PU ಪರೀಕ್ಷೆ ನೋಡಿಕೊಳ್ಳಲೆಂದೇ IAS ಅಧಿಕಾರಿಯನ್ನು ನೇಮಿಸಿದ ಸರ್ಕಾರ

Published : Feb 02, 2019, 06:18 PM IST
PU ಪರೀಕ್ಷೆ ನೋಡಿಕೊಳ್ಳಲೆಂದೇ IAS ಅಧಿಕಾರಿಯನ್ನು ನೇಮಿಸಿದ ಸರ್ಕಾರ

ಸಾರಾಂಶ

ಪಿಯು ಪರೀಕ್ಷೆಗಾಗಿ ನೂತನ ಐಎಎಸ್ ಅಧಿಕಾರಿ ನೇಮಕ! ಪ್ರಶಾಂತ್ ಕುಮಾರ್ ಮಿಶ್ರ ಅವರನ್ನು ನೇಮಿಸಿ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ! ಪರೀಕ್ಷೆಗಳ ಕೆಲಸಗಳು ಹೆಚ್ಚಾಗಿರೊ ಹಿನ್ನಲೆ, ಪರೀಕ್ಷೆ ಸುಸೂತ್ರವಾಗಿ ನಡೆಸಲು ನೇಮಕ.

ಬೆಂಗಳೂರು, [ಫೆ.02]: ಪಿಯುಸಿ ಪರೀಕ್ಷೆಗಳನ್ನು ನೋಡಿಕೊಳ್ಳಲು ಕರ್ನಾಟಕ ಸರ್ಕಾರ ನೂತನ ಐಎಎಸ್ ಅಧಿಕಾರಿಯನ್ನು ನೇಮಿಸಿದೆ.

ಪಿಯು ಪರೀಕ್ಷೆಗಾಗಿ ಐಎಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರನ್ನು ನೇಮಿಸಿ ಇಂದು [ಶನಿವಾರ] ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 ಮಾರ್ಚ್ 1 ರಿಂದ 18 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ

ಪರೀಕ್ಷೆಗಳ ಕೆಲಸಗಳು ಹೆಚ್ಚಾಗಿರೊ ಹಿನ್ನಲೆ ಹಾಗೂ ಪರೀಕ್ಷೆ ಸುಸೂತ್ರವಾಗಿ ನಡೆಸಲು ಪ್ರಶಾಂತ್ ಕುಮಾರ್ ಮಿಶ್ರ ಅವರನ್ನು ನೇಮಿಸಲಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರಾದ ಪಿ.ಸಿ. ಜಾಫರ್ ಅಡಿಯಲ್ಲಿ ನೂತನ ಐಎಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರು ಕಾರ್ಯನಿರ್ವಹಿಸಲಿದ್ದಾರೆ.

ಇದೇ ಮಾರ್ಚ್ 1ರಿಂದ ಮಾರ್ಚ್  18ರ ವರೆಗೆ ದ್ವಿತೀಯ ಪಿಯು ಪರೀಕ್ಷೆಗಳು ನಡೆಯಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ