ಧಾರವಾಡ: ಎರಡೇ ವರ್ಷದಲ್ಲಿ 101 ಅನ್ನದಾತರು ಆತ್ಮಹತ್ಯೆ! 

By Suvarna NewsFirst Published Jul 9, 2024, 5:43 PM IST
Highlights

ಪ್ರಸಕ್ತ ವರ್ಷ ಕರ್ನಾಟಕದಲ್ಲಿ ವರುಣದೇವ ಕೃಪೆ ತೋರಿದರೂ, ಅನ್ನದಾತರ ಮರಣ ಮೃದಂಗ(ಆತ್ಮಹತ್ಯೆ) ನಿಲುತ್ತಿಲ್ಲ ಇದಕ್ಕೆ ಧಾರವಾಡ ಜಿಲ್ಲೆಯೂ ಹೊರತಾಗಿಲ್ಲ! ಹೌದು ಕಳೆದ ಒಂದು ವರ್ಷದ ಅವಧಿಯಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಬರೋಬ್ಬರಿ 10 ಅನ್ನದಾತರು ಆತ್ಮಹತ್ಯೆಗೆ ಶರಣಾಗಿರುವುದು ಅತ್ಯಂತ ಖೇದಕರ ಸಂಗತಿ. 

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಜು.9): ಪ್ರಸಕ್ತ ವರ್ಷ ಕರ್ನಾಟಕದಲ್ಲಿ ವರುಣದೇವ ಕೃಪೆ ತೋರಿದರೂ, ಅನ್ನದಾತರ ಮರಣ ಮೃದಂಗ(ಆತ್ಮಹತ್ಯೆ) ನಿಲುತ್ತಿಲ್ಲ ಇದಕ್ಕೆ ಧಾರವಾಡ ಜಿಲ್ಲೆಯೂ ಹೊರತಾಗಿಲ್ಲ! ಹೌದು ಕಳೆದ ಒಂದು ವರ್ಷದ ಅವಧಿಯಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಬರೋಬ್ಬರಿ 10 ಅನ್ನದಾತರು ಆತ್ಮಹತ್ಯೆಗೆ ಶರಣಾಗಿರುವುದು ಅತ್ಯಂತ ಖೇದಕರ ಸಂಗತಿ. 

95 ಜನಕ್ಕೆ ಪರಿಹಾರ: ಒಟ್ಟು 101 ರೈತರಲ್ಲಿ 75 ರೈತರು ಸಾಲಬಾಧೆಯಿಂದ ಮೃತಪಟ್ಟಿದ್ದಾರೆ ಇವರಲ್ಲಿ 73 ಜನಕ್ಕೆ ಪರಿಹಾರ ನೀಡಿದೆ. 26 ಪ್ರಕರಣ ತಿರಸ್ಕೃತವಾಗಿದ್ದು 2 ಪ್ರಕರಣ ಜಿಲ್ಲಾಧಿಕಾರಿಗಳ ಪರಿಶೀಲನೆ ಹಂತದಲ್ಲಿವೆ. 

Latest Videos

ಬೆಂಬಲ ಬೆಲೆಯಡಿ ಅರ್ಧಕ್ಕಿಂತ ಕಡಿಮೆ ರಾಗಿ ಖರೀದಿ: ರೈತರು ಮಾರಿದ್ದು 2.26 ಲಕ್ಷ ಟನ್

ಕೇಂದ್ರ-ರಾಜ್ಯ ಸರ್ಕಾರ ರೈತರ ಕಲ್ಯಾಣ,ಆರ್ಥಿಕತೆ ಸುಧಾರಣೆಗೆ ಅನೇಕ ಯೋಜನೆ ಅನುಷ್ಠಾನಗೊಳಿಸಿದೆ. ಆತ್ಮಹತ್ಯೆ ತಡೆಗೆ ಜಾಗೃತಿ ಮೂಡಿಸಿವೆ ಆದರೂ ಆತ್ಮಹತ್ಯೆ ನಿಲ್ಲುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದರೂ ಕೂಡ ಕೃಷಿ ಮಾರುಕಟ್ಟೆಯಲ್ಲಿ ರೈತ ಉತ್ಪಾದಿಸಿದ ಉತ್ಪನ್ನಕ್ಕೆ ಯೋಗ್ಯ ಬೆಲೆ ಲಭಿಸುತ್ತಿಲ್ಲ.
 
ಆತ್ಮಹತ್ಯೆಗೆ ಕಾಣಗಳನ್ನ ನೋಡುತ್ತಾ ಹೋದರೆ ಬರ, ಅತಿವೃಷ್ಟಿ, ಅನಾವೃಷ್ಟಿ, ನೆರೆಹಾವಳಿ, ಪ್ರವಾಹ ಅನೇಕ ಪ್ರಕೃತಿ ವಿಕೋಪ ರೈತರನ್ನು ಹೈರಾಣಾಗಿಸಿವೆ. ಮಾಡಿದ ಸಾಲ ತೀರಿಸಲಾಗದೆ ಬಹುತೇಕ ರೈತರು ಆತ್ಮಹತ್ಯೆ ದಾರಿ ತುಳಿದಿರುವುದು ಆತಂಕ ಮೂಡಿಸುವಂತಾಗಿದೆ.

ರಾಜ್ಯಮಟ್ಟದ ರೇನ್‌ಬೋ ಮೀಡಿಯಾ ಹಬ್ಬ ಆಯೋಜನೆ: ಪತ್ರಿಕೋದ್ಯಮದ ಪಲ್ಲಟಗಳು, ಮಾಧ್ಯಮ ಕ್ಸಿತಿಜ ಪುಸ್ತಕ ಬಿಡುಗಡೆ

ಕಳೆದ 2023-2025 ಜುಲೈ 6 ವರೆಗೆ ಜಿಲ್ಲೆಯ 101 ರೈತರು ಆತ್ಮಹತ್ಯೆಗೆ ಶರಣರಾಗಿದ್ದು ಮೃತರಲ್ಲಿ ಬಹುತೇಕರು ಸಾಲಬಾಧೆ ತಾಳಲಾರದೆ,ನೇಣು ಕುಣಿಕೆಗೆ ಕೊರಳೊಡ್ಡಿದ್ದರೆ ಕೆಲವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕ್ಕೊಂಡಿದ್ದಾರೆ. ಕೇಂದ್ರ-ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಿ ನೆರವಿಗೆ ಬರಬೇಕು ಎಂಬ ರೈತಕುಲದ ಒತ್ತಾಸೆಯ ನಿಟ್ಟಿನಲ್ಲಿ ಕೈ ಸರ್ಕಾರ ಕ್ರಮ ಕೈಗೊಳ್ಳುವುದೇ ಕಾದುನೋಡಬೇಕಿದೆ. ಉದ್ಯಮಿಗಳ ಸಾಲಮನ್ನಾ ಮಾಡುವ ಕೇಂದ್ರ ಸರ್ಕಾರ, ರೈತರ ಸಾಲಮನ್ನಾಕ್ಕೆ ಮೀನಾಮೇಷ ಏಕೆ? ಒಮ್ಮೆ ಸಂಪೂರ್ಣ ಸಾಲಮನ್ನಾ ಮಾಡುವ ಮೂಲಕ ರೈತರನ್ನು ಋಣಮುಕ್ತಗೊಳಿಸಲಿ ಎಂಬ ಕೂಗುಗಳು ಕೇಳಿ ಬರುತ್ತಿವೆ.

click me!