Minimum Support Prices : ಭತ್ತ, ರಾಗಿ, ಜೋಳ ಬೆಳೆದ ರೈತರಿಗೆ ಗುಡ್ ನ್ಯೂಸ್

By Kannadaprabha News  |  First Published Dec 16, 2021, 11:51 AM IST
  •   ಜ.1ರಿಂದ ಭತ್ತ, ರಾಗಿ, ಜೋಳ ಖರೀದಿ: ಉಮೇಶ್‌ ಕತ್ತಿ
  • ಈಗಾಗಲೇ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿಗೆ ಅವಕಾಶ 
  • ಜ.1ಕ್ಕೆ ಮೊದಲು ರೈತರು ಖಾಸಗಿ ಮಾರುಕಟ್ಟೆಯಲ್ಲಿ ತಮ್ಮ ಬೆಳೆಯನ್ನು ಮಾರಾಟ ಮಾಡಬಾರದು

 ವಿಧಾನಸಭೆ (ಡಿ.16):   ಭತ್ತ, (Paddy) ರಾಗಿ ಹಾಗೂ ಜೋಳದಂತಹ ಬೆಳೆಗಳಿಗೆ 2022ರ ಜ.1 ರಿಂದ ಬೆಂಬಲ ಬೆಲೆ  (Support Price) ನೀಡಿ ಖರೀದಿ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದು, ಜ.1ಕ್ಕೆ ಮೊದಲು ರೈತರು (Farmers) ಖಾಸಗಿ ಮಾರುಕಟ್ಟೆಯಲ್ಲಿ ತಮ್ಮ ಬೆಳೆಯನ್ನು ಮಾರಾಟ ಮಾಡಬಾರದು ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಸಚಿವ ಉಮೇಶ್‌ ಕತ್ತಿ (Umesh katti) ಮನವಿ ಮಾಡಿದ್ದಾರೆ. ಬುಧವಾರ ಗಮನ ಸೆಳೆಯುವ ಸೂಚನೆ ಅಡಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ (JDS) ಸದಸ್ಯ ನಾಡಗೌಡ, ರಾಜ್ಯ ಸರ್ಕಾರವು ಬೆಂಬಲ ಬೆಲೆ ನೀಡಿ ಭತ್ತ, ರಾಗಿ ಹಾಗೂ ಜೋಳ ಖರೀದಿ ಮಾಡಲು ವಿಳಂಬ ಮಾಡುತ್ತಿದೆ. ನವೆಂಬರ್‌ ಹಾಗೂ ಡಿಸೆಂಬರ್‌ನಲೇ ಭತ್ತವನ್ನು ಮಾರಾಟ ಮಾಡಬೇಕು  ಎಂದರು.

 ಕೇಂದ್ರ ಸರ್ಕಾರದೊಂದಿಗೆ (Govt Of India) ಮಾತುಕತೆ ನಡೆಸಿ ಆಂಧ್ರಪ್ರದೇಶ ಸರ್ಕಾರ ನವೆಂಬರ್‌ನಿಂದ ಮಾರ್ಚ್ ವರೆಗೆ ಖರೀದಿಗೆ ಅವಕಾಶ ಕಲ್ಪಿಸಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ (Govt Of Karnataka) ಜ.1ರಿಂದ ಖರೀದಿಸುವುದಾಗಿ ತಿಳಿಸಿದ್ದು ಅಲ್ಲಿಯವರೆಗೂ ದಾಸ್ತಾನು ಮಾಡಲಾಗದೆ ರೈತರು ಖಾಸಗಿಯವರಿಗೆ ಮಾರಾಟ ಮಾಡುವ ಸ್ಥಿತಿ ಎದುರಾಗಿದೆ. ಹೀಗಾಗಿ ಪ್ರಸ್ತುತ ಖಾಸಗಿಯವರು ರೈತರಿಂದ (Farmers) ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಜನವರಿಯಲ್ಲಿ ಸರ್ಕಾರಕ್ಕೆ ಪೂರೈಸುತ್ತಾರೆ. ಇದರಿಂದ ವಿನಾಕಾರಣ ರೈತರು ನಷ್ಟಅನುಭವಿಸುವಂತಾಗಲಿದೆ. ಹೀಗಾಗಿ ಕೂಡಲೇ ಖರೀದಿ ಪ್ರಕ್ರಿಯೆ ಪ್ರಾರಂಭಿಸಿ ಎಂದು ಒತ್ತಾಯಿಸಿದರು.

Latest Videos

undefined

ಇದಕ್ಕೆ ಉತ್ತರಿಸಿದ ಸಚಿವ ಕತ್ತಿ, ಈಗಾಗಲೇ ರೈತರಿಂದ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಜ.1ರಿಂದ ಭತ್ತ, ರಾಗಿ, ಜೋಳವನ್ನು ಖರೀದಿಸಲಿದ್ದು, ರೈತರು ಖಾಸಗಿ ಮಾರುಕಟ್ಟೆಯಲ್ಲಿ (Private Market) ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ (Congress) ಸದಸ್ಯ ಕೃಷ್ಣಬೈರೇಗೌಡ, ಈಗಲೇ ಖರೀದಿ ಪ್ರಕ್ರಿಯೆ ಆರಂಭಿಸಿದರೆ ಸರ್ಕಾರಕ್ಕೆ ಆಗುವ ನಷ್ಟವಿಲ್ಲ. ಸರ್ಕಾರ ಖರೀದಿಗೆ ಮುಂದಾದರೆ ಮಾರುಕಟ್ಟೆಯಲ್ಲಿ ರೈತರಿಗೆ ತುಸು ಹೆಚ್ಚಿನ ಬೆಲೆ ಸಿಗುತ್ತದೆ. ಇಲ್ಲದಿದ್ದರೆ ರೈತರಿಗೆ ನಷ್ಟಉಂಟಾಗಲಿದೆ ಎಂದು ಹೇಳಿದರು.

ಬೆಂಬಲ ಬೆಲೆ ಘೋಷಿಸಿದ ಕೇಂದ್ರ ಸರ್ಕಾರ  :   ಕೇಂದ್ರ ಸರ್ಕಾರ ರೈತರ ಹಿತ ಕಾಪಾಡಲು ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಇದರ ಲಾಭವನ್ನು ದೇಶದ ರೈತರು ಪಡೆದುಕೊಳ್ಳುತ್ತಿದ್ದಾರೆ. ಇದೀಗ ರೈತರ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರೈತರ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(MSP) ಘೋಷಿಸಿದೆ.

ಕೇಂದ್ರ ಸರ್ಕಾರ ಜಾರಿಗೊಳಿಸಿದ ಹಲವು ರೈತಪರ ಯೋಜನೆಗಳಿಂದ ಭಾರತದಲ್ಲಿನ ಆಹಾರ (Food) ಧಾನ್ಯ, ಬೆಳೆಗಳ ಉತ್ಪಾದನೆಯಲ್ಲಿ ಸುಧಾರಣೆ ಕಂಡಿದೆ. ಕೊರೋನಾ 2 ಅಲೆಗಳ ನಡುವೆ ದೇಶ ಕೃಷಿ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಿದೆ. ಇದೀಗ ಕೇಂದ್ರ ಸರ್ಕಾರ, 2022ರ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. 

ರಾಬಿ ಬೆಳೆಗಳ ಬಿತ್ತನೆಗೂ ಮೊದಲೇ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ. ಇದರಿಂದ ರೈತ ನಿರಾಂತಕವಾಗಿ ಬಿತ್ತನೆ ಮಾಡಲು ಸಾಧ್ಯವಾಗಲಿದೆ. ಇಷ್ಟೇ ಅಲ್ಲ ಫಸಲಿನ ಸಂದರ್ಭದಲ್ಲಿ ಬೆಲೆ ಕುಸಿತವಾದರೂ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ ರೈತರಿಗೆ ಸಿಗಲಿದೆ. ಕನಿಷ್ಠ ಬೆಂಬಲ ಬೆಲೆ ಕೃಷಿ (Agriculture)ಬೆಲೆ ನೀತಿಯ ಅವಿಭಾಜ್ಯ ಅಂಗವಾಗಿದೆ. ಇದರಿಂದ ರೈತರಿಗೆ (Farmer) ಬೆಂಬಲ ಬೆಲೆ ಹಾಗೂ ಗ್ರಾಹಕರಿಗೆ ಕೈಗೆಟುಕುವ ಬೆಲೆಯನ್ನು ಉತ್ಪನ್ನಗಳು ಸಿಗುವಂತಾಗಲಿದೆ. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ(CACP) ಮಾಡಿದ ಶಿಫಾರಸು ಆಧಾರದಲ್ಲಿ ಕೇಂದ್ರ ಸರ್ಕಾರ ತಜ್ಞರ ಅಭಿಪ್ರಾಯ ಸಂಗ್ರಹಿಸಿ ಮಹತ್ವದ ನಿರ್ಧಾರ ಪ್ರಕಟಿಸಿದೆ.

'ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮೂಲಕ ದೇಶದಲ್ಲಿ ಕೃಷಿ ಬೆಳೆಗಳಾದ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ವಾಣಿಜ್ಯ ಬೆಳೆಗಳು, ಭತ್ತ, ಜೋಳ, ಬಜಾರ, ರಾಗಿ, ಮೆಕ್ಕೆಜೋಳ, ಅರ್ಹಾರ್, ಮೂಂಗ್, ಉರಾಡ್, ಹತ್ತಿ, ನೆಲಗಡಲೆ, ಸೂರ್ಯಕಾಂತಿ ಬೀಜ, ಸೋಯಾಬೀನ್, ಸೇಸಮ್ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗಿದೆ. ರಾಬಿ ಬೆಳೆಗಳಾದ ಗೋಧಿ, ಬಾರ್ಲಿ, ಗ್ರಾಂ, ಮಸೂರ್, ರಾಪ್ಸೀಡ್ಸ್, ಸಾಸಿವೆ, ಕುಸುಮ ಮತ್ತು ಟೋರಿಯಾಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. 

ರಾಬಿ ಬೆಳೆಗಳಿಗೆ ವರ್ಷದ ಕನಿಷ್ಠ ಬೆಂಬಲ ಬೆಲೆ ಘೋಷಣೆಯನ್ನು ಅಕ್ಟೋಬರ್‌ನಲ್ಲಿ ಮಾಡಲಾಗುತ್ತಿತ್ತು. ಕಳೆದ ವರ್ಷ ಸೆಪ್ಟೆಂಬರ್ 23 ರಂದು ಮಾಡಿದರೆ, ಈ ವರ್ಷ 2022-223ರ ಸಾಲಿನ ಬೆಂಬಲ ಬೆಲೆಯನ್ನು ರಾಬಿ ಬೆಳೆಗಳ ಬಿತ್ತನೆಗೂ ಮೊದಲೇ ಘೋಷಣೆ ಮಾಡೋ ಮೂಲಕ ರೈತರ ಆತಂಕವಿಲ್ಲದೆ ಬಿತ್ತನೆಗೆ ಇಳಿಯಲು ಕೇಂದ್ರ ಸರ್ಕಾರ ಸಹಾಯ ಮಾಡಿದೆ. 

ಕಳೆದ ಸಾಲಿನಲ್ಲಿ ರಾಬಿ ಬೆಳೆಗಳ ಉತ್ಪಾದನೆ ಹೆಚ್ಚಾಗಿದೆ. ರಾಬಿ ಮಾರ್ಕೆಟಿಂಗ್ ಸೀಸನ್ 2022-23ಕ್ಕೆ ನಿಗದಿಪಡಿಸಿ ಕನಿಷ್ಠ ಬೆಂಬಲ ಬೆಲೆ ಉತ್ಪಾದನೆ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚಾಗಿದೆ.  ಗೋಧಿ (100%) ಮತ್ತು ಬೇಳೆ/ಸಾಸಿವೆ (100%), ನಂತರ ದ್ವಿದಳ ಧಾನ್ಯ (79%) ಮತ್ತು ಗ್ರಾಂ (74%) ದಲ್ಲಿ ರೈತರಿಗೆ ಅವರ ಉತ್ಪಾದನಾ ವೆಚ್ಚದ ಮೇಲೆ ನಿರೀಕ್ಷಿತ ಆದಾಯವು ಅತಿ ಹೆಚ್ಚು ಎಂದು ಅಂದಾಜಿಸಲಾಗಿದೆ; ಬಾರ್ಲಿ (60%); ಕುಸುಮ (50%) ನೀಡಲಾಗಿದೆ.

click me!