ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಚಿವ ಸಂಪುಟ ಪುನರ್‌ರಚನೆ ಮತ್ತು ವಿಧಾನಪರಿಷತ್ ನೇಮಕಾತಿ ಕುರಿತು ಚರ್ಚಿಸಿದ್ದಾರೆ. ಅಂತಿಮ ಚರ್ಚೆಗಾಗಿ ಸಿದ್ದರಾಮಯ್ಯ ಮುಂದಿನ ವಾರ ದೆಹಲಿಗೆ ತೆರಳಲಿದ್ದಾರೆ.
ಬೆಂಗಳೂರು (ಮಾ.24) : ಸಚಿವ ಸಂಪುಟ ಪುನರ್‌ರಚನೆ ಹಾಗೂ ವಿಧಾನಪರಿಷತ್‌ನ ಖಾಲಿ ಸ್ಥಾನಗಳ ನೇಮಕದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಭಾನುವಾರ ಮಹತ್ವದ ಚರ್ಚೆ ನಡೆಸಿದ್ದು, ಅಂತಿಮ ಹಂತದ ಚರ್ಚೆಗೆ ಮುಂದಿನ ವಾರ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಇದೇ ವೇಳೆ ಸಚಿವ ಸಂಪುಟ ಪುನಾರಚನೆ ವಿಚಾರವಾಗಿಯೂ ಚರ್ಚಿಸಿದ್ದು ಏಪ್ರಿಲ್ ತಿಂಗಳಿನಲ್ಲಿ ಪುನರ್‌ರಚನೆ ಪ್ರಕ್ರಿಯೆ ನಡೆಸುವ ಬಗ್ಗೆ ಚರ್ಚೆಯಾಗಿದೆ. ಸಂಪುಟದಿಂದ ಐದಾರು ಮಂದಿ ಸಚಿವರನ್ನು ಆ ಜಾಗಕ್ಕೆ ಬೇರೆಯವರನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚೆಯಾಗಿದೆ.
ಯಾರನ್ನು ಕೈಬಿಡಬೇಕು ಹಾಗೂ ಹೊಸದಾಗಿ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ಅಂತಿಮ ಹಂತದ ಚರ್ಚೆ ನಡೆಸಲು ಮುಂದಿನ ವಾರ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಎಂಎಲ್‌ಸಿ ನಾಮ ನಿರ್ದೇಶನದ ಬಗ್ಗೆ ಚರ್ಚೆ:ಇನ್ನು ಖಾಲಿ ಆಗಿರುವ ನಾಲ್ಕು ವಿಧಾನಪರಿಷತ್ ಸದಸ್ಯ ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಆರಂಭದ ಬಗ್ಗೆಯೂ ಖರ್ಗೆ ಹಾಗೂ ಸಿದ್ದರಾಮಯ್ಯ ಭಾನುವಾರ ಚರ್ಚಿಸಿದ್ದಾರೆ.
ಇದನ್ನೂ ಓದಿ: ಸಿಎಂ ಪರ ಮಾತಾಡಿದ್ರೆ ಕೆಲವರಿಗೆ ಹೊಟ್ಟೆ ಕಿಚ್ಚು, 'ಹನಿಟ್ರ್ಯಾಪ್' ಕುರಿತು ಹೆಚ್‌ಸಿ ಮಹದೇವಪ್ಪ ಸ್ಫೋಟಕ ಹೇಳಿಕೆ!
ಒಂದು ವಾರದಲ್ಲಿ ಸಂಭವನೀಯರ ಪಟ್ಟಿ ಸಿದ್ಧಪಡಿಸಿ ದೆಹಲಿಯಲ್ಲಿ ಅಂತಿಮ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.ಈಗಾಗಲೇ ಯು.ಬಿ. ವೆಂಕಟೇಶ್, ಪ್ರಕಾಶ್ ರಾಥೋಡ್, ಸಿ.ಪಿ. ಯೋಗೇಶ್ವರ್, ತಿಪ್ಪೇಸ್ವಾಮಿ ಅವರಿಂದ ನಾಲ್ಕು ಪರಿಷತ್ ಸದಸ್ಯ ಸ್ಥಾನಗಳು ತೆರವಾಗಿವೆ. ವಿವಿಧ ಕ್ಷೇತ್ರಗಳಿಂದ ಅರ್ಹರನ್ನು ನಾಮನಿರ್ದೇಶನ ಮಾಡಲು ನಾಲ್ಕು ಸ್ಥಾನಗಳು ಖಾಲಿ ಇರಲಿವೆ. ಈ ಸ್ಥಾನಗಳಿಗೆ ಯಾರನ್ನು ನಾಮ ನಿರ್ದೇಶನ ಮಾಡಬೇಕು ಎಂಬ ಬಗ್ಗೆ ಮುಂದಿನ ವಾರದ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ವೇಳೆ ಅಂತಿಮವಾಗುವ ಸಾಧ್ಯತೆಯಿದೆ.
ಸಿಎಂ ತಾವೇ ದೆಹಲಿಗೆ ಬರುತ್ತೇನೆ ಎಂದಿದ್ದಾರೆ : ಖರ್ಗೆ ಸಿದ್ದರಾಮಯ್ಯ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಅವರು ನಮ್ಮ ಮನೆಗೆ ಬರುವುದಾಗಿ ಹೇಳಿದ್ದರು. ಆಗ ನಾನೇ ಆರೋಗ್ಯ ವಿಚಾರಿಸಲು ಬರುತ್ತೇನೆ ಎಂದಿದ್ದೆ. ಈಗ ಆರೋಗ್ಯ ವಿಚಾರಿಸಲು ಭೇಟಿ ಮಾಡಿದ್ದು ಇದು ಸೌಜನ್ಯದ ಭೇಟಿ ಅಷ್ಟೇ. ಸರ್ಕಾರಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆ ಸಂಭ್ರಮಾಚರಣೆ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲು ಅವರೇ ದೆಹಲಿಗೆ ಬರುತ್ತೇನೆ ಎಂದು ಹೇಳಿದ್ದಾರೆ. ಅವುಗಳ ಬಗ್ಗೆ ಅಲ್ಲೇ ಚರ್ಚೆ ಮಾಡುತ್ತೇವೆ ಎಂದರು
ಎಐಸಿಸಿ ಅಧ್ಯಕ್ಷ ಖರ್ಗೆ - ಸಿಎಂ ಸಿದ್ದು ಸಮಾಲೋಚನೆ ಸಂಪುಟ ಪುನಾರಚನೆ, ಪರಿಷತ್ ಖಾಲಿ ಸ್ಥಾನದ ಬಗ್ಗೆ ಖರ್ಗೆ, ಸಿದ್ದು ಚರ್ಚೆಮುಂದಿನ ತಿಂಗಳು ಸಂಪುಟಕ್ಕೆ ಸರ್ಜರಿ । 5-6 ಸಚಿವರಿಗೆ ಕೊಕ್ ಸಂಭವಅಂತಿಮ ಹಂತದ ಮಾತುಕತೆಗೆ ಸಿದ್ದು ಮುಂದಿನ ವಾರ ದೆಹಲಿಗೆ ಭೇಟಿ
ಖರ್ಗೆ-ಸಿದ್ದು ಮಹತ್ವದ ಚರ್ಚೆಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಂಪುಟ ಪುನಾರಚನೆ ಬೇಡಿಕೆ, ಹನಿಟ್ರ್ಯಾಪ್ ಗದ್ದಲದ ನಡುವೆಯೇ ಭಾನುವಾರ ಖರ್ಗೆ- ಸಿದ್ದರಾಮಯ್ಯ ಭೇಟಿಭೇಟಿ ವೇಳೆ ಬಾಕಿ ಉಳಿದಿರುವ ಸಂಪುಟ ಪುನಾರಚನೆ, ಪರಿಷತ್‌ನ ಖಾಲಿ ಉಳಿದಿರುವ 5 ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಸಮಾಲೋಚನೆ
ಸಂಪುಟ ಪುನಾರಚನೆ ವೇಳೆ 5-6 ಸಚಿವರನ್ನು ಕೈಬಿಟ್ಟು, ಅವಕಾಶ ವಂಚಿತ ಹಿರಿಯರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಬಗ್ಗೆ ನಾಯಕರ ಚರ್ಚೆಅಧಿವೇಶನ ಮುಗಿದ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ರಾಜ್ಯ ಸಂಪುಟಕ್ಕೆ ಸರ್ಜರಿ ಮಾಡಲು ರಾಜ್ಯ, ಕಾಂಗ್ರೆಸ್‌ನ ಕೇಂದ್ರ ನಾಯಕತ್ವದ ನಿರ್ಧಾರ
ಕೈಬಿಡುವ ಸಚಿವರು, ಸೇರ್ಪಡೆಯಾಗುವವರು, ಪರಿಷತ್ ಸದಸ್ಯರ ಪಟ್ಟಿಯೊಂದಿಗೆ ಅಂತಿಮ ಸಮಾಲೋಚನೆಗೆ ಸಿದ್ದು ಮುಂದಿನ ವಾರ ದಿಲ್ಲಿಗೆಸಿಎಂ ದೆಹಲಿ ಭೇಟಿ ಬಳಿಕ ಸಂಪುಟಕ್ಕೆ ಸೇರ್ಪಡೆಯಾಗುವವರ, ಕೈಬಿಡುವವರ ಪಟ್ಟಿ ಫೈನಲ್. ನಂತರ ಸಂಪುಟಕ್ಕೆ ಸರ್ಜರಿ ನಡೆಸಲು ನಿರ್ಧಾರ
ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ: ಯಾರೇ ಆಗಿದ್ದರೂ ಸುಮ್ಮನೆ ಬಿಡೋಲ್ಲ, ಮಟ್ಠಹಾಕುತ್ತೇವೆ, ಸಿಎಂ ಖಡಕ್ ವಾರ್ನಿಂಗ್
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಕುರಿತು ಸಿಎಂ-ಖರ್ಗೆ ಚರ್ಚೆಈಗಾಗಲೇ ಅಧ್ಯಕ್ಷ ಹುದ್ದೆ ಬಿಡುವ ಬಗ್ಗೆ ಡಿಕೆಶಿ ಮಾತುಈ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆ ಕುರಿತು ಚರ್ಚೆಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಒತ್ತಾಯಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಸಹ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್‌ನ 100 ಕಚೇರಿಗಳ ಶಂಕುಸ್ಥಾಪನೆ ಬಳಿಕ ತಾವೇ ಹೊಣೆಗಾರಿಕೆ ಬೇರೆಯವರಿಗೆ ಬಿಟ್ಟುಕೊಡುವುದಾಗಿ ಡಿ.ಕೆ. ಶಿವಕುಮಾರ್ ಬಹಿರಂಗ ಹೇಳಿಕೆ ನೀಡಿದ್ದಾರೆ. ಇನ್ನು ವರಿಷ್ಠರ ಭೇಟಿ ವೇಳೆಯೂ ಜಿ.ಪಂ., ತಾ.ಪಂ. ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿದ್ದರು ಎನ್ನಲಾಗಿದೆ.ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ರಾಜ್ಯದಲ್ಲಿ ಒಂದಲ್ಲಾ ಒಂದು ರೀತಿ ಚರ್ಚೆಗೆ ಬರುತ್ತಿದ್ದು, ಭಾನುವಾರ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರೂ ಈ ಕುರಿತು ಚರ್ಚಿಸಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಕ್ಷದ ಭವಿಷ್ಯ ಗಮನದಲ್ಲಿ ಇಟ್ಟುಕೊಂಡು ಲಿಂಗಾಯತರು ಅಥವಾ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬಹುದು ಎಂದು ಸಲಹೆ ನೀಡಿದ್ದಾರೆ. ಇದು ಸಲಹೆಯಷ್ಟೇ ನೀವೂ ಕರ್ನಾಟಕದವರೇ ಆಗಿರುವುದರಿಂದ ಅಂತಿಮ ನಿರ್ಧಾರವು ನಿಮಗೆ ಬಿಟ್ಟದ್ದು ಎಂದಿರುವುದಾಗಿ ಮೂಲಗಳು ತಿಳಿಸಿವೆ.