ಕಲಬುರಗಿ: ಗುಡಿಸಲಲ್ಲಿ ಮಳ್ಳಿ ಗ್ರಾ.ಪಂ. ಸದಸ್ಯೆಯ ವಾಸ!

By Kannadaprabha News  |  First Published May 1, 2024, 12:45 PM IST

ವಾಸಿಸಲು ಮನೆಯಿಲ್ಲ, ಉಪಜೀವನಕ್ಕೆ ಸಕ್ಕರೆ ಕಾರ್ಖಾನೆಯ ಕ್ಯಾಂಟೀನ್ ನಲ್ಲಿ ಕೂಲಿ ಕೆಲಸ. ಕ್ಯಾಂಟೀನ್ ಮಾಲೀಕ ಉಳಿದ ಆಹಾರ ಕೊಟ್ಟರೆ ಅದೇ ಊಟ ಇಲ್ಲದಿದ್ದರೆ ಉಪವಾಸ. ಇದು ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ನಾಗರಹಳ್ಳಿಯಲ್ಲಿರುವ 6ನೇ ವಾರ್ಡ್‌ ಗ್ರಾಮ ಪಂಚಾಯ್ತಿ ಸದಸ್ಯೆ ಅಮಲ್ವ ದೂರಿ (35) ಅವರ ದುಸ್ಥಿತಿ.


ಯಡ್ರಾಮಿ (ಮೇ.1): ವಾಸಿಸಲು ಮನೆಯಿಲ್ಲ, ಉಪಜೀವನಕ್ಕೆ ಸಕ್ಕರೆ ಕಾರ್ಖಾನೆಯ ಕ್ಯಾಂಟೀನ್ ನಲ್ಲಿ ಕೂಲಿ ಕೆಲಸ. ಕ್ಯಾಂಟೀನ್ ಮಾಲೀಕ ಉಳಿದ ಆಹಾರ ಕೊಟ್ಟರೆ ಅದೇ ಊಟ ಇಲ್ಲದಿದ್ದರೆ ಉಪವಾಸ.
ಇದು ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ನಾಗರಹಳ್ಳಿಯಲ್ಲಿರುವ 6ನೇ ವಾರ್ಡ್‌ ಗ್ರಾಮ ಪಂಚಾಯ್ತಿ ಸದಸ್ಯೆ ಅಮಲ್ವ ದೂರಿ (35) ಅವರ ದುಸ್ಥಿತಿ. ಸೂರಿಲ್ಲದವರ ಸಮೀಕ್ಷೆ ಮಾಡಿ ಸೂರು ಕೊಡುವುದೇ ಪಂಚಾಯ್ತಿ ಸದಸ್ಯೆಯ ಕೆಲಸವಾದರೂ ಅವರಿಗೇ ಇಲ್ಲಿ ಸೂರಿಲ್ಲ ಅನ್ನೋದು ವಿಚಿತ್ರವಾದರೂ ಸತ್ಯವಾಗಿದೆ.

 

Tap to resize

Latest Videos

undefined

ರಾಯಚೂರಲ್ಲಿ 45.6 ಡಿಗ್ರಿ: 10 ವರ್ಷದ ದಾಖಲೆ ತಾಪ!

ಅಮಲ್ವ ದೂರಿ ಅವರನ್ನು ನಾಗರಹಳ್ಳಿ ಗ್ರಾಮದ ಜನರು ಸೇರಿ ಚುನಾವಣೆಗೆ ನಿಲ್ಲಿಸಿ, 6ನೇ ವಾರ್ಡ್‌ನಿಂದ ಸ್ಪರ್ಧಿಸುವಂತೆ ಮಾಡಿದ್ದರು, ಅದರ ಪ್ರತಿ ಫಲವಾಗಿ ಗೆಲುವು ಕೂಡ ಸಾಧಿಸಿದರು. ಇಂದಿಗೂ ಇವರು ಪಂಚಾಯ್ತಿ ಸದಸ್ಯೆಯಾದರೂ ಸಹ ರಸ್ತೆಬದಿ ಗುಡಿಸಲಲ್ಲಿ ವಾಸಿಸೋದು ತಪ್ಪಿಲ್ಲ. 6ನೇ ವಾರ್ಡ್‌ನಲ್ಲಿ ಅವರು 250 ಮತ ಪಡೆದು ಜಯಗಳಿಸಿದರು. ಗ್ರಾಮ ಪಂಚಾಯ್ತಿಯಿಂದ ಆಶ್ರಯ ಯೋಜನೆಯಡಿ ನಿರ್ಗತಿಕರಿಗೆ ಮನೆ ನೀಡುವ ಸದಸ್ಯೆಗೆ ಮನೆ ಇಲ್ಲದಂತಾಗಿದೆ. ಗ್ರಾಮ ಪಂಚಾಯ್ತಿಯಿಂದ ಬರುವ ಗೌರವ ಧನದಲ್ಲಿ ಜೀವನ ನಡೆಸುವ ಅವರಿಗೆ ಎರಡು ವರ್ಷದಿಂದ ಸಹಾಯಧನ ಸ್ಥಗಿತಗೊಂಡಿದೆ.

ನನಗೆ ಇಬ್ಬರು ಪುತ್ರಿಯರು ಇದ್ದು ನಾಗರಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ನನ್ನ ಗಂಡ ನನ್ನನ್ನು ಬಿಟ್ಟು ಮತ್ತೊಂದು ಮದುವೆ ಆಗಿದ್ದು ಎರಡನೆಯ ಹೆಂಡತಿಯ ಜೊತೆ ಬೆಂಗಳೂರಿನಲ್ಲಿ ಇದ್ದಾರೆ ಎಂದು ಅಮಲ್ವ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಪ್ರಧಾನಿ ಮೋದಿ ಮಹಿಳೆಯರ ರಕ್ಷಣೆಗೆ ಏನು ಮಾಡಿದ್ದಾರೆ? ಪ್ರಿಯಾಂಕಾ ಗಾಂಧಿ

ಗ್ರಾಮ ಪಂಚಾಯಿತಿಯಿಂದ ನಿರ್ಗತಿಕರಿಗೆ ಮನೆ ಕಟ್ಟಿಸಿಕೊಡುವ ಹಲವಾರು ಸರ್ಕಾರಿ ಯೋಜನೆಗಳಲ್ಲಿ ಸದಸ್ಯೆಗೆ ಒಂದು ಮನೆ ಮಂಜೂರು ಮಾಡಿಕೊಡಬೇಕು ಎಂದು ಅದೇ ವಾರ್ಡ್‌ನ ಸದಸ್ಯೆ ರೂಪಾಬಾಯಿ ಚವ್ಹಾಣ ಒತ್ತಾಯಿಸಿದಾರೆ.ಅಮಲ್ವ ಗುಡಿಸಲಲ್ಲಿ ವಾಸವಿರುವುದು ಗೊತ್ತಿರಲಿಲ್ಲ. ಅವರಿಗೆ ಮನೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮೇಲಧಿಕಾರಿ, ಗ್ರಾ.ಪಂ. ಅಧ್ಯಕ್ಷರ ಜೊತೆ ಚರ್ಚಿಸುವೆ.

- ಮಾಂತೇಶ ಪುರಾಣಿಕ, ತಾ.ಪಂ. ಇಒ ಯಡ್ರಾಮಿ

click me!