Anti Conversion Bill : ಸದ್ಯಕ್ಕಿಲ್ಲ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ

By Suvarna NewsFirst Published Dec 16, 2021, 10:58 AM IST
Highlights
  •  ಸದ್ಯಕ್ಕಿಲ್ಲ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ
  • ವಿವಾದಿತ ಮತಾಂತರ ನಿಷೇಧ ವಿಧೇಯಕಕ್ಕೆ ಬೆಳಗಾವಿ ಅಧಿವೇಶನದಲ್ಲಿ ಮುಕ್ತಿ ಸಿಗುವ ಸಾಧ್ಯತೆ ಕ್ಷೀಣ

ಬೆಳಗಾವಿ(ಡಿ.16) : ವಿವಾದಿತ ಮತಾಂತರ ನಿಷೇಧ ವಿಧೇಯಕಕ್ಕೆ (  Anti Conversion Bill ) ಬೆಳಗಾವಿ (Belagavi) ಅಧಿವೇಶನದಲ್ಲಿ ಮುಕ್ತಿ ಸಿಗುವ ಸಾಧ್ಯತೆ ಕ್ಷೀಣಿಸಿದೆ. ಬಹು ಚರ್ಚಿತವಾದ ಮತಾಂತರ ನಿಷೇಧ ವಿಧೇಯಕ ಜಾರಿ ವಿಳಂಬವಾಗುವ ಸಾಧ್ಯತೆ  ಇದೆ.  ಬೆಳಗಾವಿ ಅಧಿವೇಶನದಲ್ಲೇ ವಿಧೇಯಕ ಅಂಗೀಕಾರಕ್ಕೆ ಸರಕಾರ ಮುಂದಾಗಿತ್ತು. ಆದರೆ ಇದೀಗ ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಸರ್ಕಾರಕ್ಕೆ (Karnataka Govt) ಹಿನ್ನಡೆಯಾಗಿದೆ.  ತರಾತುರಿಯಲ್ಲಿ ವಿಧೇಯಕ ಜಾರಿ ಮಾಡುವುದು ಸೂಕ್ತವಲ್ಲ ಎನ್ನುವ  ತಿರ್ಮಾನಕ್ಕೆ ಸರ್ಕಾರ ಬಂದಿದ್ದು,  ಸಾರ್ವಜನಿಕವಾಗಿ  ಚರ್ಚೆ ಆಗುತ್ತಿರುವ ವಿಧೇಯಕ ತರಲು ಹೊರಟ ಸರಕಾರದಿಂದಲೇ ಇದೀಗ ನಿಧಾನಗತಿಯ ನಡೆ ಕಂಡು ಬರುತ್ತಿದೆ.

ಆಡಳಿತಾರೂಢ ಬಿಜೆಪಿಗೆ (BJP) ವಿಧಾನ ಪರಿಷತ್ ನಲ್ಲಿ (Council) ಬಹುಮತವಿರದ ಹಿನ್ನೆಲೆಯಲ್ಲಿ ವಿಧೇಯಕ ಜಾರಿ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. ವಿಧಾನ ಸಭೆಯಲ್ಲಿ (Assembly) ಡಿಸೆಂಬರ್ 17 ರಂದು  ಮಂಡನೆಯಾಗುವ ವಿಧೇಯಕ ವಿಧಾನ ಪರಿಷತ್ ನಲ್ಲಿ ಮಂಡನೆಯಾಗಲ್ಲ. ವಿವಾದಿತ ಮತಾಂತರ ನಿಷೇಧ ಕಾಯಿದೆ ಜಾರಿಗೆ ಜೆಡಿಎಸ್ (JDS) ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ವಿಳಂಬವಾಗಲಿದೆ.

ವಿಧಾನಪರಿಷತ್ ನಲ್ಲಿ ವಿಧೇಯಕ ಅಂಗಿಕಾರ ಆಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಬಿಜೆಪಿ (BJP) ಮುಂದಿನ ಜನವರಿಯಲ್ಲಿ ನಡೆಯುವ ಜಂಟಿ ಅಧಿವೇಶನದ ವೇಳೆಯಲ್ಲಿ ವಿಧೇಯಕ ಮಂಡನೆ  ಮಾಡುವ ಚಿಂತನೆಯಲ್ಲಿದೆ. 

ಜನವರಿ 5 ರ ನಂತರ ವಿಧಾನ ಪರಿಷತ್ ನಲ್ಲಿ 37 ಸಂಖ್ಯಾಬಲವನ್ನು ಹೊಂದಲಿರುವ ಬಿಜೆಪಿಯಿಂದ (BJP) ತದನಂತರದಲ್ಲಿಯೇ ಮಸೂದೆ ಮಂಡನೆ ಬಗ್ಗೆ ಚಿಂತನೆ ನಡೆಯಲಿದೆ.   ಸದ್ಯ ಬೆಳಗಾವಿಯಲ್ಲಿ (Belagavi) ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಲಖನ್ ಜಾರಕಿಹೊಳಿ (Lakhan Jarkiholi) ಬೆಂಬಲದೊಂದಿಗೆ ವಿಧೇಯಕ ಅಂಗೀಕಾರ ಮಾಡಿಕೊಳ್ಳಲು ಸಲಹೆಯೂ ದೊರಕಿದೆ.  ಆದರೆ  ಲಖನ್ ಜಾರಕಿಹೊಳಿ ತಮ್ಮ ಬೆಂಬಲದ ಬಗ್ಗೆ ಇನ್ನು ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.  ಕೆಲ ಸಮಯ ತೆದುಕೊಂಡು ಮುಂದಿನ ದಿನದಲ್ಲಿ ನಿರ್ಧಾರ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. 

ಡಿ.15 ರಂದು ನಡೆದ ಬಿಜೆಪಿ (BJP) ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿರಿಯ ಸದಸ್ಯರಿಂದ ಸಿಎಂಗೆ  ಮತಾಂತರ ನಿಷೇದ ಕಾಯ್ದೆ ಮಂಡನೆ ಬಗ್ಗೆಕೆಲವು ಸಲಹೆಗಳು ದೊರಕಿದ್ದು,  ಹಿರಿಯ ಶಾಸಕರ ಸಲಹೆಯ ಹಿನ್ನೆಲೆಯಲ್ಲಿ ಜನವರಿಯಲ್ಲಿ ವಿಧಾನ ಪರಿಷತ್ ನಲ್ಲಿ ವಿಧೇಯಕ ಮಂಡನೆ ಬಗ್ಗೆ ಚಿಂತನೆ ನಡೆಸಲಾಗಿದೆ.

ಡಿ.17 ರಂದು ವಿಧಾನ ಸಭೆಯಲ್ಲಿ (Assembly) ಮಾತ್ರ ವಿಧೇಯಕ ಮಂಡನೆ ಮಾಡಲು ಶಾಸಕಾಂಗ ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ.  ಮತಾಂತರ ನಿಷೇಧ ಕಾಯಿದೆ ಜಾರಿಗೆ ಜೆಡಿಎಸ್ (JDS) ನಿಂದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ ವಿಧಾನ ಸಭೆಯಲ್ಲಿ ಮಾತ್ರವೇ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ತಿರ್ಮಾನ ಮಾಡಲಾಗಿದೆ.

ವಿಧಾನಸಭೆಯಲ್ಲಿ ವಿಧೇಯಕ ಅಂಗಿಕಾರಗೊಂಡ ಬಳಿಕ ಜನವರಿಯಲ್ಲಿ ವಿಧಾನ ಪರಿಷತ್ ನಲ್ಲಿ ಮಂಡನೆ ಮಾಡಲಾಗುತ್ತದೆ. ವಿಧೇಯಕದ ಜಾರಿಯ ಸಾಧಕ - ಭಾದಕಗಳ ಕುರಿತು ಸಹ ಶಾಸಕಾಂಗ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗುತ್ತದೆ.  ತರಾತುರಿಯಲ್ಲಿ ವಿಧೇಯಕ ತಂದು ಮುಜುಗರ ಅನುಭವಿಸೋದು ಸರಿಯಲ್ಲ ಎನ್ನುವ  ತೀರ್ಮಾನವನ್ನು ಸದ್ಯ ಬಿಜೆಪಿ (BJP) ಮುಖಂಡರು ತೆಗೆದುಕೊಂಡಿದ್ದಾರೆ.

  • ವಿವಾದಿತ ಮತಾಂತರ ನಿಷೇಧ ವಿಧೇಯಕಕ್ಕೆ ಬೆಳಗಾವಿ ಅಧಿವೇಶನದಲ್ಲಿ ಮುಕ್ತಿ ಇಲ್ಲ..
  • ಬಹುಚರ್ಚಿತ ಮತಾಂತರ ನಿಷೇಧ ವಿಧೇಯಕ ಜಾರಿ ವಿಳಂಬ ಸಾಧ್ಯತೆ..
  • ಬೆಳಗಾವಿ ಅಧಿವೇಶನದಲ್ಲೇ ವಿಧೇಯಕ ಅಂಗೀಕಾರಕ್ಕೆ ಮುಂದಾದ ಸರಕಾರಕ್ಕೆ ಹಿನ್ನಡೆ…
  • ತರಾತುರಿಯಲ್ಲಿ ವಿಧೇಯಕ ಜಾರಿ ಮಾಡಲು ಸೂಕ್ತವಲ್ಲ ಅನ್ನೋ ತಿರ್ಮಾನಕ್ಕೆ ಬಂದ ಸರಕಾರ.
click me!