ಪ್ರಧಾನಿ ವಯಸ್ಸಿನಷ್ಟೇ ನಾವೂ ಇದ್ದೇವೆ; ಮೋದಿಗೆ ಟಿಕೆಟ್ ಕೊಟ್ರೆ ನಮ್ಗೂ ಟಿಕೆಟ್‌ ಪರೋಕ್ಷ ಬೇಡಿಕೆ ಇಟ್ಟ ಕರಡಿ ಸಂಗಣ್ಣ!

Published : Jun 16, 2023, 02:38 PM IST
ಪ್ರಧಾನಿ  ವಯಸ್ಸಿನಷ್ಟೇ ನಾವೂ ಇದ್ದೇವೆ; ಮೋದಿಗೆ ಟಿಕೆಟ್ ಕೊಟ್ರೆ ನಮ್ಗೂ ಟಿಕೆಟ್‌ ಪರೋಕ್ಷ ಬೇಡಿಕೆ ಇಟ್ಟ ಕರಡಿ ಸಂಗಣ್ಣ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ವಯಸ್ಸಿನಷ್ಟೇ ನಾವೂ ಇದ್ದೇವೆ. ಪ್ರಧಾನಿಗಳ ವಯಸ್ಸು ನಮ್ಮ ವಯಸ್ಸು ಸೇಮ್ ಇದೆ ಕೊಪ್ಪಳದಲ್ಲಿ ಸಂಸದ ಕರಡಿ ಸಂಗಣ್ಣ ಹೇಳಿದರು.

ಕೊಪ್ಪಳ (ಜೂ.16) : ಪ್ರಧಾನಿ ನರೇಂದ್ರ ಮೋದಿ ವಯಸ್ಸಿನಷ್ಟೇ ನಾವೂ ಇದ್ದೇವೆ. ಪ್ರಧಾನಿಗಳ ವಯಸ್ಸು ನಮ್ಮ ವಯಸ್ಸು ಸೇಮ್ ಇದೆ ಕೊಪ್ಪಳದಲ್ಲಿ ಸಂಸದ ಕರಡಿ ಸಂಗಣ್ಣ ಹೇಳಿದರು.

ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲು ವಯಸ್ಸು ಅಡ್ಡಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವೂ ಪ್ರಧಾನಿ ನರೇಂದ್ರ ಮೋದಿಯವರ ವಯಸ್ಸಿನವರೇ ಎನ್ನುವ ಮೂಲಕ ಪರೋಕ್ಷವಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಮೋದಿಗೆ ಟಿಕೆಟ್ ಕೊಟ್ಟರೆ ನನಗೂ ಟಿಕೆಟ್ ನೀಡವಂತೆ ಬೇಡಿಕೆ ಇಟ್ಟ ಸಂಸದ ಕರಡಿಇ ಸಂಗಣ್ಣ.

ವಯಸ್ಸಿನ ಕಾರಣದಿಂದ ಮುಂಬರುವ ಚುನಾವಣೆಗೆ ಹನ್ನೆರಡು ಜನರಿಗೆ ಟಿಕೆಟ್  ಇಲ್ಲ ಎಂಬ ವದಂತಿ ಇದೆ. ಆದರೆ ಆ  ಬಗ್ಗೆ ಯಾವುದೇ ವರಿಷ್ಠರು ನಮ್ಮ ಜೊತೆ ಚರ್ಚೆ ಮಾಡಿಲ್ಲ. ಯಾರಿಗೂ ಟಿಕೇಟ್ ಇಲ್ಲ ಎಂದು ಹೇಳಿಲ್ಲ. ಸುಮ್ನೆ ಸುದ್ದಿ ಹರಿದಾಡ್ತಿದೆ ಇದರ ಬಗ್ಗೆ ನಾವು ಎನೂ ಮಾತಾಡಲ್ಲ ಎಂದರು.

 

ಸೂಲಿಬೆಲೆ ಜೈಲ್‌ಗೆ ಹಾಕ್ತೇವೆ ಅನ್ನೋಕೆ ಎಂಬಿ ಪಾಟೀಲ್ ಯಾರು? ಗೃಹಮಂತ್ರಿನಾ? ಸಂಸದ ಸಂಗಣ್ಣ ಕರಡಿ ವಾಗ್ದಾಳಿ

ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ

ಲೋಕಸಭಾ ಚುನಾವಣೆಗೆ ಪಕ್ಷದ ವರಿಷ್ಠರು ಟಿಕೆಟ್ ನೀಡಿದರೆ ನಾನು ಸ್ಪರ್ಧಿಸುತ್ತೇನೆ. ಇಲ್ಲವೇ ಬೇರೆಯವರಿಗೆ ಟಿಕೇಟ್ ನೀಡಿದ್ರೆ ಅವರಿಗೆ ಮಾಡ್ತಿವಿ. ಆದರೆ ವಯಸ್ಸಿನ ವಿಚಾರಕ್ಕೆ ಬಂದ್ರೆ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ(Tippareddy MLA Chitradurga)ಯವರಿಗೆ ಎಷ್ಟಾಗಿದೆ ವಯಸ್ಸು ಆದರೂ ಅವರಿಗೆ ಕೊಟ್ಟರಲ್ಲ.  ಇನ್ನು ಕಾಂಗ್ರೆಸ್ ನಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ 93 ವಯಸ್ಸು ಆಗಿದೆ. ಇಳಿವಯಸ್ಸಿನಲ್ಲಿ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಟ್ರು.  ಇವೆಲ್ಲ ಸುಮ್ನೆ ಊಹಾಪೋಹಗಳಿವು ಪಾರ್ಟಿ ನಿರ್ಧಾರಗಳಲ್ಲ ಎಂದರು.

'ಪಕ್ಷದಲ್ಲಿ ನನ್ನ ಕಡೆಗಣಿಸಲಾಗ್ತಿದೆ' : ಶೆಟ್ಟರ್ ಆಯ್ತು, ಈಗ ಸಂಗಣ್ಣ ಕರಡಿನಾ?

ಹನ್ನೆರಡು ಜನರ ಹೆಸರು ಹೇಳೋರಿಗೆ ಬೇಡ ಅನ್ನಲ್ಲ. ಪಕ್ಷದಲ್ಲಿ ಆಕಾಂಕ್ಷಿಗಳಿರ್ತಾರೆ. ನಾನೇ ಅಭ್ಯರ್ಥಿ ಅಂತ ಹೇಳಿಕೊಂಡು ಓಡಾಡ್ತಾರೆ. ಮೀಡಿಯಾದಲ್ಲಿ ಬಂದದ್ದು ಎಲ್ಲ ಸತ್ಯ ಅಂತ ನಾವು ಹೇಗೆ ನಂಬೋಕೆ ಆಗತ್ತೆ? ನಮ್ಮ ರಾಜ್ಯ ವರಿಷ್ಠರು ನಮಗೆಲ್ಲ ಪೋನ್ ಮಾಡಿದ್ದಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಅಂತಾ ಬೊಮ್ಮಾಯಿ ಸರ್, ಯಡಿಯೂರಪ್ಪ ಸರ್ ಹೇಳಿದ್ದಾರೆ. ಅವರು ಹೇಳಿದ್ಮೇಲೆ ಮುಗೀತು. ನಮಗೆ ಟಿಕೆಟ್ ಸಿಗುತ್ತೆ ಅನ್ನೊ ಹೋಪ್ಸ್ ಇದೆ. ನನ್ನ ಕ್ಷೇತ್ರದ ಜನ ಆಶೀರ್ವಾದ ಮಾಡಿದ್ದಾರೆ. ಪಕ್ಷ ಚುನಾವಣೆಯಲ್ಲಿ ಏನೇ ನಿರ್ದಾರ ತಗೆದುಕೊಂಡ್ರು ಬದ್ಧನಾಗಿರುತ್ತೆನೆ ಎಂದ ಕರಡಿ ಸಂಗಣ್ಣ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ