Kabini Dam: ಕಬಿನಿ ಡ್ಯಾಂನಿಂದ 9 ದಿನಗಳಲ್ಲೇ 4 ಟಿಎಂಸಿ ನೀರು ತಮಿಳುನಾಡಿಗೆ! ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ?

Kannadaprabha News   | Kannada Prabha
Published : Aug 22, 2026, 05:25 AM IST
Kabini Dam released 4 TMC water to Tamil Nadu in just 9 days

ಸಾರಾಂಶ

ಎಚ್‌.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ ರೈತರ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುವ ಬದಲು, ಒಳಹರಿವಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಈ ನೀರು ನೇರವಾಗಿ ತಮಿಳುನಾಡಿಗೆ ಸೇರುತ್ತಿದ್ದು, ಕಳೆದ ಒಂಬತ್ತು ದಿನಗಳಲ್ಲಿ ಜಲಾಶಯದಿಂದ 4 ಟಿಎಂಸಿ ನೀರು ಖಾಲಿ!

ಮೈಸೂರು (ಆ.22): ಎಚ್‌.ಡಿ.ಕೋಟೆ ತಾಲೂಕು ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯದಿಂದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನಾಲೆಗಳಿಗೆ ನೀರು ಹರಿಸುವ ಬದಲು ಒಳಹರಿವಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.

ನದಿಗೆ ಬಿಡುವ ನೀರು ನೇರವಾಗಿ ತಮಿಳುನಾಡಿನ ಮೆಟ್ಟೂರು ಜಲಾಶಯ ಸೇರುತ್ತಿದೆ. ಕೇರಳದ ವೈನಾಡಲ್ಲಿ ಸುರಿದ ಮಳೆಯಿಂದಾಗಿ ಜಲಾಶಯ (ಗರಿಷ್ಠ ಮಟ್ಟ 2284 ಅಡಿ) ಭರ್ತಿಯಾಗಿತ್ತು. ಈಗ ಜಲಾಶಯದ ನೀರಿನ ಮಟ್ಟ 2275.56 ಅಡಿಗೆ ಕುಸಿದಿದೆ. ಕಳೆದ ಒಂಬತ್ತು ದಿನಗಳಲ್ಲಿ ಜಲಾಶಯದಿಂದ 4 ಟಿಎಂಸಿ ನೀರು ಖಾಲಿ ಮಾಡಲಾಗಿದೆ. ಆ.13ರಂದು 2,282 ಅಡಿ ಇದ್ದ ನೀರಿನ ಮಟ್ಟ, ಶುಕ್ರವಾರ 2,275 ಅಡಿ ಇದೆ. 19.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ ಕೇವಲ 14.57 ಟಿಎಂಸಿ ನೀರುವ ಮಾತ್ರ ಲಭ್ಯವಿದೆ.

ಜಲಾಶಯಗಳ ಇಂದಿನ ನೀರಿನ ಮಟ್ಟ (21-8-2026)

  • ಕಬಿನಿ 78% 2284 2276.25
  • ಹೇಮಾವತಿ 86% 2922 2916.45
  • ತುಂಗಭದ್ರಾ 89% 1633 1630.50
  • ಸೂಪಾ(ಮೀ.) 59% 564 548.00
  • ಕೆಆರ್‌ಎಸ್ 62% 124.80 109.05
  • ಘಟಪ್ರಭಾ 100% 2175 2174.50
  • ಲಿಂಗನಮಕ್ಕಿ 56% 1819.12 1795.25
  • ಭದ್ರಾ 82% 2158 2147.10
  • ಹಾರಂಗಿ 98% 2859 2858.25
  • ಆಲಮಟ್ಟಿ(ಮೀ.) 99% 519.60 519.50
  • ನಾರಾಯಣಪುರ(ಮೀ.) 98% 492.12 492.10
  • ಮಲಪ್ರಭಾ 58% 2079.50 2066.10

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಿಳೆಯರಷ್ಟೇ ‘ಹೋಮ್‌ ಮೇಕರ್‌’ ಅಲ್ಲ, ಪುರುಷರು..! ಹೈಕೋರ್ಟ್ ಮಹತ್ವದ ತೀರ್ಪು, ಏನಿದು ಪ್ರಕರಣ?
ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ: ಎಸ್‌ಐಆರ್ ಸಲ್ಲಿಸದ 44 ಲಕ್ಷ ಮತದಾರರಿಗೆ ನೋಟಿಸ್ ನೀಡಲು ಸಿದ್ಧತೆ