ಸಂಪೂರ್ಣವಾಗಿ ಬರಿದಾಗಿದ್ದು, ಒಟ್ಟಾರೆ 134 ಕೆರೆಗಳಲ್ಲಿ ನೀರಿನ ಮಟ್ಟ ಅರ್ಧಕ್ಕಿಂತ ಕಡಿಮೆಯಾಗಿದೆ.
ಪೂರ್ತಿ ಓದಿ07:59 AM (IST) May 12
ರಾಜ್ಯದಲ್ಲಿ ಮತ್ತೆ ಪೂರ್ವ ಮುಂಗಾರು ಚುರುಕುಗೊಳ್ಳುವ ಲಕ್ಷಣ ಕಂಡು ಬರುತ್ತಿದ್ದು, ಮುಂದಿನ ಐದು ದಿನಗಳಲ್ಲಿ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
07:55 AM (IST) May 12
ಕನ್ನಡದ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ ರಾಕೇಶ್ ಪೂಜಾರಿ ವಿಧಿವಶರಾಗಿದ್ದಾರೆ. ಅವರು ಕಳೆದ ರಾತ್ರಿ ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಡ್ಯಾನ್ಸ್ ಮಾಡಿದ್ದರು.