'ರಾಮ'ನ ಹೆಸರು ಇರೊದಕ್ಕೇ ರಾಮನಗರ ಹೆಸರು ಬದಲಾವಣೆ? ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

By Ravi Janekal  |  First Published Jul 9, 2024, 5:07 PM IST

ಬೆಂಗಳೂರು ನಗರವನ್ನ 'ಗ್ರೇಟರ್ ಬೆಂಗಳೂರು' ಮಾಡ್ತಿವಿ ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ ಅಂದ್ರಲ್ಲ ಏನಾಯ್ತು? ಬೆಂಗಳೂರು ಯಾವ ರೀತಿ ಅಭಿವೃದ್ಧಿಯಾಗಿದೆ? ಎಂದು ಜೆಡಿಎಸ್‌ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ರಾಮನಗರ (ಜು.9): ಬೆಂಗಳೂರು ನಗರವನ್ನ 'ಗ್ರೇಟರ್ ಬೆಂಗಳೂರು' ಮಾಡ್ತಿವಿ ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ ಅಂದ್ರಲ್ಲ ಏನಾಯ್ತು? ಬೆಂಗಳೂರು ಯಾವ ರೀತಿ ಅಭಿವೃದ್ಧಿಯಾಗಿದೆ? ಎಂದು ಜೆಡಿಎಸ್‌ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಂದು ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿ ಹೆಸರಲ್ಲಿ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಗ್ರೇಟರ್ ಬೆಂಗಳೂರು ಅನ್ನೋದು ಲೂಟಿ ಮಾಡಲು ಪ್ಲಾನ್ ಎಂದು ಕಿಡಿಕಾರಿದರು.

Tap to resize

Latest Videos

undefined

ಮುಂದಿನ 2 ವರ್ಷಗಳಲ್ಲಿ ಖರ್ಗೆ ಪ್ರಧಾನಿ ಆಗ್ತಾರೆ: ಮಾಜಿ ಸಚಿವ ಚಿಂಚನಸೂರು ಭವಿಷ್ಯ!

2007 ರಲ್ಲಿ ಕುಮಾರಣ್ಣ(HD Kumaraswamy) ರಾಮನಗರ(Ramanagar) ವನ್ನ ಜಿಲ್ಲೆಯಾಗಿ ಘೋಷಣೆ ಮಾಡಿದ್ದು ಈಗ ಇತಿಹಾಸ. ಘೋಷಣೆ ಮಾಡಿ ಸುಮ್ಮನೆ ಕೂಡಲಿಲ್ಲ. ಅದರ ನಂತರ ಜಿಲ್ಲೆಯನ್ನ ಅಭಿವೃದ್ಧಿ ಮಾಡಿದ್ದಾರೆ. ಆದರೂ ಜಿಲ್ಲೆಯ ಜನರು, ಅಭಿವೃದ್ಧಿ ವಿಚಾರದಲ್ಲಿ ಸಮಾಧಾನ ಇಲ್ಲ. ಇನ್ನೂ ಅಭಿವೃದ್ಧಿಗೊಳಿಸಬೇಕೆಂಬ ಆಸೆ ಇದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡುತ್ತೇವೆ ಎಂದರು.

ರಾಮನ ಹೆಸರು ಇರುವ ಕಾರಣಕ್ಕೆ ಹೆಸರು ಬದಲಾವಣೆ?

ರಾಮನಗರ ಜಿಲ್ಲೆಗೆ 'ರಾಮ'ನ ಹೆಸರು ಇರುವ ಕಾರಣಕ್ಕೆ ಹೆಸರು ಬದಲಾವಣೆ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದ್ರೂ ಇರಬಹುದು, ಇದನ್ನ ಕಾಂಗ್ರೆಸ್ ಅವರೇ ಹೇಳಬೇಕು. ಅದರ ಬಗ್ಗೆ ನಾನು ಚರ್ಚೆ ಮಾಡೋದಿಲ್ಲ. ನಾವು ಯಾಕೆ ಜಾತಿ, ಧರ್ಮದ ಮಧ್ಯೆ ಒಡಕು ತರುವ ಸಂಘರ್ಷದ ಮಾತಾಡಬೇಕು. ನಮ್ಮ ಪಕ್ಷ, ನಾವು ಇವತ್ತಿಗೂ ಜಾತ್ಯಾತೀತರಾಗಿದ್ದೇವೆ ಎಂದರು 

ಇದೇ ವೇಳೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಉಳಿಸಿಕೊಳ್ಳುವ ವಿಚಾರ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  1994 ರಲ್ಲಿ ಎಂ ವರದೇಗೌಡ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾಗಿದ್ರು. ಅನಂತರ ಏನೆಲ್ಲ ಆಯ್ತೆಂಬುದು ಗೊತ್ತಿರೋ ವಿಚಾರ. ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಸಾಂಪ್ರಾದಾಯಿಕ ಮತಗಳಿವೆ. ಹಾಗಾಗಿ ನಮ್ಮ ಕಾರ್ಯಕರ್ತರು ಒಂದಷ್ಟು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಜನತೆಯ ಭಾವನೆ ಏನಿದೆಂಬುದನ್ನ ತಿಳಿದುಕೊಂಡು ಅಂತಿಮವಾಗಿ ರಾಜ್ಯ ಬಿಜೆಪಿ ಜೆಡಿಎಸ್ ನಾಯಕರೊಡಗೂಡಿ ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಮಾಡಲಾಗುತ್ತದೆ. ಚನ್ನಪಟ್ಟಣದಿಂದ ಸ್ಪರ್ಧಿಸುವವರಲ್ಲಿ ಸಿಪಿವೈ ಸಹ ಆಕಾಂಕ್ಷಿ ಎಂಬುದನ್ನ ಕುಮಾರಸ್ವಾಮಿಯವರು ಈಗಾಗಲೇ ಹೇಳಿದ್ದಾರೆ. ಆದರೆ ಹೈಕಮಾಂಡ್ ನಾಯಕರು ಏನು ಬದಲಾವಣೆ ಮಾಡುತ್ತಾರೋ ನೋಡಬೇಕು ಎಂದರು.

ಚನ್ನಪಟ್ಟಣ ಅಭ್ಯರ್ಥಿ ಅಂತಿಮವಾಗಿಲ್ಲ: ಯೋಗೇಶ್ವರ್‌ ಹೇಳಿಕೆಯನ್ನು ಸ್ಪಷ್ಟವಾಗಿ ಅಲ್ಲಗಳೆದ ಎಚ್‌ಡಿಕೆ

ನಾವು ಎನ್‌ಡಿಎ ಮೈತ್ರಿಕೂಟದ ಭಾಗ. ಹೀಗಾಗಿ ಕುಮಾರಣ್ಣ ಆಗಲಿ, ನಾವಾಗಲಿ ಯಾರು ಅಭ್ಯರ್ಥಿ ಎಂದು ಘೋಷಣೆ ಮಾಡಲು ಆಗೊಲ್ಲ. ಅಂತಿಮವಾಗಿ ಘೋಷಣೆ ಮಾಡಬೇಕಿರೋದು ಯಾರು? ಈ ಕ್ಷೇತ್ರದ ಜನರ ಭಾವನೆಗಳೇನು? ಎಲ್ಲವನ್ನೂ ಕ್ರೂಡಿಕರಿಸಿ ಕೇಂದ್ರ ನಾಯಕರಿಗೆ ಕಳುಹಿಸಿ ಸೂಕ್ತ ಅಭ್ಯರ್ಥಿಯನ್ನ ಘೋಷಣೆ ಮಾಡಲಾಗುತ್ತೆ ಎಂದರು.

click me!