ವಿಶ್ವವಿದ್ಯಾಲಯದ ಲೈಬ್ರೆರಿಯಲ್ಲಿ ಸರಸ್ವತಿ ಪೂಜೆ ಮಾಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ವಿರೋಧ ವ್ಯಕ್ತಪಡಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ (ಫೆ.14): ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಸರಸ್ವತಿ ಪೂಜೆಗೂ ವಿರೋಧ ವ್ಯಕ್ತಪಡಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ವಿದ್ಯಾರ್ಥಿಯೊಬ್ಬನಿಂದ ಸರಸ್ವತಿ ಮೂರ್ತಿಗೆ ಪೂಜೆ ಸಲ್ಲಿಸಲು ಅಡ್ಡಿ ವ್ಯಕ್ತವಾಗಿದೆ. ಕಲಬುರಗಿ ವಿವಿಯ ಕೇಂದ್ರೀಯ ಗ್ರಂಥಾಲಯದಲ್ಲಿರುವ ಸರಸ್ವತಿ ಮೂರ್ತಿಗೆ ಬುಧವಾರ ಪೂಜೆ ಸಲ್ಲಿಸುವ ವೇಳೆ ಈ ಘಟನೆ ನಡೆದಿದೆ. ವಸಂತ ಪಂಚಮಿ ಹಿನ್ನಲೆ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಗ್ರಂಥಾಲಯದಲ್ಲಿದ್ದ ಸರಸ್ವತಿ ಮೂರ್ತಿಗೆ ಪೂಜೆ ಸಲ್ಲಿಕೆ ಮಾಡುತ್ತಿದ್ದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಂಶೋಧನಾ ವಿದ್ಯಾರ್ಥಿ ನಂದಕುಮಾರ್, ಪೂಜೆಗೆ ಅಡ್ಡಿಪಡಿಸಿದ್ದಾನೆ. ಇದೇನು ದೇವಸ್ಥಾನವೋ ವಿಶ್ವವಿದ್ಯಾಲಯವೋ ಎಂದು ಹೇಳುವ ಮೂಲಕ ಸಂಶೋಧನಾ ವಿದ್ಯಾರ್ಥಿ ನಂದಕುಮಾರ್ ಅಡ್ಡಿ ಮಾಡಿದ್ದಾರೆ. ವಿದ್ಯಾದೇವತೆ ಸರಸ್ವತಿ ಬಗ್ಗೆ ಅವಹೇಳನಕಾರಿಯಾಗಿಯೂ ಮಾತನಾಡಿದ್ದಾನೆ. ವಿದ್ಯಾದೇವತೆ ಸರಸ್ವತಿ ಪೂಜೆಗೆ ಅಡ್ಡಿ ಪಡಿಸಿರುವ ಎಡಪಂಥಿಯ ವಿಚಾರಧಾರೆಯ ವಿದ್ಯಾರ್ಥಿ ನಂದಕುಮಾರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಂದಕುಮಾರ ಪೂಜೆಗೆ ಅಡ್ಡಿಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಸಂಶೋಧನಾ ವಿದ್ಯಾರ್ಥಿ ನಂದಕುಮಾರ ನಡೆಗೆ ನೆಟ್ಟಿಗರ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿದೆ.
ಇದನ್ನು ತನ್ನ ಫೇಸ್‌ಬುಕ್ ಪುಟದಲ್ಲಿಯೂ ನಂದಕುಮಾರ್ ಹಂಚಿಕೊಂಡಿದ್ದಾನೆ. 3.41 ನಿಮಿಷದ ವಿಡಿಯೋದ ಆರಂಭದಲ್ಲಿ, ಇದೇನು ದೇವಸ್ಥಾನವೋ ವಿಶ್ವವಿದ್ಯಾಲಯವೋ ಅನ್ನೋದು ಗೊತ್ತಾಗುತ್ತಿಲ್ಲ. ಇಲ್ಯಾಕೆ ಪೂಜೆ ಮಾಡ್ತಾ ಇದ್ದೀರಿ? ಇದಕ್ಕೇನಾದರೂ ಅಧಿಕೃತವಾದ ಪತ್ರ ಇದೆಯೇ ಎಂದು ಅಧಿಕಾರಿಗಳ ಬಳಿ ಪ್ರಶ್ನೆ ಮಾಡಿದ್ದಾರೆ. ಗ್ರಂಥಾಲಯದ ಮುಖ್ಯಸ್ಥರಾಗಿರುವ ನಿಮ್ಮನ್ನು ಕೇಳುತ್ತಿದ್ದೇವೆ. ಇದನ್ನೆಲ್ಲಾ ಮಾಡೋದಿಕ್ಕೆ ನಿಮಗೆ ಅಧಿಕಾರ ಕೊಟ್ಟವರು ಯಾರು? ಇದೆಲ್ಲಾ ಏನು ಸರ್? ಇದೇನು ಧರ್ಮಚತ್ರವೇ? ಧಾರ್ಮಿಕ ಕೇಂದ್ರವೇ? ಏನ್ ಸರ್ ಇದೆಲ್ಲಾ? ಇದೇನು ಲೈಬ್ರೆರಿಯಾ? ಇದೇನು ಹಿಂದು ಧರ್ಮದ ಗುಡಿನಾ? ನೀವು ಏನ್ ಬೇಕಾದರೂ ಮಾಡಬಹುದಾ? ಪ್ರಶ್ನೆ ಮಾಡಿದರೆ, ಇದನ್ನು ಹುಡುಗರು ಮಾಡಿದ್ದಾರೆ ಎನ್ನುತ್ತೀರಿ. ಇಲ್ಲಿ ನೋಡಿದ್ರೆ ಸಿಬ್ಬಂದಿಗಳೇ ಸೇರಿಕೊಂಡಿದ್ದೀರಿ. ಪ್ರಶ್ನೆ ಮಾಡಿದ್ರೆ, ವಿಸಿಗೆ ಕೇಳಿ, ಉನ್ನತ ಅಧಿಕಾರಿಗಳಿ ಕೇಳಿ ಎನ್ನುತ್ತೀರಿ ಎಂದು ವಿದ್ಯಾರ್ಥಿ ಪ್ರಶ್ನೆ ಮಾಡಿದ್ದಾನೆ.
undefined
'ಆಹಾರದಲ್ಲಿ ಹುಳ, ಕೊಳಕು ತಲೆದಿಂಬು..ಇನ್ನೆಂದೂ ಭಾರತಕ್ಕೆ ಭೇಟಿ ನೀಡೋದಿಲ್ಲ' ಎಂದ ಸೆರ್ಬಿಯಾ ಟೆನಿಸ್ ತಾರೆ!
ವಸಂತ ಪಂಚಮಿ ಆಗಿರುವ ಕಾರಣ ಪೂಜೆ ಮಾಡುತ್ತಿದ್ದೇವೆ ಎಂದು ಸಿಬ್ಬಂದಿ ಹೇಳಿದರೂ ನಿಲ್ಲಿಸದ ವಿದ್ಯಾರ್ಥಿ, 'ವಸಂತ ಪಂಚಮಿಗೂ ವಿಶ್ವವಿದ್ಯಾಲಯಕ್ಕೂ ಏನು ಸಂಬಂಧ? ಇದೆನ್ನೆಲ್ಲಾ ನೀವು ಮನೆಯಲ್ಲಿ ಮಾಡಿಕೊಳ್ಳಬೇಕು. ಸಂವಿಧಾನದ ಹಕ್ಕಿನ ಪ್ರಕಾರ, ಧರ್ಮಕ್ಕೆ ಸಂಬಂಧಪಟ್ಟ ವಿಚಾರವನ್ನು ಮನೆಯಲ್ಲಿ ಮಾಡಿಕೊಳ್ಳಬೇಕು. ಇಲ್ಲಿ ಯಾಕೆ ಮಾಡುತ್ತೀರಿ? ಮುಂದೇನು ಮಾಡಬೇಕು ಅನ್ನೋದು ನಮಗೆ ಗೊತ್ತಿದೆ. ಇಲ್ಲಿ ಮನಸ್ಸಿಗೆ ಬಂದಿದ್ದೆಲ್ಲಾ ಮಾಡೋ ಹಾಗಿಲ್ಲ. ಇದೇನು ನೀವು ದೇವಸ್ಥಾನ ಅಂದುಕೊಂಡಿದ್ದೀರಾ? ಮನೆಯಲ್ಲಿ ಸ್ವೀಟೋ, ಹೋಳಿಗೆಯೋ ಅದನ್ನೆಲ್ಲಾ ಮಾಡ್ಕೊಂಡು ತಿನ್ನಿ, ಲೈಬ್ರೆರಿ ಅನ್ನೋ ಗೌರವವಿಲ್ಲ. ಗಂಟೆ ಬಾರಿಸ್ಕೊಂಡು, ಪೂಜೆ ಮಾಡ್ಕೊಂಡು ಇರೋರೇಲ್ಲಾ ಇಲ್ಲಿ ಯಾಕೆ ಇರ್ತಿರಾ? ಅಲ್ಲೇ ಗಂಟೆ ಬಾರಿಸ್ಕೊಂಡು ಪೂಜೆ ಮಾಡಿಕೊಂಡು ಇರಿ. ನೀತಿ ಪಾಠ ಹೇಳೋಕೆ ಬರಬೇಡಿ. ನೀವೆಲ್ಲಾ ಹುಡುಗರಿಗೆ ಏನ್ ಪಾಠ ಮಾಡ್ತೀರಾ? ಸಂವಿಧಾನದ ಪ್ರಕಾರ ಏನು ಮಾಡಬೇಕು ಅದನ್ನು ಮಾಡೋದಿಲ್ಲ. ಊದಿನಕಡ್ಡಿ ಹಚ್ಚಿ, ಪೂಜೆ ಮಾಡಿ ಇಡಿ ವಿಶ್ವ ವಿದ್ಯಾಲಯವನ್ನು ಗಬ್ಬೆಬ್ಬಿಸಿದ್ದೀರಿ. ಇದು ಕೇಂದ್ರ ವಿವಿ ಅಲ್ಲ, ಹಿಂದೂ ದೇವಸ್ಥಾನ ಅಂತಾ ಹೆಸರು ಬದಲಿಸಿಬಿಡಿ. ನಿಮ್ಮಂತವರಿಗೆಲ್ಲಾ, ಡಾಕ್ಟರೇಟ್, ಪದವಿ, ಪ್ರೊಫೆಸರ್ ಅನ್ನೋ ಹುದ್ದೆ ಬೇರೆ ಕೇಡು' ಎಂದು ಹೇಳಿದ್ದಾನೆ.
ಬೆಡ್‌ರೂಮ್‌ನಲ್ಲಿ ಮಕ್ಕಳ ಮೃತದೇಹ, ಬಾತ್‌ರೂಮ್‌ನಲ್ಲಿ ಗನ್: ಅಮೆರಿಕದಲ್ಲಿ ಸಾವಿಗೆ ಶರಣಾದ ಭಾರತೀಯ ಕುಟುಂಬ!