ಮಂಗಳೂರು: ನಡುರಸ್ತೆಯಲ್ಲೇ ನಮಾಜ್‌ಗೆ ಕುಳಿತ ಯುವಕರು; ವಾಹನ ಮುಂದೆ ಸಾಗದೇ ಯೂಟರ್ನ್!

By Ravi Janekal  |  First Published May 27, 2024, 11:16 AM IST

ಹಗಲು ವೇಳೆ ವಾಹನಗಳ ಓಡಾಟದ ಮಧ್ಯೆಯೇ ಯುವಕರು ನಡುರಸ್ತೆಗೆ ಕುಳಿತು  ನಮಾಜ್ ಮಾಡಿದ ಘಟನೆ ಮಂಗಳೂರಿನ ಕಂಕನಾಡಿ ರಸ್ತೆಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ನಡೆದಿರುವ ಘಟನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 


ಮಂಗಳೂರು (ಮೇ.27): ಹಗಲು ವೇಳೆ ವಾಹನಗಳ ಓಡಾಟದ ಮಧ್ಯೆಯೇ ಯುವಕರು ನಡುರಸ್ತೆಗೆ ಕುಳಿತು  ನಮಾಜ್ ಮಾಡಿದ ಘಟನೆ ಮಂಗಳೂರಿನ ಕಂಕನಾಡಿ ರಸ್ತೆಯಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ನಡೆದಿರುವ ಘಟನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಂಕನಾಡಿ ರಸ್ತೆಗೆ ಹೊಂದಿಕೊಂಡಂತಿರುವ ಮಸೀದಿ ಮುಂಭಾಗದ ರಸ್ತೆಗೆ ಕುಳಿತು ಯುವಕರು ನಮಾಜ್ ಮಾಡುತ್ತಿರುವ ದೃಶ್ಯವನ್ನ ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. 

Tap to resize

Latest Videos

ಕರಾವಳಿಯಲ್ಲಿ ಯೆಲ್ಲೋ ಅಲರ್ಟ್‌: ಮೇ.29ರ ವರೆಗೆ ಭಾರಿ ಮಳೆ ಮುನ್ಸೂಚನೆ

ಯುವಕರು ನಡುರಸ್ತೆಯಲ್ಲೇ ನಮಾಜ್‌ಗೆ ಕುಳಿತಿರುವುದರಿಂದ ವಾಹನ ಸವಾರರು ಮುಂದೆ ಚಲಿಸಲು ತೊಂದರೆಯಾಗಿದೆ. ಯೂಟರ್ನ್ ತೆಗೆದುಕೊಳ್ಳುವ ದೃಶ್ಯವೂ ಸ್ಪಷ್ಟವಾಗಿ ಸೆರೆಯಾಗಿದೆ. ಈ ಘಟನೆ ವಿಡಿಯೋ ಶೇರ್ ಮಾಡಿಕೊಂಡು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮಾಜ್ ಮಾಡಲೆಂದೇ ಮಸೀದಿ ಇರುವುದು ಆದರೆ ಮಸೀದಿ ಬಿಟ್ಟು ನಡುರಸ್ತೆಗೆ ಕುಳಿತು ನಮಾಜ್ ಮಾಡಿದರೆ ವಾಹನಗಳು ಸಂಚರಿಸುವುದು ಹೇಗೆಂದು ಪ್ರಶ್ನಿಸಿದ್ದಾರೆ. ರಸ್ತೆ ಮಧ್ಯೆ ನಮಾಜ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!