
ಬೆಂಗಳೂರು, (ಫೆ.04): ರಾಜ್ಯದಲ್ಲಿ ಚಿತ್ರಮಂದಿರಗಳ ಹೌಸ್ ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದ್ದು, ಇದೀಗ ಇದಕ್ಕೆ ಮಾರ್ಗಸೂಚಿ ಪ್ರಕಟಿಸಿದೆ.
ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಥಿಯೇಟರ್ ಹೌಸ್ ಪುಲ್ ಗೆ ಅನುಮತಿ ನೀಡಿದ್ದರೂ, ಶೇ.50ರಷ್ಟು ಭರ್ತಿಗೆ ಮಾರ್ಗಸೂಚಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಇಡೀ ಕನ್ನಡ ಚಿತ್ರರಂಗ ಇದಕ್ಕೆ ತೀವ್ರ ವ್ಯಕ್ತಪಡಿಸಿತ್ತು.
ಸ್ಯಾಂಡಲ್‌ವುಡ್ ಒತ್ತಡಕ್ಕೆ ಮಣಿದ ಸರ್ಕಾರ: ಥಿಯೇಟರ್ ಹೌಸ್ ಫುಲ್‌ಗೆ ಅನುಮತಿ
ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಬಳಿಕ ಚಿತ್ರಮಂದಿರಗಳಲ್ಲಿ ಶೇಕಡಾ 100 ರಷ್ಟು ಪ್ರೇಕ್ಷಕರ ಅನುಮತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕೆ ಸರ್ಕಾರ ಹೊರ ಮಾರ್ಗಸೂಚಿಯನ್ನು ರಿಲೀಸ್ ಮಾಡಿದ್ದು, ಇದರಲ್ಲಿರುವ ಎಲ್ಲಾ ಅಂಶಗಳನ್ನು ತಪ್ಪದೇ ಪಾಲಿಸಬೇಕೆಂದು ಸೂಚಿಸಿದೆ.
ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನಂತೆ ಈ ಅಂಶಗಳ ಕಟ್ಟು ನಿಟ್ಟಿನ ಅನುಷ್ಠಾನಕ್ಕೆ ವಿಶೇಷ ಗಮನ ವಹಿಸಲು ಸೂಚಿಸಿದೆ.
ಮಾರ್ಗಸೂಚಿ ಇಂತಿದೆ
* ಸಿನಿಮಾ ವೀಕ್ಷಿಸಲು ಸಮಯವೂ ಸೇರದಂತೆ ಎಲ್ಲಾ ಸಮಯಲ್ಲೂ ಪ್ರೇಕ್ಷಕರು ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಮೇಲ್ವಿಚಾರಣೆ ನಡೆಸುವುದು.
* ಗ್ರಾಹಕರು ಸಿನಿಮಾ ಟಿಕೆಟ್ ಬುಕ್ಕಿಂಗ್, ಖರೀದಿಸುವ ಸಮಯದಲ್ಲಿ ಅವರ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಬೇಕು. ಇದರಿಂದ ಸಂಪರ್ಕಿತರ ಮಾಹಿತಿ ಪಡೆಯುವುದು ಹಾಗೂ ಕೋವಿಡ್-19 ಪರೀಕ್ಷೆ ನಡೆಸಲು ಸಹಾಯವಾಗುವುದು
* ಹವಾ ನಿಯಂತ್ರಕಗಳು, ಯಾವುದೇ ಕೂಲಿಂಗ್ ವ್ಯವಸ್ಥೆಯ ಬಳಕೆಯಲ್ಲಿ ಸಿಪಿಡ್ಲ್ಯೂಡಿ ಮಾರ್ಗಸೂಚಿಯನ್ನು ಪಾಲಿಸುವುದು
* ಪ್ರತಿ ಪ್ರದರ್ಶನದಲ್ಲಿ ಎರಡು ಮಧ್ಯಂತರ ವಿರಾಮಗಳನ್ನು ನೀಡುವುದು
* ಪ್ರಮುಖ, ಆಯಕಟ್ಟಿನ ಸ್ಥಳಗಳಲ್ಲಿ ಕೋವಿಡ್-19ನ ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಡಬೇಕಾದು, ಮಾಡಬಾರದಾದ ವಿವರಗಳನ್ನು ಪ್ರದರ್ಶಿಸುವುದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ