ಐದು ಬೆರಳು ಸೇರಿದ್ರೆ ಕೈ ಮುಷ್ಠಿಯಾಯಿತು ಕೈ ಮುಷ್ಠಿಯಾಗಿ ಗ್ಯಾರಂಟಿಯಾಯ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತದೆ ಎಂದು ರಾಯಚೂರಿನಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಡಿಕೆ ಶಿವಕುಮಾರ ಭವಿಷ್ಯ ನುಡಿದರು.
ರಾಯಚೂರು (ಮಾ.14): ರಾಯಚೂರು ಇದೊಂದು ಶಕ್ತಿಯ ಭೂಮಿ, ಚಿನ್ನದ ನಾಡು. ನೀವು ಕೊಟ್ಟಂತಹ ಶಕ್ತಿಯಿಂದ ಈ ಭಾಗಕ್ಕೆ ಪ್ರಜಾಧ್ವನಿ ಯಾತ್ರೆಗೆ ಬಂದಿದ್ದೆವು. ಮಲ್ಲಿಕಾರ್ಜುನ ಖರ್ಗೆ ಮುಖಂಡತ್ವದಲ್ಲಿ ಗಾಂಧಿ ಬಾವಿಗೆ ಹೋಗಿ ನೀರು ತೆಗೆದು ಹೊರಗೆ ಚೆಲ್ಲಿದ್ದೆವು. ಈ ರಾಜ್ಯದಲ್ಲಿ ಭ್ರಷ್ಟಾಚಾರ, ಹೋಗಿ ಸಮೃದ್ಧ ರಾಜ್ಯವಾಗಲಿ ಎಂದು ಪ್ರಾರ್ಥಿಸಿದ್ದೆವು. ಪ್ರಾರ್ಥನೆಯಂತೆ ರಾಜ್ಯದಲ್ಲಿ ಬಿಜೆಪಿ ತೊಲಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂತು. ಅಧಿಕಾರಕ್ಕೆ ಬಂದ ತಕ್ಷಣವೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಇಂದು ರಾಯಚೂರಿನಲ್ಲಿ ನಡೆದ ಗ್ಯಾರಂಟಿ ಸಮಾವೇಶಕ್ಕೆ ಚಾಲನೆ ನೀಡಿದರು. ಬಳಿಕ ನೆರೆದ ಜನರನ್ನುದ್ದೇಶಿಸಿ ಗ್ಯಾರಂಟಿ ಯೋಜನೆಗಳು ತಲುಪಿವೆಯಾ? ಎಂದು ಕೇಳುತ್ತಲೇ ಮಾತು ಆರಂಭಿಸಿದ ಡಿಕೆ ಶಿವಕುಮಾರ, ಬಡವರಿಗೆ ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. 200 ಯೂನಿಟ್ ವರೆಗೆ ವಿದ್ಯುತ್ ಕೊಡಬೇಕು ಎಂದು ಅಂದು ಪ್ರಜಾ ಧ್ವನಿಯಾತ್ರೆ ದಿನ ಘೋಷಣೆ ಮಾಡಿದ್ದೆವು. ಇಂದಿರಾಗಾಂಧಿ ಮೊಮ್ಮಗಳಾದ ಪ್ರಿಯಾಂಕಾಗಾಂಧಿ ಸಮ್ಮುಖದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ 2000 ರೂಪಾಯಿ ಕೊಡಲು ಘೋಷಣೆ ಮಾಡಿದೆವು. ಮನೆಯ ರೇಷನ್ ಗೆ, ಎಣ್ಣೆಗೆ, (ಎಣ್ಣೆ ಎಂದರೆ ನಿಮ್ಮ ಎಣ್ಣೆ ಅಲ್ಲ ಎಂದು ಲೇವಡಿ ಮಾಡಿದರು) ಗ್ಯಾರಂಟಿ ಚೆಕ್ ಗೆ ಅಂದೇ ನಮ್ಮ ಹಾಗೂ ಸಿದ್ಧರಾಮಯ್ಯ ಕೈಲಿ ಸಹಿ ಮಾಡಿಸಿ ಮನೆ ಮನೆಗೆ ಹಂಚಿದ್ದೆವು. ಇವತ್ತು ಆ ಚೆಕ್ ಜಾರಿಯಾಗಿ, ಅನುಷ್ಠಾನಕ್ಕೆ ಬಂದಿದೆ ಎಂದರು.
undefined
ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ ಪರ ಎಚ್‌ಡಿಕೆ ಬ್ಯಾಟಿಂಗ್; ಡಿಕೆ ಸುರೇಶ್‌ಗೆ ಕೊಟ್ಟ ಎಚ್ಚರಿಕೆ ಏನು?
ಕಲ್ಯಾಣ ಕರ್ನಾಟಕಕ್ಕೆ 371(ಜೆ) ಕೊಟ್ಟಿದ್ದು ಮಲ್ಲಿಕಾರ್ಜುನ ಖರ್ಗೆಯವರು. ಈ ಭಾಗಕ್ಕೆ 371(ಜೆ) ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಈ ಬಗ್ಗೆ ನಿಮಗೆಲ್ಲ ಉಪಕಾರ ಸ್ಮರಣೆ ಇರಬೇಕು. ನೀರಾವರಿ ಇಲಾಖೆಯಲ್ಲಿ ಬಂಗಾರಪ್ಪನವರ ಸಂಪುಟದಲ್ಲಿ ನಾನು ಸಚಿವನಾಗಿದ್ದಾಗ, ನನ್ನನ್ನ ಬೋಸರಾಜು, ಬಸನಗೌಡ ಕೇಳಿಕೊಂಡ್ರು. ನಾನು ಅಧಿಕಾರಕ್ಕೆ ಬಂದಿದ್ದು, ಪೆನ್ ಸಿಕ್ಕಿರೋದು ಜನ ಸೇವೆಗಾಗಿ ಎಂದು ಬಂಗಾರಪ್ಪನ ಕೆರೆಗೆ 210 ಕೋಟಿಗೂ ಅಧಿಕ ಹಣ ಕೊಟ್ಟು ಮಾಡಿಸಿದೆವು. ಇದಲ್ಲದೇ ಮೈನರ್ ಇರಿಗೇಷನ್‌ನಿಂದ ಚೆಕ್ ಡ್ಯಾಂ 107 ಕೋಟಿ ರೂ. ಇವೆಲ್ಲವನ್ನೂ ನಿಮಗಾಗಿ ಮಾಡಿದ್ದೇವೆ. ಹೀಗಾಗಿ ಹಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಸರ್ಕಾರದ ವಿರುದ್ಧ ಕಿಡಿ:
ಜನಧನ್ ಅಕೌಂಟ್‌ಗೆ ಹಣ ಹಾಕ್ತಿವಿ ಅಂದ್ರು ಬಂತಾ? ಆದಾಯ ಡಬ್ಬಲ್ ಆಗುತ್ತಂದ್ರು ಏನಾದ್ರೂ ಆಯ್ತಾ? ನೀರು ಕೊಡ್ಲಿಲ್ಲ, ಅನುದಾನನೂ ಕೊಡ್ಲಿಲ್ಲ, ಸೂರು ಕೊಡ್ಲಿಲ್ಲ, ಅಚ್ಚೇ ದಿನ ಅಂತೂ ಬರಲೇ ಇಲ್ಲ. ಎಂಎಲ್ ಎ ಎಲೆಕ್ಷನ್ ನಲ್ಲಿ ನಮ್ ಕ್ಯಾಂಡಿಡೇಟ್ ಎದುರು ಸೋತವರನ್ನ ಬಿಜೆಪಿಯವರು ಎಂಪಿ ಕ್ಯಾಂಡೇಟ್ ಅಂತಿದಾರೆ. ಪರೋಕ್ಷವಾಗಿ ಬಿವಿ ನಾಯಕರ ಹೆಸರು ಪ್ರಸ್ತಾಪಿಸದೇ ಡಿಕೆ ಶಿವಕುಮಾರ ಟಾಂಗ್ ನೀಡಿದರು.
ಕಮಲ ಕೆರೆಯಲ್ಲಿದ್ರೆ ಚೆಂದ. ಕಾಂಗ್ರೆಸ್ ಈ ದೇಶದ ಶಕ್ತಿ. ನಾವು ಜಾರಿಗೆ ತಂದ ಯೋಜನೆಗಳು ನಾವೇನಾದರೂ ಒಂದೇ ಜಾತಿ ಒಂದೇ ಧರ್ಮಕ್ಕೆ ಕೊಡ್ತಿದೇವಾ? ಎಲ್ಲ ಜಾತಿ ಧರ್ಮದವರಿಗೆ ಕೊಡ್ತಿದ್ದೇವೆ. ಐದು ಬೆರಳು ಸೇರಿದ್ರೆ ಕೈ ಮುಷ್ಠಿಯಾಯಿತು ಕೈ ಮುಷ್ಠಿಯಾಗಿ ಗ್ಯಾರಂಟಿಯಾಯ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತದೆ ಎಂದು ಡಿಕೆ ಶಿವಕುಮಾರ ಭವಿಷ್ಯ ನುಡಿದರು.
ರಾಯಚೂರು: ಬೆಳಗ್ಗೆ 11 ಕ್ಕೆ ನಡೆಯಬೇಕಿದ್ದ ಗ್ಯಾರಂಟಿ ಸಮಾವೇಶ 1 ಗಂಟೆಯಾದ್ರೂ ಸಿಎಂ, ಡಿಸಿಎಂ ಸುಳಿವಿಲ್ಲ!
ನಮ್ಮ ಸರ್ಕಾರದ ಶಕ್ತಿ ನಿಮಗೆ ಧಾರೆ ಎರೆಯುತ್ತಿದ್ದೇವೆ. ಗ್ಯಾರಂಟಿ ಯೋಜನೆಯಿಂದ ನೀವು ಸಂತೋಷವಾಗಿದ್ದೀರಿ ನಿಮಗೆ ಉಪಕಾರದ ಸ್ಮರಣೆ ಇರಬೇಕು. ನುಡಿದಂತೆ ನಡೆದಿರುವ ಸರ್ಕಾರ ಯಾವುದಾದ್ರೂ ಇದ್ರೆ ಅದು ನಮ್ಮ ಸರ್ಕಾರ ಮಾತ್ರ. ಬಿಜೆಪಿಯವರು ಬೇಕಾದಷ್ಟು ಮಾತು ಕೊಟ್ಟಿದ್ರು. ಜನಧನ್ ಅಕೌಂಟ್ ಓಪನ್ ಮಾಡಿದ್ರೆ 15 ಲಕ್ಷ ಅಂತ ಹೇಳಿದ್ರು. ನಾಲ್ಕು ವರ್ಷ ಬಿಜೆಪಿ ಸರ್ಕಾರ ಇತ್ತು. ಒಂದು ಯೋಜನೆ ಜಾರಿ ಮಾಡಲಿಲ್ಲ. ಕೊನೆಗೂ ಅಚ್ಚೇ ದಿನ್ ಬರಲಿಲ್ಲ. ಕಮಲ ಕೆರೆಯಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ರೆ ಚೆಂದ ಎನ್ನುವ ಮೈತ್ರಿಗೆ ಟಾಂಗ್ ನೀಡಿದರು.