
ಬೆಂಗಳೂರು : ರಾಜ್ಯ ರಾಜ್ಯಕಾರಣದಲ್ಲಿ ಹೆಚ್ಚು ಚರ್ಚೆಗೆ ಕಾರಣವಾದ ಆಪರೇಷನ್ ಕಮಲದಲ್ಲಿ ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ ಹೆಸರು ಕೇಳಿ ಬಂದಿದ್ದು, ಈ ಆರೋಪಕ್ಕೆ ಮೊದಲ ಬಾರಿಗೆ ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಅವರನ್ನು ತಾವು ಭೇಟಿ ಮಾಡಿದ್ದು ನಿಜವೆಂದು ಒಪ್ಪಿಕೊಂಡಿದ್ದಾರೆ. ಆದರೆ ಡಾಕ್ಟರ್ ಕಾನ್ಫರೆನ್ಸ್ ನಲ್ಲಿ ನಾವು ಭೇಟಿಯಾದೆವು.
ಈ ಭೇಟಿಯನ್ನು ಆಪರೇಷನ್ ಕಮಲ ಎಂದು ಬಿಂಬಿಸುವುದು ತಪ್ಪು, ಅವರ ಪಕ್ಷದಲ್ಲಿ ಇರುವ ವೈಮನಸ್ಸು, ವ್ಯತ್ಯಾಸಗಳನ್ನಸರಿ ಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಯಾವ ಆಪರೇಷನ್ ಕೂಡ ಇಲ್ಲ, ಆ ಪಕ್ಷದಲ್ಲಿನ ಅತೃಪ್ತಿ ಬಗ್ಗೆ ಅವರು ಹೇಳಿಕೊಳ್ಳುತ್ತಿದ್ದಾರೆ. ಯಾವ ಶಾಸಕರನ್ನು ಯಾರೇ ಇನ್ ಫ್ಲುಯೆನ್ಸ್ ಮಾಡುತ್ತೇನೆ ಎಂದರೂ ಅದು ಸಾಧ್ಯವಿಲ್ಲ ಎಂದರು.
ಈ ಸರ್ಕಾರದಲ್ಲಿ ಎಲ್ಲಾ ಶಾಸಕರನ್ನ ಒಗ್ಗಟ್ಟಿನಿಂದ ಇರಿಸಿಕೊಳ್ಳಲು ಸಾಧ್ಯವಾಗದಿದ್ದವರು ರಾಜ್ಯದ ಆಡಳಿತ ಹೇಗೆ ಮಾಡುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಅಶ್ವಥ್ ನಾರಾಯಣ್ ಕಿಡಿ ಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ