7th pay commission ಕರ್ನಾಟಕ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ವರದಿ ಸಲ್ಲಿಕೆ ಅವಧಿ ವಿಸ್ತರಣೆ!

By Suvarna News  |  First Published May 16, 2023, 5:14 PM IST

ರಾಜ್ಯ ಸರ್ಕಾರಿ ನೌಕರರ ಸ್ಯಾಲರಿ ಹೆಚ್ಚಳ ಸೇರಿದಂತೆ ಹಾಗೂ ನೂತನ ವೇತನ ಶ್ರೇಣಿ ರಚನೆ ಕುರಿತ 7ನೇ ವೇತನ ಆಯೋಗದ ವರದಿ ಸಲ್ಲಿಕಿಗೆ ಅವಧಿ ವಿಸ್ತರಿಸಲಾಗಿದೆ. ಇದೀಗ ಮತ್ತೆ 6 ತಿಂಗಳ ಕಾಲಾವಕಾಶ ನೀಡಲಾಗಿದೆ. 


ಬೆಂಗಳೂರು(ಮೇ.16):ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಗೂ ಮುನ್ನವೇ ಮಹತ್ವದ ಆದೇಶವೊಂದು ಹೊರಬಿದ್ದಿದೆ. ಕರ್ನಾಟಕ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಹಾಗೂ ನೂತನ ವೇತನ ರಚನೆ ಕುರಿತು ವರದಿ ಸಲ್ಲಿಕೆ ಅವಧಿಯನ್ನು 6 ತಿಂಗಳಿಗೆ ವಿಸ್ತರಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಿಸಲು ಸುಧಾಕರ್ ರಾವ್ ನೇತೃತ್ವದಲ್ಲಿ 7ನೇ ವೇತನ ಆಯೋಗ ರಚನೆ ಮಾಡಲಾಗಿತ್ತು. ಈ ಆಯೋಗ ಈ ತಿಂಗಳಲ್ಲಿ ವರದಿ ಸಲ್ಲಿಕೆ ಮಾಡಬೇಕಿತ್ತು. ಆದರೆ ಹಲವು ಇಲಾಖೆಗಳ ಜೊತೆ ಸಮಿತಿಯ ಸಮಾಲೋಚನೆ ಕಾರ್ಯ ಪ್ರಗತಿಯಲ್ಲಿರುವ ಕಾರಣ ವರದಿ ಸಲ್ಲಿಕೆ ಅವಧಿಯನ್ನು 6 ತಿಂಗಳಿಗೆ ಮುಂದೂಡಿದೆ.

2022ರ ನವೆಂಬರ್ 19 ರಂದು ರಾಜ್ಯ ಸರ್ಕಾರ ನೌಕರರ ವೇತನ ಪರಿಷ್ಕರಣೆ ಹಾಗೂ ನೂತನ ವೇತನ ರಚನೆಗಾಗಿ 7ನೇ ವೇತನ ಆಯೋಗ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ರಚನೆಯಾದ 6 ತಿಂಗಳಲ್ಲಿ ವರದಿ ಸಲ್ಲಿಕೆ ಮಾಡಲು ಸೂಚಿಸಲಾಗಿತ್ತು. ಹೀಗಾಗಿ ಮೊದಲ ಆದೇಶದಂತೆ ಈ ತಿಂಗಳಲ್ಲಿ ಸಮಿತಿ ವರದಿ ಸಲ್ಲಿಸಬೇಕಿತ್ತು. ಇದೀಗ 2023ರ ನವೆಂಬರ್ ತಿಂಗಳ ಒಳಗೆ ವರದಿ ಸಲ್ಲಿಸಲು ಕಾಲವಕಾಶ ನೀಡಲಾಗಿದೆ.

Latest Videos

undefined

7th Pay Commission:ಈ ವರ್ಷ ಕೇಂದ್ರ ಸರ್ಕಾರಿ ನೌಕರರ ಡಿಎ ಶೇ.46ಕ್ಕೆ ಹೆಚ್ಚಳ!

ಕರ್ನಾಟಕ 7ನೇ ವೇತನ ಆಯೋಗ ತನ್ನ ಕಾರ್ಯಕಲಾಪ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅನುಕೂಲವಾಗುವಂತೆ ಅವಧಿ ವಿಸ್ತರಿಸಲಾಗಿದೆ. 19/05/20023ರಿಂದ 6 ತಿಂಗಳ ವರಗೆ ಅವಧಿ ವಿಸ್ತರಿಸಲಾಗಿದೆ ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಆದೇಶದ ಪ್ರಕಾರ, ರಾಜ್ಯ ಉಪಕಾರ್ಯದರ್ಶಿ ಉಮಾ ಕೆ ಆದೇಶ ಹೊರಡಿಸಿದ್ದಾರೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದಲ್ಲಿ ರಾಜ್ಯ ಸರ್ಕಾರ 7ನೇ ವೇತನ ಆಯೋಗ ರಚಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿಬಿ ರಾಮಮೂರ್ತಿ, ನಿವೃತ್ತ ಲೆಕ್ಕ ಪರಿಶೋಧಕ ನಿರ್ದೇಶಕ ಶ್ರೀಕಾಂತ್ ಬಿ ವನವಳ್ಳಿ, ಮೂಲಸೌಕರ್ಯ ಇಲಾಖೆ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಈ ಆಯೋಗದ ಸದಸ್ಯರಾಗಿದ್ದಾರೆ.

7th Pay Commission:ಈ ರಾಜ್ಯದ ಸರ್ಕಾರಿ ನೌಕರರ ಡಿಎ ಶೇ.3ರಷ್ಟು ಹೆಚ್ಚಳ

ರಾಜ್ಯ ಸರ್ಕಾರಿ ನೌಕರರ ವೇತನ, ಪಡೆಯುತ್ತಿರುವ ಸೌಲಭ್ಯ ಸೇರಿದಂತೆ ಎಲ್ಲಾ ವಿಚಾರಗಳ  ಕುರಿತು ಅಧ್ಯಯನ ನಡೆಸಿ 7ನೇ ವೇತನ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ತುಟ್ಟಿ ಭತ್ಯೆ ನೀಡುವಲ್ಲಿ ಸರ್ಕಾರ ಅನುಸರಿಸಬೇಕಾದ ನಿಯಮಗಳು, ಮನೆ ಬಾಡಿಗಗೆ ನೀಡಬೇಕಾದ ಭತ್ಯೆ, ಪರಿಹಾರ ಭತ್ಯೆ ಸೇರಿದಂತೆ ರಾಜ್ಯ ನೌಕರರಿಗೆ ಇರುವ ಭತ್ಯೆಗಳಲ್ಲಿ ಅನುಸರಿಸಬೇಕಾದ ಮಾನದಂಡಗಳ ಕುರಿತು ಈ ಆಯೋಗ ವರದಿ ಸಲ್ಲಿಸಲಿದೆ.
 

click me!