ಗುಮ್ಮಟನಗರಿಯಲ್ಲೊಂದು ವಿಚಿತ್ರ ಜಾತ್ರೆ, 1001 ಬಡಿಗೆಗಳಿಂದ ಪರಸ್ಪರ ಬಡಿದಾಡಿಕೊಂಡ್ರೂ ಆಗಲ್ವಂತೆ ಪೆಟ್ಟು, ಗಾಯ!

By Suvarna News  |  First Published May 27, 2024, 10:35 AM IST

ವಿಜಯಪುರ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ನಡೆಯುವ ಬಡಿಗೆ ಜಾತ್ರೆ ನೋಡುಗರನ್ನ ರೋಮಾಂಚನಗೊಳಿಸುತ್ತೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಗ್ರಾಮಸ್ಥರು ಪರಸ್ಪರ ಬಡಿಗೆಗಳಿಗೆ ಹೊಡೆದಾಡಿಕೊಳ್ತಾರೆ, ವಿಚಿತ್ರ ಅಂದ್ರೆ ಯಾರಿಗೂ ಗಾಯವಾಗೊಲ್ಲಅನ್ನೋದು ಅಚ್ಚರಿ! 


- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಮೇ.27): ಉತ್ತರ ಕರ್ನಾಟಕ ಭಾಗದಲ್ಲಿ ಜಾತ್ರೆಗಳ ವೈಶಿಷ್ಟ್ಯವೆ ಬೇರೆ. ಈ ಭಾಗದಲ್ಲಿ ಜಾತ್ರೆಗಳಲ್ಲಿ ನಡೆಯುವ ಆಚರಣೆಗಳು ಅಂಥವರನ್ನು ಅವಕ್ಕಾಗಿಸುತ್ತವೆ. ಇನ್ನೂ ಆಚರಣೆಗಳ ಹಿನ್ನೆಲೆಯ ಬಗ್ಗೆ ಕೇಳಿದ್ರೆ ನೀವು ರೋಮಾಂಚನಗೊಳ್ಳುವುದು ಗ್ಯಾರಂಟಿ. ಇಂಥದ್ದೆ ವಿಶಿಷ್ಟ ಬಡಿಗೆ ಜಾತ್ರೆಯೊಂದು ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿಯಲ್ಲಿ ನಡೆಯುತ್ತೆ. ಸಾವಿರಾರು ಜನರು ಬಡಿಗೆಯಿಂದ ಹೊಡೆದಾಡಿಕೊಂಡು ಸಣ್ಣ ಪೆಟ್ಟು ಗಾಯ ಸಹಿತ ಆಗೊಲ್ಲ‌ ಅನ್ನೋದು ಜಾತ್ರೆಯಲ್ಲಿನ ಪವಾಡ..

Tap to resize

Latest Videos

undefined

ವಿಚಿತ್ರ ಬಡಿಗೆ ಜಾತ್ರೆ ; ಪರಸ್ಪರ ಹೊಡೆದಾಡಿಕೊಳ್ಳುವ ಜನ..!

ವಿಜಯಪುರ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ನಡೆಯುವ ಬಡಿಗೆ ಜಾತ್ರೆ ನೋಡುಗರನ್ನ ರೋಮಾಂಚನಗೊಳಿಸುತ್ತೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಗ್ರಾಮಸ್ಥರು ಪರಸ್ಪರ ಬಡಿಗೆಗಳಿಗೆ ಹೊಡೆದಾಡಿಕೊಳ್ತಾರೆ, ವಿಚಿತ್ರ ಅಂದ್ರೆ ಯಾರಿಗೂ ಗಾಯವಾಗೊಲ್ಲ ಅನ್ನೋದು. ಗ್ರಾಮದಲ್ಲಿ ನೆಲೆ‌ನಿಂತಿರುವ ಪವಾಡ ಪುರುಷ ಜುಮ್ಮಣ್ಣ ಅಜ್ಜನ ಜಾತ್ರೆ ಹಿನ್ನೆಲೆ ಬಡಿಗೆಗಳಿಂದ ಹೊಡೆದಾಡಿಕೊಳ್ತಾರೆ. 

ಬಯಲು ಸೀಮೆ ಸುಬ್ರಮಣ್ಯ ಸನ್ನಿಧಿಯಲ್ಲಿ ವಿಭಿನ್ನ ಆಚರಣೆ: ಬಾಲಕನಿಗೆ ತಲೆ ಬೋಳಿಸಿ ಕತ್ತೆ ಮೇಲೆ ಮೆರವಣಿಗೆ!

1001 ಬಡಿಗೆಗಳಿಂದ ಹೊಡೆದಾಟ ಸಣ್ಣ ಗಾಯವು ಆಗಲ್ಲ..!

ಗ್ರಾಮದಲ್ಲಿ ಮೂರು ವರ್ಷಕ್ಕೆ ಒಮ್ಮೆ ಜುಮ್ಮಣ್ಣ ಅಜ್ಜನ ಜಾತ್ರೆಯನ್ನ ಆಚರಿಸಲಾಗುತ್ತದೆ. ಈ ವೇಳೆ ಗ್ರಾಮದ ಭಕ್ತರು 1001 ಬಡಿಗೆಗಳನ್ನ ರೆಡಿ ಮಾಡಿಕೊಳ್ತಾರೆ. ಈ ಬಡಿಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪರಸ್ಪರ ಬಡಿದಾಡಿಕೊಳ್ತಾರೆ. ವಿಚಿತ್ರ ಹಾಗೂ ಪವಾಡ ಎಂದರೆ ಪರಸ್ಪರ ಬಡಿಗೆಗಳಿಂದ ಹೊಡೆದಾಡಿಕೊಳ್ಳುವ ಬಡಿಗೆಗಳು ಮುರಿಯುತ್ತವೆ ಹೊರತು ಜನರಿಗೆ ಯಾವುದೆ ಗಾಯ, ಪೆಟ್ಟುಗಳು ಆಗೋದಿಲ್ಲ‌, ಇದನ್ನ ಅಜ್ಜನ ಪವಾಡ ಎನ್ನಲಾಗುತ್ತೆ. 

ಬ್ರಿಟಿಷರ ಚಳಿ ಬಿಡಿಸಿದ್ದ ಜುಮ್ಮಣ್ಣ ಅಜ್ಜ..!

ಇಲ್ಲಿ ನಡೆಯುವ ಬಡಿಗೆ ಜಾತ್ರೆಯ ಹಿನ್ನೆಲೆ ಬ್ರಿಟಿಷರ ಕಾಲದ್ದು, ಬ್ರಿಟಿಷರ ಆಡಳಿತವಿದ್ದಾಗ ಈ ಗ್ರಾಮದಲ್ಲಿ ಜುಮ್ಮಣ್ಣ ಅಜ್ಜ ಜನರ ಕಷ್ಟ-ಸಂಕಷ್ಟಗಳಿಗೆ ಸ್ಪಂದಿಸುತ್ತ ಜನಾನುರಾಗಿಯಾಗಿದ್ದರು. ಆದ್ರೆ ಬ್ರಿಟಿಷರು ಊರಲ್ಲಿ ತೆರಿಗೆ ಕೇಳಲು ಬಂದು ಹಾವಳಿ ಇಟ್ಟಿದ್ದರು. ಆಗ ಜುಮ್ಮಣ್ಣ ಅಜ್ಜ ಬ್ರಿಟಿಷ್ ಅಧಿಕಾರಿಗಳು ತೆರಿಗೆ ಕೇಳಲು ಬಂದಾಗ ಜುಮ್ಮಣ್ಣ ಅಜ್ಜ ಬಡಿಗೆಗಳಿಂದ ಹೋರಾಟ ಮಾಡಿ ಅವರನ್ನು ಎದುರಿಸುತ್ತಿದ್ದನಂತೆ. ಹಾಗಾಗಿ ಇಂದಿಗೂ ಅವರ ನೆನಪಿಗಾಗಿ ಬಡಿಗೆಗಳಿಂದ ಆಟವಾಡುತ್ತಾ ಜನರು ಜಾತ್ರೆ ಮಾಡುತ್ತಾರೆ. ಶತಮಾನಗಳಿಂದಲೂ ಈ ಜಾತ್ರೆ ಆಚರಣೆ ಮಾಡುತ್ತಾ ಬಂದಿದ್ದಾರೆ.

ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಶವದ ಬಾಯಿಗೆ ನೀರು ಬಿಟ್ಟ ಗ್ರಾಮಸ್ಥರು

ಕೊರೊನಾ ಹಿನ್ನೆಲೆ ಬಂದ್ ಆಗಿದ್ದ ಬಡಿಗೆ ಜಾತ್ರೆ..!

ಕೊರೊನಾ ಹಿನ್ನೆಲೆಯಲ್ಲಿ ಹತ್ತು ವರ್ಷ ಈ ಜಾತ್ರೆ ಸ್ಥಗಿತಗೊಂಡಿತ್ತು. ಆದರೆ ಈಗಾಗಲೇ ಜಿಲ್ಲೆಯಲ್ಲಿ ಕೊಂಚ ಮುಂಗಾರು ಮಳೆ ಪ್ರವೇಶಿಸಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿ, ಅನ್ನದಾತನ ಮೊಗದಲ್ಲಿ ಅದಾಗಲೇ ಹಸಿ ಜಮೀನು ಕಂಡು ಮೊಗದಲ್ಲಿ ಬರದ ಛಾಯೆಯನ್ನ ನಿಧಾನವಾಗಿ ಅಳಿಸಿಹಾಕುವಂತೆ ಮಾಡುತ್ತಿದೆ. ಕಾರಣ ಕವಡಿಮಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ಈ ವರ್ಷ ಅದ್ಧೂರಿಯಾಗಿ ಜಾತ್ರೆ ಮಾಡಿದ್ದಾರೆ.

click me!