'ನಾನು ಬಾಂಗ್ಲಾ ಪಿಎಂ ಮೊಹ್ಮದ್‌ ಯೂನುಸ್‌ ಅಭಿಮಾನಿ' ಎಂದ ಡಿಕೆಶಿ!

Published : Apr 17, 2025, 08:04 AM ISTUpdated : Apr 17, 2025, 08:09 AM IST
'ನಾನು ಬಾಂಗ್ಲಾ ಪಿಎಂ ಮೊಹ್ಮದ್‌ ಯೂನುಸ್‌ ಅಭಿಮಾನಿ' ಎಂದ ಡಿಕೆಶಿ!

ಸಾರಾಂಶ

ನಗರದಲ್ಲಿ ನಡೆದ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ಭಾಷಣದಲ್ಲಿ ಬಾಂಗ್ಲಾದಲ್ಲಿ ಹಿಂದೂಗಳ ಮಾರಣ ಹೋಮಕ್ಕೆ ಕಾರಣ ಎನ್ನಲಾದ ಅಲ್ಲಿನ ಪ್ರಧಾನಿ ಮೊಹ್ಮದ್‌ ಯೂನುಸ್‌ ಅವರ ಅಭಿಮಾನಿ ಎಂದು ಹೇಳಿಕೊಂಡು ಸರ್ವರ ಗಮನ ಸೆಳೆದರು.

ಕಲಬುರಗಿ (ಏ.17): ನಗರದಲ್ಲಿ ನಡೆದ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ಭಾಷಣದಲ್ಲಿ ಬಾಂಗ್ಲಾದಲ್ಲಿ ಹಿಂದೂಗಳ ಮಾರಣ ಹೋಮಕ್ಕೆ ಕಾರಣ ಎನ್ನಲಾದ ಅಲ್ಲಿನ ಪ್ರಧಾನಿ ಮೊಹ್ಮದ್‌ ಯೂನುಸ್‌ ಅವರ ಅಭಿಮಾನಿ ಎಂದು ಹೇಳಿಕೊಂಡು ಸರ್ವರ ಗಮನ ಸೆಳೆದರು.

ಕೌಶಲ್ಯ ಶಿಕ್ಷಣ, ಆ ಕುರಿತಂತೆ ಹಲವು ನಿದರ್ಶನಗಳನ್ನು ಹೇಳುತ್ತಲೇ ತಾವು ಬಾಂಗ್ಲಾದೇಶದ ಪ್ರಧಾನಿ ಮೊಹ್ಮದ್‌ ಯೂನುಸ್‌ ಅವರ ಬಹುದೊಡ್ಡ ಅಭಿಮಾನಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿಕೊಂಡರು. ಬದುಕಲ್ಲಿ ಕೌಶಲ್ಯ ಅದೆಷ್ಟು ಮುಖ್ಯ ಎಂಬುದಕ್ಕೆ ಬಾಂಗ್ಲಾ ಪ್ರಧಾನಿ ಮಾತುಗಳು ತಮಗೆ ಪ್ರೇರಣಾದಾಯಕ ಎಂದರು.

ಇದನ್ನೂ ಓದಿ: ಕಲಬುರಗಿ: ಆಜಾನ್‌ ಕೇಳಿ ಖರ್ಗೆ ಭಾಷಣ ನಿಲ್ಲಿಸಿ 10 ನಿಮಿಷ ಮೌನ

ಬಾಂಗ್ಲಾ ಪ್ರಧಾನಿ ಮಹ್ಮದ್ ಯುನುಸ್ ನೊಬೆಲ್ ಪ್ರಶಸ್ತಿ ಬಂದಾಗ ನಡೆದ ಮಾಧ್ಯಮ ಸಂದರ್ಶನದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮೀನು ಕೊಟ್ಟರೆ ಅದು ಒಂದು ಹೊತ್ತಿನ ಊಟಕ್ಕೆ ಆಗುತ್ತೆ, ಆದರೆ ಅದೇ ವ್ಯಕ್ತಿಗೆ ಮೀನು ಹಿಡಿಯುವ ಕೆಲಸ ಕೊಟ್ಟರೆ ಅವನ ಜೀವನವೇ ಆಗುತ್ತೆ ಎಂದಿದ್ದರು. ಆ ಮಾತು ನನಗೆ ತುಂಬ ಹಿಡಿಸಿತು. ಅಂದಿನಿಂದ ನಾನು ಮೊಹ್ಮದ್‌ ಯುನಿಸ್‌ನ ದೊಡ್ಡ ಅಭಿಮಾನಿಯಾಗಿದ್ದೇನೆಂದು ಡಿ.ಕೆ.ಶಿವಕುಮಾರ್‌ ಹೇಳಿಕೊಂಡರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌