ಹೆಚ್ಚು ಸದಸ್ಯರನ್ನು ಒಳಗೊಂಡ ವಿದ್ಯಾರ್ಥಿ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 76ನೇ ಸಂಸ್ಥಾಪನಾ ದಿನವಾದ ಈ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತದೆ.
ಸಚಿನ್ ಕುಳಗೇರಿ ಎಬಿವಿಪಿ
ಬೆಂಗಳೂರು(ಜು.09): ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ 76ನೇ ಸಂಸ್ಥಾಪನಾ ದಿನವಾದ ಈ ದಿನವನ್ನು ದೇಶದಲ್ಲಿ ರಾಷ್ಟ್ರೀಯ ಪರ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತದೆ.
ಹೆಚ್ಚು ಸದಸ್ಯರನ್ನು ಒಳಗೊಂಡ ವಿದ್ಯಾರ್ಥಿ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 76ನೇ ಸಂಸ್ಥಾಪನಾ ದಿನವಾದ ಈ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತದೆ.
ಜೆಎನ್‌ಯುನಲ್ಲಿ ಚುನಾವಣೆಯಲ್ಲಿ ಲೆಫ್ಟ್ ವಿದ್ಯಾರ್ಥಿ ಘಟಕ ಕ್ಲೀನ್ ಸ್ಪೀಪ್, ಎಬಿವಿಪಿಗೆ ಹಿನ್ನಡೆ!
ಜುಲೈ 9, 1949ರಲ್ಲಿ ಸ್ಥಾಪನೆಯಾದ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತನ್ನ 76 ವರ್ಷದ ಸುದೀರ್ಘ ದಾರಿಯಲ್ಲಿ 'ವಿದ್ಯಾರ್ಥಿಶಕ್ತಿ - ರಾಷ್ಟ್ರಶಕ್ತಿ' ಎಂಬ ಸಂದೇ ಶದೊಂದಿಗೆ ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಸಾಮಾನ್ಯ ವಿದ್ಯಾರ್ಥಿಯನ್ನು ಈ ದೇಶದ ಶಕ್ತಿಯನ್ನಾಗಿ ಬದಲಾವಣೆ ಮಾಡುವ ಕಾರ್ಯವನ್ನು ಮಾಡಿ ಕೊಂಡು ಬರುತ್ತಿದೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರವನ್ನು ನಿರ್ಮಾಣಮಾಡುವ ಕಾರ್ಯವನ್ನು ತನ್ನ ಕಾರ್ಯಕರ್ತರ ಮೂಲಕ ಮಾಡುತ್ತಿದೆ. ಯಾವ ಸಂಘಟನೆಗಳು ಆ ದೇಶದ ಮಣ್ಣಿಗೆ ಪೂರಕವಾಗಿ ಕೆಲಸಮಾಡುತ್ತವೆಯೋ ಆ ಸಂಘಟ ನೆಗಳು ಬಾನೆತ್ತರಕ್ಕೆ ಬೆಳೆಯುತ್ತವೆ ಎಂಬ ಮಾತನ್ನು ಸ್ವಾಮಿ ವಿವೇಕಾನಂದರು ಹೇಳಿದಂತೆ ಭಾರತ ದೇಶದ ಈ ಮಣ್ಣಿಗೆ ಪೂರಕವಾಗಿ ಎಬಿವಿಪಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಇಂದುವಿಶ್ವದಲ್ಲೇ ಅತೀ ಹೆಚ್ಚು ಸದಸ್ಯರನ್ನು ಒಳಗೊಂಡ ಸಂಘಟನೆ ಎಬಿವಿಪಿ ಆಗಿದೆ.
ಕಾಶ್ಮೀರ ಚಲೋ
ಭಾರತ ದೇಶದ ಕಿರೀಟ ಜಮ್ಮು - ಕಾಶ್ಮೀರದ ಲಾಲ್ ಚೌಕದಲ್ಲಿ ತಿರಂಗಾ ಧ್ವಜವನ್ನು ಹಾರಿಸಿ ಎಂಬ ಸವಾಲನ್ನು ಭಯೋತ್ಪಾದಕರು ಹಾಕುತ್ತಾರೆ. ಆಗಿನ ಪ್ರಧಾನ ಮಂತ್ರಿ ವಿ.ಪಿ.ಸಿಂಗ್ ಅವರು ಜಮ್ಮು ಯಾರೂಹೋಗಬಾರದು ಎಂಬಹೇಳಿಕೆ ನೀಡುತ್ತಾರೆ. ಆದರೆದೇಶದ ಚಿಂತನೆ ಮಾಡುವ ಸಂಘಟನೆಯಾದ ಎಬಿವಿಪಿ ಹತ್ತು ಸಾವಿರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾಶ್ಮೀರ ಚಲೋ ಮೂಲಕ ಜಮ್ಮು ಕಾಶ್ಮೀರದ ಲಾಲ್ ಚೌಕದಲ್ಲಿ ತಿರಂಗಾ ಧ್ವಜವನ್ನು ಹಾರಿಸಿ ಕಾಶ್ಮೀರೆ ಭಾರತ ದೇಶದ ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ನೀಡಿತ್ತು.
ಬಾಂಗ್ಲಾ ನುಸುಳುಕೋರರ ಸರ್ವೇ
ರಾಷ್ಟ್ರದ ಗಡಿ ರೇಖೆಯನ್ನು ಅತಿಕ್ರಮವಾಗಿ ಪ್ರವೇಶಿಸಿ, ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿ, ನಮ್ಮ ನೆಲದ ಸಂಸ್ಕೃತಿ, ಸಂಸ್ಕಾರ ರಾಷ್ಟ್ರೀಯತೆಯ ಭಾವನೆಗಳಿಗೆ ಧಕ್ಕೆಯನ್ನು ಉಂಟುಮಾಡುತ್ತಿದ್ದ, ದೇಶದ ಸಾರ್ವಭೌಮತೆ ಸಮಗ್ರತೆಗೆ ಸವಾಲಾಗಿದ್ದ, ಬಾಂಗ್ಲಾದೇಶದ ಅತಿಕ್ರಮಣ ನುಸುಳುಕೋರರ ಕುರಿತು ಸರ್ವೆಯನ್ನು ಮಾಡಿ ರಾಷ್ಟ್ರದ ಆಡಳಿತ ವರ್ಗಕ್ಕೆ ಮನದಟ್ಟು ಮಾಡಿ, ಅದರ ವಿರುದ್ದ ದೇಶವ್ಯಾಪಿ ಬೃಹತ್ ಆಂದೋಲನವನ್ನ ಹಮ್ಮಿಕೊಂಡ ಈ ದೇಶದ ಏಕೈಕ ವಿದ್ಯಾರ್ಥಿ ಸಂಘಟನೆ ಅಭಾವಿಪ.
ಕೊರೋನಾ ಸಮಯದಲ್ಲಿ ಸೇವೆ
ದೇಶವು ಕೋವಿಡ್ ಬಾಧಿತವಾಗಿ ಜನಜೀವನ ಸ್ಥಗಿತಗೊಂಡು ಸಂಕಷ್ಟದಲ್ಲಿದ್ದಾಗ, ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಕೂಲಿ ಕೆಲಸವನ್ನುಮಾಡಲು ಬಂದ ಕಾರ್ಮಿಕರಿಗೆ ಫುಡ್ ಪ್ಯಾಕೆಟ್ ವಿತರಣೆ, ತಾಲೂಕು ಆಡಳಿತ, ಜಿಲ್ಲಾ ಆಡಳಿತದ ಜೊತೆಗೆ ಹೆಲ್ಡ್‌ಲೈನ್‌ಗಳಲ್ಲಿ ಎಬಿವಿಪಿಯ ಕಾರ್ಯಕರ್ತರು ಕಾರ್ಯನಿರ್ವಹಿಸಿದ್ದರು. ಆಸ್ಪತ್ರೆಗ ಳಲ್ಲಿ ಸ್ವಯಂಸೇವಕರಾಗಿ ಕೆಲಸಮಾಡಿದ್ದಲ್ಲದೆ, ಅಗತ್ಯ ಬಿದ್ದಾಗಮೃತ ರಾದವರ ಅಂತ್ಯ ಸಂಸ್ಕಾರವನ್ನೂ ಮಾಡಿ, ಯಾವ ಫಲಾಪೇಕ್ಷೆಯೂ ಇಲ್ಲದೆ ಎಬಿವಿಪಿ ಕಾರ್ಯಕರ್ತರು ದುಡಿದಿದ್ದರು.
ವಿದ್ಯಾರ್ಥಿಗಳಿಗೆಸಮಸ್ಯೆ ಆದಾಗ ಯಾವುದೇ ಸರ್ಕಾರವಿರಲಿ, ಆ ಸರ್ಕಾರದ ವಿರುದ್ಧ ಧ್ವನಿ ಎತ್ತಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ಕಾರ್ಯವನ್ನು ಎಬಿವಿಪಿ ಮಾಡುತ್ತಿದೆ. ಸರ್ಕಾರಿ ಕಾಲೇಜುಗಳಿಗೆ ಮೂಲಭೂತ ಸೌಲಭ್ಯ, ಹಾಸ್ಟೆಲ್ಗಳ ಸಂಖ್ಯೆ ಹೆಚ್ಚಳ, ಗುಣಮಟ್ಟದ ವಿದ್ಯಾರ್ಥಿಸ್ನೇಹಿ ಕಾಲೇಜು ಕ್ಯಾಂಪಸ್‌ಗಳ ನಿರ್ಮಾಣಕ್ಕೆ ಒತ್ತು, ವಿದ್ಯಾರ್ಥಿವೇತನ, ಸಿಇಟಿ ಹೋರಾಟ, ಇಂತಹ ಹಲವಾರು ಹೋರಾಟಗಳನ್ನು ಎಬಿವಿಪಿ ಕಟ್ಟಿಕೊಂಡು ಬಂದಿದೆ.
ಜೆಎನ್‌ಯು ಎಲೆಕ್ಷನ್‌ನಲ್ಲಿ ಕೇಸರಿ ಕಹಳೆ, ಎಲ್ಲಾ ನಾಲ್ಕು ಸ್ಥಾನಗಳಲ್ಲಿ ಎಬಿವಿಪಿ ಮುನ್ನಡೆ!
ಆಯಾಮ ಗತಿವಿಧಿಗಳ ಕಾರ್ಯ
ಎಬಿವಿಪಿಯು ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡುವ ಕಾರ್ಯ ಮಾಡುತ್ತಿದೆ. ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ಖೇಲೋ ಭಾರತ, ಚಿತ್ರಕಲೆ ಹಾಗೂಕಲೆಯಲ್ಲಿ ಆಸಕ್ತಿ ಇರುವವಿದ್ಯಾರ್ಥಿಗಳಿಗಾಗಿಕಲಾಮಂಚ್, ಪರಿಸರ ಮತ್ತು ಸ್ವಚ್ಛತೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ಸ್ಪೂಡೆಂಟ್ಸ್‌ಫಾರ್‌ಡೆವಲಪ್‌ಮೆಂಟ್, ಸೇವೆಯನ್ನು ಮಾಡುವ ಆಸಕ್ತಿ ಇರುವವಿದ್ಯಾರ್ಥಿಗಳಿಗಾಗಿಸ್ಪೂಡೆಂಟ್ ಫಾರ್ ಸೇವಾಕಾರ್ಯಕ್ರಮ ಗಳನ್ನು ಹೊಂದಿದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ನೀಟ್ ತರಬೇತಿ ಶಿಬಿರ, ಮೆಡಿಕಲ್ ವಿದ್ಯಾರ್ಥಿಗಳಿಗೆ 'ಮೆಡಿವಿಷನ್' ಎಂಜಿನಿಯರಿಂಗ್‌ವಿದ್ಯಾರ್ಥಿಗಳಿ ಗಾಗಿ 'ಸಾವಿಸ್ತರ', ಕೃಷಿ ವಿದ್ಯಾರ್ಥಿಗಳಿಗಾಗಿ 'ಅಗ್ರಿ ವಿಷನ್', ಫಾರ್ಮಾವಿದ್ಯಾರ್ಥಿಗಳಿಗಾಗಿ ಫಾರ್ಮವಿಷನ್', ವಿದ್ಯಾರ್ಥಿನಿಯರ ಸ್ವಯಂ ರಕ್ಷಣೆಗಾಗಿ 'ಮಿಷನ್ ಸಾಹಸಿ, ಐಐಟಿ ವಿದ್ಯಾರ್ಥಿಗಳಿಗಾಗಿ 'ಥಿಂಕ್ ಇಂಡಿಯಾ', ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಶೋಧ' ಹೆಸರಿನಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ.
ವಿದ್ಯಾರ್ಥಿ ಪರಿಷತ್‌ನಿಂದ ನಾಯಕರಾದವರು
ಈ ದೇಶದಲ್ಲಿ ಹಲವಾರು ವ್ಯಕ್ತಿಗಳು ವಿದ್ಯಾರ್ಥಿ ಪರಿಷತ್‌ನಲ್ಲಿ ಕಾರ್ಯನಿರ್ವಹಿಸಿದನಂತರನಾನಾಕ್ಷೇತ್ರದಲ್ಲಿ ಪ್ರಮುಖಸ್ಥಾನದಲ್ಲಿ ಇದ್ದಾರೆ. ರಾಜನೀತಿ ಕ್ಷೇತ್ರದಲ್ಲಿ ಈಗಿನ ಗೃಹ ಸಚಿವ ಅಮಿತ್ ಶಾ, ಕೇಂದ್ರದ ಮಂತ್ರಿಗಳಾದ ಜೆ.ಪಿ.ನಡ್ಡಾ, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಹಿಂದಿನ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು,ಸುಷ್ಮಾಸ್ವರಾಜ್, ತೆಲಂಗಾಣದಮುಖ್ಯ ಮಂತ್ರಿ ರೇವಂತ್ ರೆಡ್ಡಿ, ಕರ್ನಾಟಕದ ದಿ.ಅನಂತಕುಮಾರ್, ಶೋಭಾ ಕರಂದ್ಲಾಜೆ, ಸದಾನಂದಗೌಡ, ವಿಶ್ವೇಶ್ವರ ಹೆಗಡೆ ಕಾಗೇರಿ, ಎನ್. ರವಿಕುಮಾರ್, ತೇಜಸ್ವಿ ಸೂರ್ಯ ಹೀಗೆ ಹಲವು ನಾಯಕರು ಗರಡಿಯಲ್ಲಿ ಬೆಳೆದವರು.