ತಾಯಿಗಾಗಿ 2 ಕೋಟಿ ರೂ.ಗೆ ಕಿಡ್ನಿ ಮಾರಾಟಕ್ಕೆ ಮುಂದಾಗಿ, 6 ಲಕ್ಷ ರೂ. ಕಳೆದುಕೊಂಡ ಚಾರ್ಟೆಡ್ ಅಕೌಂಟೆಂಟ್!

By Sathish Kumar KHFirst Published Mar 13, 2024, 6:24 PM IST
Highlights

ತಾಯಿಯನ್ನು ಆರೋಗ್ಯವಾಗಿ ನೋಡಿಕೊಳ್ಳಲು ಹಾಗೂ ಮೈತುಂಬಾ ಇದ್ದ ಸಾಲ ತೀರಿಸಲು ತನ್ನ ಕಿಡ್ನಿಯನ್ನು 2 ಕೋಟಿ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದ ಚಾರ್ಟೆಡ್‌ ಅಕೌಂಟೆಂಟ್ 6 ಲಕ್ಷ ರೂ.ಕಳೆದುಕೊಂಡಿದ್ದಾನೆ.

ಬೆಂಗಳೂರು (ಮಾ.13): ಮೈತುಂಬಾ ಸಾಲ, ಮನೆಯಲ್ಲಿ ಬಡತನ ಹಾಗೂ ಜೀವನದಲ್ಲಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ಅಕೌಂಟೆಂಟ್ ಆಗಿದ್ದರೂ, ತನ್ನ ಕಿಡ್ನಿಯನ್ನು 2 ಕೋಟಿ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದಾನೆ. ಆದರೆ, ಆನ್‌ಲೈನ್‌ನಲ್ಲಿ ಕಿಡ್ನಿ ವರ್ಗಾವಣೆಗೆ ಪ್ರೋಸೀಸರ್‌ಗಾಗಿ 6 ಲಕ್ಷ ರೂ. ಹಣವನ್ನು ಕಟ್ಟಿಸಿಕೊಂಡು ನಾಪತ್ತೆಯಾಗಿದ್ದಾರೆ. ಕಿಡ್ನಿ ಮಾರಾಟ ಮಾಡಲು ಮುಂದಾಗಿ ಮೋಸದ ಜಾಲಕ್ಕೆ ಸಿಲುಕಿದ್ದು, ಈಗ ಮತ್ತಷ್ಟು ಸಾಲಗಾರನಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮೋಸ ಹೋದ ವ್ಯಕ್ತಿ ಶ್ರೀನಿವಾಸ್ ಎನ್ನುವವರಾಗಿದ್ದಾರೆ. ಹಣ ಗಳಿಸಬೇಕು ಎಂಬ ಉದ್ದೇಶದಿಂದ ಎಂತೆಂತಹ ಕೃತ್ಯಗಳನ್ನು ಮಾಡುತ್ತಾರೆಂದು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬ ವ್ಯಕ್ತಿ ತಾನು ಚಾರ್ಟೆಟ್ ಅಕೌಂಟೆಂಟ್ ಆಫೀಸಿನಲ್ಲಿ ಹಿರಿಯ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರೂ, ಸಂಬಳ ಮಾತ್ರ ಜೀವನಕ್ಕೆ ಸಾಲುತ್ತಿಲ್ಲ. ಮನೆಯಲ್ಲಿ ತೀವ್ರ ಕಷ್ಟ ಎದುರಾಗಿದ್ದು, ಜೀವನಕ್ಕಾಗಿ ಮೈತುಂಬಾ ಸಾಲವನ್ನು ಮಾಡಿಕೊಂಡಿದ್ದಾರೆ. ಇನ್ನು ಇಎಂಐ ಹಾಗೂ ಕ್ರೆಡಿಟ್‌ ಕಾರ್ಡ್‌ ಸಾಲದಿಂದ ಬೇಸತ್ತು ಹೋಗಿದ್ದು, ತಾಯಿಯನ್ನು ಆರೋಗ್ಯವಾಗಿ ನೋಡಿಕೊಳ್ಳುವುದಕ್ಕೂ ಸಾಧ್ಯವಾಗಿಲ್ಲ.

ಲೋಕಸಭಾ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ ಸಂಸದ ಡಿ.ವಿ. ಸದಾನಂದಗೌಡ!

ತನ್ನ ಜೀವನದ ಮೇಲೆ ತನಗೆ ಜಿಗುಪ್ಸೆ ಬಂದಿದ್ದು, ತನ್ನ ಕಿಡ್ನಿಯನ್ನು ಮಾರಾಟ ಮಾಡುವುದಕ್ಕೆ ನಿರ್ಧರಿಸಿದ್ದಾನೆ. ಈ ವೇಳೆ ಆನ್‌ಲೈನ್‌ನಲ್ಲಿ ಯಾರಿಗಾದರೂ ಕಿಡ್ನಿ ಅಗತ್ಯವಿದೆಯೇ ಎಂದು ಹುಡುಕಿದ್ದಾನೆ.  ಆಗ ಒಂದು ಸೈಟ್‌ನಲ್ಲಿ ಕಿಡ್ನಿ ಕೊಟ್ಟರೆ 2 ಕೋಟಿ ರೂ. ಕೊಡುವುದಾಗಿ ಸಂದೇಶ ಹಾಕಿದ್ದರು. ಈ ವೆಬ್‌ಸೈಟ್‌ನಲ್ಲಿ ತೋರಿಸಲಾಗಿದ್ದ ಇಮೇಲ್ ಐಡಿಗೆ ತಾನು ಕಿಡ್ನಿ ಕೊಡುವುದಾಗಿ ತಿಳಿಸಿದ್ದಾನೆ. ನಂತರ, ಅವರ ಕಡೆಯಿಂದಲೂ ಇಮೇಲ್ ಸಂದೇಶ ಬಂದಿದೆ. ಅದರಲ್ಲಿ ಕಿಡ್ನಿ ಕೊಟ್ಟರೆ 2 ಕೋಟಿ ರೂ. ಕೊಡುವುದಾಗಿ ತಿಳಿಸಿದ್ದಾರೆ.

ನಂತರ, ನಿಮ್ಮ ರಕ್ತದ ಗುಂಪು ಹಾಗೂ ಆರೋಗ್ಯದ ಇತಿಹಾಸ (Blood group and health history) ಮಾಹಿತಿಯನ್ನು ಕೇಳಿದ್ದಾರೆ. ಅಲ್ಲಿ ಸಿಕ್ಕ ಲಿಂಕ್ ಕ್ಲಿಕ್ಕಿಸಿದಾಗ, ಕೆಲವು ಕಡೆಗಳಲ್ಲಿ ಪ್ರೊಸೀಸರ್ ಫೀ ಎಂದು ಹಂತ ಹಂತವಾಗಿ 6 ಲಕ್ಷ ರೂ. ಪಾವತಿಸಿಕೊಂಡಿದ್ದಾರೆ. ನಂತರ, ಕಿಡ್ನಿ ಪಡೆಯುವ ದಿನಾಂಕ ಮತ್ತು ಹಣ ವರ್ಗಾವಣೆ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುವುದಾಗಿ ತಿಳಿಸಿದ್ದಾರೆ. ನಂತರ, ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಇವರೇ ಇಮೇಲ್ ಕಳಿಸಿದರೂ ಯಾವುದೇ ಉತ್ತರ ಸಿಗದಿದ್ದಾಗ ಹಣವನ್ನು ಕಳೆದುಕೊಂಡಿರುವುದು ಖಚಿತವಾಗಿದೆ.

ಬೆಂಗಳೂರು ಹೊರ ವಲಯದಲ್ಲಿ ವಕೀಲರ ಬೆನ್ನಿಗೆ ಚಾಕು ಇರಿದ ದುಷ್ಕರ್ಮಿ!

ತಾನು ಮೋಸ ಹೋಗಿರುವುದು ತಿಳಿದ ನಂತರ ಶ್ರೀನಿವಾಸ್ ಅವರು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ 6 ಲಕ್ಷ ರೂ. ಕಳೆದುಕೊಂಡ ಬಗ್ಗೆ ದೂರು ನೀಡಿದ್ದಾರೆ. ಶ್ರೀನಿವಾಸ್ ನೀಡಿದ ದೂರಿನನ್ವಯ ಕೇಸ್ ದಾಖಲು ಆಗಿದೆ. ಆದರೆ, ಆನ್‌ಲೈನ್‌ನಲ್ಲಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.

click me!