ಬಿಜೆಪಿ ಶಾಸಕರ ವಿರುದ್ಧ ಬಿಜೆಪಿಗರಿಂದಲೇ ಪರ್ಸೆಂಟೇಜ್ ಆರೋಪ

By Web DeskFirst Published Feb 2, 2019, 2:01 PM IST
Highlights

ಬಿಜೆಪಿ ಶಾಸಕರ ವಿರುದ್ಧ ಬಿಜೆಪಿ ಕಾರ್ಯಕರ್ತರೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆರೋಪಗಳ ಸುರುಮಳೆಯನ್ನೇ ಸುರಿಸಿದ್ದಾರೆ.

ಕೊಪ್ಪಳ :  ಕೊಪ್ಪಳದಲ್ಲಿ ಬಿಜೆಪಿ ಶಾಸಕರ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗೂರ್ ವಿರುದ್ಧ ಹರಿಹಾಯ್ದಿದ್ದು,  ಶಾಸಕರು‌ ಮಾಡೊದೆಲ್ಲಾ ಪರ್ಸೆಂಟೇಜ್ ಗಾಗಿ ಎಂದು ಆರೋಪಿಸಿದ್ದಾರೆ.  

"

ಸ್ಥಳೀಯರು ಹಾಜರಿಲ್ಲದ ವೇಳೆ ಬಸವರಾಜ ದಡೇಸೂಗೂರ್ ಕಾಮಗಾರಿಯೊಂದಕ್ಕೆ ಪೂಜೆ ಸಲ್ಲಿಸಿ ತೆರಳಿದ್ದ ಹಿನ್ನೆಲೆಯಲ್ಲಿ ಈ ಆರೋಪ ಹೇಳಿ ಬಂದಿದೆ. 

ಪಂಚಮಸಾಲಿ ವಾಟ್ಸಪ್ ಗ್ರೂಪ್ ಅಲ್ಲಿ ಶಾಸಕರ ವಿರುದ್ಧ ತೀವ್ರ ಚರ್ಚೆ ನಡೆದಿದ್ದು,  ಶಾಸಕ ಬಸವರಾಜ ದಡೇಸುಗೂರ್ ವಿರುದ್ಧ ನೇರವಾಗಿಯೇ ಪರ್ಸೆಂಟೇಜ್  ಆರೋಪ ಮಾಡಿದ್ದಾರೆ. 

70% ಕಮಿಷನ್ 20% ಕಾಮಗಾರಿ 10% ಕಾಂಟ್ರಕ್ಟರ್ ಇದು ಕಾಮಗಾರಿ ನೀಡಬೇಕಾದ ಕಮಿಷನ್ ಎಂದು ಹೇಳಿದ್ದು, ಕಮಿಷನ್ ಕೊಟ್ಟೋರಿಗೆ ಮಾತ್ರ ಕೆಲಸ ಕೊಡುತ್ತಾರೆ. ಇಲ್ಲಿ‌ ಎಲ್ಲಾ ನಡೆಯುತ್ತಿರುವುದು ದುಡ್ಡಿನ ಮೇಲೆ. ಬಿಜೆಪಿ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ.  ಪರ್ಸೆಂಟೇಜ್ ಇದ್ದರೆ ಅವರೊಇಗೆ ಜನರು ಬೇಡ ಎಂದು ಆರೋಪಿಸಿದ್ದಾರೆ. 

click me!