Published : Feb 27, 2026, 05:55 AM ISTUpdated : Feb 27, 2026, 11:36 PM IST

Karnataka News Live: BRIMS - 11 ತಿಂಗಳ ಸಂಬಳಕ್ಕೆ ಅಲೆದಾಡಿ ಬೇಸತ್ತು ಯುವತಿ ಆತ್ಮ*ಹತ್ಯೆಗೆ ಯತ್ನ! ನಾಲ್ಕು ತಿಂಗಳ ಹಿಂದೆಯಷ್ಟೆ ತಂದೆ ನಿಧನ

ಸಾರಾಂಶ

ಬೆಂಗಳೂರು : ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಉಪ ಜಾತಿಗಳನ್ನು ಮೂರು ಪ್ರವರ್ಗಗಳಾಗಿ ವರ್ಗಿಕರಿಸಿ ಒಳಮೀಸಲಾತಿ ಕಲ್ಪಿಸುವ ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗೀಕರಣ) ಮಸೂದೆ-2025ಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಕೊನೆಗೂ ಅಂಕಿತ ಹಾಕಿದ್ದಾರೆ.  

 

11:36 PM (IST) Feb 27

BRIMS - 11 ತಿಂಗಳ ಸಂಬಳಕ್ಕೆ ಅಲೆದಾಡಿ ಬೇಸತ್ತು ಯುವತಿ ಆತ್ಮ*ಹತ್ಯೆಗೆ ಯತ್ನ! ನಾಲ್ಕು ತಿಂಗಳ ಹಿಂದೆಯಷ್ಟೆ ತಂದೆ ನಿಧನ

ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ 11 ತಿಂಗಳ ಸಂಬಳ ನೀಡದ ಕಾರಣ ಲ್ಯಾಬ್ ಟೆಕ್ನಿಷಿಯನ್ ನಿಲೋಫರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಂಬಳ ಕೇಳಿದಾಗ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದ್ದು, ನ್ಯಾಯಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.
Read Full Story

11:06 PM (IST) Feb 27

KIADB - 'ಭೂಮಿ ಬಿಡೋ ಮಾತೇ ಇಲ್ಲ' ಭೂ ಸ್ವಾಧೀನಕ್ಕೆ ನೊಟೀಸ್, ಸರ್ಕಾರದ ವಿರುದ್ದ ರೊಚ್ಚಿಗೆದ್ದ ಅನ್ನದಾತರು

ಆನೇಕಲ್ ತಾಲೂಕಿನಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 2500 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾದ ಕೆಐಎಡಿಬಿ ಅಧಿಕಾರಿಗಳಿಗೆ ರೈತರು ಘೇರಾವ್ ಹಾಕಿ ಪ್ರತಿಭಟಿಸಿದ್ದಾರೆ. ತಮ್ಮ ಫಲವತ್ತಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದರು.

Read Full Story

09:42 PM (IST) Feb 27

ಬೆಂಗಳೂರಲ್ಲಿ ಭೂಗಳ್ಳರಿಗೆ JCB ಶಾಕ್ ಕೊಟ್ಟ ಜಿಲ್ಲಾಧಿಕಾರಿ ಜಗದೀಶ್ - ₹8 ಕೋಟಿ ಮೌಲ್ಯದ ಆಸ್ತಿ ಸರ್ಕಾರದ ವಶ!

ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ನೇತೃತ್ವದಲ್ಲಿ, ಜಿಲ್ಲೆಯಾದ್ಯಂತ ಒತ್ತುವರಿಯಾಗಿದ್ದ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಈ ತೆರವು ಕಾರ್ಯಾಚರಣೆಯಲ್ಲಿ, ಸುಮಾರು 8.20 ಕೋಟಿ ರೂಪಾಯಿ ಮೌಲ್ಯದ 6 ಎಕರೆಗೂ ಅಧಿಕ ಜಮೀನನ್ನು ಸರ್ಕಾರಿ ಸ್ವತ್ತೆಂದು ಘೋಷಿಸಲಾಗಿದೆ.

Read Full Story

09:00 PM (IST) Feb 27

ಉತ್ತರಕನ್ನಡ - ಬ್ರಾಹ್ಮಣ ಸಮುದಾಯದ ಅವಹೇಳನ; ಸಿಗಂದೂರು ಧರ್ಮದರ್ಶಿ ರಾಮಪ್ಪ ವಿರುದ್ಧ ಎಫ್‌ಐಆರ್

ಸಾಗರದ ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರು ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ  ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನವರಿ 31ರಂದು ಮೋಳ್ಕೋಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು 'ಬ್ರಾಹ್ಮಣ ಮುಂಡೆಮಕ್ಕಳು' ಎಂದು ನಿಂದಿಸಿದ್ದರು.

Read Full Story

08:36 PM (IST) Feb 27

ಹಿರೇಬೆಣಕಲ್ - 9ನೇ ಶತಮಾನದ ವೀರಗಲ್ಲು ಪತ್ತೆ, ಹುತಾತ್ಮನಾದ ವೀರನನ್ನು ಅಪ್ಸರೆಯರು ಸ್ವರ್ಗಲೋಕಕ್ಕೆ ಕರೆದೊಯ್ಯುತ್ತಿರುವ ದೃಶ್ಯ!

ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ 9ನೇ ಶತಮಾನಕ್ಕೆ ಸೇರಿದ ಶಾಸನ ಸಹಿತ ವಿಶಿಷ್ಟ ವೀರಗಲ್ಲೊಂದು ಪತ್ತೆಯಾಗಿದೆ. ಮೂರು ಹಂತಗಳ ಈ ಶಿಲ್ಪವು, ಊರಿಗಾಗಿ ಹೋರಾಡಿ ಮಡಿದ ವೀರನೊಬ್ಬನ ಶೌರ್ಯವನ್ನು ಮತ್ತು ಸ್ವರ್ಗ ಪ್ರಾಪ್ತಿಯನ್ನು ಚಿತ್ರಿಸುತ್ತದೆ. 

Read Full Story

08:15 PM (IST) Feb 27

HLL ನೇಮಕಾತಿ 2026 - ಪದವೀಧರರ ಬಾಳಿಗೆ ಹೊಸ ಬೆಳಕು! ಕೆಲವೇ ದಿನಗಳು ಮಾತ್ರ ಇಂದೇ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ HLL ಲೈಫ್‌ಕೇರ್ ಲಿಮಿಟೆಡ್, 2026ನೇ ಸಾಲಿನ 40 ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಬೃಹತ್ ನೇಮಕಾತಿ ಪ್ರಕಟಿಸಿದೆ. ಅರ್ಹ ಪದವೀಧರರು ಈ ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ₹1,40,000 ವರೆಗೆ ವೇತನ ದೊರೆಯಲಿದೆ.

Read Full Story

08:04 PM (IST) Feb 27

ಸಂಕೇತ್ ಹತ್ಯೆ ಬೆನ್ನಲ್ಲೇ ಕೊಡಗಿನ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರಿಂದ ಮಾರಣಾಂತಿಕ ಹಲ್ಲೆ, ಕಾಂಗ್ರೆಸ್ ಮುಖಂಡನ ಪುತ್ರನಿಂದಲೇ ದಾಳಿ?

ಕೊಡಗಿನ ನಾಪೋಕ್ಲುವಿನಲ್ಲಿ 'ಹಿಂದೂ ಸಂಗಮ'ದ ಪ್ರಚಾರ ಮಾಡುತ್ತಿದ್ದ ಗೌತಮ್ ಎಂಬ ಯುವಕನ ಮೇಲೆ ಅನ್ಯಕೋಮಿನ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಭಾಗಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

Read Full Story

07:50 PM (IST) Feb 27

ಶೂಟಿಂಗ್‌ ವೇಳೆ ವಿದ್ಯಾಗೆ ನಿಜಕ್ಕೂ ತಾಳಿ ಕಟ್ಟಲು ಹೋಗೋದಾ ಭದ್ರ? Muddu Sose ಶಾಕ್‌! ವಿಡಿಯೋ ವೈರಲ್‌

'ಮುದ್ದುಸೊಸೆ' ಧಾರಾವಾಹಿಯ ಮದುವೆ ದೃಶ್ಯದ ಶೂಟಿಂಗ್ ವೇಳೆ, ನಾಯಕ ನಟ ತ್ರಿವಿಕ್ರಮ್, ನಾಯಕಿ ಪ್ರತಿಮಾ ಠಾಕೂರ್ ಅವರಿಗೆ ತಮಾಷೆಗಾಗಿ ನಿಜವಾಗಿಯೂ ಮೂರು ಗಂಟು ಹಾಕಲು ಮುಂದಾದರು. ಈ ಅನಿರೀಕ್ಷಿತ ಘಟನೆಯಿಂದ ಗಾಬರಿಗೊಂಡ ನಟಿ ತಕ್ಷಣವೇ ಅವರ ಕೈಯನ್ನು ತಳ್ಳಿರುವ ವಿಡಿಯೋ ವೈರಲ್​ ಆಗಿದೆ.

Read Full Story

07:44 PM (IST) Feb 27

Bigg Boss ಗಿಲ್ಲಿ ನಟ- ರಘು ನಡುವೆ ನಿಜಕ್ಕೂ ಏನಾಯ್ತು? ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ಯಾಕೆ? ಗಿಲ್ಲಿ ರಿಯಾಕ್ಷನ್‌

ಬಿಗ್‌ಬಾಸ್‌ 12ರ ಸ್ಪರ್ಧಿ ಮ್ಯೂಟಂಟ್‌ ರಘು ಅವರು ಸಹ ಸ್ಪರ್ಧಿ ಗಿಲ್ಲಿ ನಟ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗಿಲ್ಲಿ ನಟ, ತಮಗೆ ಇದರ ಅರಿವಿಲ್ಲವೆಂದೂ, ತಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂದಿದ್ದು ಹೇಳಿದ್ದೇನು?

Read Full Story

07:43 PM (IST) Feb 27

ಗೊಲ್ಲರಹಟ್ಟಿ ಕಾವ್ಯಾಳನ್ನು 8 ವರ್ಷ ಪ್ರೀತಿಸಿ, ನಿಶ್ಚಿತಾರ್ಥ ಬಳಿಕ ವರದಕ್ಷಿಣೆಗಾಗಿ ಕೈಕೊಡಲು ಮುಂದಾದ ಶಿಕ್ಷಕ!

ಚಿತ್ರದುರ್ಗದಲ್ಲಿ ಎಂಟು ವರ್ಷ ಪ್ರೀತಿಸಿ ವರದಕ್ಷಿಣೆಗಾಗಿ ಮದುವೆಗೆ ನಿರಾಕರಿಸಿದ ಸರ್ಕಾರಿ ಶಾಲಾ ಶಿಕ್ಷಕನ ವಿರುದ್ಧ ಯುವತಿ ದೂರು ನೀಡಿದ್ದಾಳೆ. ದೂರಿನ ನಂತರ ಪ್ರೇಯಸಿಯನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದು, ಮದುವೆ ನೋಂದಣಿ ವೇಳೆ ಮತ್ತೆ ಹೈಡ್ರಾಮಾ ನಡೆಸಿ ಗೊಂದಲ ಸೃಷ್ಟಿಸಿದ್ದಾನೆ.
Read Full Story

07:25 PM (IST) Feb 27

ಮಾಧ್ಯಮದವರನ್ನ ನಿರ್ಬಂಧಿಸಿದ್ರೆ ವಿಧಾನಸೌಧದ ಗೇಟಿಗೆ ಮಲಗುವೆ - ರಾಜ್ಯ ಸರ್ಕಾರಕ್ಕೆ 15 ದಿನಗಳ ಡೆಡ್‌ಲೈನ್ ಕೊಟ್ಟ ವಾಟಾಳ್!

ವಿಧಾನಸೌಧದೊಳಗೆ ಮಾಧ್ಯಮ ಪ್ರವೇಶ ನಿರ್ಬಂಧಿಸುವ ಸರ್ಕಾರದ ನಿರ್ಧಾರವನ್ನು ವಾಟಾಳ್ ನಾಗರಾಜ್ ತೀವ್ರವಾಗಿ ಖಂಡಿಸಿದ್ದಾರೆ. ಈ ಆದೇಶವನ್ನು 15 ದಿನಗಳಲ್ಲಿ ಹಿಂಪಡೆಯದಿದ್ದರೆ ವಿಧಾನಸೌಧದ ಬಾಗಿಲಲ್ಲೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

Read Full Story

06:44 PM (IST) Feb 27

Hutti Gold Mines - ಹಟ್ಟಿ ಗೋಲ್ಡ್ ಮೈನ್ ಎದುರು ಸ್ಫೋಟಕಗಳ ರಾಶಿ! ಸಿಸಿಟಿವಿಯಲ್ಲಿ ಸೆರೆಯಾಯ್ತು ‘ನಂಬರ್ ಪ್ಲೇಟ್’ ಇಲ್ಲದ ನಿಗೂಢ ಬೈಕ್!

ಇತಿಹಾಸ ಪ್ರಸಿದ್ಧ ಹಟ್ಟಿ ಚಿನ್ನದ ಗಣಿ ಕಂಪನಿಯ ಮುಂಭಾಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ಹಟ್ಟಿ, ಸ್ಫೋಟಕಗಳು ತಂದಿದ್ದು ಎಲ್ಲಿಂದ? ಯಾರು? ಪತ್ತೆಗೆ ಮುಂದಾಗಿರುವ ರಾಯಚೂರು ಪೊಲೀಸರು, ಇಲ್ಲಿದೆ ಸಂಪೂರ್ಣ ವರದಿ

Read Full Story

06:32 PM (IST) Feb 27

ಒಂದೇ ಒಂದು 'ವಿಶ್' ಇಲ್ಲ, ಮದುವೆಗೂ ಬರಲಿಲ್ಲ; ರಶ್ಮಿಕಾ ಮಂದಣ್ಣ ಮತ್ತು ಸ್ಯಾಂಡಲ್‌ವುಡ್ ನಡುವಿನ ಬಿರುಕು ಮತ್ತೊಮ್ಮೆ ಸಾಬೀತು?

Why Sandalwood Stars Ignored Rashmika Mandanna's Wedding ರಾಷ್ಟ್ರಮಟ್ಟದ ತಾರೆ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಜೊತೆ ರಾಜಸ್ಥಾನದಲ್ಲಿ ವಿವಾಹವಾಗಿದ್ದಾರೆ. ಆದರೆ, ಈ ಮದುವೆಗೆ ಕನ್ನಡ ಚಿತ್ರರಂಗದಿಂದ ಯಾವುದೇ ಶುಭಾಶಯಗಳು ವ್ಯಕ್ತವಾಗಿಲ್ಲ, ಬದಲಾಗಿ ಮೌನ ಆವರಿಸಿದೆ. 

Read Full Story

05:56 PM (IST) Feb 27

ಉತ್ತರ ಕನ್ನಡದಲ್ಲಿ ಮತ್ತೆ ಶುರುವಾಯ್ತಾ ಅಸಲಿ ಆಟ? ಹೆಗಡೆ ರೀ-ಎಂಟ್ರಿಗೆ ಹಾಲಿ ಸಂಸದ ಕಾಗೇರಿ ಹೇಳಿದ್ದೇನು?

ಸಂವಿಧಾನ ಬದಲಾವಣೆ ಕುರಿತ ವಿವಾದಾತ್ಮಕ ಹೇಳಿಕೆಯಿಂದಾಗಿ ಕಳೆದ ಚುನಾವಣೆಯಲ್ಲಿ ಟಿಕೆಟ್ ಕಳೆದುಕೊಂಡಿದ್ದ ಅನಂತಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಈ ಬೆಳವಣಿಗೆಯು ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯೆ ಕುತೂಹಲ ಮೂಡಿಸಿದೆ.

Read Full Story

03:14 PM (IST) Feb 27

'ಮಗು ಬೇಕು ಅಂದ್ರೆ ಮದುವೆ ಆಗ್ಲೇಬೇಕಂತಿಲ್ಲ..' ಬಹುದೊಡ್ಡ ನಿರ್ಧಾರ ಮಾಡಿದ ಜಗ್ಗೇಶ್‌ ಸಿನಿಮಾ ಹೀರೋಯಿನ್‌!

'ಬಾಡಿಗಾರ್ಡ್' ಮತ್ತು 'ಭದ್ರ' ಚಿತ್ರಗಳ ನಟಿ ಡೈಸಿ ಶಾ, 41ನೇ ವಯಸ್ಸಿನಲ್ಲಿ ಮದುವೆಯಾಗದೆಯೇ ತಾಯಿಯಾಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ತಮ್ಮ ಅಂಡಾಣುಗಳನ್ನು ಫ್ರೀಜ್ ಮಾಡಿದ್ದು, ಕುಟುಂಬವನ್ನು ಆರಂಭಿಸಲು ಮದುವೆ ಕಡ್ಡಾಯವಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
Read Full Story

01:40 PM (IST) Feb 27

ಮಲ್ಲಿಕಾರ್ಜುನ ಮುತ್ಯಾ ಕೇಸ್ ರದ್ದು ಮಾಡದಿದ್ದರೆ ಯಾದಗಿರಿ ಬಂದ್; ಜಿಲ್ಲಾಡಳಿತಕ್ಕೆ 2 ದಿನಗಳ ಗಡುವು ಕೊಟ್ಟ ಭಕ್ತರು

ಪೋಕ್ಸೋ ಪ್ರಕರಣ ಎದುರಿಸುತ್ತಿರುವ ವಿವಾದಿತ ಮಲ್ಲಿಕಾರ್ಜುನ ಮುತ್ಯಾ ಪರವಾಗಿ ನಿಂತಿರುವ ಅವರ ಭಕ್ತರು, ಇದು ಕಪೋಲಕಲ್ಪಿತ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಎರಡು ದಿನಗಳಲ್ಲಿ ಪ್ರಕರಣವನ್ನು ರದ್ದುಗೊಳಿಸದಿದ್ದರೆ 'ಯಾದಗಿರಿ ಬಂದ್' ನಡೆಸುವುದಾಗಿ ಜಿಲ್ಲಾಡಳಿತಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
Read Full Story

01:18 PM (IST) Feb 27

ರಶ್ಮಿಕಾ-ವಿಜಯ್ ಮದುವೆಗೆ ಸ್ಯಾಂಡಲ್‌ವುಡ್ ಸೈಲೆಂಟ್‌ - ಯಶ್‌ಗೆ 'ಶೋಆಫ್' ಎಂದಿದ್ದೇ ಇಂದಿಗೆ ಮುಳುವಾಯ್ತಾ?

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ನಂತರ ಸ್ಯಾಂಡಲ್‌ವುಡ್‌ನಿಂದ ಶುಭಾಶಯಗಳ ಕೊರತೆ ಚರ್ಚೆಗೆ ಕಾರಣವಾಗಿದೆ. ಇದಕ್ಕೆ 2017ರಲ್ಲಿ ರಶ್ಮಿಕಾ ಅವರು ಯಶ್ ಅವರನ್ನು 'ಶೋಆಫ್ ಪರ್ಸನ್' ಎಂದು ಕರೆದಿದ್ದ ಹಳೆಯ ವಿವಾದವೇ ಕಾರಣವಿರಬಹುದೆಂದು ಹೇಳಲಾಗುತ್ತಿದೆ.
Read Full Story

12:54 PM (IST) Feb 27

ದೂರವಾದ ಪ್ರೇಮಿಗೆ ಪ್ರೇಯಸಿಯ ಭಯಾನಕ ಗಿಫ್ಟ್! ಜಿಮ್ ಟ್ರೈನರ್‌ಗೆ ಚಾಕು ಇರಿತ!

ಬೆಂಗಳೂರಿನ ಬಿಡದಿಯಲ್ಲಿ, ತನ್ನಿಂದ ದೂರವಾಗುತ್ತಿದ್ದಾನೆ ಎಂಬ ಕೋಪದಲ್ಲಿ ಪ್ರೇಯಸಿಯೊಬ್ಬಳು ತನ್ನ ಜಿಮ್ ಟ್ರೈನರ್ ಪ್ರಿಯಕರನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾಳೆ. ಐದಾರು ವರ್ಷಗಳ ಪ್ರೀತಿಗೆ ಮನಸ್ತಾಪವೇ ಮುಳುವಾಗಿದೆ. ಪ್ರೇಯಸಿ ಇದೀಗ ಪೊಲೀಸರಿಗೆ ಶರಣಾಗಿದ್ದಾಳೆ.

Read Full Story

12:39 PM (IST) Feb 27

ಯೋಗೇಶ್ ಗೌಡ ಹತ್ಯೆ ಪ್ರಕರಣ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು, 2 ತಿಂಗಳಲ್ಲಿ ಟ್ರಯಲ್ ಮುಗಿಸುವಂತೆ ಸುಪ್ರೀಂ ಸೂಚನೆ

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಾಮೀನು ಮಂಜೂರಾಗಿದೆ.

Read Full Story

08:19 AM (IST) Feb 27

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 84ನೇ ಹುಟ್ಟುಹಬ್ಬ - ಶಿಕಾರಿಪುರದಲ್ಲಿ ಸಂಭ್ರಮ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 84ನೇ ಹುಟ್ಟುಹಬ್ಬವನ್ನು ಈ ಬಾರಿ ಅವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, 'ಗೌರವ ಸಮರ್ಪಣಾ' ಸಮಾರಂಭ ಮತ್ತು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Read Full Story

07:55 AM (IST) Feb 27

ಫೆಬ್ರವರಿ 28ರಿಂದ ದ್ವಿತೀಯ ಪಿಯು ಪರೀಕ್ಷೆ-1 ಶುರು! 7.10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ

ಫೆ.28ರಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ 7.10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ 1,217 ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಸೇರಿದಂತೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

Read Full Story

07:25 AM (IST) Feb 27

ಮದ್ವೆ ಭರವಸೆ ನೀಡಿ ಸೆ*ಕ್ಸ್ ಕೇಸಲ್ಲಿ ಅರೆಸ್ಟ್‌ಗೆ ತಡೆ ಅಗತ್ಯ - ಕರ್ನಾಟಕ ಹೈಕೋರ್ಟ್

ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ವಂಚಿಸಿದ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವುದು ಕಡ್ಡಾಯವಲ್ಲದಿದ್ದರೂ, ಪೊಲೀಸರು ಬಂಧಿಸುತ್ತಿರುವುದಕ್ಕೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಬೆಳವಣಿಗೆಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

Read Full Story

06:30 AM (IST) Feb 27

ಬೆಂಗಳೂರು ನಗರವನ್ನು ಗ್ಯಾಸ್‌ ಚೇಂಬರ್‌ ಆಗಲು ಬಿಡಲ್ಲ - ಈಶ್ವರ್‌ ಖಂಡ್ರೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು, ಜಲ ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳ ಸಭೆ ನಡೆಸಿದರು. ದೆಹಲಿಯಂತೆ ಬೆಂಗಳೂರು ಗ್ಯಾಸ್ ಚೇಂಬರ್ ಆಗುವುದನ್ನು ತಡೆಯುವುದಾಗಿ ಅರಣ್ಯ ಸಚಿವರು ಹೇಳಿದ್ದಾರೆ.

Read Full Story

More Trending News