ಬೆಂಗಳೂರಿನ ಆನೇಕಲ್‌ನಲ್ಲಿ ರಥೋತ್ಸವದ ವೇಳೆ ನೂರು ಅಡಿ ಎತ್ತರದ ರಥ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮದ್ದೂರಮ್ಮ ಜಾತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿವೆ.
ಬೆಂಗಳೂರಿನ ಗ್ರಾಮೀಣ ಪ್ರದೇಶದ ಆನೇಕಲ್‌ನಲ್ಲಿ ನಡೆದ ಒಂದು ದುರಂತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಇಲ್ಲಿ ಒಂದು ಸಾಂಪ್ರದಾಯಿಕ ಸಮಾರಂಭದ ಸಂದರ್ಭದಲ್ಲಿ ನೂರು ಅಡಿ ಎತ್ತರದ ರಥವು ಇದ್ದಕ್ಕಿದ್ದಂತೆ ಬಿದ್ದಿದೆ. ಇದರ ಪರಿಣಾಮವಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಶನಿವಾರ ಸಂಜೆ ಮದ್ದೂರಮ್ಮ ಜಾತ್ರೆಗೆ ರಥವನ್ನು ಎಳೆದುಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ.
ಇನ್ನು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆಯುವ ರಥೋತ್ಸವದ ವೇಳೆ ಸುತ್ತಲಿನ ಗ್ರಾಮಸ್ಥರು ಅತಿ ಹೆಚ್ಚು ಎತ್ತರದ ರಥವನ್ನು ನಿರ್ಮಿಸಿ ಮದ್ದೂರಮ್ಮ ದೇವಸ್ಥಾನಕ್ಕೆ ಅರ್ಪಣೆ ಮಾಡುತ್ತಾರೆ. ಕಳೆದ ವರ್ಷವೂ ಇದೇ ರೀತಿ ರಥ ಮುರಿದು ಬಿದ್ದಿತ್ತು. ಈ ವರ್ಷವೂ ಕೂಡ ಶನಿವಾರ ಮದ್ದೂರಮ್ಮ ದೇವಸ್ಥಾನಕ್ಕೆ ರಥವನ್ನು ಎಳೆದುಕೊಂಡು ಹೋಗುವಾಗ ರಥ ವಾಲಿಕೊಂಡು ಬಿದ್ದಿದ್ದು, ಈ ಘಟನೆಯಲ್ಲಿ ತಮಿಳುನಾಡಿನ ಹೊಸೂರಿನ ನಿವಾಸಿಯೊಬ್ಬರು ಸಾವಿಗೀಡಾಗಿದ್ದಾರೆ. ಮತ್ತೊಬ್ಬರಿಗೆ ಗಂಭೀರ ಗಾಯವಾಗಿದೆ. ಉಳಿದಂತೆ ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ಬೆಂಗಳೂರು ಗ್ರಾಮೀಣ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Viral Video: ನೆಲಕ್ಕುರುಳಿದ ಬೆಂಗಳೂರು ಬಳಿಯ ಹುಸ್ಕೂರು ಮದ್ದೂರಮ್ಮ ಜಾತ್ರೆಯ 120 ಅಡಿ ತೇರು
ಇನ್ನು ಮದ್ದೂರಮ್ಮ ದೇವಾಲಯದ ರಥ ಬಿದ್ದಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಸ್ತೆಯಲ್ಲಿ ರಥವನ್ನು ನೂರಾರು ಜನರು ಸೇರಿ ಎಳೆದುಕೊಂಡು ಹೋಗುವಾಗ, 100 ಅಡಿ ಎತ್ತರದ ತೇರು ಇದ್ದಕ್ಕಿದ್ದಂತೆ ಒಂದು ಕಡೆಗೆ ವಾಲಿಕೊಂಡು ಧರೆಗುರುಳಿದೆ. ಇದಕ್ಕೆ ಸ್ಥಳೀಯರು ಹೇಳುವ ಮಾಹಿತಿ ಪ್ರಕಾರ ಜೋರಾದ ಗಾಳಿಯ ಕಾರಣದಿಂದಾಗಿ ರಥದ ಸಮತೋಲನವು ತಪ್ಪಿತು. ಆದ್ದರಿಂದ ಅದು ಇದ್ದಕ್ಕಿದ್ದಂತೆ ಒಂದು ಕಡೆಗೆ ಬಿದ್ದಿತು. ಕಳೆದ ವರ್ಷ ಇದೇ ಮದ್ದೂರಮ್ಮ ದೇವಸ್ಥಾನಕ್ಕೆ ಅರ್ಪಣೆ ಮಾಡಲು ನಿರ್ಮಿಸಲಾಗಿದ್ದ ಹಿಲಾಲಿಗೆ ಗ್ರಾಮದ 110 ಅಡಿ ಎತ್ತರದ ರಥವು ಕೂಡ ಇದೇ ರೀತಿಯಾಗಿ ಧರೆಗುರುಳಿ ದುರಂತ ಸಂಭವಿಸಿತ್ತು. ಆದರೆ, ಕಳೆದ ವರ್ಷ ನಡೆದ ಅವಘಡದಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ.
ಧರೆಗುರುಳಿದ ಮದ್ದೂರಮ್ಮ ಜಾತ್ರೆಯ ತೇರು – ಕುರ್ಜು ಕೆಳಗೆ ಸಿಲುಕಿ ಓರ್ವ ಸಾವು
– 150 ಅಡಿಗೂ ಹೆಚ್ಚು ಎತ್ತರವಿದ್ದ ತೇರು pic.twitter.com/NGLMiXpxiN
ಪ್ರತಿವರ್ಷ ನಡೆಯುವ ಮದ್ದೂರಮ್ಮ ಜಾತ್ರೆಯಲ್ಲಿ ಸಾವಿರಾರು ಜನರು ಸೇರುತ್ತಾರೆ. ಸುತ್ತಲಿನ ಹಳ್ಳಿಗಳು ಪೈಪೋಟಿಗೆ ಬಿದ್ದು ಅತ್ಯಂತ ಎತ್ತರದ ರಥಗಳನ್ನು ನಿರ್ಮಿಸಿ ದೇವರಿಗೆ ಅರ್ಪಣೆ ಮಾಡುತ್ತಾರೆ. ಅದೇ ರೀತಿ ಈ ರಥವನ್ನು ನಾಗಮಂಗಲ ಮತ್ತು ರಾಯಸಂದ್ರ ಗ್ರಾಮದ ಜನರು ಸೇರಿ ನಿರ್ಮಿಸಿದ್ದರು. ಆದರೆ, ರಥವನ್ನು ರಸ್ತೆಯ ಮೂಲಕ ಸಾವಿರಾರು ಜನರು ಸೇರಿಕೊಂಡು ಎಳೆದುಕೊಂಡು ದೇವಸ್ಥಾನಕ್ಕೆ ಹೋಗುವಾಗ ಜೋರಾದ ಗಾಳಿ ಬೀಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮದ್ದೂರಮ್ಮ ದೇವರಿಗೆ ಅರ್ಪಣೆ ಮಾಡುವ ರಥಗಳು ಪದೇ ಪದೇ ಹೀಗೆ ಅವಘಡಕ್ಕೆ ಒಳಗಾಗುತ್ತಿದ್ದರೂ, ಧಾರ್ಮಿಕ ನಂಬಿಕೆಯಿಂದ ಉಂಟಾಗುತ್ತಿರುವ ಅವಘಡಗಳನ್ನು ಏಕೆ ತಡೆಯುತ್ತಿಲ್ಲ ಎಂಬ ಪ್ರಶ್ನೆಗಳು ಎದುರಾಗಿವೆ.
ಇದನ್ನೂ ಓದಿ: ನಾಗತಿಹಳ್ಳಿ: ಸಂಸ್ಕೃತಿ ಹಬ್ಬ ಮತ್ತು ಗ್ರಾಮದ ಕಥನ!