* ಸಂವಿಧಾನ ಉಳಿದರೆ ನಮ್ಮ ಉಳಿವು
* ಮಂಜುವನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಸಿದ್ದು
* ಕೊಡಗಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ
ಮೈಸೂರು(ನ.28): ರಾಜ್ಯದಲ್ಲಿ(Karnataka) ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಭರವಸೆ ನೀಡಿದರು.
ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಶನಿವಾರ ಮೈಸೂರು ವಿವಿ(University Of Mysore) ರಾಜ್ಯಶಾಸ್ತ್ರ ವಿಭಾಗದ ಎನ್. ರಾಚಯ್ಯ ಅಧ್ಯಯನ ಪೀಠವು ಆಯೋಜಿಸಿದ್ದ ಮಾಜಿ ಮೇಯರ್ ನಾರಾಯಣ್ ಅವರ ಕುರಿತಾದ ಪೌರಬಂಧು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
undefined
ಪೌರ ಕಾರ್ಮಿಕರನ್ನು(Civil Workers) ಕಾಯಂಗೊಳಿಸಲು ಯಾವುದೇ ಕಾನೂನು ತೊಡಕುಗಳಿದ್ದರೂ ಅದನ್ನು ಬಗೆಹರಿಸುತ್ತೇವೆ. ಯಾವುದೇ ಅಧಿಕಾರಿ ವಿರೋಧಿಸಿದರೂ ನಾವು ಲೆಕ್ಕಿಸುವುದಿಲ್ಲ. ಬಡ್ತಿ ಮೀಸಲಾತಿ ಬೇಡ ಎಂದು ಸುಪ್ರಿಂ ಕೋರ್ಟ್(Supreme Court) ಹೇಳಿದಾಗಲೂ ನಾವು ಅದನ್ನು ಮೀರಿ ಬಡ್ತಿ ಮೀಸಲಾತಿ(Reservation) ಜಾರಿಗೊಳಿಸಿದೆವು. ನಾವು ಅಧಿಕಾರದಲ್ಲಿ ಇದ್ದಾಗ ಎಸ್‌ಇಪಿ ಮತ್ತು ಟಿಎಸ್‌ಪಿಗೆ 30 ಸಾವಿರ ಕೋಟಿ ನೀಡಲಾಗಿತ್ತು. ಈಗ ಆ ಮೊತ್ತ 24 ಸಾವಿರ ಕೋಟಿಗೆ ಬಂದಿದೆ. ಆದರೆ ಬಜೆಟ್(Budget) ಗಾತ್ರ ಹೆಚ್ಚಾದಂತೆಲ್ಲ, ನೀಡುವ ಅನುದಾನವೂ ಹೆಚ್ಚಾಗಬೇಕು. ಆ ಪ್ರಕಾರ ಪ್ರಸ್ತುತ 35,000 ಕೋಟಿ ರು.ಗಳಿಗೂ ಹೆಚ್ಚು ಹಣ ಇರಬೇಕಿತ್ತು ಎಂದರು.
40% Commission: ನಮ್ಮ ಕಾಲದ್ದೂ ತನಿಖೆ ಆಗ್ಲಿ: ಡಿಕೆಶಿ, ಸಿದ್ದು!
ಸಂವಿಧಾನ ಉಳಿದರೆ ನಮ್ಮ ಉಳಿವು:
ಸಂವಿಧಾನವನ್ನೇ(Constitution) ಬದಲಾಯಿಸುತ್ತೇವೆ ಎಂಬುವರಿಂದ ದಲಿತರ ಉದ್ಧಾರ ಸಾಧ್ಯವಿಲ್ಲ. ಸ್ವಾರ್ಥಕ್ಕಾಗಿ ಬಿಜೆಪಿಗೆ(BJP) ಹೋದರೋ, ದಲಿತರ(Dalit) ಉದ್ಧಾರಕ್ಕೆ ಹೋಗುತ್ತಾರಾ? ಅವರ ಸ್ವಾರ್ಥಕ್ಕಾಗಿ ಹೋಗುತ್ತಾರೆ. ಸಂವಿಧಾನ ಉಳಿದರಲ್ಲವೇ ನಾವು ಉಳಿಯುವುದು, ನಿಮ್ಮ ಹಕ್ಕು, ವಿಕಾಸ ಆಗುವುದು. ಸಂವಿಧಾನವನ್ನೇ ಬದಲಾಯಿಸಿದರೆ ಚಿಪ್ಪು ಕೊಡುತ್ತಾರೆ. ನನ್ನನ್ನು ದಲಿತ ವಿರೋಧಿ ಎಂದು ನನ್ನ ಪ್ರತಿಕೃತಿಯನ್ನು ದಹಿಸಿದರು. ಆದರೆ ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದ ಮಂತ್ರಿ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ. ಇದರ ವಿರುದ್ಧ ಕಾರಜೋಳ, ನಾರಾಯಣಸ್ವಾಮಿ ಪ್ರತಿಭಟಿಸಿದರೆ? ನನಗೆ ಯಾರ ಮೇಲೂ ಕೋಪವಿಲ್ಲ, ಯಾರೂ ವೈರಿಗಳಲ್ಲ. ಸಂವಿಧಾನ ವಿರೋಧಿಸುವವರು ನಮ್ಮ ವಿರೋಧಿಗಳು. ನಮಗೆ ಮತದಾನ ಮಾಡುವ ಹಕ್ಕಿದ್ದರೆ ಸಾಲದು, ಅದರ ಜೊತೆಗೆ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯವೂ ಇರಬೇಕು. ಅದಿಲ್ಲದಿದ್ದರೆ ಅವರೇ ಅವರು ನಮ್ಮನ್ನು ಆಳುತ್ತಾರೆ. ಮತ್ತೆ ಬಂಡವಾಳ ಶಾಯಿಗಳ ಕೈಯಲ್ಲಿ ಅಧಿಕಾರ ಹೋಗುತ್ತದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ಶಾಸಕ ಎಲ್. ನಾಗೇಂದ್ರ, ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್, ಹಿರಿಯ ಪತ್ರಕರ್ತ ಕೆ. ಶಿವಕುಮಾರ್, ಎನ್. ರಾಚಯ್ಯ ಅಧ್ಯಯನ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಎಚ್.ಬಿ. ಮಲ್ಲಿಕಾರ್ಜುನಸ್ವಾಮಿ, ಪ್ರೊ. ಮುಜಾಫರ್ ಅಸ್ಸಾದಿ ಇದ್ದರು.
ಮೈಸೂರಿನ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ನಾರಾಯಣ್ ಅವರ ಕುರಿತಾದ ಪೌರಬಂಧು ಕೃತಿಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ಶಾಸಕ ಎಲ್. ನಾಗೇಂದ್ರ, ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್, ಹಿರಿಯ ಪತ್ರಕರ್ತ ಕೆ. ಶಿವಕುಮಾರ್, ಎನ್. ರಾಚಯ್ಯ ಅಧ್ಯಯನ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಎಚ್.ಬಿ. ಮಲ್ಲಿಕಾರ್ಜುನಸ್ವಾಮಿ, ಪ್ರೊ. ಮುಜಾಫರ್ ಅಸಾದಿ ಇದ್ದರು.
ಮಂಜುವನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಸಿದ್ದು
ಮಾಜಿ ಸಚಿವ ಎ. ಮಂಜು(A Manju) ಕಳೆದ ಲೋಕಸಭಾ ಚುನಾವಣೆ(Lok Sabha Election) ವೇಳೆ ಬಿಜೆಪಿಗೆ ಹೋದರು. ಈಗ ಅವರು ಕಾಂಗ್ರೆಸ್ ಸೇರುವುದಾಗಿ ಹೇಳಿಲ್ಲ, ಸಂಪರ್ಕಿಸಿಯೂ ಇಲ್ಲ. ಅವರು ಬಂದರೂ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡತುಂಡವಾಗಿ ಹೇಳಿದ್ದಾರೆ.
ಇದೇ ವೇಳೆ, ಕೊಡಗಿನಲ್ಲಿ(Kodagu) ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎ.ಮಂಜು ಪುತ್ರ ಮಂಥರ್ ಗೌಡ ಅವರನ್ನು ಗೆಲ್ಲಿಸುವ ಎಲ್ಲ ಪ್ರಯತ್ನವನ್ನು ಮಾಡುತ್ತೇವೆ. ಕೊಡಗಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ನಾವು ಕಳೆದ ಬಾರಿ ಅಲ್ಪ ಮತದಿಂದ ಸೋತಿದ್ದೇವೆ. ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದೂ ತಿಳಿಸಿದ್ದಾರೆ.