Karnataka Housing Projects : ಪಿಡಿಒಗಳಿಗೆ ಕ್ವಾರ್ಟರ್ಸ್‌ ನೀಡಲು ಸರ್ಕಾರ ಚಿಂತನೆ

Contributor Asianet   | Asianet News
Published : Dec 18, 2021, 11:19 AM IST
Karnataka  Housing Projects  :  ಪಿಡಿಒಗಳಿಗೆ ಕ್ವಾರ್ಟರ್ಸ್‌ ನೀಡಲು ಸರ್ಕಾರ ಚಿಂತನೆ

ಸಾರಾಂಶ

ಪಿಡಿಒಗಳಿಗೆ ಕ್ವಾರ್ಟರ್ಸ್‌ ನೀಡಲು ಸರ್ಕಾರ ಚಿಂತನೆ  ಕರ್ತವ್ಯ ನಿರ್ವಹಿಸುವ ಗ್ರಾಪಂ ವ್ಯಾಪ್ತಿಯಲ್ಲೇ ಮನೆ  ಪರಿಶೀಲನೆ ನಡೆಸುವ ಬಗ್ಗೆ ಸಚಿವ ಈಶ್ವರಪ್ಪ ಭರವಸೆ  

ವಿಧಾನ ಪರಿಷತ್‌(ಡಿ.18):  ಗ್ರಾಮ ಪಂಚಾಯಿತಿ (Grama Panchayat)  ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ನಿಯುಕ್ತಿಗೊಂಡ ಸ್ಥಳದಲ್ಲಿ ಸರ್ಕಾರದಿಂದಲೇ ಕ್ವಾರ್ಟರ್ಸ್‌ ನಿರ್ಮಿಸಿಕೊಡುವ ಬಗ್ಗೆ ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ (KS Eshwarappa) ಭರವಸೆ ನೀಡಿದರು. ಬಿಜೆಪಿಯ (BJP) ಡಾ.ತಳವಾರ ಸಾಬಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಿಡಿಒ (PDO) ಸೇರಿದಂತೆ ವಿವಿಧ ಅಧಿಕಾರಿಗಳು ತಮಗೆ ನಿಯುಕ್ತಿಗೊಳಿಸಿದ ಸ್ಥಳದಲ್ಲಿದ್ದು ಸಾರ್ವಜನಿಕರಿಗೆ ಲಭ್ಯವಿರಬೇಕಾಗುತ್ತದೆ. ನಾನಾ ಕಾರಣಗಳಿಂದ ಅವರು ನಿಯುಕ್ತಿ ಸ್ಥಳದಿಂದ ಬೇರೆ ಕಡೆಗೆ ವಾಸವಿರುತ್ತಾರೆ. ಹೀಗಾಗಿ ಅವರು ನಿಯುಕ್ತಿಗೊಂಡ ಸ್ಥಳದಲ್ಲಿ ಇರಲು ಕ್ವಾರ್ಟರ್ಸ್‌ ನಿರ್ಮಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ರಾಜ್ಯದ 5,962 ಗ್ರಾಮ ಪಂಚಾಯಿತಿಗಳ ಪೈಕಿ 5,294 ಗ್ರಾ,ಪಂ.ಗಳಲ್ಲಿ ಪಿಡಿಒ ಕಾರ್ಯನಿರ್ವಹಿಸುತ್ತಿದ್ದಾರೆ. 727 ಗ್ರಾ.ಪಂ.ಗಳ ಪಿಡಿಒ ಹುದ್ದೆ ಖಾಲಿ ಇದೆ. ಇಂತಹ ಕಡೆ ಸಮೀಪ ಇರುವ ಬೇರೆ ಗ್ರಾ.ಪಂ. ಪಿಡಿಒ ಕಾರ್ಯನಿರ್ವಹಿಸಬೇಕಾಗಿದೆ. ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಖಾಲಿ ಹುದ್ದೆ ಭರ್ತಿಗೆ ಕ್ರಮ:  ರಾಜ್ಯದಲ್ಲಿ ಪ್ರಸ್ತುತ ಖಾಲಿ ಇರುವ 717 ಗ್ರಾಮ ಪಂಚಾಯಿತಿ ಅಭಿವೃದ್ಧಿ (PDO) ಅಧಿಕಾರಿ, 635 ಕಾರ್ಯದರ್ಶಿ ಗ್ರೇಡ್‌-1 ಮತ್ತು 956 ಗ್ರೇಡ್‌-2 ಹುದ್ದೆ ಭರ್ತಿ ಮಾಡಲಾಗುವುದು. ಈ ನಿಟ್ಟಿನಲ್ಲಿ ಈ ಮೂರು ಹುದ್ದೆಗಳಿಗೆ ನೇಮಕ ಮಾಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಕಾಂಗ್ರೆಸ್‌ ಸದಸ್ಯ ಕೆ.ಹರೀಶ್‌ ಕುಮಾರ್‌ ಅವರ ಪ್ರಶ್ನೆಗೆ ಸಚಿವ ಈಶ್ವರಪ್ಪ ಉತ್ತರಿಸಿದರು.

ಗ್ರಾ,ಪಂ. ಕಾರ್ಯದರ್ಶಿ ಗ್ರೇಡ್‌-1 ವೃಂದದ ಅರ್ಹ ನೌಕರರು ಲಭ್ಯವಾದಂತೆ ಜ್ಯೇಷ್ಠತೆ ಮತ್ತು ಅರ್ಹತೆ ಆಧಾರದ ಮೇಲೆ ಬಡ್ತಿ ನೀಡಿ ಪಿಡಿಒ ಹುದ್ದೆಗೆ ಭರ್ತಿ ಮಾಡಲು ನಿರ್ದೇಶನ ನೀಡಲಾಗಿದೆ. ಅದೇ ರೀತಿ ವಿವಿಧ ಕಾರ್ಯದರ್ಶಿ ಹುದ್ದೆಗಳ ಭರ್ತಿಗೂ ಸೂಚಿಸಲಾಗಿದೆ. ಹೈದರಾಬಾದ್‌ ಕರ್ನಾಟಕ (Hyderabad Karnataka) ಪ್ರದೇಶ ಹೊರತುಪಡಿಸಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-2 ವೃಂದದ 263 ಹುದ್ದೆ ಮತ್ತು ಹೈ-ಕ ಪ್ರದೇಶದ 80 ಹುದ್ದೆ ಸೇರಿದಂತೆ 343 ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಾಗುವುದು, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದ ಹೈ-ಕ ಪ್ರದೇಶ ಹೊರತುಪಡಿಸಿದ 55 ಹುದ್ದೆ ಮತ್ತು ಹೈ-ಕ ಪ್ರೇಶದ 103 ಹುದ್ದೆ ಸೇರಿದಂತೆ 158 ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಆದಿವಾಸಿಗಳಿಗೆ ಮನೆ  :  ರಾಜ್ಯದ ವಿವಿಧ ಭಾಗದಲ್ಲಿ ಇರುವ ಬುಡಕಟ್ಟು (Tribes) ಸಮುದಾಯಕ್ಕೆ ಮನೆ ಕಟ್ಟಲು ಹೆಚ್ಚುವರಿಯಾಗಿ 30 ಸಾವಿರ ರು. ಸೇರಿಸಿ 1.50 ಲಕ್ಷ ರು.ನೀಡುವ ಬಗ್ಗೆ ಮುಖ್ಯಮಂತ್ರಿಗಳ (CM) ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ (Minister V Somanna) ಹೇಳಿದ್ದಾರೆ. ಬುಡಕಟ್ಟು ಸಮುದಾಯದವರು ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ 

ಇವರಿಗೆ ಯಾವ ಪಂಚಾಯಿತಿಗಳು ಮನೆ ನೀಡಲು ಮುಂದೆ ಬರುವುದಿಲ್ಲ. ಹೀಗಾಗಿ ಈ ಸಮುದಾಯ ಇರುವ ಕ್ಷೇತ್ರಗಳ ಸದಸ್ಯರು ಬುಡಕಟ್ಟು ಸಮುದಾಯವನ್ನು ಗುರುತಿಸಿ ಅವರಿಗೆ ಮನೆ (House) ನೀಡಲು ಕ್ರಮ ಕೈಗೊಳ್ಳಬೇಕು. ಮನೆ ನೀಡುವ ಸಂದರ್ಭದಲ್ಲಿ 15-20 ಸಾವಿರ ಮನೆಗಳನ್ನು ಈ ಸಮುದಾಯಕ್ಕೆ ನೀಡಲಾಗುವುದು ಎಂದು ಭರವಸೆ ನೀಡಿದರು. ರಾಜ್ಯದಲ್ಲಿ (Karnataka) 5 ಲಕ್ಷ ಮನೆಗಳನ್ನು ನೀಡಲು ಉದ್ದೇಶಿಸಲಾಗಿದ್ದು, ಬರುವ ಜನವರಿ ಅಂತ್ಯದೊಳಗೆ ಅರ್ಹರ ಫಲಾನುಭವಿಗಳ ಪಟ್ಟಿನೀಡಲು ಜಿಲ್ಲಾಧಿಕಾರಿಗಳಿಗೆ (DC) ಸೂಚನೆ ನೀಡಲಾಗಿದೆ ಎಂದರು.

8 ತಿಂಗಳಲ್ಲಿ 40 ಸಾವಿರಕ್ಕೂ ಹೆಚ್ಚು ಮನೆ : 

 ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ(Housing Plan) ಮುಂದಿನ ಎಂಟು ತಿಂಗಳಲ್ಲಿ 46,499 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗುವುದು ಎಂದು ಸಚಿವ ವಿ. ಸೋಮಣ್ಣ(V Somanna) ಭರವಸೆ ನೀಡಿದ್ದಾರೆ.

ಅಲ್ಲದೆ, 1 ಲಕ್ಷ ಮನೆಗಳ ಹಂಚಿಕೆಯ ಯೋಜನೆಯಲ್ಲಿ ಈಗಾಗಲೇ 46,499 ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಈವರೆಗೆ 20,156 ಮಂದಿ ಮಾತ್ರ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಸೆ.21ರ ಬದಲಿಗೆ ಅ.21ರ ವರೆಗೆ ಅರ್ಜಿ ಸಲ್ಲಿಕೆ ಕಾಲಾವಕಾಶ ವಿಸ್ತರಿಸಲಾಗಿದೆ. ಹೀಗಾಗಿ ನಗರದ ಎಂಟು ವಿಧಾನಸಭಾ ಕ್ಷೇತ್ರದ ಅರ್ಹರು ಅರ್ಜಿ ಸಲ್ಲಿಸಬಹುದು ಎಂದು ಕರೆ ನೀಡಿದ್ದಾರೆ. ಮಂಗಳವಾರ ಬೆಂಗಳೂರಿನ ಆಯ್ದ ಸಚಿವರು ಹಾಗೂ ಶಾಸಕರೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಮುಖ್ಯಮಂತ್ರಿಗಳ 1 ಲಕ್ಷ ವಸತಿ ಯೋಜನೆಯಡಿ ಸ್ವಾತಂತ್ರ್ಯದ ಅಮೃತೋತ್ಸವ ಸಂದರ್ಭದಲ್ಲಿ 10,000 ಮನೆ ಹಂಚಿಕೆ ಭರವಸೆ ನೀಡಲಾಗಿತ್ತು. ಸರ್ಕಾರ ಬದಲಾವಣೆ ಇತರೆ ಕಾರಣಗಳಿಂದ ಸಾಧ್ಯವಾಗಿಲ್ಲ. ಸದ್ಯ 316 ಎಕರೆಯಲ್ಲಿ 46,499 ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!