ಕೊಟ್ಟಿರುವ ಬರ ಪರಿಹಾರವನ್ನೂ ರೈತರ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ಬರಗಾಲದಲ್ಲಿ ರೈತರಿಗೆ ಸಂಕಷ್ಟ ಇದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿದೆ. ಅದನ್ನೂ ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡರೆ ರೈತರಿಗೆ ಹೇಗೆ ಪರಿಹಾರ ನೀಡಿದಂತೆ ಆಗುತ್ತೆ ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹಾವೇರಿ(ಮೇ.16): ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ವಿತರಿಸುವಾಗ ರಾಜ್ಯ ಸರ್ಕಾರ ರೈತರಿಗೆ ಈ ಮೊದಲು ಕೊಟ್ಟಿದ್ದ ₹2 ಸಾವಿರ ಕಡಿತ ಮಾಡಿಕೊಂಡು ನೀಡುತ್ತಿದ್ದು, ಇದು ರೈತರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊಟ್ಟಿರುವ ಬರ ಪರಿಹಾರವನ್ನೂ ರೈತರ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ಬರಗಾಲದಲ್ಲಿ ರೈತರಿಗೆ ಸಂಕಷ್ಟ ಇದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿದೆ. ಅದನ್ನೂ ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡರೆ ರೈತರಿಗೆ ಹೇಗೆ ಪರಿಹಾರ ನೀಡಿದಂತೆ ಆಗುತ್ತೆ ಎಂದು ಪ್ರಶ್ನಿಸಿದರು.
undefined
ಕೇಂದ್ರ ನೀಡಿದ ಬರ ಹಣ ರೈತರಿಗೆ ಪಾವತಿ: ಸಚಿವ ಕೃಷ್ಣ ಬೈರೇಗೌಡ
ಕಾಂಗ್ರೆಸ್ಸಿನ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದು, ರಾಜ್ಯದಲ್ಲಿ ಬರ ಬಿದ್ದಿರುವ ಹಿನ್ನೆಲೆಯಲ್ಲಿ ಮೊದಲು ಕರ್ನಾಟಕದಿಂದಲೇ ರೈತರ ಸಾಲ ಮನ್ನಾ ಮಾಡುವುದನ್ನು ಪ್ರಾರಂಭಿಸಲಿ ಎಂದು ಅವರು ಒತ್ತಾಯಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರವನ್ನು ಬಿಟ್ಟು ಎನ್‌ಡಿಆರ್‌ಎಫ್ ಮಾನದಂಡದನ್ವಯ ಎರಡು ಪಟ್ಟು ಪರಿಹಾರ ಕೊಟ್ಟಿದ್ದೇವೆ. ಈಗ ಇವರು ಕೊಟ್ಟಿರುವ ಜುಜುಬಿ ₹2 ಸಾವಿರದಲ್ಲೂ ಕಡಿತ ಮಾಡಿಕೊಳ್ಳುವುದು ಸರಿಯಲ್ಲ, ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಕೂಡಲೇ ₹2 ಸಾವಿರ ಕಡಿತ ಮಾಡಿಕೊಳ್ಳುವುದನ್ನು ಹಾಗೂ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸದಿದ್ದರೆ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.