ಆರೆಸ್ಸೆಸ್ ಕಚೇರಿಗಳ ಮೇಲೆ ಯಾಕೆ ಇಡಿ ದಾಳಿ ಮಾಡೋಲ್ಲ? : ಪ್ರಿಯಾಂಕ್ ಖರ್ಗೆ ಕಿಡಿ

Published : Apr 17, 2025, 07:40 AM ISTUpdated : Apr 17, 2025, 07:46 AM IST
ಆರೆಸ್ಸೆಸ್ ಕಚೇರಿಗಳ ಮೇಲೆ ಯಾಕೆ ಇಡಿ ದಾಳಿ ಮಾಡೋಲ್ಲ? : ಪ್ರಿಯಾಂಕ್ ಖರ್ಗೆ ಕಿಡಿ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಜನಪ್ರೀಯತೆ ಕುಗ್ಗುತ್ತಿದ್ದಂತೆಯೇ ಇವೆಲ್ಲ ದಾಳಿ ಶುರು ಆಗ್ತಾವೆ. ಆರ್ ಎಸ್ ಎಸ್ ಅವರಿಗೆ ಐಟಿ, ಇ.ಡಿ ಇಲ್ವಾ.? ಆರ್ ಎಸ್ ಎಸ್ ಕಚೇರಿಗಳ ಮೇಲೆ ಇ.ಡಿ ದಾಳಿ ಮಾಡಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಖಾರವಾಗಿ ಖರ್ಗೆ ಪ್ರಶ್ನೆ ಮಾಡಿದ್ದಾರೆ.

 ಕಲಬುರಗಿ (ಏ.17): ಪ್ರಧಾನಿ ನರೇಂದ್ರ ಮೋದಿ ಜನಪ್ರೀಯತೆ ಕುಗ್ಗುತ್ತಿದ್ದಂತೆಯೇ ಇವೆಲ್ಲ ದಾಳಿ ಶುರು ಆಗ್ತಾವೆ. ಆರ್ ಎಸ್ ಎಸ್ ಅವರಿಗೆ ಐಟಿ, ಇ.ಡಿ ಇಲ್ವಾ.? ಆರ್ ಎಸ್ ಎಸ್ ಕಚೇರಿಗಳ ಮೇಲೆ ಇ.ಡಿ ದಾಳಿ ಮಾಡಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಖಾರವಾಗಿ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 11 ವರ್ಷಗಳಿಂದ ಕೇಂದ್ರ ಸರ್ಕಾರ ಐಟಿ, ಇ.ಡಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ತಿದೆ. ಇಷ್ಟು ವರ್ಷ ಅವ್ರು ಎಲ್ಲಿ ಮನಿಲಾಂಡ್ರಿಗ್ ಆಗಿದೆ, ಹೇಗ್ ಆಗಿದೆ ಅಂತ ಪ್ರೂವ್ ಮಾಡಲು ಆಗಿಲ್ಲ. ಇದು ಎಜಿ, ನ್ಯಾಷನಲ್ ಹೆರಾಲ್ಡ್ ಅಲ್ಲಿ ಇರಬಹುದು, ಬೇರೆ ಸಂಸ್ಥೆಗಳು ನಾಟ್ ಫಾರ್ ಬೆನಿಫಿಟ್ ಸಂಸ್ಥೆಗಳು ಒಂದೂ ರುಪಾಯಿ ಕೂಡ ಅವರು ಡಿವಿಡೆಂಟ್, ಸ್ಯಾಲರಿ ತೊಗೊಳ್ಳುವ ಹಾಗಿಲ್ಲ.

ಇದನ್ನೂ ಓದಿ: ಕಲಬುರಗಿ: ಆಜಾನ್‌ ಕೇಳಿ ಖರ್ಗೆ ಭಾಷಣ ನಿಲ್ಲಿಸಿ 10 ನಿಮಿಷ ಮೌನ

ಆದ್ರು ಕೂಡ ಇವರು ಐಟಿ, ಇ.ಡಿ ಅವರು ವೈಯುಕ್ತಿಕ ರಾಜಕೀಯ ದ್ವೇಷ ಸಾಧಿಸಲು ಕೇಂದ್ರದಿಂದ ಆರ್ಡರ್ ತೊಗೊತ್ತಿದ್ದಾರೆ ಎಂದರು.

ಯಾವಾಗ ಮೋದಿ ಅವರ ಜನಪ್ರಿಯತೆ ಕಡಿಮೆ ಆಗುತ್ತೆ, ಬೆಲೆಯೇರಿಕೆ ಬಗ್ಗೆ ಜನ ಪ್ರಶ್ನೆ ಮಾಡ್ತಾರೆ ಆಗ ಮಾತ್ರ ಐಟಿ, ಇ.ಡಿ, ರಾಬರ್ಟ್ ವಾದ್ರಾ, ಸೋನಿಯಾ ಗಾಂಧಿ ನೆನಪಿಗೆ ಬರ್ತಾರೆ. ಇಷ್ಟು ವರ್ಷದಿಂದ ಏನ್ ಮಾಡಿದ್ರೆ, ಏನಾದ್ರು ದಾಖಲೆಗಳು ಸಿಕ್ಕಿವೆಯಾ? ಸ್ಪಷ್ಟತೆ ಸಿಕ್ಕಿದೆಯಾ? ಯಾಕೆ ಚಾರ್ಜಶೀಟ್ ಮಾಡ್ತಿದ್ದಾರೆ ಅಂತ ಗೊತ್ತೇ ಇಲ್ಲ, ಹೀಗೆ ಇವ್ರ ದಾಳಿಗಳು ಸಾಗಿವೆ ಎಂದು ಜರಿದರು.

ಮನಿ ಲ್ಯಾಂಡ್ರಿಂಗ್, ಲ್ಯಾಂಡ್ ಡೀಲ್ ಎಲ್ಲಾಯ್ತು ಅಂತ ಏನಾದ್ರು ದಾಖಲೆಗಳು ಸಿಕ್ಕಿವೆಯಾ.? ಮೋದಿ ಜನಪ್ರಿಯತೆ ಕುಸಿತ ಆಗ್ತಿದೆ. ಇವೆಲ್ಲ ಮುಚ್ಚಿಹಾಕಲು ಇದರ ಮುಖಾಂತರ ನಡೆಯುತ್ತಿದೆ. ಎಲ್ಲಿ ಮನಿ ಲಾಂಡ್ರಿಂಗ್ ಆಗಿದೆ ಅಂತಾ ಹೇಳಲಿ. ನಿಜವಾಗಲೂ ಇವರು ಇಡಿ ದಾಳಿ ಮಾಡಬೇಕಾದ್ರೆ, ಎಲೆಕ್ಷನ್ ಬಾಂಡ್ ಬಗ್ಗೆ ದಾಳಿ ಮಾಡಬೇಕು. ಬಿಜೆಪಿಗೆ ಆರ್ ಎಸ್ ಎಸ್ ಅವರಿಗೆ ಐಟಿ, ಇ.ಡಿ ಇಲ್ವಾ.? ಆರ್ ಎಸ್ ಎಸ್ ಕಚೇರಿಗಳ ಮೇಲೆ ಇ.ಡಿ ದಾಳಿ ಮಾಡಬೇಕು ದೇಶದ ಜಿಲ್ಲೆಗಳಲ್ಲಿ 600 ಆರ್ ಎಸ್ ಎಸ್ ಹಾಗೂ ಬಿಜೆಪಿ ಅತ್ಯಾಧುನಿಕ ಕಚೇರಿಗಳನ್ನು ಕಟ್ಟಿದ್ದಾರೆ ಕಚೇರಿ ಕಟ್ಟಲು ಹಣ ಎಲ್ಲಿಂದ ಬಂತು.? ಎಂದು ಪ್ರಶ್ನಿಸಿದರು.

75 ಜನ ಆರ್ ಎಸ್ ಎಸ್ ಗೆ ದುಡ್ಡು ಕೊಟ್ಟಿದ್ದಾರಂತೆ, ಅವರ ಮೇಲೆ ಐಟಿ, ಇ.ಡಿ ದಾಳಿ ಆಗಬೇಕು. ನಮ್ಮ ಪಕ್ಷ, ನಮ್ಮ ನಾಯಕರಿಗೆ ಬದ್ಧತೆ ಇದೆ. ರಾಜಕೀಯ ದ್ವೇಷ ಸಾಧಿಸಲು ಕೇಂದ್ರ ಸರ್ಕಾರ ಇಡಿ ಐಟಿ ದುರ್ಬಳಕೆ ಮಾಡಿಕೊಳ್ತಿದೆ ಎಂದು ಖರ್ಗೆ ತಿವಿದರು.

ಮುಸ್ಲಿಂರಿಗೆ ಅಲ್ಪಸಂಖ್ಯಾತ ಸ್ಥಾನ ಮಾನ ಏಕೆ ಬೇಕು? ಎನ್ನುವ ಸಿಟಿ ರವಿ ಹೇಳಿಕೆಗೆ ಆಕ್ರೋಶ ಹೊರಹಾಕಿದ ಖರ್ಗೆ, ಸಿಟಿ ರವಿ ಸೋತ ಮೇಲೆ ಸಂಪೂರ್ಣ ಹತಾಷರಾಗಿದ್ದಾರೆ. ಎಂ..ಎಲ್.ಸಿ ಮಾಡಿದ್ದಕ್ಕೆ ಈಗ ತುಸು ಸಮಾಧಾನ ಗೊಂಡಿದ್ದಾರೆ. ಕೇಶವ ಕೃಪಾಕ್ಕೆ ತಾವೆಷ್ಟು ಲಾಯಲ್ ಎನ್ನುವುದು ತೋರಿಸಲು ಹೊರಟಿದ್ದಾರೆ. ಈ ಸಮೀಕ್ಷೆ ಇರಲಿ, ಬಜೆಟ್ ಇರಲಿ ಅಲ್ಪಸಂಖ್ಯಾತ ಪರ ಹೇಗಾಗುತ್ತೆ ? ಸಿಟಿ ರವಿ ಅವರದ್ದು ಅವಿವೇಕತನದ ಪರಮಾವಧಿ ಆಗಿದೆ ಎಂದರು.

ಮೋದಿ, ಶಾ ಮೂಲಕ ಹೆಂಗೆ ವಕ್ಪ ಬಿಲ್ ಮಾಡಿದ್ದಾರೋ ಹಾಗೆ ಮುಸ್ಲಿಂ, ದಲಿತರು, ಆದಿವಾಸಿಗಳು ಈ ದೇಶದ ನಾಗರಿಕರಲ್ಲ ಅಂತ ಬಿಲ್ ಪಾಸ್ ಮಾಡಿಸಲಿ. ಪದೇ ಪದೇ ಇದೇ ರೀತಿ ಮಾತಾಡ್ತಿದಾರೆ ಅಂದ್ರೆ ಅವರಿಗೆ ನಾಚಿಕೆ ಆಗಬೇಕು ಎಂದರು.

ಲಾರಿ ಮಾಲೀಕರ ಮುಷ್ಕರ ಎರಡನೇ ದಿನದಲ್ಲಿ ಮುಂದುವರಿಕೆ ಆಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಿನ್ನೆ ಸಭೆ ಮಾಡಿ ಮಾತುಕತೆ ನಡೆಸಿದ್ದಾರೆ. ಆ ಸಭೆ ವಿಫಲವಾಗಿದೆ ಎಂದು ಮತ್ತೆ ಸಭೆ ನಡೆಸುವುದಾಗಿ ಹೇಳಿದ್ದಾರೆ

ಅಷ್ಟಕ್ಕೂ ಡಿಸೆಲ್ ದರ ಹೆಚ್ಚಳ ಕೇವಲ ನಮ್ಮ ಜವಾಬ್ದಾರಿನಾ ? ಕಚ್ಚಾ ತೈಲ ಬೆಲೆ ಯುಪಿಎ ಸರ್ಕಾರ ಇದ್ದಾಗ ಎಷ್ಟಿತ್ತು ಈಗ ಎಷ್ಟಾಗಿದೆ ? ಅಂತಾರಾಷ್ಟ್ರೀಯ ಮಾರ್ಕೆಟನಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಿದ್ದರೂ ನಮ್ಮ ಸರ್ಕಾರ ತೈಲ ಬೆಲೆ ಹೆಚ್ಚಳ ಮಾಡಿರಲಿಲ್ಲ.

ಇದೀಗ ಅಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ಹತ್ತು ವರ್ಷಗಳಿಂದ ಡಿಸಲ್ ಪೆಟ್ರೋಲ್ ದರ ಹೆಚ್ಚಿಸುತ್ತಲೇ ಇದ್ದಾರೆ. ಈಗ ಕಚ್ಚಾ ತೈಲ ದರ ಕಡಿಮೆ ಆಗಿದ್ದರೂ ಕೇಂದ್ರ ಸರಕಾರ ಕಡಿಮೆ ಮಾಡದಿರುವುದು ಅನ್ಯಾಯ ಆಗಲ್ಲವಾ ? .10 ವರ್ಷಗಳ ಹಿಂದೆ ಎಷ್ಟಿತ್ತೋ ಅಲ್ಲಿಗೆ ತನ್ನಿ ಎಲ್ಲಾ ಸರಿಯಾಗುತ್ತೆ. ನೀವು ದರ ಹೆಚ್ಚಳ ಮಾಡಿದ್ರೆ ದೇಶದ ಹಿತಕ್ಕೆ, ನಾವು ಮಾಡಿದ್ರೆ ಅನ್ಯಾಯನಾ ? ಎಂದು ಖರ್ಗೆ ಪ್ರಶ್ನಿಸಿದರು.

ಇದನ್ನೂ ಓದಿ: ನೀವಿಬ್ಬರೂ ಒಗ್ಗಟ್ಟಾಗಿ ಇರದಿದ್ದರೆ ಮೋದಿ - ಶಾ ದಾಳಿ ಮಾಡ್ತಾರೆ: ಸಿದ್ದು, ಡಿಕೆಗೆ ಖರ್ಗೆ ಎಚ್ಚರಿಕೆ!

ಬಿಜೆಪಿ ಜನಸಂಘರ್ಷ ಯಾತ್ರೆ ಉತ್ತರ ಕರ್ನಾಟಕಕ್ಕೆ ಬರಲಿ ಸ್ವಾಮಿ ಯಾರು ಬೇಡ ಅಂದೋರು ? ಜನರಲ್ಲಿ ಯಾವುದೇ ಆಕ್ರೋಶ ಇಲ್ಲವೇ ಇಲ್ಲ. ಈ ಹಿಂದೆಯೂ ಅವರು ವಕ್ಫ್‌ ರ್ಯಾಲಿ ಮಾಡಿದ್ರಲ್ಲ ಏನಾಯ್ತು ? ತೇಜಸ್ವಿ ಸೂರ್ಯ ಹೆಲ್ಪಲೈನ್ ತೆಗೆದಿದ್ದನಲ್ಲ , ಏನಾಯ್ತು ? ಯತ್ನಾಳ ಆಕ್ರೋಶ ಶಮನಕ್ಕೆ ಬರ್ತಿದಾರೆಯೇ ಹೊರತು ಜನರಲ್ಲಿ ಯಾವುದೇ ಆಕ್ರೋಶ ಇಲ್ಲ ಎಂದು ಬಿಜೆಪಿ ಯಾತ್ರೆ ಬಗ್ಗೆ ಖರ್ಗೆ ಲೇವಡಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!