
ಹುಬ್ಬಳ್ಳಿ (ಜು.29): ಹುಬ್ಬಳ್ಳಿ-ಧಾರವಾಡದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಲಘು ರೈಲು ಸಾರಿಗೆ (Light Rail Transit) ಕುರಿತು ಸ್ಥಳ ವೀಕ್ಷಣೆಗೆ ಪ್ರತ್ಯೇಕ ಟೀಮ್ ಆಗಮಿಸುತ್ತಿದ್ದು, ಅವರು ನೀಡುವ ವರದಿಯ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಲಘು ರೈಲು ಸಂಚಾರಕ್ಕೆ ಸಣ್ಣ ರ‍್ಯಾಂಪ್ ಅಗತ್ಯವಿದೆ. ಈಗಾಗಲೇ ಚಾಲ್ತಿಯಲ್ಲಿ ಇರುವ ಬಿಆರ್‌ಟಿಎಸ್‌ಗೆ ಮೀಸಲಾದ ಕಾರಿಡಾರ್‌ನಲ್ಲಿ ಈ ರ‍್ಯಾಂಪ್ ಅಳವಡಿಸಲು ಬೇಕಾದ ಜಾಗವಿದೆ. ಸರ್ಕಾರವು ಪಿಪಿಪಿ (Public Private Partnership) ಮಾದರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಚಿಂತನೆ ನಡೆದಿದೆ. ಈ ಯೋಜನೆ ಜಾರಿಯಾದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ಹೆಚ್ಚಿದ ಪ್ರಯಾಣಿಕರ ಬೇಡಿಕೆ, ಯಶವಂತಪುರ-ಮುರ್ಡೇಶ್ವರ ವಿಶೇಷ ರೈಲು ಅವಧಿ ವಿಸ್ತರಣೆ
ಈ ಕುರಿತು ಕಳೆದ ಒಂದು ವಾರದಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಲಘು ರೈಲು ಸಾರಿಗೆ ನಡೆಸುತ್ತಿರುವ ಖಾಸಗಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರ ಪ್ರತ್ಯೇಕ ತಂಡವು ಹುಬ್ಬಳ್ಳಿಗೆ ಆಗಮಿಸಿ ಬಿಆರ್‌ಟಿಎಸ್ ಮಾರ್ಗ ಈ ರೈಲು ಸಾರಿಗೆಗೆ ಸೂಕ್ತವೇ ಎಂಬುದರ ಕುರಿತು ಪರಿಶೀಲನೆ ಕೈಗೊಳ್ಳುವರು. ಅವರು ಒಪ್ಪಿಗೆ ನೀಡಿದರೆ ಮಾತ್ರ ಮುಂದಿನ ಪ್ರಕ್ರಿಯೆ ನಡೆಯಲಿದೆ. ಟೀಮ್ ಬಂದು ಯೋಜನೆಗೆ ಹಸಿರು ನಿಶಾನೆ ನೀಡಿದ ಮೇಲೆ ಮುಂದಿನ ಪ್ರಕ್ರಿಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಟೆಕ್ ವೃತ್ತಿಪರರಿಗೆ ಸಂತಸದ ಸುದ್ದಿ, ವೈಟ್‌ಫೀಲ್ಡ್-ಚಲ್ಲಘಟ್ಟ ನಮ್ಮ ಮೆಟ್ರೋ ಸೇವೆ ಆಗಸ್ಟ್‌ನಲ್ಲಿ ಆರಂ
ಸಾಪ್ತಾಹಿಕ ವಿಶೇಷ ರೈಲು ಸೇವೆ ಅವಧಿ ವಿಸ್ತರಣೆ
ಜು.30ಕ್ಕೆ ಮುಗಿಯಬೇಕಿದ್ದ ವಿಶಾಖಪಟ್ಟಣಂ ಮತ್ತು ಬೆಂಗಳೂರಿನ ಕಂಟೋನ್ಮೆಂಟ್ ನಡುವಿನ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಸೆಪ್ಟೆಂಬರ್ 24ರವರೆಗೆ 8 ಟ್ರಿಪ್ ವಿಸ್ತರಿಸಲಾಗಿದೆ. ಪ್ರತಿ ಸೋಮವಾರ ಬೆಂಗಳೂರಿನ ಕಂಟೋನ್ಮೆಂಟ್‌ನಿಂದ ಈ ರೈಲು ಹೊರಡಲಿದೆ. ಪ್ರಯಾಣಿಕರ ದಟ್ಟಣೆ ನಿವಾರಿಸುವ ಸಲುವಾಗಿ ಬಿಹಾರದ ದಾನಾಪುರ ಮತ್ತು ಸರ್.ಎಂ.ವಿ ಟರ್ಮಿನಲ್ ಬೆಂಗಳೂರು ನಡುವಿನ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಎರಡೂ ದಿಕ್ಕಿನಲ್ಲೂ 5 ಟ್ರಿಪ್ ಓಡಿಸಲು ನಿರ್ಧರಿಸಿದೆ. ಆಗಸ್ಟ್ 4, 11, 18 ಮತ್ತು 25 ರಂದು ಮಧ್ಯಾಹ್ನ 3 ಗಂಟೆಗೆ ದಾನಪುರದಿಂದ ಹೊರಟು ಭಾನುವಾರ ಮಧ್ಯಾಹ್ನ 1ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ. ಜು.30, ಆಗಸ್ಟ್ 5, 12, 19 ಮತ್ತು 26 ರಂದು 11.25ಕ್ಕೆ ಹೊರಟು ಮಂಗಳವಾರ ರಾತ್ರಿ 11.30ಕ್ಕೆ ದಾನಾಪುರ ತಲುಪಲಿದೆ. ಈ ರೈಲುಗಳು ಜೋಲಾರ್ ಪೇಟೆ ಮತ್ತು ಬಂಗಾರಪೇಟೆಗಳಲ್ಲಿ ನಿಲುಗಡೆ ಹೊಂದಿದೆ. ಹೆಚ್ಚಿನ ಮಾಹಿತಿಗೆ ಫೋ.ನಂ. 139 ಸಂಪರ್ಕಿಸಬಹುದು.
ಮೆಟ್ರೋ ಪಿಲ್ಲರ್ ಬಿದ್ದು ತಾಯಿ-ಮಗು ಸಾವು: 10 ಕೋಟಿ ಪರಿಹಾರಕ್ಕೆ ಅರ್ಜಿ, ಸರ್ಕಾರಕ್ಕೆ ಹೈಕೋರ್ಟ್ ತುರ್ತು ನೊಟೀಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ