ಲೈಂಗಿಕ ದೌರ್ಜನ್ಯ ಆರೋಪ: ಭಾರತಕ್ಕೆ ಬರದೆ ಕೈಕೊಟ್ಟ ಪ್ರಜ್ವಲ್‌..!

By Kannadaprabha News  |  First Published May 16, 2024, 5:30 AM IST

ದೇಶ ತೊರೆದ ದಿನವೇ ರಿರ್ಟನ್‌ ಟಿಕೆಟ್‌ ಅನ್ನು ಪ್ರಜ್ವಲ್ ಕಾಯ್ದಿಸಿದ್ದರು. ಅಲ್ಲದೆ ತಮ್ಮ ವಿರುದ್ಧ ಲೈಂಗಿಕ ಹಗರಣದ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಕೋರಿ ಎಸ್‌ಐಟಿಗೆ ವಕೀಲರ ಮುಖೇನ ಪ್ರಜ್ವಲ್ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಪೂರ್ವನಿಗದಿಯಂತೆ ಮೇ. 15ರಂದು ಮರಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.


ಬೆಂಗಳೂರು(ಮೇ.16):  ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ನಂತರ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಮೇ.15ರಂದು ಸ್ವದೇಶಕ್ಕೆ ಮರಳಿ ಎಸ್‌ಐಟಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂಬ ನಿರೀಕ್ಷೆ ಕೊನೆಗೂ ಹುಸಿಯಾಗಿದೆ. ಬುಧವಾರ ಪ್ರಜ್ವಲ್‌ ಭಾರತಕ್ಕೆ ಮರಳಿಲ್ಲ. ಈಗ ಎಸ್‌ಐಟಿಯ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.

ದೇಶ ತೊರೆದ ದಿನವೇ ರಿರ್ಟನ್‌ ಟಿಕೆಟ್‌ ಅನ್ನು ಪ್ರಜ್ವಲ್ ಕಾಯ್ದಿಸಿದ್ದರು. ಅಲ್ಲದೆ ತಮ್ಮ ವಿರುದ್ಧ ಲೈಂಗಿಕ ಹಗರಣದ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಕೋರಿ ಎಸ್‌ಐಟಿಗೆ ವಕೀಲರ ಮುಖೇನ ಪ್ರಜ್ವಲ್ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಪೂರ್ವನಿಗದಿಯಂತೆ ಮೇ. 15ರಂದು ಮರಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.

Tap to resize

Latest Videos

5 ಬಾರಿ ಟೆಕೆಟ್ ಬುಕ್ ಮಾಡಿ ಕ್ಯಾನ್ಸಲ್, 7.5 ಲಕ್ಷ ರೂ ಖರ್ಚು ಮಾಡಿದರೂ ಭಾರತಕ್ಕೆ ಬರ್ಲಿಲ್ಲ ಪ್ರಜ್ವಲ್!

ಅಲ್ಲದೆ ಇದಕ್ಕೆ ಪೂರಕವಾಗಿ ಪ್ರಜ್ವಲ್‌ ಜರ್ಮನಿಯಿಂದ ಕಾಯ್ದಿರಿಸಿದ್ದ ವಿಮಾನದ ಟಿಕೆಟ್‌ಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅಂತಿಮವಾಗಿ ಸ್ವದೇಶಕ್ಕೆ ಮರಳದೆ ವಿದೇಶದಲ್ಲಿ (ಯುರೋಪ್‌ ದೇಶಗಳಲ್ಲಿ) ಅವರು ಅಜ್ಞಾತವಾಸವನ್ನು ಮುಂದುವರೆಸಿದ್ದಾರೆ. ಹೀಗಾಗಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್‌ ವಿರುದ್ಧ ಎಸ್‌ಐಟಿಯ ಮುಂದಿನ ಕಾನೂನು ಕ್ರಮದ ಬಗ್ಗೆ ಚರ್ಚೆ ಆರಂಭವಾಗಿದೆ.

ಎಲ್ಲಿದ್ದಾರೆ ಪ್ರಜ್ವಲ್‌?

ಲೋಕಸಭಾ ಚುನಾವಣೆಗೆ ಮತದಾನಕ್ಕೂ ಎರಡು ದಿನಗಳ ಮುಂಚೆ ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದೆ ಎನ್ನಲಾದ ಲೈಂಗಿಕ ಹಗರಣದ ಅಶ್ಲೀಲ ದೃಶ್ಯಾವಳಿಗಳಿಂದ ತುಂಬಿದ ಪೆನ್‌ ಡ್ರೈವ್‌ ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಈ ಬೆಳವಣಿಗೆ ಬಳಿಕ ಅಧೀರರಾದ ಪ್ರಜ್ವಲ್ ಏ.26ರಂದು ಮತದಾನ ಮಾಡಿ ರಾತ್ರೋರಾತ್ರಿ ಜರ್ಮನಿಗೆ ವಿಮಾನ ಪಯಣ ಬೆಳೆಸಿದ್ದರು.

ಆನಂತರ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚನೆಯಾಯಿತು. ಈ ಕೃತ್ಯದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪ ಹೊತ್ತು ಸಂಸದರ ತಂದೆ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಬಂಧನವಾಗಿ ಜೈಲು ಸೇರಿ ಹೊರಬಂದಿದ್ದೂ ಆಯ್ತು. ಇಷ್ಟೆಲ್ಲ ಬೆಳವಣಿಗೆ ನಡೆದರೂ ಪ್ರಜ್ವಲ್ ಮಾತ್ರ ಬಹಿರಂಗವಾಗಿ ಕಾಣಿಸಿಕೊಂಡೇ ಇಲ್ಲ.

ಹೆಚ್‌ ಡಿ ರೇವಣ್ಣ ಜಾಮೀನಿಗೆ ಕಾರಣವಾಗಿದ್ದು ಆ 3 ಅಂಶಗಳು!

ಎಸ್‌ಐಟಿ ನೀಡಿದ ನೋಟಿಸ್‌ಗೆ ವಕೀಲರ ಮೂಲಕ ಪ್ರತಿಕ್ರಿಯಿಸಿದ್ದ ಅ‍ವರು, ವಿಚಾರಣೆಗೆ ಹಾಜರಾಗಲು 7 ದಿನಗಳ ಸಮಯ ಕೇಳಿದ್ದರು. ಇನ್ನು ಪ್ರಜ್ವಲ್‌ ಬಗ್ಗೆ ಅವರ ಕುಟುಂಬದವರು ಸಹ ಯಾವುದೇ ಮಾಹಿತಿ ನೀಡದೆ ಮೌನವಹಿಸಿದ್ದಾರೆ. ಹೀಗಾಗಿ ಪ್ರಜ್ವಲ್ ಎಲ್ಲಿದ್ದಾರೆ ಎಂಬುದು ಇದುವರೆಗೆ ಖಚಿತವಾಗಿಲ್ಲ.

ಯೂರೋಪ್‌ನಲ್ಲೇ ಪ್ರಜ್ವಲ್

ಸಂಸದ ಪ್ರಜ್ವಲ್ ರೇವಣ್ಣ ಯೂರೋಪ್‌ನಲ್ಲೇ ಇದ್ದಾರೆ ಎಂಬ ಮಾಹಿತಿಯನ್ನು ರಾಜ್ಯದ ಉನ್ನತ ಪೊಲೀಸ್‌ ಮೂಲಗಳು ನೀಡುತ್ತಿವೆ. ಅಲ್ಲದೆ ಸಂಸದರ ಲೊಕೇಷನ್‌ ಬಗ್ಗೆ ಎಸ್‌ಐಟಿಗೆ ಖಚಿತ ಮಾಹಿತಿ ಸಿಕ್ಕಿದೆ. ಅವರ ಚಲನವಲನಗಳ ಕುರಿತು ತನಿಖಾ ತಂಡ ಬೆನ್ನತ್ತಿವೆ. ಇನ್ನು ಯುರೋಪ್‌ನಲ್ಲಿ ಬ್ರಿಟನ್‌ ಹಾಗೂ ಸ್ವಿಜರ್ಲೆಂಡ್‌ ದೇಶ ಹೊರತುಪಡಿಸಿದರೆ ಇನ್ನುಳಿದ ದೇಶಗಳಿಗೆ (ಯುರೋಪ್‌ ಒಕ್ಕೂಟದ ದೇಶಗಳು) ಒಂದೇ ಪಾಸ್‌ಪೋರ್ಟ್ ಬಳಸಿ ಪ್ರಯಾಣಿಸಬಹುದು. ಈ ಅವಕಾಶವನ್ನು ಬಳಸಿಕೊಂಡು ಯೂರೋಪ್‌ನಲ್ಲಿ ಪ್ರಜ್ವಲ್‌ ಸುತ್ತಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!