ಅರಣ್ಯ ಇಲಾಖೆಗೆ ರಾಜ್ಯ ಸರ್ಕಾರದಿಂದ ಬಜೆಟ್‌ನಲ್ಲಿ ಮೀಸಲಿಡುವ ಅನುದಾನ ಕಡಿಮೆಯಿದ್ದು, ಅದನ್ನು ಹೆಚ್ಚಿಸಬೇಕು ಎಂಬುದು ಇಲಾಖೆಯ ಸಾಮಾನ್ಯ ಆಗ್ರಹ. ಆದರೆ, ಅರಣ್ಯೀಕರಣ ಮತ್ತು ಹಸಿರು ಹೆಚ್ಚಿಸುವ ಸಲುವಾಗಿ ಮೀಸಲಿಡುವ ಅನುದಾನವನ್ನೇ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಇಲಾಖೆ ಹಿಂದೆ ಬಿದ್ದಿದೆ.
ಗಿರೀಶ್ ಗರಗ
ಬೆಂಗಳೂರು : ಅರಣ್ಯ ಇಲಾಖೆಗೆ ರಾಜ್ಯ ಸರ್ಕಾರದಿಂದ ಬಜೆಟ್‌ನಲ್ಲಿ ಮೀಸಲಿಡುವ ಅನುದಾನ ಕಡಿಮೆಯಿದ್ದು, ಅದನ್ನು ಹೆಚ್ಚಿಸಬೇಕು ಎಂಬುದು ಇಲಾಖೆಯ ಸಾಮಾನ್ಯ ಆಗ್ರಹ. ಆದರೆ, ಅರಣ್ಯೀಕರಣ ಮತ್ತು ಹಸಿರು ಹೆಚ್ಚಿಸುವ ಸಲುವಾಗಿ ಮೀಸಲಿಡುವ ಅನುದಾನವನ್ನೇ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಇಲಾಖೆ ಹಿಂದೆ ಬಿದ್ದಿದೆ.
undefined
ರಾಜ್ಯ ಸರ್ಕಾರ 2024-25ನೇ ಸಾಲಿನ ಬಜೆಟ್‌ನಲ್ಲಿ ಈ ಬಾರಿ ಅರಣ್ಯ ಮತ್ತು ವನ್ಯ ಜೀವನ ಕಾರ್ಯಕ್ರಮಗಳಿಗಾಗಿ 2,287.47 ಕೋಟಿ ರು. ಅನುದಾನ ನೀಡುವುದಾಗಿ ಘೋಷಿಸಲಾಗಿದೆ. ಅದೇ 2023-24ನೇ ಸಾಲಿನಲ್ಲಿ 1,599.40 ಕೋಟಿ ರು. ಮೀಸಲಿಡಲಾಗಿತ್ತು. ಅದರಲ್ಲಿ ರಾಜ್ಯದಲ್ಲಿ ಅರಣ್ಯ ಮತ್ತು ಹಸಿರು ಹೆಚ್ಚುವ ಸಲುವಾಗಿ ರೂಪಿಸಲಾದ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ 245.95 ಕೋಟಿ ರು. ಮೀಸಲಾಗಿತ್ತು. ಆ ಅನುದಾನಕ್ಕೆ ತಕ್ಕಂತೆ ಅರಣ್ಯ ಇಲಾಖೆ ಯೋಜನೆಗಳನ್ನು ರೂಪಿಸಿ, ಹೊಸದಾಗಿ ಅರಣ್ಯ ಮತ್ತು ಹಸಿರು ಹೆಚ್ಚಿರುವ ಯೋಜನೆಗಳನ್ನು ರೂಪಿಸುವುದರ ಜತೆಗೆ, ಹಿಂದಿನ ವರ್ಷಗಳ ಯೋಜನೆಗಳ ನಿರ್ವಹಣೆಗಾಗಿ ವ್ಯಯಿಸಲು ನೀಲಿನಕ್ಷೆ ರೂಪಿಸಲಾಗಿತ್ತು.
ಆದರೆ, ಆ ಅನುದಾನದ ಪೈಕಿ 2023-24ನೇ ಸಾಲಿನ ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ 9 ತಿಂಗಳಲ್ಲಿ ಶೇ.50ರಷ್ಟು ಅನುದಾನವನ್ನೂ ವ್ಯಯಿಸದೆ ಇಲಾಖೆ ನಿರ್ಲಕ್ಷ್ಯ ವಹಿಸಿದೆ.
ಕನ್ನಡಿಗರು ಕಟ್ಟಿದ ಸಂಸ್ಥೆಯಿಂದ ಅರಣ್ಯವಾಸಿಗಳಲ್ಲಿ ನವೋಲ್ಲಾಸ..! ರೈತರ ಪಾಲಿನ ರಕ್ಷಕನಾದ ವಿ2ಸಾಫ್ಟ್
117.17 ಕೋಟಿ ರು. ಮಾತ್ರ ವ್ಯಯ:
ಅರಣ್ಯ ಇಲಾಖೆಯು ಅರಣ್ಯೀಕರಣಕ್ಕಾಗಿ 12 ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಅದರಲ್ಲಿ ಪ್ರಮುಖವಾಗಿ ಹಸಿರು ಕರ್ನಾಟಕ, ಕ್ಷೀಣಿಸಿದ ಅರಣ್ಯಗಳ ಅಭಿವೃದ್ಧಿ, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡುವುದು, ಬುಡಕಟ್ಟು ಉಪ ಯೋಜನೆ ಹೀಗೆ 12 ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ. ಈ ಯೋಜನೆಗಳ ಅನುಷ್ಠಾನಕ್ಕಾಗಿ 2023-24ನೇ ಸಾಲಿನಲ್ಲಿ ಅರಣ್ಯ ಇಲಾಖೆ 245.95 ಕೋಟಿ ರು. ಅನುದಾನ ಮೀಸಲಿಟ್ಟಿತ್ತು. ಆದರೆ, 2023-24ನೇ ಸಾಲಿನ 9 ತಿಂಗಳ ಅವಧಿಯಲ್ಲಿ ಆ ಮೊತ್ತದಲ್ಲಿ ಕೇವಲ 117.17 ಕೋಟಿ ರು. ವ್ಯಯಿಸಿದೆ. ಅಂದರೆ 9 ತಿಂಗಳ ಅವಧಿಯಲ್ಲಿ ಶೇ.50ಕ್ಕಿಂತ ಕಡಿಮೆ ಅನುದಾನವನ್ನು ವ್ಯಯಿಸಲಾಗಿದೆ. ಈ ಕುರಿತು ಅರಣ್ಯ ಇಲಾಖೆಯೇ ಬಿಡುಗಡೆ ಮಾಡಿರುವ 2023-24ನೇ ಸಾಲಿನ ಮಧ್ಯಂತರ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕ್ಷೀಣಿಸಿದ ಅರಣ್ಯ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ:
ಅರಣ್ಯೀಕರಣ ಮತ್ತು ಹಸಿರೀಕರಣಕ್ಕಾಗಿ ಮೀಸಲಿಟ್ಟ ಅನುದಾನದ ಪೈಕಿ ಕ್ಷೀಣಿಸಿದ ಅರಣ್ಯಗಳ ಅಭಿವೃದ್ಧಿ ಯೋಜನೆಗಾಗಿ ಹೆಚ್ಚಿನ ಹಣ ಮೀಸಲಿಡಲಾಗಿದೆ. ಅದಕ್ಕಾಗಿ 78.62 ಕೋಟಿ ರು. ಮೀಸಲಿಟ್ಟು, ಕಣ್ಮರೆಯಾಗಿರುವ ಅರಣ್ಯ ಪ್ರದೇಶವನ್ನು ಮತ್ತೆ ಸೃಷ್ಟಿಸುವ ಕಾರ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಿದೆ. ಆ ಯೋಜನೆಗಾಗಿ ಮೀಸಲಿಟ್ಟ ಅನುದಾನದಲ್ಲಿ ಕೇವಲ 30.68 ಕೋಟಿ ರು. ಮಾತ್ರ ವ್ಯಯಿಸಲಾಗಿದೆ. ಅದರ ಜತೆಗೆ ರಸ್ತೆ ಬದಿ ಸಸಿಗಳನ್ನು ನೆಡುವುದು ಮತ್ತು ನಿರ್ವಹಣೆ ಮಾಡುವುದಕ್ಕೂ ಹೆಚ್ಚಿನ ಅನುದಾನ ಮೀಸಲಿಡಲಾಗಿದ್ದು, 30.48 ಕೋಟಿ ರು. ಅನುದಾನ ನಿಗದಿ ಮಾಡಲಾಗಿತ್ತು. ಅದರಲ್ಲಿ ಕೇವಲ 13.14 ಕೋಟಿ ರು. ಖರ್ಚು ಮಾಡಲಾಗಿದೆ.
ರಾಜ್ಯದಲ್ಲಿ ಮೂರು ದಿನಗಳ ಗಜ ಗಣತಿ ಮುಕ್ತಾಯ: ಆನೆಗಳ ಕೌಂಟ್ ಬದಲು ವಾಟರ್ ವಾಲ್ ಕೌಂಟ್!
ಯೋಜನೆಗಳಡಿ ಅನುದಾನ ಮತ್ತು ವೆಚ್ಚ
ಯೋಜನೆಅನುದಾನ ನಿಗದಿವೆಚ್ಚ (ಕೋಟಿ ರು.ಗಳಲ್ಲಿ)