Reservation: ಎಸ್‌ಸಿ,ಎಸ್‌ಟಿ ಪಂಚಮಸಾಲಿ ಮೀಸಲಾತಿಗೆ ಬದ್ಧ: ಸಿಎಂ ಬೊಮ್ಮಾಯಿ

By Girish Goudar  |  First Published Mar 31, 2022, 6:36 AM IST

*  ಎಲ್ಲ ಹಿಂದುಳಿದವರಿಗೆ ಸಂವಿಧಾನಬದ್ಧವಾಗಿ ನೀಡಬೇಕಾದ ಮೀಸಲು ಕಲ್ಪಿಸಲು ಸರ್ಕಾರ ಬದ್ಧ
*  ವಿಶೇಷ ಪ್ರಕರಣವೆಂದು ಮೀಸಲು ಹೆಚ್ಚಿಸಿ: ಸಿದ್ದು
*  ತಮಿಳುನಾಡಿನಲ್ಲಿ ಶೇ.69ಕ್ಕೆ ಹೆಚ್ಚಳ 
 


ಬೆಂಗಳೂರು(ಮಾ.31):  ಪರಿಶಿಷ್ಟ ಜಾತಿ(SC), ಪರಿಶಿಷ್ಟ ಪಂಗಡ(ST), ಪಂಚಮಸಾಲಿ(Panchamasali) ಹಾಗೂ ಹಿಂದುಳಿದ ವರ್ಗಗಳಿಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಮೀಸಲಾತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಅಗತ್ಯ ವರದಿ ಪಡೆದು ಸದ್ಯದಲ್ಲೇ ಸರ್ವಪಕ್ಷಗಳ ಸಭೆ ಕರೆದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಭರವಸೆ ನೀಡಿದ್ದಾರೆ.

ಪರಿಶಿಷ್ಟಪಂಗಡದ ಮೀಸಲಾತಿಯನ್ನು(Reservattion) ಶೇ.7.5ಕ್ಕೆ ಹೆಚ್ಚಿಸುವ ಬಗ್ಗೆ ಸರ್ಕಾರ ವರದಿ ಪಡೆಯಲಿದೆ. ಸದ್ಯದಲ್ಲೇ ಒಳ್ಳೆಯ ಸುದ್ದಿ ನೀಡಲಿದೆ. ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರ ಬಳಿಗೆ ಸಂಪುಟ ಸದಸ್ಯರೊಬ್ಬರನ್ನು ಕಳುಹಿಸಿ ಪ್ರತಿಭಟನೆ ಅಂತ್ಯಗೊಳಿಸಲು ಸಹ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

Tap to resize

Latest Videos

ರಾಜ್ಯದಲ್ಲಿ ಹಲಾಲ್ ವಿರೋಧಿ ಅಭಿಯಾನ: ಸಿಎಂ ಬೊಮ್ಮಾಯಿ ಕೊಟ್ಟ ಉತ್ತರವೇನು?

ಬುಧವಾರ ಸದನ ಪ್ರಾರಂಭವಾಗುತ್ತಿದ್ದಂತೆ ಸದನ ಬಾವಿಗಿಳಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಸದಸ್ಯರು ‘ಪರಿಶಿಷ್ಟಪಂಗಡದ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಕಳೆದ 49 ದಿನಗಳಿಂದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಧರಣಿ ನಡೆಸುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌(Congress) ಸದಸ್ಯರಾದ ಪ್ರಿಯಾಂಕ್‌ ಖರ್ಗೆ, ರಘುಮೂರ್ತಿ, ಭೀಮಾ ನಾಯಕ್‌, ಅಜಯ… ಧರ್ಮಸಿಂಗ್‌ ಸೇರಿ ಹಲವು ಸದಸ್ಯರು ಸ್ಪೀಕರ್‌ ಪೀಠದ ಎದುರು ಆಗಮಿಸಿ, ಎಸ್‌.ಟಿ. ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಳ ಮಾಡುವಂತೆ ಸ್ವಾಮೀಜಿಗಳು ಕಳೆದ 49 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಯಾವುದಾದರೊಂದು ಸ್ಪಷ್ಟನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೆ ಕೆಲ ಬಿಜೆಪಿ(BJP) ಸದಸ್ಯರೂ ಧ್ವನಿ ಜೋಡಿಸಿದ ಹಿನ್ನೆಲೆಯಲ್ಲಿ ಚರ್ಚೆ ತೀವ್ರತೆ ಪಡೆಯಿತು.

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಆಕ್ಷೇಪದ ಹೊರತಾಗಿಯೂ ಮಾತನಾಡಿದ ಬಿಜೆಪಿ ಸದಸ್ಯ ರಾಜುಗೌಡ, ‘ಮಾಧುಸ್ವಾಮಿ ಅಣ್ಣ ನಿಮಗೆ ನಮ್ಮ ನೋವು ಗೊತ್ತಾಗುವುದಿಲ್ಲ ಸುಮ್ಮನಿರಿ. ಮುಖ್ಯಮಂತ್ರಿಗಳು ಧರಣಿ ನಿರತ ಸ್ವಾಮೀಜಿಗಳ ಮನವೊಲಿಸಿ ಧರಣಿ ಅಂತ್ಯಗೊಳಿಸಲು ಮನವಿ ಮಾಡಬೇಕು. ಜತೆಗೆ ಯಾವುದೇ ವರದಿಗಳಿಗೆ ಕಾಯ್ದೆ ಮೀಸಲಾತಿ ಹೆಚ್ಚಳ ಮಾಡಬೇಕು’ ಎಂದು ಆಗ್ರಹಿಸಿದರು. ಮತ್ತೊಬ್ಬ ಬಿಜೆಪಿ ಸದಸ್ಯ ಬಸನಗೌಡ ಪಾಟಿಲ್‌ ಯತ್ನಾಳ್‌, ಸರ್ಕಾರ ಮೀಸಲಾತಿ ಹೆಚ್ಚಳ ಕುರಿತು ಕಾಲ ಮಿತಿಯನ್ನು ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಸರ್ವಪಕ್ಷ ಸಭೆ:

ಈ ಹಿನ್ನೆಲೆಯಲ್ಲಿ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿು, ಆದ್ಯತೆ ಮೇರೆಗೆ ಪರಿಗಣಿಸಿ ಸದ್ಯದಲ್ಲೇ ಒಳ್ಳೆಯ ಸುದ್ದಿ ನೀಡಲಾಗುವುದು. ಈಗಾಗಲೇ ಪರಿಶಿಷ್ಟವರ್ಗದವರ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಈ ವರದಿ ಅಧ್ಯಯನ ಮಾಡಿ ವರದಿ ನೀಡುವಂತೆ ನಿವೃತ್ತ ನ್ಯಾ. ಸುಭಾಷ್‌ ಅಡಿ ಅವರಿಗೆ ಸೂಚಿಸಲಾಗಿದೆ.

ಪಂಚಮಸಾಲಿ ಸಮುದಾಯವನ್ನು 2-ಎ ಪ್ರವರ್ಗಕ್ಕೆ ಸೇರ್ಪಡೆ ಮಾಡುವ ಕುರಿತು ಹಿಂದುಳಿದ ವರ್ಗಗಳ ಆಯೋಗ ಅಧ್ಯಯನ ನಡೆಸುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕೆಂದು ಹಲವು ಸಮುದಾಯಗಳ ಒತ್ತಾಯವಿದೆ. ನಾವು ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಳ ಮಾಡುವಂತೆ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದೇವೆ. ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳ ಬಗ್ಗೆ ಸದ್ಯದಲ್ಲೇ ಸರ್ವಪಕ್ಷಗಳ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಕಾನೂನು ಪ್ರಕಾರ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Kodihalli Chandrashekar: ಪ್ರಧಾನಿ ಬಳಿ ಮಾತನಾಡುವ ಧಮ್‌, ಸಿಎಂ ಬೊಮ್ಮಾಯಿಗೆ ಎಲ್ಲಿದೆ?

ಪರಿಶಿಷ್ಟಪಂಗಡದ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸುವ ಬಗ್ಗೆ ಸರ್ಕಾರ ವರದಿ ಪಡೆಯಲಿದೆ. ಸದ್ಯದಲ್ಲೇ ಒಳ್ಳೆಯ ಸುದ್ದಿ ನೀಡಲಿದೆ. ಪಂಚಮಸಾಲಿ ಸಮುದಾಯವನ್ನು 2-ಎ ಪ್ರವರ್ಗಕ್ಕೆ ಸೇರ್ಪಡೆ ಮಾಡುವ ಕುರಿತು ಹಿಂದುಳಿದ ವರ್ಗಗಳ ಆಯೋಗ ಅಧ್ಯಯನ ನಡೆಸುತ್ತಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ವಿಶೇಷ ಪ್ರಕರಣವೆಂದು ಮೀಸಲು ಹೆಚ್ಚಿಸಿ: ಸಿದ್ದು

ಇದಕ್ಕೂ ಮೊದಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)s, ವಿಶೇಷ ಪ್ರಕರಣದಡಿ ಮೀಸಲಾತಿ ಹೆಚ್ಚಳಕ್ಕೆ ಅವಕಾಶವಿದೆ. ತಮಿಳುನಾಡಿನಲ್ಲಿ ಶೇ.69ಕ್ಕೆ ಹೆಚ್ಚಳ ಮಾಡಲಾಗಿದೆ. ಸಂವಿಧಾನದ ಪರಿಚ್ಛೇದ 14, 15ರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ತಿಳಿಸಿಲ್ಲ. ಹೀಗಿದ್ದರೂ ಆರ್ಥಿಕ ಹಿಂದುಳಿದವರಿಗೆ ಶೇ.10 ರಷ್ಟುಮೀಸಲಾತಿ ಕಲ್ಪಿಸಲಾಗಿದೆ. ಹೀಗಾಗಿ ಮೀಸಲಾತಿಯನ್ನು ಶೇ.50 ಕ್ಕಿಂತ ಹೆಚ್ಚಳ ಮಾಡಲೇಬೇಕು. ಜತೆಗೆ ತಕ್ಷಣ ಸರ್ಕಾರ ಕೂಡಲೇ ಪ್ರಸನ್ನನಾನಂದಪುರಿ ಸ್ವಾಮೀಜಿಗಳನ್ನು ಧರಣಿ ಕೈಬಿಡುವಂತೆ ಮನವೊಲಿಸಬೇಕು ಎಂದು ಒತ್ತಾಯಿಸಿದರು.
 

click me!