ಮೀಸಲಾತಿಗೆ ಪಂಚಮಸಾಲಿ ಸ್ವಾಮೀಜಿಗಳ ಹೋರಾಟ: ಸಂಧಾನಕ್ಕೆ ಹೋದ ಸಚಿವರಿಗೆ ಮುಖಭಂಗ

By Suvarna News  |  First Published Feb 4, 2021, 3:00 PM IST

2ಎ ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಸಮುದಾಯದ ಮಠಾಧೀಶರು ನಡೆಸುತ್ತಿರುವ ಪಾದಯಾತ್ರೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಧಾನಕ್ಕೆ ಮುಂದಾಗಿದೆ.


ಚಿತ್ರದುರ್ಗ, (ಫೆ.04): ಪಂಚಮಸಾಲಿ ಮೀಸಲಾತಿ ಹೋರಾಟ ದಿನದಿಂದ ದಿನಕ್ಕೆ ಮತ್ತಷ್ಟು ಕಾವು ಪಡೆದುಕೊಳ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಪಂಚಮಸಾಲಿ ಸ್ವಾಮೀಜಿಗಳ ಜೊತೆ ಸಂಧಾನಕ್ಕೆ ಮುಂದಾಗಿದೆ.

 ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನಾನಂದ ಶ್ರೀಗಳ ಮನವೊಲಿಸಲು ಬೆಂಗಳೂರಿನಿಂದ ಸಚಿವ ಸಿ ಸಿ ಪಾಟೀಲ್ ಹಾಗೂ ಮುರಗೇಶ್ ನಿರಾಣಿ ನಿಯೋಗ ತೆರಳಿದೆ.

Latest Videos

undefined

ಮೀಸಲಾತಿಗಾಗಿ ರಾಜ್ಯದಲ್ಲೊಂದು ಬೃಹತ್ ಪಾದಯಾತ್ರೆ: ಪಂಚಲಕ್ಷ ನಡೆ ವಿಧಾನಸೌಧದ ಕಡೆ

ಸದ್ಯ ಸ್ವಾಮೀಜಿಗಳ ಪಾದಯಾತ್ರೆ ಹಿರಿಯೂರು ತಾಲ್ಲೂಕಿನ ಬುರುಜನರೊಪ್ಪ ಗ್ರಾಮ ತಲುಪಿದೆ. ಮೀಸಲಾತಿ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸ್ವಾಮೀಜಿಗಳು ಈಗಾಗಲೇ ಹೇಳಿದ್ದಾರೆ. ಮೀಸಲಾತಿ ಜಾರಿ ನಿಟ್ಟಿನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆಯ ಮಾತು ಹೇಳಿದ್ದಾರೆ. ಯಾವ ಸಚಿವರು ಬಂದರೂ ಮೀಸಲಾತಿ ಪರವಾಗಿರಲಿ. 

ವ್ಯತಿರಿಕ್ತತೆವಾಗಿ ಕಂಡುಬಂದರೆ ಮತ್ತಷ್ಟು ತೀವ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಈ ನಡುವೆ ಸಿಸಿ ಪಾಟೀಲ್ ಸಂಧಾನಕ್ಕೆ ಮುಂದಾಗಿದ್ದಾರೆ.  ಸಿಎಂ ಸೂಚನೆಯ ಮೇರೆಗೆ ಸಚಿವ ಸಿಸಿ ಪಾಟೀಲ್ ಹಾಗೂ ನಿರಾಣಿ ನೇತೃತ್ವದ ನಿಯೋಗ ಪಂಚಮಸಾಲಿ ಶ್ರೀಗಳ ಭೇಟಿ ಮಾಡಿ ಸನ್ಮಾನಿಸಿತು. 

ಹಾರ ಕಿತ್ತು ಹಾಕಿದ ಮಾಜಿ ಶಾಸಕ
ಹೌದು.. ಸ್ವಾಮೀಜಿಗಳಿಗೆ ಸನ್ಮಾನಿಸಿದ ಬಳಿಕ ಸ್ಥಳದಲ್ಲಿದ್ದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರಿಗೂ ಸಚಿವರು ಹಾರ ಹಾಕಿದರು.  ಕೂಡಲೇ ಹಾರ ಕಿತ್ತುಹಾಕಿ ಬಿಸಾಕಿ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದರು. ರೊಚ್ಚಿಗೆದ್ದಿದ್ದಂತ ವಿಜಯಾನಂದ ಕಾಶಪ್ಪನವರನ್ನು ಸಮಾಧಾನಿಸಲು ಸ್ವಾಮೀಜಿಗಳು ಹರಸಾಹಸ ಪಡುವಂತಾಯಿತು. ಸಂಧಾನಕ್ಕೆ ನಿಯೋಗಕ್ಕೆ ಮುಖಭಂಗವಾದಂತಾಯ್ತು.

click me!